Earthquake in Afghanistan : ಅಫ್ಘಾನಿಸ್ತಾನದಲ್ಲಿ ಮತ್ತೆ ಭೂಕಂಪ: 4.2 ತೀವ್ರತೆಯಲ್ಲಿ ಕಂಪಿಸಿದ ಭೂಮಿ

ರಿಕ್ಟರ್ ಮಾಪನದಲ್ಲಿ 4.2 ತೀವ್ರತೆಯ ಭೂಕಂಪ ಅಫ್ಘಾನಿಸ್ತಾನದಲ್ಲಿ ಮತ್ತೆ ಸಂಭವಿಸಿದ್ದು ಜನ ಆತಂಕಕ್ಕೆ ಒಳಗಾಗಿದ್ದಾರೆ.

ಅಫ್ಘಾನಿಸ್ತಾನದಲ್ಲಿ ಮತ್ತೊಮ್ಮೆ ಭೂಮಿಯ ನಡುಕವನ್ನು ಅನುಭವಿಸಲಾಗಿದೆ. ಮಾರ್ಚ್ 2 ರ ನಂತರ ಅಫ್ಘಾನಿಸ್ತಾನದಲ್ಲಿ ಭೂಮಿ ಮತ್ತೊಮ್ಮೆ ನಡುಗಿದೆ. ಅಫ್ಘಾನಿಸ್ತಾನದ ಫೈಜಾಬಾದ್‌ನಲ್ಲಿ ಭೂಕಂಪ ಸಂಭವಿಸಿದೆ. ರಿಕ್ಟರ್ ಪ್ರಮಾಣದಲ್ಲಿ 4.2 ತೀವ್ರತೆಯ ಭೂಕಂಪನ ಆಗಿದೆ. ನ್ಯಾಷನಲ್ ಸೆಂಟರ್ ಫಾರ್ ಸಿಸಾಮಾಲಜಿ (ಎನ್‌ಸಿಎಸ್) ಪ್ರಕಾರ, ಅಫ್ಘಾನಿಸ್ತಾನದಲ್ಲಿ ಬುಧವಾರ ಮುಂಜಾನೆ 1:40 ಕ್ಕೆ 4.2 ಪ್ರಮಾಣದ ಭೂಕಂಪ ಸಂಭವಿಸಿದೆ.

4.2 ಪ್ರಮಾಣದ ಭೂಕಂಪ

ಅಫ್ಘಾನಿಸ್ತಾನದ ಫೈಜಾಬಾದ್‌ನಲ್ಲಿ ಬುಧವಾರ 4.2 ಪ್ರಮಾಣದ ಭೂಕಂಪ ಸಂಭವಿಸಿದೆ. ಎನ್‌ಸಿಎಸ್ ಭೂಕಂಪದ ಬಗ್ಗೆ ಮಾಹಿತಿ ನೀಡಿದೆ. ಇದರಿಂದ ಯಾವುದೇ ರೀತಿಯ ಜೀವ ಮತ್ತು ಆಸ್ತಿ ಹಾನಿಯ ಬಗ್ಗೆ ಯಾವುದೇ ವರದಿಯಾಗಿಲ್ಲ. ಆದರೆ ಜನರು ವಾರದಲ್ಲಿ ಎರಡನೇ ಬಾರಿಗೆ ಭೂಕಂಪನದಿಂದಾಗಿ ಹೆದರಿದ್ದಾರೆ. ಇದಕ್ಕೂ ಮೊದಲು, ಮಾರ್ಚ್ 2 ರಂದು ಅಫ್ಘಾನಿಸ್ತಾನದಲ್ಲಿ ದಿನಕ್ಕೆ ಎರಡು ಬಾರಿ ಭೂಕಂಪನ ನಡುಕವನ್ನು ಅನುಭವಿಸಲಾಯಿತು.

Earthquake again in Afghanistan: 4.2 magnitude earthquake

ಮಾರ್ಚ್ 2 ರಂದು ನಡುಗಿದ ಭೂಮಿ

ಮಾರ್ಚ್ 2 ರಂದು, ಅಫ್ಘಾನಿಸ್ತಾನದ ಫೈಜಾಬಾದ್ ಪ್ರದೇಶದಲ್ಲಿ ಸಂಜೆ 02:35 ಕ್ಕೆ 4.1 ತೀವ್ರತೆಯಲ್ಲಿ ಭೂಕಂಪನವಾಗಿತ್ತು. ಎನ್‌ಸಿಎಸ್ ಪ್ರಕಾರ, ಭೂಕಂಪ 245 ಕಿ.ಮೀ ಆಳದಲ್ಲಿ 37.73 ರ ಅಕ್ಷಾಂಶ ಮತ್ತು 73.47 ರ ರೇಖಾಂಶದಲ್ಲಿ ಸಂಭವಿಸಿದೆ.

ವಿಶ್ವದೆಲ್ಲೆಡೆ ಕಂಪಿಸುತ್ತಿರುವ ಭೂಮಿ

ಇತ್ತೀಚೆಗೆ ಭೂಕಂಪನದ ವರದಿಗಳು ವಿಶ್ವದೆಲ್ಲೆಡೆ ಹೆಚ್ಚಾಗುತ್ತಿವೆ. ಮಾರ್ಚ್‌ 6 ರಂದು ಬೆಳಗ್ಗೆ ಕೇಂದ್ರಾಡಳಿತ ಪ್ರದೇಶ ಅಂಡಮಾನ್ ಮತ್ತು ನಿಕೋಬಾರ್ ದ್ವೀಪದಲ್ಲಿ ಭೂಕಂಪ ಸಂಭವಿಸಿತ್ತು. ಬೆಳಗ್ಗೆ 5: 07 ರ ಸುಮಾರಿನಲ್ಲಿ ಭೂಮಿ ಕಂಪಿಸಿದ್ದು, ರಿಕ್ಟರ್ ಮಾಪಕದಲ್ಲಿ 5 ರಷ್ಟು ತೀವ್ರತೆ ದಾಖಲಾಗಿದೆ. 10 ಕಿ.ಮೀ ದೂರದಲ್ಲಿ ಭೂಕಂಪದ ತೀವ್ರತೆ ದಾಖಲಾಗಿರುವುದಾಗಿ ರಾಷ್ಟ್ರೀಯ ಭೂಕಂಪ ಶಾಸ್ತ್ರ ಕೇಂದ್ರ ಮಾಹಿತಿ ನೀಡಿದೆ.

Earthquake again in Afghanistan: 4.2 magnitude earthquake

ಉತ್ತರಕಾಶಿಯಲ್ಲಿ ಸತತ ಮೂರು ಬಾರಿ ಭೂ ನಡುಕ

ಮಾರ್ಚ್ 4ರಂದು ಕೇವಲ 21 ನಿಮಿಷಗಳ ಅಂತರದಲ್ಲಿ ಮೂರು ಬಾರಿ ಭೂಕಂಪನ ಸಂಭವಿಸಿದೆ. ತಡರಾತ್ರಿ 12.40 ಗಂಟೆಗೆ ಮೊದಲ ಬಾರಿ ಭೂಕಂಪನವಾಗಿದೆ. ಕಿಟಕಿ ಗಾಜುಗಳ ಸದ್ದಿನಿಂದ ಜನರು ಭಯದಿಂದ ಹೊರಕ್ಕೆ ಬಂದಿದ್ದಾರೆ. ಬಳಿಕ 12:45 ಕ್ಕೆ ಮತ್ತು ಮತ್ತೊಮ್ಮೆ 1:01 ಗಂಟೆಗೆ ಭೂಕಂಪನವಾಗಿದೆ.

ಉತ್ತರಕಾಶಿ: ಮಾರ್ಚ್ 5ರಂದು ರಾತ್ರಿ ಉತ್ತರಾಖಂಡದ ಉತ್ತರಕಾಶಿಯಲ್ಲಿ ಸತತವಾಗಿ ಮೂರುಬಾರಿ ಭೂಕಂಪನಗಳು ಸಂಭವಿಸಿವೆ. ಕೇವಲ 21 ನಿಮಿಷಗಳ ಅಂತರದಲ್ಲಿ ಮೂರು ಬಾರಿ ಭೂಕಂಪನ ಸಂಭವಿಸಿದೆ. ಇದರಿಂದ ಜನ ಭಯಭೀತರಾಗಿದ್ದಾರೆ.

Earthquake again in Afghanistan: 4.2 magnitude earthquake

ಟರ್ಕಿ-ಸಿರಿಯಾ ಭೂಕಂಪ

ಇನ್ನೂ ಫೆಬ್ರವರಿ ತಿಂಗಳಲ್ಲಿ ಟರ್ಕಿ ಹಾಗೂ ಸಿರಿಯಾದಲ್ಲಿ ಸಂಭವಿಸಿದ ಸಂಭವಿಸಿದ ಭೀಕರ ಭೂಕಂಪದಲ್ಲಿ ಮೃತಪಟ್ಟವರ ಸಂಖ್ಯೆ ಭಾನುವಾರ 50 ಸಾವಿರಕ್ಕೆ ಏರಿಕೆಯಾಗಿದೆ. ಭೂಕಂಪದಿಂದಾಗಿ, ಟರ್ಕಿ ಮತ್ತು ಸಿರಿಯಾ ಸೇರಿದತೆ 2.6 ಕೋಟಿ ಜನರು ತೊಂದರೆಗೀಡಾಗಿದ್ದು, ತಾತ್ಕಾಲಿಕ ಟೆಂಟ್‌ಗಳನ್ನು ನಿರ್ಮಿಸಿ ಜನರನ್ನು ಸ್ಥಳಾಂತರಿಸಲಾಗುತ್ತಿದೆ.

ಟರ್ಕಿಯಲ್ಲಿ ಇದುವರೆಗೆ 40 ಸಾವಿರಕ್ಕೂ ಹೆಚ್ಚು ಜನ ಮತ್ತು ಸಿರಿಯಾದಲ್ಲಿ 8ಸಾವಿರಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಎರಡೂ ದೇಶಗಳಲ್ಲಿ ಒಟ್ಟು 50 ಸಾವಿರ ಮಂದಿ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ಮತ್ತು ವೈದ್ಯರು ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+