Earthquake: ಅಫ್ಘಾನಿಸ್ತಾನದಲ್ಲಿ 6.3 ತೀವ್ರತೆಯ ಭೂಕಂಪ; 14 ಮಂದಿ ಸಾವು, 78 ಮಂದಿಗೆ ಗಾಯ!
ಕಾಬೂಲ್, ಅಕ್ಟೋಬರ್ 07: ಪಶ್ಚಿಮ ಅಫ್ಘಾನಿಸ್ತಾನದಲ್ಲಿ ಶನಿವಾರ ಸಂಭವಿಸಿದ ಭೂಕಂಪದಲ್ಲಿ ರಿಕ್ಟರ್ ಮಾಪಕದಲ್ಲಿ 6.3 ತೀವ್ರತೆ ದಾಖಲಾಗಿದ್ದು, 14 ಜನರು ಸಾವನ್ನಪ್ಪಿದ್ದಾರೆ. ಅಲ್ಲದೇ 78 ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ತೀವ್ರತೆಯ ಭೂಕಂಪದಿಂದ ಕುಸಿದ ಕಟ್ಟಡಗಳ ಅಡಿಯಲ್ಲಿ ಸಾಕಷ್ಟು ಜನರು ಸಿಲುಕಿದ್ದು, ಸಾವನ್ನಪಿದವರ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ. ಯುನೈಟೆಡ್ ಸ್ಟೇಟ್ಸ್ ಜಿಯೋಲಾಜಿಕಲ್ ಸರ್ವೆ ಪ್ರಕಾರ, ಭೂಕಂಪದ ಕೇಂದ್ರಬಿಂದುವು ಅತಿದೊಡ್ಡ ನಗರವಾದ ಹೆರಾತ್ನ ವಾಯುವ್ಯಕ್ಕೆ 40 ಕಿಲೋಮೀಟರ್ (25 ಮೈಲುಗಳು) ದೂರದಲ್ಲಿ ಭೂಕಂಪನ ಕೇಂದ್ರೀಕರಿಸಿದೆ. ಇನ್ನೂ ಈ ಭೂಕಂಪದ ನಂತರ 5.5, 4.7, 6.3, 5.9 ಮತ್ತು 4.6 ರ ತೀವ್ರತೆಯೊಂದಿಗೆ ಕಂಪನಗಳು ಸಂಭವಿಸಿದವು ಎಂದು ಯುನೈಟೆಡ್ ಸ್ಟೇಟ್ಸ್ ಜಿಯೋಲಾಜಿಕಲ್ ಸರ್ವೆ ಹೇಳಿದೆ.

6.3 ತೀವ್ರತೆಯ ಭೂಕಂಪದಿಂದಾಗಿ ಇಲ್ಲಿಯವರೆಗೆ ಕೇಂದ್ರದ ಆಸ್ಪತ್ರೆಗೆ ಗಾಯಗೊಂಡವರನ್ನ ಕರೆ ತರಲಾಗಿದ್ದು, ಕಟ್ಟಡದ ಕೆಳಗಡೆ ಸಾಕಷ್ಟು ಜನರು ಸಿಲುಕಿದ್ದಾರೆ ಎಂಬ ಮಾಹಿತಿಯನ್ನು ನಾವು ಹೊಂದಿದ್ದೇವೆ ಎಂದು ಹೆರಾತ್ ಪ್ರಾಂತ್ಯದ ಸಾರ್ವಜನಿಕ ಆರೋಗ್ಯ ನಿರ್ದೇಶಕ ಮೊಹಮ್ಮದ್ ತಲೇಬ್ ಶಾಹಿದ್ ಇಎಫ್‌ಪಿ ಸುದ್ದಿ ಸಂಸ್ಥೆಯನ್ನು ಹೊಂದಿದ್ದೇವೆ.












Click it and Unblock the Notifications