ಇರಾನಿನ ಬುಶೆಹರ್ ಪರಮಾಣು ವಿದ್ಯುತ್ ಸ್ಥಾವರದ ಬಳಿ ಭೂಕಂಪ
ತೆಹ್ರಾನ್, ಜನವರಿ 8: ಇರಾನಿನ ಬುಶೆಹರ್ ಪರಮಾಣು ವಿದ್ಯುತ್ ಸ್ಥಾವರದ ಬಳಿ ಬುಧವಾರ ಭೂಕಂಪ ಸಂಭವಿಸಿದೆ.
ರಿಕ್ಟರ್ ಮಾಪಕದಲ್ಲಿ 4.9 ತೀವ್ರತೆ ದಾಖಲಾಗಿದೆ. ಈಗಾಗಲೇ ಇರಾನ್ ಅಮೆರಿಕದ ಸೇನಾ ನೆಲೆಯ ಮೇಲೆ ಕ್ಷಿಪಣಿ ದಾಳಿ ನಡೆಸಿದ್ದು ಪರಿಸ್ಥಿತಿ ಬಿಗಡಾಯಿಸಿದೆ. ಇನ್ನೊಂದೆಡೆ ಟೆಹ್ರಾನ್‌ನಿಂದ ಹೊರಟಿದ್ದ ಬೋಯಿಂಗ್ ವಿಮಾನ ಅಪಘಾತಕ್ಕೀಡಾಗಿ 180 ಮಂದಿ ಪ್ರಯಾಣಿಕರು ಮೃತಪಟ್ಟಿದ್ದಾರೆ.
ಇದೀಗ ಭೂಕಂಪವೂ ಕೂಡ ಸಂಭವಿಸಿದ್ದು, ಇರಾನ್ ಜನತೆಯನ್ನು ಆತಂಕಕ್ಕೀಡು ಮಾಡಿದೆ. ಭೂಕಂಪವು ಬೊರಝಾನ್ ನಗರದಿಂದ ಆಗ್ನೇಯಕ್ಕೆ 10 ಕಿ.ಮೀ ದೂರದಲ್ಲಿ 10 ಕಿ.ಮೀ ಆಳದಲ್ಲಿ ಸಂಭವಿಸಿದೆ.

ಒಂದು ಸಾವಿರ ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸುವ ಬುಶೆಹರ್ ವಿದ್ಯುತ್ ಸ್ಥಾವರವನ್ನು ರಷ್ಯ ನಿರ್ಮಿಸಿದೆ. ಸ್ಥಾವರವನ್ನು 2013 ಸೆಪ್ಟೆಂಬರ್ ನಲ್ಲಿ ಇರಾನ್‌ಗೆ ಹಸ್ತಾಂತರಿಸಲಾಗಿತ್ತು.












Click it and Unblock the Notifications