Gaza Strip: ಗಾಜಾಪಟ್ಟಿ ಜನರಿಗಾಗಿ ರಸ್ತೆ ರಿಪೇರಿ ಮಾಡುತ್ತಿದೆ ಈಜಿಪ್ಟ್!

ಎಲ್ಲವನ್ನು ಕಳೆದುಕೊಂಡು ಅಕ್ಷರಶಃ ನರಕದಲ್ಲಿ ನರಳುತ್ತಿರುವ ಗಾಜಾಪಟ್ಟಿ ಜನರ ಪಾಲಿಗೆ ಈಜಿಪ್ಟ್ ಈಗ ಕೊನೆಯ ಅವಕಾಶ. ಗಾಜಾಪಟ್ಟಿ ಉತ್ತರದಲ್ಲಿ ಇರುವ 2 ಗಡಿ ಪ್ರದೇಶ ಇಸ್ರೇಲ್‌ ಭೂ ಭಾಗದ ಜೊತೆಗೆ ಸಂಪರ್ಕ ಹೊಂದಿವೆ. ಅವೆರಡನ್ನೂ ಇಸ್ರೇಲ್ ಇದೀಗ ಮುಚ್ಚಿ ಹಾಕಿದೆ. ಹೀಗಿದ್ದಾಗ ದಕ್ಷಿಣದಲ್ಲಿ ಈಜಿಪ್ಟ್ ಮೂಲಕ ಗಾಜಾಪಟ್ಟಿ ಪ್ರದೇಶದಿಂದ ಹೊರ ಹೋಗಲು ಮತ್ತು ಅಗತ್ಯ ವಸ್ತುಗಳನ್ನ ತರಿಸಿಕೊಳ್ಳಲು ಏಕೈಕ ಮಾರ್ಗ ಉಳಿದಿದ್ದು, ಅದರ ರಿಪೇರಿಗೆ ದಿಢೀರ್ ಈಜಿಪ್ಟ್ ಮುಂದಾಗಿದೆ.

ಹಮಾಸ್ ಉಗ್ರರು ಮತ್ತು ಇಸ್ರೇಲ್ ಸೇನೆ ನಡುವೆ ಯುದ್ಧ ಶುರುವಾದ ನಂತರ ಜೀವಹಾನಿ ಜೋರಾಗಿದೆ. ಸಾವಿರಾರು ಜನರು ಬಲಿಯಾಗಿ, ಲೆಕ್ಕವಿಲ್ಲದಷ್ಟು ಜನ ಆಸ್ಪತ್ರೆಗೆ ಸೇರಿದ್ದಾರೆ. ಇದೇ ಪರಿಸ್ಥಿತಿಯಲ್ಲಿ ಗಾಜಾಪಟ್ಟಿ ಜನರಿಗೆ ಹೊರಗೆ ಹೋಗುವಂತೆ ಇಸ್ರೇಲ್ ಸೇನೆ ಆದೇಶ ನೀಡಿದೆ. ಸಾಮಾನ್ಯ ಜನ ಗಾಜಾಪಟ್ಟಿ ಬಿಟ್ಟು ಹೊರಗೆ ಹೋದ ನಂತರ, ಹಮಾಸ್ ಉಗ್ರ ಪಡೆಗೆ ಶಾಕ್ ಕೊಡಲು ಇಸ್ರೇಲ್ ಕಾಯುತ್ತಿದೆ. ಆದರೆ ಈಜಿಪ್ಟ್ ಮೂಲಕ ಹೊರ ಹೋಗಿ, ಹೊಸ ಜೀವನ ಕಟ್ಟಿಕೊಳ್ಳಲು ಅಡ್ಡಿ ಎದುರಾಗಿತ್ತು. ಈಗ ಆ ಅಡ್ಡಿ ಸರಿಮಾಡಲು ಖುದ್ದು ಈಜಿಪ್ಟ್ ಸರ್ಕಾರ ಮುಂದೆ ಬಂದಿದೆ.

Egypt started preparation to help Gaza Strip citizens in between the war

ಗಾಜಾಪಟ್ಟಿ ಜನರಿಗೆ ಅಗತ್ಯ ವಸ್ತು ಸಿಗುತ್ತಾ?

ಅಂದಹಾಗೆ ಈಜಿಪ್ಟ್‌ ಗಡಿ ಮೂಲಕ ಗಾಜಾಗೆ ಅಗತ್ಯ ಇರುವ ವಸ್ತುಗಳನ್ನು ತಲುಪಿಸಲು ಅಡ್ಡಿ ಮಾಡಲ್ಲ ಎಂದು ಇಸ್ರೇಲ್‌ ಹೇಳಿಕೆ ನೀಡಿದ ಬೆನ್ನಲ್ಲೇ ಬಿರುಸಿನ ಚಟುವಟಿಕೆ ನಡೆದಿದೆ. ಇದೇ ಕಾರಣಕ್ಕೆ ರಫಾ ಗಡಿಯಲ್ಲಿ ರಸ್ತೆ ಸರಿ ಮಾಡಲು ಈಜಿಪ್ಟ್‌ ಯಂತ್ರೋಪಕರಣಗಳನ್ನು ಕಳಿಸಿದೆ. ಈ ಮೂಲಕ ಸಂಕಷ್ಟದಲ್ಲಿ ನರಳುತ್ತಿದ್ದ ಗಾಜಾಪಟ್ಟಿ ಜನರಿಗೆ ಈಜಿಪ್ಟ್ ನೆರವಾಗಲು ಇದೀಗ ಮುಂದಾಗಿದೆ. ಈಜಿಪ್ಟ್‌ನ ಸಿನಾಯ್‌ ಪರ್ಯಾಯ ದ್ವೀಪದಲ್ಲಿ ಇಟ್ಟಿರುವ ಅಗತ್ಯ ವಸ್ತುಗಳನ್ನ ಈ ಮಾರ್ಗದ ಮೂಲಕ ಗಾಜಾಪಟ್ಟಿ ಜನರಿಗೆ ನೀಡಲು ವ್ಯವಸ್ಥೆ ಮಾಡಲಾಗಿದೆ.

ಮತ್ತೊಂದು ಕಡೆ ಕದನ ವಿರಾಮ ಘೋಷಿಸಲಿ ಅಂತಾ ಈಜಿಪ್ಟ್ ಹಾಗೂ ಗಾಜಾಪಟ್ಟಿ ಗಡಿ ಭಾಗದಲ್ಲಿ 100ಕ್ಕೂ ಹೆಚ್ಚು ಟ್ರಕ್‌ಗಳು ಕಾಯುತ್ತಿವೆ. ಇದೀಗ ಈಜಿಪ್ಟ್ ಸರ್ಕಾರ ಗಾಜಾಪಟ್ಟಿ ಜನರಿಗೆ ನೆರವಾಗಲು, ರಫಾ ಗಡಿಯಲ್ಲಿ ರಸ್ತೆಗಳನ್ನ ರಿಪೇರಿ ಮಾಡಿಸಲು ಮುಂದಾಗಿದೆ. ಈ ಕಾರಣಕ್ಕೆ ಪರಿಸ್ಥಿತಿ ಒಂದಷ್ಟು ತಣ್ಣಗಾಗುವ ನಿರೀಕ್ಷೆ ಇದೆ. ಇನ್ನೊಂದು ಕಡೆ ಗಾಜಾಪಟ್ಟಿ ಒಳಗೆ ಆಹಾರ, ನೀರು, ವಿದ್ಯುತ್ ಎಲ್ಲವೂ ಖಾಲಿಯಾಗಿ ಹೋಗಿದೆ. ಈ ಪರಿಸ್ಥಿತಿ ನಡುವೆ ಈಜಿಪ್ಟ್ ಮಾಡುತ್ತಿರುವ ಕೆಲಸ ಸಾಮಾನ್ಯ ಜನರಿಗೆ ತುಸು ನೆಮ್ಮದಿ ನೀಡಿದೆ.

ಗಡಿಯಲ್ಲಿ ಕಾಯುತ್ತಿರುವ ಲಕ್ಷಾಂತರ ಜನ

ಅಷ್ಟಕ್ಕೂ ಗಾಜಾಪಟ್ಟಿ ನಗರ ಹೇಗಿದೆ ಅಂದ್ರೆ, ಪೂರ್ವ ಭಾಗ ಮತ್ತು ಉತ್ತರ ಭಾಗದಲ್ಲಿ ಇಸ್ರೇಲ್ ಗಡಿಯಿಂದ ಆವೃತವಾಗಿದೆ. ಪಶ್ಚಿಮದಲ್ಲಿ ಮೆಡಿಟರೇನಿಯನ್ ಸಮುದ್ರವು ಇದೆ. ದಕ್ಷಿಣದಲ್ಲಿ ಕೆಲ ಭಾಗ ಈಜಿಪ್ಟ್‌ ದೇಶದ ಗಡಿಗೆ ಹೊಂದಿಕೊಂಡಿದೆ. ಈ ಜಾಗದಿಂದ ಮಾತ್ರ ಗಾಜಾಪಟ್ಟಿ ಜನ ಈಗ ಹೊರಗೆ ಹೋಗಲು ಸಾಧ್ಯವಿದೆ. ಗಾಜಾಪಟ್ಟಿ ದಕ್ಷಿಣದಲ್ಲಿ ಈಜಿಪ್ಟ್‌ ದೇಶದ ರಫಾ ಗಡಿಯ ಮೂಲಕ ಗಾಜಾಪಟ್ಟಿ ಜನ ಹೊರಗೆ ಹೋಗಲು ಕಾಯ್ತಾ ಇದ್ದಾರೆ. ಲಕ್ಷ ಲಕ್ಷ ಜನ ಪುಟ್ಟ ಪುಟ್ಟ ಮಕ್ಕಳನ್ನ ಗಡಿ ಭಾಗದಲ್ಲಿ ಕೂರಿಸಿಕೊಂಡು ತಮ್ಮ ಜೀವ ಉಳಿಸಿಕೊಳ್ಳಲು ಪರದಾಡುತ್ತಿದ್ದಾರೆ.

Egypt started preparation to help Gaza Strip citizens in between the war

ಏಕೆಂದರೆ ಮೊದಲೇ ಹೇಳಿದಂತೆ ಗಾಜಾಪಟ್ಟಿ ಉತ್ತರ ಭಾಗದಲ್ಲಿ ಇರುವ 2 ಗಡಿ ಇಸ್ರೇಲ್‌ನ ಭೂ ಭಾಗದ ಜೊತೆ ಸಂಪರ್ಕ ಹೊಂದಿದೆ. ಅವೆರಡನ್ನು ಇಸ್ರೇಲ್ ಈಗ ಮುಚ್ಚಿ ಹಾಕಿದೆ. 'ಎರೆಜ್' ಎಂಬ ಒಂದು ಗಡಿ & 'ಕೆರೆಮ್ ಶಲೋಮ್' ಎಂಬ ಇನ್ನೊಂದು ಗಡಿ ಭಾಗವನ್ನೂ ಇಸ್ರೇಲ್‌ನ ಸೇನೆ ಮುಚ್ಚಿ ಹಾಕಿದೆ. ಈ ಕಾರಣಕ್ಕೆ ಈಗ ಇರುವ ಒಂದೇ ಗಡಿಯ ಭಾಗದಿಂದ ಓಡಿ ಹೋಗಲು ಗಾಜಾಪಟ್ಟಿಯ ಲಕ್ಷ ಲಕ್ಷ ಜನ ಕಾದು ಕುಳಿತಿದ್ದಾರಂತೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+