ಒಂದಲ್ಲ.. ಎರಡಲ್ಲ.. 8 ಕೋಟಿ ರೂಪಾಯಿ ಬಹುಮಾನ ಗೆಲ್ಲಬಹುದು!

ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ಇನ್ನೇನು ಕೆಲವೇ ದಿನಗಳು ಬಾಕಿ. ಇದೇ ಕಾರಣದಿಂದ ಚುನಾವಣೆ ಪ್ರಚಾರ ಕೂಡ ಭಾರಿ ಜೋರಾಗಿ ಸಾಗುತ್ತಿದೆ. ಅಮೆರಿಕದ ಮತದಾರರು ಮುಂದಿನ ನಾಯಕನ ಆಯ್ಕೆಗೆ ಸಿದ್ಧರಾಗಿದ್ದಾರೆ. ಒಂದು ಕಡೆ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿಯಾಗಿರುವ ಡೊನಾಲ್ಡ್ ಟ್ರಂಪ್ 2ನೇ ಬಾರಿಗೆ ಅಧ್ಯಕ್ಷರಾಗುವ ಆಸೆ ಇಟ್ಟುಕೊಂಡಿದ್ದಾರೆ. ಮತ್ತೊಂದ್ಕಡೆ ಡೆಮಾಕ್ರಟಿಕ್ ಪಕ್ಷದ ಕಮಲಾ ಹ್ಯಾರಿಸ್ ಕೂಡ ಗೆಲುವು ನಂದೆ ಅಂತಿದ್ದಾರೆ. ಇಂತಹ ಕಠಿಣ ಪರಿಸ್ಥಿತಿಯಲ್ಲಿ ಎಲಾನ್ ಮಸ್ಕ್ ಏನ್ ಮಾಡಿದ್ದಾರೆ ಹೇಳಿ?

ಡೊನಾಲ್ಡ್ ಟ್ರಂಪ್ ಪರವಾಗಿ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಗಟ್ಟಿಯಾಗಿ ನಿಂತು ಹೋರಾಡುತ್ತಿರುವ, ಹಾಗೂ ಡೊನಾಲ್ಡ್ ಟ್ರಂಪ್ ಗೆಲುವಿಗಾಗಿ ಪಣತೊಟ್ಟು ನಿಂತಿರುವವರ ಪೈಕಿ ಎಲಾನ್ ಮಸ್ಕ್ ಕೂಡ ಒಬ್ಬರಾಗಿದ್ದಾರೆ. ಎಲಾನ್ ಮಸ್ಕ್ ಜಗತ್ತಿನ ಅತಿದೊಡ್ಡ ಶ್ರೀಮಂತ ವ್ಯಕ್ತಿ ಕೂಡ ಹೌದು. 2024ರ ಅಮೆರಿಕ ಅಧ್ಯಕ್ಷೀಯ ಚುನಾವಣೆ ಅಖಾಡದಲ್ಲಿ ಡೊನಾಲ್ಡ್ ಟ್ರಂಪ್ ಗೆಲ್ಲಬೇಕು & ಈ ಮೂಲಕ ಟ್ರಂಪ್ 2ನೇ ಬಾರಿಗೆ ಅಧಿಕಾರಕ್ಕೆ ಬರಬೇಕು ಎಂಬುದೇ ಎಲಾನ್ ಮಸ್ಕ್ ಗುರಿಯಾಗಿದೆ. ಈ ಕಾರಣಕ್ಕೆ ಸಾಕಷ್ಟು ಪ್ರಯತ್ನ ಮಾಡುತ್ತಾ, ಅಮೆರಿಕದ ಮತದಾರರ ಮನಸ್ಸು ಗೆದ್ದು ಟ್ರಂಪ್ ಗೆಲ್ಲಿಸಲು ಎಲಾನ್ ಮಸ್ಕ್ ಎಂತಹ ಆಫರ್ ಕೊಟ್ಟಿದ್ದಾರೆ ಗೊತ್ತೆ?

Elon Musk Announced 1 Million Dollars Prize Money For This Reason

8 ಕೋಟಿ ರೂಪಾಯಿ ಬಹುಮಾನ!

ಅಂದಹಾಗೆ ರಿಪಬ್ಲಿಕನ್ ಪಕ್ಷದ ಚುನಾವಣಾ ಪ್ರಚಾರ ಕಾರ್ಯಕ್ಕೆ ಮತ್ತಷ್ಟು ಬಲ ನೀಡಲು & ಈ ಮೂಲಕ ಡೊನಾಲ್ಡ್ ಟ್ರಂಪ್ ಸೇರಿದಂತೆ, ರಿಪಬ್ಲಿಕನ್ ಪಕ್ಷದ ಅಭ್ಯರ್ಥಿಗಳ ಗೆಲುವಿಗಾಗಿ ಬೇಕಿರುವ ಎಲ್ಲಾ ಪ್ರಯತ್ನ ಮಾಡಲು ಎಲಾನ್ ಮಸ್ಕ್ ಮುಂದಾಗಿದ್ದಾರೆ. ಇದೇ ಕಾರಣಕ್ಕೆ, ಬೆಂಬಲಿಗರಿಗೆ ಸುಮಾರು 8 ಕೋಟಿ ರೂಪಾಯಿ ಬಹುಮಾನ ಮೊತ್ತವನ್ನು ಕೂಡ ಎಲಾನ್ ಮಸ್ಕ್ ಇದೀಗ ಘೋಷಣೆ ಮಾಡಿದ್ದಾರೆ. ಹೀಗೆ ಮಸ್ಕ್ ಬಹುಮಾನ ಘೋಷಣೆ ಮಾಡಿರುವ ವಿಚಾರ ಇದೀಗ ಜಗತ್ತಿನಾದ್ಯಂತ ದೊಡ್ಡ ಸದ್ದು ಕೂಡ ಮಾಡುತ್ತಿದೆ. ಅಲ್ಲದೆ, ಡೊನಾಲ್ಡ್ ಟ್ರಂಪ್ ಅವರಿಗೆ ಇದೀಗ ಜನ ಬೆಂಬಲ ಹೆಚ್ಚಾಗುವ ನಿರೀಕ್ಷೆ ಕೂಡ ಮೂಡಿದೆ.

ಟ್ರಂಪ್ ಪರವಾಗಿ ಸೃಷ್ಟಿಯಾದ ಅಲೆ!

ಎಲಾನ್ ಮಸ್ಕ್ ಈ ರೀತಿಯಾಗಿ ಆಫರ್ ನೀಡಿದ ನಂತರ ಅಮೆರಿಕದ ಮಾಜಿ ಅಧ್ಯಕ್ಷ ಹಾಗು ಹಾಲಿ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಅವರಿಗೆ ಬೆಂಬಲ ಕೂಡ ಹೆಚ್ಚಾಗುತ್ತಿದೆ ಎಂಬ ಅಭಿಪ್ರಾಯ ಕೇಳಿಬಂದಿದೆ. ಒಂದು ಕಡೆ ಕಮಲಾ ಹ್ಯಾರಿಸ್ ವಿರುದ್ಧ ಭಾರಿ ದೊಡ್ಡ ಹಿನ್ನಡೆ ಅನುಭವಿಸಿದ್ದ ಡೊನಾಲ್ಡ್ ಟ್ರಂಪ್ ಅವರಿಗೆ ಇದೀಗ ಮತ್ತೊಂದು ತಿರುವು ಸಿಗುತ್ತದೆ ಎಂಬ ನಿರೀಕ್ಷೆ ಇದೆ. ಹೀಗಿದ್ದಾಗ ಎಲಾನ್ ಮಸ್ಕ್ 8 ಕೋಟಿ ರೂಪಾಯಿ ಬಹುಮಾನ ಮೊತ್ತ ಘೋಷಣೆ ಮಾಡಿರುವ ಬಗ್ಗೆ ಚರ್ಚೆ ಜೋರಾಗಿದೆ.

ನವೆಂಬರ್ 5 ರಂದು ನಡೆಯಲಿರುವ ಅಧ್ಯಕ್ಷೀಯ ಚುನಾವಣೆವರೆಗೂ ಪ್ರತಿದಿನ ಕೂಡ ಈ ರೀತಿ ಒಂದು ಮಿಲಿಯನ್ ಡಾಲರ್ ಅಂದ್ರೆ ಸುಮಾರು 8 ಕೋಟಿ ರೂಪಾಯಿಯನ್ನ ಮಸ್ಕ್ ಅವರು ನೀಡಲಿದ್ದಾರೆ. ಇದು ರಿಪಬ್ಲಿಕನ್ ಪಕ್ಷದ ಕಾರ್ಯಕರ್ತರು & ಬೆಂಬಲಿಗರ ಮಧ್ಯೆ ಮತ್ತಷ್ಟು ಬಲ ತುಂಬಿದಂತೆ ಆಗಿದ್ದು, ಮುಂದಿನ ದಿನಗಳಲ್ಲಿ ಚುನಾವಣೆಗೆ ದೊಡ್ಡ ತಿರುವು ನೀಡುವ ನಿರೀಕ್ಷೆ ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+