Donald Trump: ಬಿದ್ದಲ್ಲೇ ಎದ್ದೇಳಲು ಮುಂದೆ ನುಗ್ಗಿದ ಡೊನಾಲ್ಡ್ ಟ್ರಂಪ್‌ಗೆ ಈಗ ಎಲಾನ್ ಮಸ್ಕ್ ಬೆಂಬಲ!
ಅಮೆರಿಕ ಅಧ್ಯಕ್ಷೀಯ ಚುನಾವಣೆ ಅಖಾಡದಲ್ಲಿ ಡೊನಾಲ್ಡ್ ಟ್ರಂಪ್ ಅಬ್ಬರ ಜೋರಾಗುತ್ತಿದೆ. ಅಮೆರಿಕ ಚುನಾವಣೆ ಸಮೀಕ್ಷೆಗಳಲ್ಲಿ ಡೊನಾಲ್ಡ್ ಟ್ರಂಪ್ ಹಿಂದೆ ಉಳಿದಿದ್ದರು ಎಂಬ ಕಾರಣಕ್ಕೆ ಅವರ ಬೆಂಬಲಿಗರಲ್ಲಿ ಭಾರಿ ಬೇಸರ ಮೂಡಿತ್ತು. ಡೊನಾಲ್ಡ್ ಟ್ರಂಪ್ ಸೋಲಿಗೆ ದಿನದಿಂದ ದಿನಕ್ಕೆ ಹತ್ತಿರವಾಗುತ್ತಿದ್ದರು. ಹೀಗಿದ್ದಾಗಲೇ ಬಿದ್ದಲ್ಲೇ ಎದ್ದೇಳಲು ಮುಂದೆ ನುಗ್ಗಿದ ಡೊನಾಲ್ಡ್ ಟ್ರಂಪ್‌ಗೆ ಈಗ ಎಲಾನ್ ಮಸ್ಕ್ ಬೆಂಬಲ ನೀಡಿದ್ದಾರೆ. ಅಲ್ಲದೆ ಡೊನಾಲ್ಡ್ ಟ್ರಂಪ್ ಪರವಾಗಿ ಜಗತ್ತಿನ ಅತ್ಯಂತ ಶ್ರೀಮಂತ ವ್ಯಕ್ತಿ ಇದೀಗ ಅಬ್ಬರದ ಚುನಾವಣಾ ಪ್ರಚಾರ ಶುರು ಮಾಡಿದ್ದಾರೆ.
ಡೊನಾಲ್ಡ್ ಟ್ರಂಪ್ ಗೆಲುವಿಗಾಗಿ, ಇದೀಗ ನಡೆಯುತ್ತಿರುವ ಚುನಾವಣಾ ಪ್ರಚಾರಗಳು ಅವರನ್ನ ಮುಂದೆ ತೆಗೆದುಕೊಂಡು ಹೋಗುತ್ತಿವೆ ಎನ್ನಲಾಗುತ್ತಿದೆ. ಯಾಕಂದ್ರೆ ಡೊನಾಲ್ಡ್ ಟ್ರಂಪ್ ಪರ ಕೊನೇ ಹಂತದಲ್ಲಿ ದೊಡ್ಡ ಮಟ್ಟಿಗೆ & ಅಬ್ಬರದ ಪ್ರಚಾರ ಕಾರ್ಯ ಶುರುವಾಗಿದೆ. ಹೀಗಾಗಿ ಡೊನಾಲ್ಡ್ ಟ್ರಂಪ್ ಗೆಲುವಿಗೆ ಇದೀಗ ರಣಕಹಳೆ ಮೊಳಗಿದೆ ಎನ್ನಬಹುದು. ಡೊನಾಲ್ಡ್ ಟ್ರಂಪ್ ಪರವಾಗಿ ಖ್ಯಾತ ಉದ್ಯಮಿಗಳು, WWE ಸ್ಟಾರ್‌ಗಳು, ಹಾಲಿವುಡ್ ನಟ & ನಟಿಯರು, ಹೀಗೆ ಲೆಕ್ಕವಿಲ್ಲದಷ್ಟು ಸೆಲೆಬ್ರಿಟಿಗಳು ಪ್ರಚಾರ ಕಾರ್ಯ ನಡೆಸುತ್ತಿದ್ದಾರೆ. ಅದರಲ್ಲೂ, ಡೊನಾಲ್ಡ್ ಟ್ರಂಪ್ ಗೆಲುವಿಗಾಗಿ ಎಲಾನ್ ಮಸ್ಕ್ ಇದೀಗ ತೊಡೆ ತಟ್ಟಿ ನಿಂತಿದ್ದಾರೆ.

ಗುಂಡು ಬಿದ್ದ ಜಾಗದಲ್ಲೇ ಪ್ರಚಾರ!
ಡೊನಾಲ್ಡ್ ಟ್ರಂಪ್ ವಿರುದ್ಧ ಚುನಾವಣಾ ಪ್ರಚಾರದ ಸಮಯದಲ್ಲಿ ಗುಂಡಿನ ದಾಳಿ ನಡೆದಿತ್ತು, ಅಲ್ಲದೆ ಈ ಮೂಲಕ ಪರಿಸ್ಥಿತಿ ಕೂಡ ಸೂಕ್ಷ್ಮವಾಗಿತ್ತು. ಕೆಲವು ದಿನಗಳ ಹಿಂದೆ ಈ ರೀತಿಯ ಘಟನೆ ಅಮೆರಿಕದ ಪೆನ್ಸಿಲ್ವೇನಿಯಾದಲ್ಲಿ ನಡೆದಿತ್ತು. ಡೊನಾಲ್ಡ್ ಟ್ರಂಪ್ ತಲೆಗೆ ಗುರಿ ಇಟ್ಟಿದ್ದ ಕಿರಾತಕನ ಟಾರ್ಗೆಟ್ ಅದೃಷ್ಟದ ದಯೆಯಿಂದಾಗಿ ಮಿಸ್ ಆಗಿತ್ತು, ಟ್ರಂಪ್ ತಲೆಗೆ ಬೀಳಬೇಕಿದ್ದ ಗುಂಡು ಡೊನಾಲ್ಡ್ ಟ್ರಂಪ್ ಕಿವಿಗೆ ತಾಗಿ ಹೋಗಿತ್ತು.
ಹೀಗಾಗಿ ಅಂದು, ಡೊನಾಲ್ಡ್ ಟ್ರಂಪ್ ಜೀವ & ಜೀವನ ಎರಡನ್ನೂ ಉಳಿಸಿಕೊಂಡರು. ಹೀಗೆ ಡೊನಾಲ್ಡ್ ಟ್ರಂಪ್ ವಿರುದ್ಧ ಗುಂಡಿನ ದಾಳಿಯನ್ನು ನಡೆಸಿ, ಹತ್ಯೆಗೆ ಯತ್ನಿಸಿದ 12 ವಾರಗಳ ನಂತರದಲ್ಲಿ ಮತ್ತದೇ ಪ್ರದೇಶಕ್ಕೆ ನುಗ್ಗಿ ಡೊನಾಲ್ಡ್ ಟ್ರಂಪ್ ಚುನಾವಣಾ ಪ್ರಚಾರ ನಡೆಸಿದ್ದಾರೆ. ಇವರಿಗೆ ಜಗತ್ತಿನ ಅತ್ಯಂತ ಶ್ರೀಮಂತ ವ್ಯಕ್ತಿ ಹಾಗೂ ಉದ್ಯಮಿ ಎಲಾನ್ ಮಸ್ಕ್ ಕೂಡ ಸಾಥ್ ನೀಡಿದ್ದಾರೆ.
ಫೈಟ್.. ಫೈಟ್.. ಫೈಟ್..
ಡೊನಾಲ್ಡ್ ಟ್ರಂಪ್ ಪರವಾಗಿ ಚುನಾವಣಾ ಪ್ರಚಾರದಲ್ಲಿ ಭಾಷಣ ನಡೆಸಿದ ಜಗತ್ತಿನ ಶ್ರೀಮಂತ ವ್ಯಕ್ತಿ ಎಲಾನ್ ಮಸ್ಕ್, ಡೊನಾಲ್ಡ್ ಟ್ರಂಪ್ ಗೆಲ್ಲಲೇಬೇಕಿದೆ. ಅಮೆರಿಕದಲ್ಲಿ ಪ್ರಜಾಪ್ರಭುತ್ವದ ರಕ್ಷಣೆಗಾಗಿ ಟ್ರಂಪ್ ಅವರಿಗೆ ಮತ ಹಾಕಿ ಎಂದು ಘೋಷಿಸಿದರು. ಡೊನಾಲ್ಡ್ ಟ್ರಂಪ್ ಇದೇ ವೇಳೆ ಕಮಲಾ ಹ್ಯಾರಿಸ್ ವಿರುದ್ಧ ಹರಿಹಾಯ್ದರು. ಅಲ್ಲದೆ ಟ್ರಂಪ್ & ಮಸ್ಕ್ ಭಾಷಣ ವೇಳೆ ದೊಡ್ಡ ಪ್ರಮಾಣದಲ್ಲಿ ಬೆಂಬಲಿಗರು ಕೂಗುತ್ತಿದ್ದರು. ಫೈಟ್.. ಫೈಟ್.. ಫೈಟ್.. ಎನ್ನುವ ಶಬ್ಧ ಮೊಳಗಿದ್ದು ಗಮನ ಸೆಳೆದಿದೆ.












Click it and Unblock the Notifications