ಡೊನಾಲ್ಡ್ ಟ್ರಂಪ್ ಮಾಡಿದ ಎಡವಟ್ಟಿಗೆ ಅಮೆರಿಕ ಷೇರುಪೇಟೆ ಸರ್ವನಾಶ?
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇದೀಗ ತಮ್ಮ ಬುಡಕ್ಕೆ ತಾವೇ ಬೆಂಕಿ ಇಟ್ಟುಕೊಂಡ ರೀತಿ ಕಾಣುತ್ತಿದೆ. ಯಾಕಂದ್ರೆ ಅಮೆರಿಕದ ಜೊತೆಗೆ ಉತ್ತಮವಾಗಿ ವ್ಯಾಪಾರ & ವಹಿವಾಟು ನಡೆಸುತ್ತಿದ್ದ ದೇಶಗಳ ವಿರುದ್ಧ ಭಾರಿ ಪ್ರಮಾಣದ ತೆರಿಗೆ ಹೇರಿಕೆ ಮಾಡುವ ಘೋಷಣೆಯನ್ನ ಹೊರಡಿಸಿದ್ದರು ಟ್ರಂಪ್. ಡೊನಾಲ್ಡ್ ಟ್ರಂಪ್ ಈ ರೀತಿ ಮನಸ್ಸಿಗೆ ಬಂದಂತೆ & ಅವೈಜ್ಞಾನಿಕ ರೀತಿಯಲ್ಲಿ ತೆರಿಗೆ ಹೇರಿಕೆಗೆ ಮುಂದಾದ ನಂತರ ಬಿರುಗಾಳೆಯೇ ಬಂದೆರಗಿದೆ.
ಹೌದು, ಜಾಗತಿಕ ಷೇರುಪೇಟೆ ಇದೀಗ ಟ್ರಂಪ್ ನಿರ್ಧಾರದ ನಂತರ ಅಲ್ಲಾಡಿ ಹೋಗಿಬಿಟ್ಟಿದೆ. ಭಾರತ ಸೇರಿದಂತೆ ಯುರೋಪ್, ಜಪಾನ್ ಷೇರು ಪೇಟೆಗಳು ಇದೀಗ ಡೊನಾಲ್ಡ್ ಟ್ರಂಪ್‌ರ ನಿರ್ಧಾರಕ್ಕೆ ಅಲ್ಲಾಡಿ ಹೋಗಿವೆ. ಅದರಲ್ಲೂ ಅಮೆರಿಕದ ಷೇರು ಮಾರುಕಟ್ಟೆ ಈಗ ಅಕ್ಷರಶಃ ಬೀದಿಗೆ ಬೀಳುವ ಪರಿಸ್ಥಿತಿ ನಿರ್ಮಾಣ ಆಗಿದೆ. ಈ ಮೂಲಕ ಟ್ರಂಪ್ ತೆರಿಗೆ ನೀತಿಯು ಕಿಚ್ಚು ಹೊತ್ತಿಸಿ, ತಲ್ಲಣ ಸೃಷ್ಟಿ ಮಾಡಿದೆ. ನಿನ್ನೆ ಕೂಡ ಪಾತಾಳ ಸೇರಿದ್ದ ಅಮೆರಿಕದ ಷೇರುಪೇಟೆ ಸೂಚ್ಯಂಕಗಳು ಇಂದು ಕೂಡ ಕುಸಿದು ಕುಸಿದು ಬಿದ್ದಿವೆ.

ಅಮೆರಿಕದಲ್ಲಿ ಭಯದ ವಾತಾವರಣ?
ಮೊನ್ನೆಯಷ್ಟೇ ಡೊನಾಲ್ಡ್ ಟ್ರಂಪ್ ಹೊಸ ತೆರಿಗೆ ನೀತಿ ಘೋಷಣೆ ಮಾಡಿದ್ದರು, ಆ ನಂತರ ತಕ್ಷಣವೇ ಷೇರುಪೇಟೆ ಅಲುಗಾಡಲು ಶುರುವಾಗಿತ್ತು. ಅಲ್ಲೋಲ ಕಲ್ಲೋಲ ಸೃಷ್ಟಿಯಾಗಿತ್ತು. ಡೊನಾಲ್ಡ್ ಟ್ರಂಪ್ ಹೊಸ ತೆರಿಗೆ ನೀತಿ ಪ್ರಕಟಿಸಿದ ನಂತರ ದೊಡ್ಡ ಕೋಲಾಹಲವೇ ಸೃಷ್ಟಿ ಆಗಿತ್ತು. ಜಾಗತಿಕ ಆರ್ಥಿಕತೆ ಡೊನಾಲ್ಡ್ ಟ್ರಂಪ್ ತೆರಿಗೆ ನೀತಿಯಿಂದ ನಲುಗಿ ಹೋಗಿದ್ದು, ಈ ಹೊಸ ಟ್ಯಾಕ್ಸ್ ಪ್ರಕಟವಾದ ನಂತರ ನಿನ್ನೆ ಒಂದೇ ದಿನ ಬರೋಬ್ಬರಿ 2 ಟ್ರಿಲಿಯನ್ ಡಾಲರ್ ಹಣ ಕರಗಿ ನೀರಾಗಿ ಹೋಗಿತ್ತು. ಇಂದು ಕೂಡ ಅದು ಮುಂದುವರಿದು ಅಮೆರಿಕದ ಷೇರು ಮಾರುಕಟ್ಟೆಯಲ್ಲಿ ಭಯದ ವಾತಾವರಣ ನಿರ್ಮಾಣ ಆಗಿದೆ.
ಹೂಡಿಕೆದಾರರಿಗೆ ಭಾರಿ ದೊಡ್ಡ ನಷ್ಟ
ಅಮೆರಿಕದ ಷೇರು ಸೂಚ್ಯಂಕ ನಾಸ್ಡಾಕ್ ಕಾಂಪೋಸಿಟ್ ಸುಮಾರು 962.82 ಅಂಕಗಳನ್ನು ಕಳೆದುಕೊಂಡು ಬರೋಬ್ಬರಿ ಶೇ. 5.82 ರಷ್ಟು ಕುಸಿತ ಕಂಡಿದೆ. ಹಾಗೇ ಇನ್ನುಳಿದ ಪ್ರಮುಖ ಸೂಚ್ಯಂಕಗಳು ಕೂಡ ಮಕಾಡೆ ಮಲಗಿವೆ. ಇದು ಸಾಲದು ಎನ್ನುವಂತೆ ಎಲಾನ್ ಮಸ್ಕ್‌ರ ಟೆಸ್ಲಾ ಕಂಪನಿ ಶೇರುಗಳು ಒಂದೇ ದಿನ ಶೇ. 10.42 ರಷ್ಟು ಕುಸಿದು ಬಿದ್ದು, 239.43 ಡಾಲರ್ ತಲುಪಿವೆ. ಇದು ಹೀಗೆ ಮುಂದುವರಿದರೆ ಕೆಲವೇ ದಿನಗಳಲ್ಲಿ ಅಮೆರಿಕದ ಷೇರು ಮಾರುಕಟ್ಟೆ ಖಾಲಿ ಆದರೂ ಅಚ್ಚರಿ ಇಲ್ಲ ಎಂಬ ಮಾತು ಕೇಳಿಬಂದಿದೆ.












Click it and Unblock the Notifications