Donald Trump: ದೊಡ್ಡಣ್ಣ ಅಮೆರಿಕ ಆರ್ಥಿಕತೆಗೆ ಕಾದಿದೆಯಾ ಮಹಾನ್ ಆಪತ್ತು?
ಜಗತ್ತಿನಲ್ಲಿ ವ್ಯಾಪಾರ & ವಹಿವಾಟು ನಡೆಸಲು ಅಂದ್ರೆ ಸಾಮಾನ್ಯ ಭಾಷೆಯಲ್ಲಿ ಬ್ಯುಸಿನೆಸ್ ಮಾಡಲು ಒಂದು ನಿಯಮ ಇದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ದೇಶ & ದೇಶಗಳ ಮಧ್ಯೆ ಇದೇ ನಿಯಮದ ಆಧಾರದಲ್ಲಿ ವ್ಯಾಪಾರ & ವಹಿವಾಟು ನಡೆಯುತ್ತಾ ಬಂದಿದೆ. ಹೀಗಿದ್ದರೂ ಡೊನಾಲ್ಡ್ ಟ್ರಂಪ್ ಅದೆಲ್ಲವನ್ನೂ ಗಾಳಿಗೆ ತೂರಿ ಇದೀಗ ಮಾಡಬಾರದ ಕೆಲಸ ಮಾಡ್ತಿದ್ದು, ಅಲ್ಲೋಲ ಕಲ್ಲೋಲ ಸೃಷ್ಟಿಯಾಗಿದೆ. ವ್ಯಾಪಾರದ ನಿಯಮವನ್ನೇ ನೆಲಸಮ ಮಾಡುತ್ತಿದ್ದಾರೆ ಎಂಬ ಆರೋಪ ಇದೀಗ ತಲ್ಲಣ ಎಬ್ಬಿಸಿದೆ.
ಅಮೆರಿಕ ಶ್ರೀಮಂತ ದೇಶವಾಗಿದ್ದರೂ ಬಹುತೇಕ ವಸ್ತುಗಳು ಅವರಿಗೆ ಬೇರೆ ಬೇರೆ ದೇಶಗಳ ಮೂಲಕವೇ ಬರಬೇಕು. ಮುಖ್ಯವಾಗಿ ಔಷಧ, ಕೃಷಿ ಉತ್ಪನ್ನ ಸೇರಿದಂತೆ ಹಲವು ವಿಚಾರ ಅಮೆರಿಕಗೆ ದೊಡ್ಡ ಹಿನ್ನಡೆ ತಂದಿದೆ. ಹೀಗಾಗಿ ಅಮೆರಿಕ ಕೂಡ ಬೇರೆ ಬೇರೆ ದೇಶಗಳ ಮೇಲೆ ಈ ವಿಚಾರದಲ್ಲಿ ಅವಲಂಬಿತವಾಗಿ ಬದುಕುತ್ತಿದೆ. ಹೀಗಿದ್ದರೂ ತನ್ನ ಅಹಂಕಾರದ ನಡೆಯನ್ನ ಮುಂದುವರಿಸಿರುವ ಅಮೆರಿಕ, ಜಾಗತಿಕ ಆರ್ಥಿಕ ವ್ಯವಸ್ಥೆಯಲ್ಲಿ ಹೊಸ ಕಿಚ್ಚು ಹೊತ್ತಿಸಲು ಮುಂದಾಗಿರುವ ಆರೋಪ ಕೇಳಿ ಬಂದಿದೆ. ಹಾಗಾದರೆ ಟ್ರಂಪ್ ನಡೆ ಬಗ್ಗೆ ತಜ್ಞರು ಹೇಳುವ ಮಾತು ಏನು?

ಜಾಗತಿಕ ಮಟ್ಟದಲ್ಲಿ ಅಮೆರಿಕಗೆ ಅಪಾಯ?
ಅಂದಹಾಗೆ ಅಮೆರಿಕ ತಮ್ಮ ವಿರುದ್ಧ ತೆರಿಗೆ ಹೇರಿಕೆ ಮಾಡಲು ಮುಂದಾಗಿರುವ ಹಿನ್ನೆಲೆ ಹಲವು ದೇಶಗಳು ರೊಚ್ಚಿಗೆದ್ದು ಮಹತ್ವದ ನಿರ್ಧಾರವನ್ನ ಕೈಗೊಳ್ಳುತ್ತಿವೆ. ಅದರಂತೆ ವಿವಿಧ ದೇಶದ ಸರ್ಕಾರಗಳು ಅಮೆರಿಕಗೆ ಇದೀಗ ಮತ್ತಷ್ಟು ಹೆಚ್ಚಿನ ತೆರಿಗೆ ವಿಧಿಸಲು ಮುಂದಾಗಿವೆ. ಹೀಗಾಗಿ ಜಾಗತಿಕ ಮಟ್ಟದಲ್ಲಿ ತೆರಿಗೆ ವಿಚಾರದಲ್ಲಿ ದೊಡ್ಡ ಮಹಾಯುದ್ಧವೇ ಆರಂಭವಾಗಿ, ಸಾಕಷ್ಟು ಚರ್ಚೆ ಕೂಡ ನಡೆಯುತ್ತಿದೆ. ಈ ಮೂಲಕ ಅಮೆರಿಕಗೂ ನಮ್ಮ ನೋವು ಗೊತ್ತಾಗಲಿ ಎಂದು ಜಗತ್ತಿನ ಹಲವು ದೇಶಗಳು ಗುಡುಗಿವೆ. ಪರಿಸ್ಥಿತಿ ಹೀಗೆ ಮುಂದುವರಿದರೆ ಇನ್ನಷ್ಟು ಅಪಾಯ ಎದುರಾಗುವ ಆತಂಕ ಕೂಡ ಕಾಡುತ್ತಿದೆ.
ಒಂದಾದ ನಂತರ ಒಂದು ಸಮಸ್ಯೆ...
ಜಗತ್ತಿನ ಬೇರೆ ಬೇರೆ ಆರ್ಥಿಕತೆಗಳಿಗೆ ಹೋಲಿಕೆ ಮಾಡಿದರೆ ಅಮೆರಿಕದ ಆರ್ಥಿಕ ಪರಿಸ್ಥಿತಿಯು ಅತ್ಯಂತ ಸೂಕ್ಷ್ಮವಾಗಿದೆ. ಹೀಗಾಗಿ ಡೊನಾಲ್ಡ್ ಟ್ರಂಪ್ ನಿರ್ಧಾರ ಸ್ವತಃ ಅಮೆರಿಕದ ಬುಡಕ್ಕೆ ಬಿಸಿನೀರು ಕಾಯಿಸಿದ ಪರಿಸ್ಥಿತಿ ತರಲಿದೆ ಎಂಬ ಅಭಿಪ್ರಾಯವೂ ಕೇಳಿಬಂದಿದೆ. ಅಮೆರಿಕದ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ ಅಧಿಕಾರ ವಹಿಸಿಕೊಂಡ ನಂತರ ಒಂದಲ್ಲ ಒಂದು ರೀತಿಯ ಸಮಸ್ಯೆ ಎದುರಾಗುತ್ತಲೇ ಇದೆ. ಡೊನಾಲ್ಡ್ ಟ್ರಂಪ್ ಅವರು ಒಂದಾದ ನಂತರ ಒಂದು ಸಮಸ್ಯೆ ಮಾಡಿಕೊಂಡು ಅಮೆರಿಕದ ಆರ್ಥಿಕತೆಯನ್ನು ಸಂಕಷ್ಟಕ್ಕೆ ಸಿಲುಕಿಸುತ್ತಿದ್ದಾರೆ ಎಂಬ ಭಾರಿ ಗಂಭೀರ ಆರೋಪ ಕೇಳಿ ಬರುತ್ತಿದೆ.
ಇದು ಸಾಲದು ಎಂಬಂತೆ, ಇದೀಗ ಹಲವು ದೇಶಗಳ ವಿರೋಧ ಕಟ್ಟಿಕೊಂಡು ಬದುಕುವುದೇ ಅಮೆರಿಕಗೆ ಕಷ್ಟವಾಗುತ್ತಿದೆ. ಪರಿಸ್ಥಿತಿ ಸೂಕ್ಷ್ಮವಾಗಿರುವ ಸಮಯದಲ್ಲೇ, ಮತ್ತೆ ಬಹುದೊಡ್ಡ ಎಡವಟ್ಟು ಮಾಡಿಕೊಂಡಿದ್ದಾರೆ ಡೊನಾಲ್ಡ್ ಟ್ರಂಪ್. ಹೀಗಾಗಿ ಜಾಗತಿಕ ಮಟ್ಟದಲ್ಲಿ ಇದರ ಬಗ್ಗೆ ಬಹುದೊಡ್ಡ ಚರ್ಚೆ ನಡೆಯುತ್ತಿದೆ. ಮುಂದೆ ಏನಾಗುತ್ತೋ? ಅನ್ನೋದನ್ನ ಪ್ರಪಂಚ ಕಾದು ನೋಡಬೇಕಿದೆ. ಆದರೆ ಟ್ರಂಪ್ ಕೈಗೊಂಡಿರುವ ನಿರ್ಧಾರ ಸ್ವತಃ ಅಮೆರಿಕಗೆ ದೊಡ್ಡ ಅಪಾಯ ತರುವುದ ಗ್ಯಾರಂಟಿ.












Click it and Unblock the Notifications