ಫಿಜಿ ದ್ವೀಪದಲ್ಲಿ 7.2 ಪ್ರಮಾಣದ ಭಾರೀ ಭೂಕಂಪ, ಸುನಾಮಿ ಭಯವಿಲ್ಲ
ಸುವಾ, ಜನವರಿ 04 : ಫಿಜಿ ದ್ವೀಪದ ಬಳಿ ಪೆಸಿಫಿಕ್ ಸಾಗರದಾಳದಲ್ಲಿ 7.2 ಪ್ರಮಾಣದ ಭೂಕಂಪ ಸಂಭವಿಸಿದ್ದು, ಸುನಾಮಿ ಎಚ್ಚರಿಕೆಯನ್ನು ಈಗ ಹಿಂದಕ್ಕೆ ತೆಗೆದುಕೊಳ್ಳಲಾಗಿದೆ. ಸ್ಥಳೀಯ ಸಮಯ 11.52ಕ್ಕೆ ಭೂಮಿ ಕಂಪಿಸಿದೆ.
ಫಿಜಿಯ ಪ್ರವಾಸಿ ಸ್ಥಳವಾದ ನಾಡಿಯಿಂದ 227 ಕಿ.ಮೀ. ದೂರದಲ್ಲಿ 10 ಕಿ.ಮೀ. ಭೂಮಿಯ ಆಳದಲ್ಲಿ ಭೂಕಂಪ ಸಂಭವಿಸಿದೆ. ಆರಂಭದಲ್ಲಿ ಪೆಸಿಫಿಕ್ ಸುನಾಮಿ ಎಚ್ಚರಿಕೆ ಕೇಂದ್ರದಿಂದ ಸುನಾಮಿಯ ಎಚ್ಚರಿಕೆ ನೀಡಲಾಯಿತಾದರೂ ನಂತರ ಹಿಂತೆಗೆದುಕೊಳ್ಳಲಾಯಿತು.
ಆದರೂ ಮುನ್ನೆಚ್ಚರಿಕೆಯಾಗಿ ನಾಡಿ ಕರಾವಳಿ ಪ್ರದೇಶದಲ್ಲಿ ವಾಸವಿದ್ದ ಜನರನ್ನು ಸ್ಥಳಾಂತರಿಸಲಾಗಿದೆ. ಸುನಾಮಿಯ ಭಯ ಇಲ್ಲದಿದ್ದರೂ ಜನರು ಎಚ್ಚರಿಕೆಯಿಂದ ಇರಬೇಕು ಎಂದು ಸೂಚಿಸಲಾಗಿದೆ.













Click it and Unblock the Notifications