Earthquake: ನೇಪಾಳ-ಟಿಬೆಟ್ ಗಡಿಯಲ್ಲಿ ಪ್ರಬಲ ಭೂಕಂಪ: 53 ಮಂದಿ ಸಾವು!

ಜನರು ಗಾಢ ನಿದ್ರೆಯಲ್ಲಿದ್ದಾಗ ನೇಪಾಳ-ಟಿಬೆಟ್ ಗಡಿಯಲ್ಲಿ 7.1 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದೆ. ಭಾರತದಿಂದ ನೇಪಾಳ ಮತ್ತು ಚೀನಾದವರೆಗೆ ಭೂಮಿ ನಡುಗಿದೆ. ಭೂಕಂಪದ ಕೇಂದ್ರ ಬಿಂದು ನೇಪಾಳ-ಟಿಬೆಟ್ ಗಡಿಯ ಸಮೀಪದಲ್ಲಿದ್ದು ಪ್ರಬಲ ಭೂಕಂಪನಕ್ಕೆ ಈವರೆಗೆ 53 ಜನ ಸಾವನ್ನಪ್ಪಿದ್ದಾರೆ.

ಮಂಗಳವಾರ (ಜನವರಿ 7) ಮುಂಜಾನೆ ಸಂಭವಿಸಿದ ಈ ಭೂಕಂಪದ ಪರಿಣಾಮ ಚೀನಾ ಮತ್ತು ಭಾರತದ ಹಲವು ನಗರಗಳಲ್ಲಿ ಕಂಡುಬಂದಿದೆ. ಭಾರತದಲ್ಲಿ ದೆಹಲಿ, ಬಿಹಾರ, ಬಂಗಾಳ ಸೇರಿದಂತೆ ಹಲವು ರಾಜ್ಯಗಳಲ್ಲಿ ಕಂಪನದ ಅನುಭವವಾಗಿದೆ. ಇದರಿಂದ ಜನ ಆತಂಕಕ್ಕೊಳಗಾಗಿದ್ದಾರೆ.

Earthquake Powerful earthquake hits Nepal-Tibet border 53 dead

ಭೂಕಂಪದಿಂದ ಈವರೆಗೆ 53 ಮಂದಿ ಸಾವು

ಭೂಕಂಪ ಟಿಬೆಟ್‌ನಲ್ಲಿ ಭಾರಿ ವಿನಾಶವನ್ನು ಉಂಟುಮಾಡಿದೆ. ಪ್ರಾದೇಶಿಕ ವಿಪತ್ತು ಪರಿಹಾರ ಪ್ರಧಾನ ಕಚೇರಿಯ ಪ್ರಕಾರ, ಬೆಳಗ್ಗೆ 9:05ಕ್ಕೆ (ಬೀಜಿಂಗ್ ಸಮಯ) ಶಿಗಾಜ್ ಸಿಟಿ, ಕ್ಸಿಚಾಂಗ್ ಸ್ವಾಯತ್ತ ಪ್ರದೇಶದ ಡಿಂಗ್ರಿ ಕೌಂಟಿನಲ್ಲಿ ಭೂಕಂಪನ ಸಂಭವಿಸಿತು. ಇದರಿಂದಾಗಿ 53 ಜನರು ಸಾವನ್ನಪ್ಪಿದ್ದು 62ಕ್ಕೂ ಹೆಚ್ಚು ಜನರು ಗಾಯಗೊಂಡರು. ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗಬಹುದು ಎನ್ನಲಾಗಿದೆ. ಟಿಬೆಟ್‌ನಲ್ಲಿ ಭೂಕಂಪದಿಂದ ಉಂಟಾದ ವಿನಾಶದ ನಂತರ ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ.

ಯುಎಸ್ ಜಿಯೋಲಾಜಿಕಲ್ ಸರ್ವೆ (ಯುಎಸ್ಜಿಎಸ್) ಮತ್ತು ಭಾರತೀಯ ರಾಷ್ಟ್ರೀಯ ಭೂಕಂಪನ ಕೇಂದ್ರದ ಪ್ರಕಾರ ಭೂಕಂಪದ ತೀವ್ರತೆಯನ್ನು 7.1 ರಷ್ಟಿದೆ. ಈಶಾನ್ಯ ನೇಪಾಳದ ಖುಂಬು ಹಿಮಾಲಯ ಶ್ರೇಣಿಯ ಲೋಬುಟ್ಸೆಯಿಂದ ಈಶಾನ್ಯಕ್ಕೆ 90 ಕಿಲೋಮೀಟರ್ ದೂರದಲ್ಲಿರುವ ಚೀನಾದ ಟಿಂಗ್ರಿ ಕೌಂಟಿಯ ಶಿಜಾಂಗ್‌ನಲ್ಲಿ ಅದರ ಕೇಂದ್ರಬಿಂದುವಾಗಿದೆ.

ಇನ್ನೂ ಚೀನಾ ಭೂಕಂಪದ ತೀವ್ರತೆಯನ್ನು 6.8 ಎಂದು ದಾಖಲಿಸಿದೆ. 'ಕ್ಸಿನ್ಹುವಾ' ಪ್ರಕಾರ, ಚೀನಾ ಭೂಕಂಪ ನೆಟ್‌ವರ್ಕ್ ಸೆಂಟರ್ ಬಿಡುಗಡೆ ಮಾಡಿದ ವರದಿಯ ಪ್ರಕಾರ, ಭೂಕಂಪ 10 ಕಿಲೋಮೀಟರ್ ಆಳದಲ್ಲಿ ಸಂಭವಿಸಿದೆ.

ಭಯಭೀತರಾದ ಜನ

ಮಂಗಳವಾರ ಬೆಳಗ್ಗೆ ಸಂಭವಿಸಿದ ಈ ಭೂಕಂಪದ ಹಲವು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಇದರಲ್ಲಿ ಭಯಾನಕ ದೃಶ್ಯವೊಂದು ಭಾರೀ ವೈರಲ್ ಆಗಿದೆ. ಕೆಲವೇ ಸೆಕೆಂಡುಗಳಲ್ಲಿ ಎಷ್ಟು ಕಟ್ಟಡಗಳು ಧರೆಗೆ ಕುಸಿದಿವೆ ಎಂಬುದನ್ನು ವೀಡಿಯೊಗಳಲ್ಲಿ ಕಾಣಬಹುದು. ಬೆಳಗ್ಗೆ ಸಂಭವಿಸಿದ ತೀವ್ರ ಕಂಪನದಿಂದಾಗಿ ಅವ್ಯವಸ್ಥೆಯ ವಾತಾವರಣ ನಿರ್ಮಾಣವಾಗಿದೆ. ಭಯಭೀತರಾದ ಜನರು ಮನೆಯಿಂದ ಹೊರಗೆ ಓಡಿ ಬರುತ್ತಿರುವುದು ಕಂಡು ಬಂದಿದೆ.

ಜೊತೆಗೆ ಕಠ್ಮಂಡುವಿನಲ್ಲಿ ಭೂಕಂಪನದಿಂದ ಭಯಭೀತರಾದ ಜನರು ಮನೆಗಳಿಂದ ಹೊರಬರುವುದು ಕಂಡು ಬಂದಿದೆ. ಕೆಲಕಾಲ ರಸ್ತೆಯುದ್ದಕ್ಕೂ ಮರಗಳು ಮತ್ತು ವಿದ್ಯುತ್ ತಂತಿಗಳು ಅಲುಗಾಡುತ್ತಿರುವುದನ್ನು ಜನರು ನೋಡಿ ಭಯಗೊಂಡಿದ್ದಾರೆ.

1 ಗಂಟೆಯೊಳಗೆ ಆರು ಬಾರಿ ನಡುಕದ ಅನುಭವ

USGS ವರದಿಯ ಪ್ರಕಾರ, ನಾಲ್ಕರಿಂದ ಐದು ತೀವ್ರತೆಯ ಭೂಕಂಪಗಳು ಒಂದು ಗಂಟೆಯೊಳಗೆ ಕನಿಷ್ಠ ಆರು ಬಾರಿ ದಾಖಲಾಗಿವೆ. USGS ವರದಿಯ ಪ್ರಕಾರ, ಬೆಳಿಗ್ಗೆ 7 ರ ಸುಮಾರಿಗೆ ಒಂದು ಗಂಟೆಯೊಳಗೆ ಕನಿಷ್ಠ 6 ಬಾರಿ ನಾಲ್ಕರಿಂದ ಐದು ತೀವ್ರತೆಯ ಭೂಕಂಪಗಳು ದಾಖಲಾಗಿವೆ. ಭೂಕಂಪ ಎಷ್ಟು ಪ್ರಬಲವಾಗಿದೆಯೆಂದರೆ ನೇಪಾಳದ ಜನರು ಭಯಭೀತರಾಗಿ ಮನೆಯಿಂದ ಹೊರಬಂದಿದ್ದಾರೆ. ಇದರಿಂದ 2015ರ ಭೀಕರ ಭೂಕಂಪವನ್ನು ಜನರಿಗೆ ನೆನಪಾಗಿದೆ. ಇದರಲ್ಲಿ ಸುಮಾರು 9 ಸಾವಿರ ಜನರು ಸಾವನ್ನಪ್ಪಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+