'ಅಮೆರಿಕಕ್ಕೆ ಪ್ರವೇಶ ನಿರ್ಬಂಧ' ನಿಯಮದ ಎಫೆಕ್ಟ್- ಆಫ್ಟರ್ ಎಫೆಕ್ಟ್!

ಅಮೆರಿಕದಲ್ಲಿ ಅಲ್ಲೋಲ ಕಲ್ಲೋಲಕ್ಕೆ ಕಾರಣವಾಗಿರುವ ಪ್ರವೇಶ ನಿರ್ಬಂಧ ನೀತಿಯ ಬಗ್ಗೆ ವಿಶ್ಲೇಷಣಾತ್ಮಕವಾದ ಲೇಖನ ಇಲ್ಲಿದೆ. ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದರ ಅರ್ಥವನ್ನು ಎಳೆಎಳೆಯಾಗಿ ಬಿಡಿಸಿಟ್ಟಿದ್ದಾರೆ ಕಿಶೋರ್ ನಾರಾಯಣ್

ಅಮೆರಿಕದಲ್ಲೀಗ ಡೊನಾಲ್ಡ್ ಟ್ರಂಪ್ ನ ಗಂಭೀರವಾಗಿ ತೆಗೆದುಕೊಳ್ಳಲು ಆರಂಭಿಸಿರಬಹುದು. ಏಕೆಂದರೆ ಅಧ್ಯಕ್ಷೀಯ ಚುನಾವಣೆ ಪ್ರಚಾರದ ವೇಳೆ ಟ್ರಂಪ್ ಆಡಿದ ಮಾತುಗಳೆಲ್ಲ ಒಂದೊಂದಾಗಿ ಕಾರ್ಯಗತವಾಗುತ್ತಿವೆ. ಆದರೆ ಇಷ್ಟು ವೇಗವಾಗಿ ಅವೆಲ್ಲ ಸಾಧ್ಯವಾಗಬಹುದು ಎಂಬ ತೃಣ ಮಾತ್ರದ ನಿರೀಕ್ಷೆ ಇರಲಿಲ್ಲ.

ವಲಸಿಗರ ನೀತಿ, ಎಚ್ 1ಬಿ ವೀಸಾ, ಮೆಕ್ಸಿಕೋದ ಗಡಿಯಲ್ಲಿ ಗೋಡೆ ನಿರ್ಮಾಣ, ಆಯ್ದ ಮುಸ್ಲಿಂ ರಾಷ್ಟ್ರಗಳ ನಿವಾಸಿಗಳಿಗೆ ಪ್ರವೇಶ ನಿರ್ಬಂಧ..ಈ ಎಲ್ಲ ನಿರ್ಧಾರಗಳು ಖಂಡಿತ ಸಲೀಸಾಗಿ ತೆಗೆದುಕೊಳ್ಳುವಂಥದ್ದಾಗಿರಲಿಲ್ಲ. ಆದರೆ ಈ ಮನುಷ್ಯ ಛಕಾಛಕ್ ತೆಗೆದುಕೊಂಡಿದ್ದಾರೆ. ಮೇಲ್ನೋಟಕ್ಕೆ ಇವೆಲ್ಲದರಿಂದ ಏನು ಪ್ರಯೋಜನ ಎಂಬ ಪ್ರಶ್ನೆ ಬರಬಹುದು. ಆದರೆ ಈ 'ದಾಳಿ' ಖಂಡಿತ ಕಡಿಮೆ ಸೈಜಿನದಲ್ಲ.[ಅಮೆರಿಕದೊಳಗೆ ಭಯೋತ್ಪಾದನೆ, ಭಯೋತ್ಪಾದಕರು ತೂರುತ್ತಿರುವುದು ಎಲ್ಲಿಂದ?]

ಡೊನಾಲ್ಡ್ ಟ್ರಂಪ್ ಕೆಲ ರಾಷ್ಟ್ರಗಳ ಪ್ರಜೆಗಳಿಗೆ ಪ್ರವೇಶ ನಿರ್ಬಂಧ ಹೇರಿದ ನಂತರ ಆದ ಬದಲಾವಣೆಗಳು ಏನೇನು ಎಂದು ಗೊತ್ತಾಯಿತಾ? ಹಾಗಂತ ಮುಸ್ಲಿಂ ರಾಷ್ಟ್ರಗಳಿಗಷ್ಟೇ ಹೊಡೆತ ಅಂದುಕೊಳ್ಳುವ ಹಾಗಿಲ್ಲ. ಎಚ್ 1ಬಿ ವೀಸಾ ನಿಯಮಗಳು ಭಾರತೀಯರನ್ನೂ ಹಣ್ಣುಗಾಯಿ-ನೀರುಗಾಯಿ ಮಾಡುತ್ತವೆ. ಕೇವಲ ಐಟಿ ವಲಯ ಅಷ್ಟೇ ಅಂದುಕೊಳ್ಳಬೇಡಿ, ಯಾರೇ ಆಗಲಿ ಅಮೆರಿಕಕ್ಕೆ ಉದ್ಯೋಗಕ್ಕಾಗಿ ತೆರಳುವವರಿದ್ದಾರೆ ಇನ್ನು ಮುಂದೆ ಕಠಿಣವಾಗುತ್ತದೆ.

ಭಯೋತ್ಪಾದನೆ ವಿರುದ್ಧ ರಕ್ಷಣೆ

ಭಯೋತ್ಪಾದನೆ ವಿರುದ್ಧ ರಕ್ಷಣೆ

ವಿದೇಶೀಯರಿಂದ ನಡೆಯುವ ಭಯೋತ್ಪಾದನೆ ವಿರುದ್ಧದ ಗುರಾಣಿಯಂತೆ ದೇಶದ ರಕ್ಷಣೆಗಾಗಿ ಕಳೆದ ವಾರ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಒಂದು ಕಾರ್ಯಾಂಗದ ಅಧಿನಿಯಮ (ಎಕ್ಸ್ ಕ್ಯುಟಿವ್ ಅರ್ಡರ್) ಹೊರಡಿಸಿದರು. ಅದರ ಪ್ರಕಾರ ಇರಾಕ್, ಸಿರಿಯಾ, ಯೆಮೆನ್, ಸೂಡಾನ್, ಸೊಮಾಲಿಯಾ, ಲಿಬಿಯಾ ಮತ್ತು ಇರಾನ್ ದೇಶಗಳ ಪ್ರಜೇಗಳಿಗೆ ಅಮೆರಿಕ ಪ್ರವೇಶ ನಿರ್ಬಂಧಿಸಲಾಗಿದೆ. ಆಲ್ಲದೇ, ವಲಸಿಗರಿಗೆ 120 ದಿನಗಳವರೆಗೆ ಪ್ರವೇಶ ರದ್ದು ಮಾಡಲಾಗಿದ್ದು, ಸಿರಿಯಾದಿಂದ ವಲಸೆ ಬರುತ್ತಿರುವವರಿಗೆ ಶಾಶ್ವತವಾಗಿ ಪ್ರವೇಶ ನಿರ್ಬಂಧಿಸಲಾಗಿದೆ.

ವಲಸಿಗರಿಂದ ಎದುರಾಗಬಹುದಾದ ಆಪತ್ತು

ವಲಸಿಗರಿಂದ ಎದುರಾಗಬಹುದಾದ ಆಪತ್ತು

ಟ್ರಂಪ್ ಅಮೆರಿಕ ಅಧ್ಯಕ್ಷೀಯ ಚುನಾವಣೆಯನ್ನು ಗೆದ್ದಾಗಿನಿಂದ ಈ ಅಧಿನಿಯಮವನ್ನು ನಿರೀಕ್ಷಿಸಲಾಗಿತ್ತು. ಪ್ರಚಾರದ ಸಮಯದಲ್ಲಿ ಟ್ರಂಪ್ ಇದರ ಪ್ರಸ್ತಾವ ಮಾಡಿದ್ದರು. ಟ್ರಂಪ್ ಅವರನ್ನು ಮುಸ್ಲಿಮ್ ವಿರೋಧಿ ಎಂದೂ ಬಣ್ಣಿಸಲಾಗಿತ್ತು. ಆದರೆ ಅವರ ನಿಲುವು ಬಹಳ ಸ್ಪಷ್ಟವಾಗಿತ್ತು. ವಲಸಿಗರ ಗುಂಪಿನಲ್ಲಿ ಒಬ್ಬ ಉಗ್ರ ನುಸುಳಿ ಬಂದರೂ ದೇಶಕ್ಕೆ ಆಪತ್ತು ಉಂಟಾಗುತ್ತದೆ ಎಂದು ವಾದಿಸಿದ್ದರು. ಅದಕ್ಕೂ ಹಿಂದೆ ನಡೆದ ಭಯೋತ್ಪಾದನೆ ಕೃತ್ಯದ ಬಗ್ಗೆಯೂ ಉಲ್ಲೇಖ ಮಾಡಿದ್ದರು.

ಸ್ಯಾನ್ ಬೆರ್ನಾಡಿನೋ ಉಗ್ರ ದಾಳಿ

ಸ್ಯಾನ್ ಬೆರ್ನಾಡಿನೋ ಉಗ್ರ ದಾಳಿ

ಟ್ರಂಪ್ ಅವರ ಈ ನಿರ್ಧಾರಕ್ಕೆ ಕ್ಯಾಲಿಫೋರ್ನಿಯಾದ ಸ್ಯಾನ್ ಬೆರ್ನಾಡಿನೋದಲ್ಲಿ ನಡೆದ ಭಯೋತ್ಪಾದಕ ದಾಳಿಯೇ ಕಾರಣ. ಪಾಕಿಸ್ತಾನಿ ಮೂಲದ ಪತಿ- ಪತ್ನಿ ಜೋಡಿಯೊಂದು ಇಂತಹ ಕುಕೃತ್ಯ ಎಸಗಿತ್ತು. ಸೈಯದ್ ಫಾರೂಕ್ ಎಂಬಾತ ಜಿಹಾದಿ ಸಿದ್ಧಾಂತದಿಂದ ಪ್ರಭಾವಿತನಾಗಿದ್ದ. ಚುನಾವಣಾ ಪ್ರಚಾರದ ಸಮಯದಲ್ಲಿ ಇದು ಹೆಚ್ಚು ಚರ್ಚೆಗೆ ಗ್ರಾಸವಾಗಿತ್ತು. ಅಮೆರಿಕ ದೇಶದ ವಲಸೆ ನೀತಿಯ ದುರುಪಯೋಗಕ್ಕೆ ಅಂಕುಶ ಹಾಕಬೇಕೆಂಬ ಟ್ರಂಪ್ ಸಲಹೆಯನ್ನು ಅವರ ಬೆಂಬಲಿಗರು ಸ್ವಾಗತಿಸಿದ್ದರು.

ದ್ವಿಪೌರತ್ವಕ್ಕೂ ಅನ್ವಯ

ದ್ವಿಪೌರತ್ವಕ್ಕೂ ಅನ್ವಯ

ಈ ಅಧಿನಿಯಮವು ದ್ವಿಪೌರತ್ವಕ್ಕೂ ಅನ್ವಯಿಸುತ್ತದೆ ಎಂದು ಹೇಳಲಾಗಿದೆ. ಅಂದರೆ, ಒಬ್ಬ ಯಾತ್ರಿ ಫ್ರಾನ್ಸ್ ಹಾಗೂ ಇರಾಕ್ ದೇಶಗಳ ಪೌರತ್ವವನ್ನು ಹೊಂದಿದ್ದು, ಅಂತಹವರು ಅಮೆರಿಕಕ್ಕೆ ಬರಲಿಚ್ಛಿಸಿದರೆ ಈ ರದ್ದತಿ ಅನ್ವಯವಾಗುತ್ತದೆ. ಆ ವ್ಯಕ್ತಿ ಬಳಿ ಇರುವುದು ಫ್ರಾನ್ಸ್ ಪಾಸ್ ಪೋರ್ಟ್ ಎಂದು ನಮೂದಾಗಿದ್ದರೂ ಇರಾಕ್ ದೇಶದ ಪೌರತ್ವ ಹೊಂದಿದರುವ ಕಾರಣಕ್ಕೆ ಈ 'ಪ್ರವೇಶ ನಿಷೇಧ' ಅನ್ವಯವಾಗುತ್ತದೆ.

ಗ್ರೀನ್ ಕಾರ್ಡ್ ವಿನಾಯಿತಿ

ಗ್ರೀನ್ ಕಾರ್ಡ್ ವಿನಾಯಿತಿ

ಮೊದಮೊದಲಿಗೆ ಗ್ರೀನ್ ಕಾರ್ಡ್ ಹೊಂದಿರುವವರಿಗೂ ಇದೇ ನಿಯಮ ಅನ್ವಯಿಸುತ್ತದೆ ಎಂದು ಹೇಳಲಾಗಿತ್ತು. ಆದರೆ ಅಮೆರಿಕದಲ್ಲಿ ಹತ್ತು-ಹದಿನೈದು ವರ್ಷ ಇದ್ದು, ಅಲ್ಲಿಯೇ ಮನೆ ಖರೀದಿಸಿ, ಕಾನೂನಿನ ನಿಯಮಾನುಸಾರ ನೆಲೆಸಿದ್ದರೂ ಅಂತಹವರು ಅಮೆರಿಕಕ್ಕೆ ಮರಳಲಾಗದು ಎಂದು ಹೇಳಲಾಗಿತ್ತು. ಇದರಿಂದ ಗ್ರೀನ್ ಕಾರ್ಡ್ ಹೊಂದಿರುವವರೂ ಆತಂಕಕ್ಕೀಡಾದರು.

ಮುಸ್ಲಿಮ್ ನಿಷೇಧ

ಮುಸ್ಲಿಮ್ ನಿಷೇಧ

ಪ್ರವೇಶ ನಿರ್ಬಂಧ ಹೇರಿರುವ ಪಟ್ಟಿಯಲ್ಲಿರುವ ಎಲ್ಲ ದೇಶಗಳು ಮುಸ್ಲಿಮ್ ಬಹುಸಂಖ್ಯಾತ ದೇಶಗಳು. ಈ ರದ್ದತಿಯನ್ನು ಮುಸ್ಲಿಂ ವಿರೋಧಿ ನಡೆ ಎಂದೇ ಅರ್ಥೈಸಲಾಗುತ್ತಿದೆ. ಟ್ರಂಪ್ ಅವರು ಮುಸ್ಲಿಮರ ಮೇಲೆ ಯುದ್ಧ ಸಾರಲು ಹೊರಟಿದ್ದಾರೆ ಎಂದೂ ಬಣ್ಣಿಸಲಾಗುತ್ತಿದೆ. ಅದರೆ ಟ್ರಂಪ್ ಮಾತ್ರ ಈ ಹೆಜ್ಜೆಯನ್ನು ಸಮರ್ಥಿಸಿಕೊಂಡಿದ್ದಾರೆ.

ಉದ್ಯೋಗ ವೀಸಾ

ಉದ್ಯೋಗ ವೀಸಾ

ಅಮೆರಿಕದಲ್ಲಿ ಉದ್ಯೋಗ ವೀಸಾದ ಮೂಲಕ ಕೆಲಸ ಮಾಡುತ್ತಿರುವವರು ಈಗ ರಜೆ ಮೇಲೆ ಸ್ವದೇಶಕ್ಕೆ ಹೋಗಲು ಹಿಂದೇಟು ಹಾಕುವ ಪರಿಸ್ಥಿತಿ ಎದುರಾಗಿದೆ. ರಜೆ ಮುಗಿಸಿಕೊಂಡು ಹಿಂತಿರುಗಿದಾಗ ವಿಮಾನ ನಿಲ್ದಾಣದಿಂದಲೇ ವಾಪಸ್ ಕಳುಹಿಸಿ ಬಿಡಬಹುದು ಎಂಬ ಭೀತಿ ಆವರಿಸಿದೆ.

ನಿರಾಶ್ರಿತರಿಗೆ ತ್ರಿಶಂಕು ಸ್ವರ್ಗ

ನಿರಾಶ್ರಿತರಿಗೆ ತ್ರಿಶಂಕು ಸ್ವರ್ಗ

ಇರಾಕ್ ಹಾಗೂ ಸಿರಿಯಾದಂತಹ ರಾಷ್ಟ್ರಗಳಲ್ಲಿ ನಡೆಯುತ್ತಿರುವ ಕದನಗಳಿಂದ ತಪ್ಪಿಸಿಕೊಳ್ಳಲು ಅಮೆರಿಕದಂತಹ ರಾಷ್ಟ್ರಗಳ ಮೊರೆ ಹೋಗುತ್ತಿದರು ಅಲ್ಲಿನ ಜನ. ಈಗ ಅತ್ತ ಹೋಗಲೂ ಆಗದೇ, ಇತ್ತ ಸ್ವದೇಶದಲ್ಲಿ ಇರಲೂ ಆಗದೇ ಕಷ್ಟಕ್ಕೆ ಸಿಲುಕಿದ್ದಾರೆ.

ಏರ್ ಲೈನ್ಸ್ ಗೂ ಸಮಸ್ಯೆ

ಏರ್ ಲೈನ್ಸ್ ಗೂ ಸಮಸ್ಯೆ

ಪ್ರವೇಶ ನಿರ್ಬಂಧದ ಅಧಿನಿಯಮ ಮುಸ್ಲಿಮ್ ರಾಷ್ಟ್ರಗಳ ವಿಮಾನ ಕಂಪನಿಗಳಿಗೂ ಸಮಸ್ಯೆಯಾಗಿ ಪರಿಣಮಿಸಿದೆ. ಎರಡು ದಿನಗಳ ಹಿಂದೆಯಷ್ಟೆ ಅಮೆರಿಕಕ್ಕೆ ಹೊರಟು ನಿಂತಿದ್ದ ಎಮಿರೇಟ್ಸ್ ವಿಮಾನದಿಂದ ಪೈಲಟ್ ಇತರ ಸಿಬ್ಬಂದಿಯನ್ನು ಬದಲಾಯಿಸಿದ ಬಗ್ಗೆ ವರದಿಯಾಗಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಎಮಿರೇಟ್ಸ್ ವಿಮಾನ ಕಂಪನಿ, ನಾವು ಕೇವಲ ಅಮೆರಿಕ ಅಧಿಸೂಚನೆಯನ್ನು ಪಾಲಿಸುತ್ತಿದ್ದೇವೆ ಎಂದು ಹೇಳಿದೆ.

ನ್ಯೂಯಾರ್ಕ್ ವಿಮಾನ ನಿಲ್ದಾಣದಲ್ಲಿ ಕೋಲಾಹಲ

ನ್ಯೂಯಾರ್ಕ್ ವಿಮಾನ ನಿಲ್ದಾಣದಲ್ಲಿ ಕೋಲಾಹಲ

ಈ ಅಧಿನಿಯಮವನ್ನು ದಿಡೀರ್ ಜಾರಿಗೆ ತಂದ ಕಾರಣದಿಂದಾಗಿ ಅಮೆರಿಕದ ವಿಮಾನ ನಿಲ್ದಾಣಗಳಲ್ಲಿ ಬಂದಿಳಿದ ಅನೇಕ ಯಾತ್ರಿಗಳಿಗೆ ಪ್ರವೇಶ ನಿರಾಕರಿಸಲಾಯಿತು. ಬಹಳಷ್ಟು ಯಾತ್ರಿಗಳನ್ನು ವಿಮಾನಗಳಲ್ಲಿ ಅವರ ಸ್ವದೇಶಕ್ಕೆ ವಾಪಸ್ ಕಳುಹಿಸಲಾಯಿತು. ಈ ಮಧ್ಯೆ ಯಾತ್ರಿಕರು ಪರದಾಡುವ ದೃಶ್ಯಗಳು ಎಲ್ಲ ವಿಮಾನ ನಿಲ್ದಾಣಗಳಲ್ಲೂ ಕಾಣಸಿಕ್ಕವು. ಟ್ರಂಪ್ ವಿರೋಧಿ ಅಮೆರಿಕನ್ನರು ಈ ಅಧಿನಿಯಮವನ್ನು ಖಂಡಿಸಿ ನ್ಯೂಯಾರ್ಕ್ ವಿಮಾನ ನಿಲ್ದಾಣದಲ್ಲಿ ಹೋರಾಟ ನಡೆಸಿದರು. ಹಾಗಾಗಿ ನ್ಯೂಯಾರ್ಕ್ ವಿಮಾನ ಅಕ್ಷರಶಃ ಕೋಲಾಹಲ ಎದ್ದಿತ್ತು.

ಆಲ್ಪಾವಧಿ ನಡೆ

ಆಲ್ಪಾವಧಿ ನಡೆ

ಟ್ರಂಪ್ ಅವರು ಭಯೋತ್ಪಾದನೆ ವಿರುದ್ಧ ಸಾರಿರುವ ಸಮರದಲ್ಲಿ ಇದು ಅವರು ಇಟ್ಟಿರುವ ಮೊದಲನೆ ಹೆಜ್ಜೆಯಾಗಿದೆ. ಅವರ ಪ್ರಕಾರ ಅಮೆರಿಕದ ಭದ್ರತಾ ಕಾನೂನನ್ನು ಕೂಲಂಕಷವಾಗಿ ಪರಿಶೀಲಿಸಲಾಗುತ್ತದೆ. ಆದಷ್ಟು ತ್ವರಿತವಾಗಿ ಈ ಲೋಪದೋಷಗಳನ್ನು ಸರಿಪಡಿಸಿ, ಪ್ರವೇಶ ನಿರ್ಬಂಧ ಅಧಿನಿಯಮವನ್ನು ಹಿಂಪಡೆಯಲಾಗುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+