ಜಿ 20 ಶೃಂಗಸಭೆ ನಡೆದ ಬ್ಯೂನಸ್ ಐರಿಸ್ ಬಳಿ ಭೂಕಂಪ
ಬ್ಯೂನಸ್ ಐರಿಸ್(ಅರ್ಜೆಂಟೀನಾ), ಡಿಸೆಂಬರ್ 01: ಜಿ.2- ಶೃಂಗಸಭೆ ಉದ್ಘಾಟನೆಗೊಂಡ ಅರ್ಜೆಂಟೀನಾದ ಬ್ಯೂನಸ್ ಐರಿಸ್ ಬಳಿ ಶುಕ್ರವಾರ ಲಘು ಭೂಕಂಪ ಸಂಭವಿಸಿದೆ.
ಸಭೆಯ ಉದ್ಘಾಟನೆಯ ಕೆಲವೇ ಕ್ಷಣಗಳ ನಂತರ ಈ ಭೂಕಂಪ ಸಂಭವಿಸಿದೆ. ರಿಕ್ಟರ್ ಮಾಪನದಲ್ಲಿ 3.8 ತೀವ್ರತೆ ದಾಖಲಾಗಿದ್ದು, ಯಾವುದೇ ಅಹಿತಕರ ಘಟನೆ ಸಂಭವಿಸಿದ ಕುರಿತು ಮಾಹಿತಿ ಲಭ್ಯವಿಲ್ಲ.
ಈ ಶೃಂಘಸಭೆಯಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಸೇರಿದಂತೆ ಚೀನಾ, ಬ್ರಿಟನ್ ಮುಂತಾದ ದೇಶಗಳ ನಾಯಕರು ಭಾಗವಹಿಸಿದ್ದಾರೆ.

ಬ್ಯೂನಸ್ ಐರಿಸ್ ನ ದಕ್ಷಿಣ ಭಾಗದ ಲಾ ಪ್ಲಾಟಾ ಎಂಬಲ್ಲಿ ಭೂಕಂಪದ ಅನುಭವವಾಗಿದೆ.
ಶುಕ್ರವಾರ ಅಮೆರಿಕದ ಅಲಾಸ್ಕಾದಲ್ಲೂ ಭೀಕರ ಭೂಕಂಪ ಸಂಭವಿಸಿದ್ದು, ರಿಕ್ಟರ್ ಮಾಪನದಲ್ಲಿ 6.7 ತೀವ್ರತೆ ದಾಖಲಾಗಿತ್ತು.
ಈ ಘಟನೆಯಲ್ಲೂ ಸಾವು-ನೋವಿನ ಕುರಿತು ಯಾವುದೇ ಮಾಹಿತಿ ಲಭ್ಯವಾಗಿಲ್ಲ.












Click it and Unblock the Notifications