ಭಾರತೀಯರ ಉದ್ಯೋಗವನ್ನು ಕಸಿದುಕೊಳ್ಳಲು ಅಮೆರಿಕ ಮಾಜಿ ಅಧ್ಯಕ್ಷರ ಪ್ಲಾನ್?
ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತೊಮ್ಮೆ ಸದ್ದು ಮಾಡುತ್ತಿದ್ದಾರೆ. ಆದ್ರೆ ಈ ಬಾರಿ ಉದ್ಯೋಗ ಸೃಷ್ಟಿ ಮಾಡುವ ವಿಚಾರದಲ್ಲಿ ಡೊನಾಲ್ಡ್ ಟ್ರಂಪ್ ಸುದ್ದಿಯಲ್ಲಿದ್ದಾರೆ. ಅರೆರೆ.. ಹಾಗಾದ್ರೆ ಇದು ಖುಷಿ ಸುದ್ದಿ, ಡೊನಾಲ್ಡ್ ಟ್ರಂಪ್ ಒಳ್ಳೆಯ ಯೋಚನೆ ಮಾಡಿದ್ದಾರೆ ಬಿಡಿ ಅಂತಾ ನೀವು ಅಂದುಕೊಳ್ಳಬೇಡಿ. ಯಾಕಂದ್ರೆ ಡೊನಾಲ್ಡ್ ಟ್ರಂಪ್ ಅಮೆರಿಕದಲ್ಲಿ ಈಗ ತಾವು ಅಧಿಕಾರಕ್ಕೆ ಬಂದರೆ ಉದ್ಯೋಗ ಸೃಷ್ಟಿ ಮಾಡುವ ಭರವಸೆ ನೀಡಿದ್ದಾರೆ ನಿಜ. ಆದ್ರೆ ಅದರಿಂದ ಭಾರತೀಯರ ಉದ್ಯೋಗಕ್ಕೆ ಕತ್ತರಿ ಬೀಳುವ ಆತಂಕ ಶುರುವಾಗಿದೆ!
ಹೌದು, ಡೊನಾಲ್ಡ್ ಟ್ರಂಪ್ ಸದಾ ಒಂದಿಲ್ಲೊಂದು ವಿವಾದದಲ್ಲಿ ಮುಳುಗಿ ಹೋಗುತ್ತಾರೆ. ಇದೇ ಡೊನಾಲ್ಡ್ ಟ್ರಂಪ್ ಹಿಂದೆ ಅಧ್ಯಕ್ಷರಾಗಿದ್ದ ಸಮಯದಲ್ಲಿ ಕೂಡ ಭಾರತ ಸೇರಿದಂತೆ ಹಲವು ದೇಶಗಳ ವಿರುದ್ಧ ಕೆಂಡ ಕಾರಿದ್ದರು. ತೆರಿಗೆ ವಿಚಾರ ಇರಬಹುದು, ಉದ್ಯೋಗದಲ್ಲಿ ವಿನಾಯಿತಿ ಇರಬಹುದು, ವೀಸಾ ವಿಚಾರವೇ ಇರಬಹುದು ಡೊನಾಲ್ಡ್ ಟ್ರಂಪ್ ಮಾಡಿದ್ದ ಕಿರಿಕ್ ಒಂದೆರಡಲ್ಲ. ಹೀಗಿದ್ದ ಡೊನಾಲ್ಡ್ ಟ್ರಂಪ್ ಅವರಿಗೆ ಅಮೆರಿಕದ ಮತದಾರ ಪ್ರಭು 2020 ರಲ್ಲಿ ಮನೆ ದಾರಿ ತೋರಿಸಿದ್ದ. ಆದರೆ ಇದೀಗ ಮತ್ತೊಮ್ಮೆ ಅಂದ್ರೆ 2024ರ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಕೂಡ ಡೊನಾಲ್ಡ್ ಟ್ರಂಪ್ ಸ್ಪರ್ಧೆ ಮಾಡಿದ್ದಾರೆ. ಹೀಗಿದ್ದಾಗ ಅಮೆರಿಕದ ಮತದಾರರಿಗೆ ಭಯಾನಕವಾದ ಆಶ್ವಾಸನೆ ಒಂದನ್ನ ಕೂಡ ನೀಡಿದ್ದಾರೆ ಟ್ರಂಪ್.

ಭಾರತೀಯರ ಉದ್ಯೋಗಕ್ಕೆ ಕಂಟಕ?
ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ಸುಮಾರು 1 ತಿಂಗಳ ಮೇಲೆ 10 ದಿನ ಬಾಕಿ ಉಳಿದಿದೆ. ಇಂತಹ ಸಮಯದಲ್ಲಿ ವೆರೈಟಿ ವೆರೈಟಿ ಆಶ್ವಾಸನೆ ನೀಡುತ್ತಿದ್ದಾರೆ ಡೊನಾಲ್ಡ್ ಟ್ರಂಪ್ ಅವರು ಎಂಬ ಮಾತು ಕೇಳಿಬಂದಿದೆ. ಆಶ್ವಾಸನೆಗಳು ಆ ಕಡೆ ಇರಲಿ, ಈಗಿನ ಸ್ಥಿತಿಯಲ್ಲಿ ಟ್ರಂಪ್ ಹೊಸ ಐಡಿಯಾ ಒಂದನ್ನ ಮಾಡಿದ್ದು, ಡೊನಾಲ್ಡ್ ಟ್ರಂಪ್ ಅವರಿಗೆ ಅಮೆರಿಕದ ಮತದಾರರು ವೋಟ್ ಹಾಕಿ 2024ರ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಗೆಲ್ಲಿಸಿದರೆ ಹೊಸ ಕ್ರಾಂತಿ ತರಲಿದ್ದಾರಂತೆ. ಆ ಪ್ರಕಾರ ಬೇರೆ ದೇಶಗಳ ಉದ್ಯೋಗವನ್ನು ಕಸಿದುಕೊಂಡು, ಬೇರೆ ಬೇರೆ ದೇಶದಲ್ಲಿ ಇರುವ ಕಂಪನಿಗಳನ್ನ ಕೂಡ ಅಮೆರಿಕಗೆ ತರುತ್ತೇನೆ ಎಂದಿದ್ದಾರೆ ಟ್ರಂಪ್!
ಟ್ರಂಪ್ ಮಾತಿನಿಂದ ಹೊಸ ಸಂಚಲನ!
ಡೊನಾಲ್ಡ್ ಟ್ರಂಪ್ ಅವರ ಮಾತು ಅಸಾಧ್ಯ ಅಂತಾ ಅಂದುಕೊಂಡರು ಕೂಡ, ಮುಂದಿನ ದಿನಗಳಲ್ಲಿ ಡೊನಾಲ್ಡ್ ಟ್ರಂಪ್ ಅವರ ಸರ್ಕಾರ ಭಾರತ ಮೂಲದವರು ಸೇರಿದಂತೆ ಯಾರೇ ಹೊರ ದೇಶದವರು ಬಂದರೂ ಉದ್ಯೋಗ ನೀಡದೆ ಸತಾಯಿಸುವ ಸಾಧ್ಯತೆ ಇದೆ. ಜೊತೆಗೆ, ಇದರಿಂದ ಇನ್ನೂ ಹಲವಾರು ಸಮಸ್ಯೆಗಳು ಉದ್ಭವಿಸುವ ಭಯ ಕೂಡ ಈಗ ಆವರಿಸುತ್ತಿದೆ. ಇದು ಒಂದು ಕಡೆಯಾದರೆ, ಮತ್ತೊಂದು ಕಡೆ ಡೊನಾಲ್ಡ್ ಟ್ರಂಪ್ ಕಳೆದ ಅವಧಿಯಲ್ಲಿ ತೆರಿಗೆ ವಿಚಾರದಲ್ಲಿ ಹಲವು ಕಠಿಣ ನಿಯಮ ಕೈಗೊಂಡಿದ್ದರು. ಈಗಲೂ ಅದೇ ರೀತಿ ಆಗುತ್ತದಾ? ಎಂಬ ಆತಂಕ ಕೂಡ ಮೂಡಿದೆ.












Click it and Unblock the Notifications