US Election: ಹತ್ಯೆಯ ಪ್ರಯತ್ನ, ಪರಸ್ಪರ ವಾಗ್ದಾಳಿ; ಅಂತಿಮ ಹಂತಕ್ಕೆ ಯುಎಸ್‌ ಚುನಾವಣೆ

ಯುಎಸ್ ಚುನಾವಣೆಗೆ ದಿನಗಣನೆ ಶುರುವಾಗಿದೆ. ನವೆಂಬರ್ 5 ರಂದು ಯುಎಸ್ ಅಧ್ಯಕ್ಷೀಯ ಚುನಾವಣೆ ನಡೆಯಲಿದ್ದು, ಡೊನಾಲ್ಡ್ ಟ್ರಂಪ್ ಮತ್ತು ಕಮಲಾ ಹ್ಯಾರಿಸ್ ನಡುವೆ ಗೆಲುವು ಯಾರಿಗೆ ಎನ್ನುವ ಚರ್ಚೆಗಳು ಶುರುವಾಗಿದೆ. ಈ ಬಾರಿ ಯುಎಸ್ ಚುನಾವಣೆ ಹಲವು ಕಾರಣಗಳಿಂದ ಭಾರಿ ಕುತೂಹಲ ಕೆರಳಿಸಿದೆ, ರೋಚಕ ಹಣಾಹಣಿ ನಿರೀಕ್ಷೆ ಮಾಡಲಾಗಿದ್ದು, ಯಾರು ಗೆಲುವು ಸಾಧಿಸಬಹುದು ಎಂದು ಸ್ಪಷ್ಟವಾಗಿ ಹೇಳಲು ವಿಶ್ಲೇಷಕರಿಗೆ ಆಗುತ್ತಿಲ್ಲ.

ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಡೊನಾಲ್ಡ್ ಟ್ರಂಪ್ ಮೇಲೆ ನಡೆದ ಗುಂಡಿನ ದಾಳಿ ಜಗತ್ತನ್ನೇ ಬೆಚ್ಚಿ ಬೀಳಿಸಿತ್ತು. ಸಾಕಷ್ಟು ಭದ್ರತೆ ನಡುವೆಯೂ ಟ್ರಂಪ್ ಮೇಲೆ ಹತ್ಯಾ ಪ್ರಯತ್ನ ನಡೆದಿತ್ತು. ಜುಲೈ 13ರಂದು ಪೆನ್ಸಿಲ್ವೇನಿಯಾದಲ್ಲಿ ಟ್ರಂಪ್ ಚುನಾವಣಾ ರ್‍ಯಾಲಿಯಲ್ಲಿ ಪಾಲ್ಗೊಂಡಿದ್ದ ಸಂದರ್ಭದಲ್ಲಿ ಅವರ ಮೇಲೆ ಗುಂಡು ಹಾರಿಸಲಾಗಿತ್ತು, ಅದೃಷ್ಟವಶಾತ್ ಗುಂಡು ಟ್ರಂಪ್‌ರ ಕಿವಿಯನ್ನು ತಾಗಿ ಹೋಗಿತ್ತು, ತಕ್ಷಣವೇ ಎಚ್ಚೆತ್ತ ಭದ್ರತಾ ಸಿಬ್ಬಂದಿ ಟ್ರಂಪ್‌ರನ್ನು ಸುತ್ತುವರೆದು ರಕ್ಷಣೆ ಮಾಡಿದ್ದರು.

Dramatic debates assassination attempts us election campaigns

ತನಗೆ ಗುಂಡು ತಾಗಿದ್ದರೂ ಟ್ರಂಪ್ "ಹೋರಾಟ, ಜಗಳ, ಹೋರಾಟ!" ಎಂದು ಕೂಗಿ ಮುಷ್ಟಿಯನ್ನು ಎತ್ತುವ ಮೂಲಕ ನೆರೆದಿದ್ದ ಬೆಂಬಲಿಗರನ್ನು ಹುರಿದುಂಬಿಸಿದ್ದರು. ಯುಎಸ್ ರಾಜಕೀಯ ಇತಿಹಾಸದ ಮಹತ್ವದ ಚಿತ್ರಗಳಲ್ಲಿ ಇದನ್ನು ಒಂದು ಎಂದು ಹೇಳಲಾಗಿದೆ.

ಡೊನಾಲ್ಡ್ ಟ್ರಂಪ್ ವಿರುದ್ಧ ಆರೋಪ

ಮೇ 30 ರಂದು ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್‌ಗೆ ನ್ಯಾಯಾಲಯ ಶಿಕ್ಷೆ ವಿಧಿಸಿದ್ದು ಭಾರಿ ಸುದ್ದಿಯಾಗಿತ್ತು. ಅಪರಾಧಗಳಿಗೆ ಶಿಕ್ಷೆಗೊಳಗಾದ ಮೊದಲ ಮಾಜಿ ಯುಎಸ್ ಅಧ್ಯಕ್ಷರು ಎನಿಸಿಕೊಂಡಿದ್ದಾರೆ. 2016 ರ ಚುನಾವಣೆಯ ಗೆಲುವಿನ ಮುನ್ನಾದಿನದಂದು ಪೋರ್ನ್ ಸ್ಟಾರ್ ಸ್ಟಾರ್ಮಿ ಡೇನಿಯಲ್ಸ್‌ಗೆ ಹಣ ಪಾವತಿಯನ್ನು ಮರೆಮಾಡಲು ಸುಳ್ಳು ದಾಖಲೆಗಳನ್ನು ಸೃಷ್ಟಿಸಿದ್ದರು ಎಂದು ಆರೋಪಿಸಲಾಗಿತ್ತು.

ಯುಎಸ್ ಕಾನೂನಿನ ಪ್ರಕಾರ ತಪ್ಪಿತಸ್ಥ ಎಂದು ಕೋರ್ಟ್ ತೀರ್ಪು ಕೊಟ್ಟರೂ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ ಮಾಡಲು ಅವಕಾಶವಿದೆ. ಟ್ರಂಪ್ ಮೇಲೆ ಇನ್ನೂ ಮೂರು ಕ್ರಿಮಿನಲ್ ಪ್ರಕರಣಗಳಲ್ಲಿ ವಿಚಾರಣೆ ಎದುರಿಸುತ್ತಿದ್ದರೂ, ಅವರಿಗೆ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸಲು ವ್ಯಾಪಕ ಬೆಂಬಲ ಸಿಕ್ಕಿದೆ.

ಹ್ಯಾರಿಸ್-ಟ್ರಂಪ್ ವಾಗ್ದಾಳಿ

ಈ ಬಾರಿ ಯುಎಸ್ ಚುನಾವಣೆಯಲ್ಲಿ ಕಮಲಾ ಹ್ಯಾರಿಸ್ ಮತ್ತು ಡೊನಾಲ್ಡ್ ಟ್ರಂಪ್ ನಡುವೆ ಪರಸ್ಪರ ವಾಗ್ದಾಳಿ ನಡೆಸಿದ್ದಾರೆ. ಡೊನಾಲ್ಡ್ ಟ್ರಂಪ್ ಅಧಿಕಾರಕ್ಕೆ ಬಂದರೆ, ಆರೋಗ್ಯ ಯೋಜನೆಯಾದ ಒಬಾಮಾ ಕೇರ್ ಅನ್ನು ರದ್ದುಗೊಳಿಸುತ್ತಾರೆ ಎಂದು ಕಮಲಾ ಹ್ಯಾರಿಸ್ ಎಚ್ಚರಿಕೆ ನೀಡಿದ್ದರು, ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ಟ್ರಂಪ್ ನಾನು ಅಂತಹ ಯೋಚನೆಯನ್ನೇ ಮಾಡಿಲ್ಲ ಎಂದು ಹೇಳಿದರು.

ಟ್ರಂಪ್‌ ಮಹಿಳೆಯರಿಗೆ ಗೌರವ ಕೊಡುತ್ತಿಲ್ಲ, ಮಹಿಳೆಯರ ಸ್ವಾತಂತ್ರ, ಸ್ವಂತ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯವನ್ನು ಟ್ರಂಪ್ ಸಹಿಸುವುದಿಲ್ಲ ಎಂದು ಕಮಲಾ ಹ್ಯಾರಿಸ್‌ ಆರೋಪಿಸಿದ್ದರು. ಸೋಲಿನ ಭಯದಲ್ಲಿ ಕಮಲಾ ಹ್ಯಾರಿಸ್ ಇಂತಹ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಟ್ರಂಪ್ ತಿರುಗೇಟು ಕೊಟ್ಟಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+