ದುಬೈ ನಗರದಲ್ಲೀಗ ಚಿನ್ನದ ರಸ್ತೆ : 24 ಕ್ಯಾರೆಟ್ ಬಂಗಾರದಿಂದ ನಿರ್ಮಿಸಿದ ಗೋಲ್ಡ್ ವಾಕ್ ವೇ

Dubai Golden Walk Way : ದುಬೈ ಅನೇಕ ಜನರಿಗೆ ಬದುಕು ಕಟ್ಟಿಕೊಟ್ಟ ಊರು. ಇಲ್ಲಿಗೆ ಹೋದವರು ಬಂಗಾರ ತಂದೇ ತರುತ್ತಾರೆ. ಭಾರತಕ್ಕೆ ಹೋಲಿಸಿದ್ರೆ ಇಲ್ಲಿ ಚಿನ್ನ ಅಗ್ಗ. ಹಾಗಾಗಿ ಇಲ್ಲಿಂದ ವಾಪಾಸಾಗುವಾಗ ಚಿನ್ನ ತರುತ್ತಾರೆ. ಇಲ್ಲಿ ಚಿನ್ನ ಖರೀದಿಸಿದರೆ ಮೇಲೆ ತೆರಿಗೆ ಇಲ್ಲ ಮತ್ತು ಮೆಕಿಂಗ್ ಚಾರ್ಜ್ ಕೂಡಾ ಕಡಿಮೆ. ಈ ಕಾರಣದಿಂದ ಭಾರತದಿಂದ ಸುಮಾರು 15 ಶೇ. ಕಡಿಮೆ ದರದಲ್ಲಿ ದುಬೈನಲ್ಲಿ ಚಿನ್ನ ಸಿಗುತ್ತದೆ. ಮಾತ್ರವಲ್ಲ ಇಲ್ಲಿನ ಚಿನ್ನದ ಪ್ಯೂರಿಟಿ ಜಾಸ್ತಿ.

Dubai Golden Street By The End Of 2026 Worlds First And Longest 24 Karat Gold Walkway To Get Opened Gold District Of Dubai

ದುಬೈನ Dubai Golden Street:

ದುಬೈಗೆ ಸಾವಿರಾರು ಜನ ಪ್ರವಾಸಿಗರು ಕುಡಾ ಬರುತ್ತಿರುತ್ತಾರೆ. ದುಬೈ ತನ್ನ ವಿಶಿಷ್ಟ ಪ್ರವಾಸಿ ಆಕರ್ಷಣೆಗೆ ಮತ್ತೊಂದು ಗರಿ ಸೇರಿಸುತ್ತಿದೆ. ಇಲ್ಲಿ 24 ಕ್ಯಾರೆಟ್ ಚಿನ್ನದ ಪಾದಚಾರಿ ಮಾರ್ಗ ಅಥವಾ ಗೋಲ್ಡ್ ವಾಕ್ವೇ ನಿರ್ಮಾಣ ಆಗುತ್ತಿದೆ. ಈ ವಿಶೇಷ ಮಾರ್ಗವನ್ನು ದುಬೈನ ಗೋಲ್ಡ್ ಡಿಸ್ಟ್ರಿಕ್ಟ್ ನಲ್ಲಿ ನಿರ್ಮಿಸಲಾಗ್ತಾ ಇದೆ. 2026ರ ಕೊನೆಗೆ ಪ್ರವಾಸಿಗರಿಗೆ ಈ ಮಾರ್ಗ ತೆರೆದುಕೊಳ್ಳುವ ನಿರೀಕ್ಷೆಯಿದೆ. ಇದನ್ನು ವಿಶ್ವದ ಮೊದಲ ಮತ್ತು ಅತಿ ಉದ್ದದ ಚಿನ್ನದ ಪಾದಚಾರಿ ಮಾರ್ಗ ಎಂದು ಕರೆಯಲಾಗುತ್ತದೆ.

ಚಿನ್ನದಿಂದಲೇ ತಯಾರಾದ ಮಾರ್ಗ ಇದು :

ಗಲ್ಫ್ ಟುಡೇ ವರದಿಯ ಪ್ರಕಾರ, ಈ ಯೋಜನೆ ಶೀಘ್ರದಲ್ಲೇ ಪ್ರಾರಂಭವಾಗುವ ನಿರೀಕ್ಷೆಯಿದೆ. ಇನ್ನು ಮುಂದೆ ಇಲ್ಲಿಗೆ ಬರುವ ಜನರು ಚಿನ್ನದಿಂದ (gold) ತಯಾರಾದ ಈ ವಾಕ್ ವೇಯಲ್ಲಿ ನಡೆಯುವ ಅನುಭವ ಪಡೆಯಬಹುದು.

ದುಬೈನಲ್ಲಿ ಬೆಳೆಯುತ್ತಿದೆ ಚಿನ್ನ ಮತ್ತು ಆಭರಣ ವ್ಯವಹಾರ :

ದುಬೈನ ಈ ಪ್ರದೇಶದಲ್ಲಿ ಚಿನ್ನ ಮತ್ತು ಆಭರಣ ವ್ಯವಹಾರವೂ ಹೆಚ್ಚುತ್ತಿದೆ. ಇದೇ ಸಮಯದಲ್ಲಿ ಗೋಲ್ಡ್ ವಾಕ್ವೇ ನಿರ್ಮಾಣ ಆಗ್ತಿದೆ. ದುಬೈ ಗೋಲ್ಡ್ ಡಿಸ್ಟ್ರಿಕ್ಟ್ ನ ವಾಣಿಜ್ಯ ವಲಯದ ಹಿರಿಯ ನಿರ್ದೇಶಕ ರಶೀದ್ ಅಲ್ ಹರ್ಮೌಡಿ ಪ್ರಕಾರ, 2026 ರ ಆರಂಭದಿಂದ ಇಲ್ಲಿ

1.ಬೃಹತ್ ಪ್ರಮಾಣದಲ್ಲಿ ಚಿನ್ನವನ್ನು ಮಾರಾಟ ಮಾಡುವ ಹೊಸ ಕಚೇರಿಗಳ ಸಂಖ್ಯೆ 20% ರಷ್ಟು ಹೆಚ್ಚಾಗಿದೆ.
2.ಚಿನ್ನ, ಆಭರಣಗಳು, ಬೆಲೆ ಬಾಳುವ ರತ್ನ ಮತ್ತು ದುಬಾರಿ ಕೈಗಡಿಯಾರ ಮಾರಾಟ ಮಾಡುವ ಹೊಸ ಅಂಗಡಿಗಳ ಸಂಖ್ಯೆ 15% ರಷ್ಟು ಹೆಚ್ಚಾಗಿದೆ.
3.ಮುಂಬರುವ ವರ್ಷದಲ್ಲಿ ಇಲ್ಲಿ ವ್ಯಾಪಾರ ಆರಂಭಿಸುವ ಕಂಪನಿಗಳ ಸಂಖ್ಯೆ ಶೇ.10ರಿಂದ ಶೇ.20ರಷ್ಟು ಹೆಚ್ಚಾಗುವ ನಿರೀಕ್ಷೆಯಿದೆ.
4.ವ್ಯಾಪಾರಕ್ಕಾಗಿ ಕಚೇರಿ ಮತ್ತು ಅಂಗಡಿ ತೆರೆಯಲು ಸ್ಥಳಾವಕಾಶ ಹೆಚ್ಚಿಸಲಾಗುತ್ತಿದೆ. ಅಲ್ಲದೆ, ಚಿನ್ನ ಮತ್ತು ಆಭರಣಗಳ ದೊಡ್ಡ ಪ್ರದರ್ಶನ ನಡೆಸುವ ಯೋಜನೆ ಇದೆ. ಇದರಿಂದ ಪ್ರದೇಶವು ಹೆಚ್ಚಿನ ಮಾನ್ಯತೆಯನ್ನು ಪಡೆಯಬಹುದು.

ದಾಖಲೆ ನಿರ್ಮಿಸಿವೆ ದುಬೈನ ಚಿನ್ನದ ಕಿವಿಯೋಲೆ :

ದುಬೈನಲ್ಲಿ ತಯಾರಿಸಿದ ಸಾಂಪ್ರದಾಯಿಕ ಭಾರತೀಯ ಕಿವಿಯೋಲೆ ಕೂಡಾ ಸಖತ್ ಸೌಂಡ್ ಮಾಡುತ್ತಿದೆ. ಮಯೂರ್ ಸಹಸ್ರ ಹೆಸರಿನ ಈ ಕಿವಿಯೋಲೆ 16.514 ಕೆಜಿ ತೂಕವಿದೆ. ಇದನ್ನು 22 ಕ್ಯಾರೆಟ್ ಚಿನ್ನದಿಂದ ಮಾಡಲಾಗಿದೆ. ಇದು ಅತಿ ಭಾರವಾದ ಮತ್ತು ಅತಿದೊಡ್ಡ ಚಿನ್ನದ ಕಿವಿಯೋಲೆ ಎನ್ನುವ ಕಾರಣದಿಂದ ಎರಡು ಗಿನ್ನೆಸ್ ವಿಶ್ವ ದಾಖಲೆ ನಿರ್ಮಿಸಿದೆ.

ಅಂದ ಹಾಗೆ ಈ ಕಿವಿಯೋಲೆಯನ್ನು ಮಾರಾಟ ಮಾಡಲಾಗುವುದಿಲ್ಲ. ಇದನ್ನು ದುಬೈನಲ್ಲಿ ಪ್ರದರ್ಶನಕ್ಕೆ ಇಡಲಾಗುವುದು. ಈ ನಡುವೆ ಗೋಲ್ಡ್ ವಾಕ್ ವೇಯಂತಹ ಹೊಸ ಆಕರ್ಷಣೆ ದುಬೈನಲ್ಲಿ ಪ್ರವಾಸೋದ್ಯಮ ಮತ್ತು ಚಿನ್ನದ ವ್ಯವಹಾರ ಹೆಚ್ಚಿಸುವ ನಿರೀಕ್ಷೆಯಿದೆ. ಮುಂಬರುವ ದಿನಗಳಲ್ಲಿ, ಈ ಹೊಸ ಆಕರ್ಷಣೆಯನ್ನು ಪ್ರವಾಸಿಗರು ಎಷ್ಟು ಇಷ್ಟ ಪಡುತ್ತಾರೆ ಎನ್ನುವುದು ಆಸಕ್ತಿದಾಯಕವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+