ಮಾಡೆಲ್‌ಗಳಿಂದ ಫಿಲ್ಮ್‌ಸ್ಟಾರ್‌ಗಳವರೆಗೆ.. ಡೊನಾಲ್ಡ್‌ ಟ್ರಂಪ್‌ರ ಮೂವರು ಪತ್ನಿಯರು, ಹಲವು ಪ್ರೇಯಸಿಯರ ಬಗ್ಗೆ ನಿಮಗೆಷ್ಟು ಗೊತ್ತು

Donald Trump:ಜಗತ್ತಿನಾದ್ಯಂತ ತೀವ್ರ ಕುತೂಹಲ ಕೆರಳಿಸಿರುವ ಅಮೆರಿಕ ಚುನಾವಣೆಯು ಭಾರತೀಯ ಕಾಲಮಾನದ ಪ್ರಕಾರ ಮಂಗಳವಾರ ಸಂಜೆ ಆರಂಭವಾಗಲಿದೆ. ರಿಪಬ್ಲಿಕನ್‌ ಪಕ್ಷದ ಪರವಾಗಿ ಮಾಜಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಕಣದಲ್ಲಿದ್ದಾರೆ. ಈಗಾಗಲೇ ಒಂದು ಬಾರಿ ಅಧ್ಯಕ್ಷರಾಗಿ ಅಧಿಕಾರ ಅನುಭವಿಸಿರುವ ಡೊನಾಲ್ಡ್‌ ಟ್ರಂಪ್‌ ಅವರದ್ದು ವಿವಾದಾತ್ಮಕ ಹಾಗೂ ವರ್ಣರಂಜಿತ ವ್ಯಕ್ತಿತ್ವವೆಂದೇ ಹೇಳಬಹುದು. ಲೈಂಗಿಕ ಹಗರಣ, ವಂಚನೆ, ಭ್ರಷ್ಟಾಚಾರ, ದಂಗೆಗೆ ಪ್ರಚೋದನೆ ಹಾಗೂ ಪಿತೂರಿಗಳಂತಹ ಗಂಭೀರ ಆರೋಪಗಳನ್ನು ಟ್ರಂಪ್‌ ಎದುರಿಸುತ್ತಿದ್ದಾರೆ.

ಡೊನಾಲ್ಡ್‌ ಟ್ರಂಪ್‌ ಅವರ ವೈಯುಕ್ತಿಕ ಬದುಕನ್ನು ನೋಡುವುದಾದರೆ, ಅವರದ್ದು ಅತಿರಂಜಿತ ಜೀವನವೆಂದೇ ಹೇಳಬಹುದು. ಅಧಿಕೃತವಾಗಿ ಮೂವರನ್ನು ಮದುವೆಯಾಗಿರುವ ಟ್ರಂಪ್‌, ಹಲವರೊಂದಿಗೆ ಸಂಬಂಧವನ್ನೂ ಹೊಂದಿದ್ದರು ಎಂಬ ಮಾತುಗಳು ಅಮೆರಿಕದ ರಾಜಕೀಯ ವಲಯದಲ್ಲಿ ಜಗಜ್ಜಾಹೀರಾಗಿದೆ. ನೀಲಿ ಚಿತ್ರ ತಾರೆಯರಿಂದ ಹಿಡಿದ, ಹೆಸರಾಂತ ಮಾಡಲ್‌ಗಳ ವರೆಗೆ ಟ್ರಂಪ್‌ ಸಲುಗೆ ಹೊಂದಿದ್ದರ ಬಗ್ಗೆ ಆರೋಪಗಳು ಕೇಳಿಬಂದಿವೆ. ಮೀಟೂ ಪ್ರಕರಣದಲ್ಲಿಯೂ ಟ್ರಂಪ್‌ ಹೆಸರು ಮುನ್ನೆಲೆಗೆ ಬಂದಿತ್ತು.

Donald Trump s Love life Know about his famous wives and girlfriends

ಡೊನಾಲ್ಡ್‌ ಟ್ರಂಪ್‌ ಅವರ ಮೊದಲ ಪ್ರೇಮಕತೆ

ಡೊನಾಲ್ಡ್ ಟ್ರಂಪ್ ಅವರ ಮೊದಲ ಪ್ರೇಮಕಥೆಯು ಇವಾನಾ ಎಂಬ ವಿವಾಹಿತ ಮಹಿಳೆಯೊಂದಿಗೆ ಆರಂಭವಾಯಿತು. 1976 ರಲ್ಲಿ ನ್ಯೂಯಾರ್ಕ್‌ನ ಹೋಟೆಲ್‌ನಲ್ಲಿ ಟ್ರಂಪ್‌ ಮತ್ತು ಇವಾನಾ ಭೇಟಿಯಾದರು. ಮೊದಲ ಭೇಟಿಯಲ್ಲಿಯೇ ಇವಾನಾರನ್ನು ಇಷ್ಟಪಟ್ಟಿದ್ದ ಟ್ರಂಪ್‌ ಮದುವೆಯ ಪ್ರಸ್ತಾಪವಿಟ್ಟರು. ಪ್ರಸ್ತಾವನೆಯ ಕೆಲ ತಿಂಗಳ ಬಳಿಕ ಇವರಿಬ್ಬರೂ ವಿವಾಹವಾದರು. ಇವಾನಾ ಮೂಲತಃ ಜೆಕೊಸ್ಲೊವಾಕಿಯಾದವರು. ಟ್ರಂಪ್‌ ಜೊತೆಗಿನ ವಿವಾಹದ ಬಳಿಕ ಶಾಶ್ವತವಾಗಿ ಅಮೆರಿಕಕ್ಕೆ ಬಂದು ನೆಲೆಸಿದರು. ಟ್ರಂಪ್‌ ಮತ್ತು ಇವಾನಾಗೆ ಮೂವರು ಮಕ್ಕಳಿದ್ದಾರೆ. ಡೊನಾಲ್ಡ್ ಟ್ರಂಪ್‌ ಜೂನಿಯರ್, ಇವಾಂಕಾ ಮತ್ತು ಎರಿಕ್ ಟ್ರಂಪ್‌ ಅವರ ಮೊದಲ ಪತ್ನಿಯ ಮಕ್ಕಳು.

ಫ್ಯಾಶನ್‌ ಲೋಕದ ಮರ್ಲಾ ಜೊತೆ ಸೆಕೆಂಡ್‌ ಲವ್‌

ನ್ಯೂಯಾರ್ಕ್ ಫ್ಯಾಶನ್ ವೀಕ್ ಪಾರ್ಟಿಯಲ್ಲಿ ಟ್ರಂಪ್ ಅವರು ಮರ್ಲಾರನ್ನು ಭೇಟಿಯಾದರು. ಅಮೆರಿಕದ ಫ್ಯಾಶನ್ ಇಂಡಸ್ಟ್ರಿಯಲ್ಲಿ ಖ್ಯಾತರಾಗಿದ್ದ ಮರ್ಲಾ 1993 ರಲ್ಲಿ ಟ್ರಂಪ್‌ ವಿವಾಹವಾದರು. ಆದರೆ, ಈ ಸಂಬಂಧವು ಕೇವಲ ನಾಲ್ಕು ವರ್ಷಗಳಲ್ಲಿ ಕೊನೆಗೊಂಡಿತು. ತಮ್ಮದೇ ಭದ್ರತಾ ಸಿಬ್ಬಂದಿಯೊಂದಿಗೆ ಮರ್ಲಾ ಪ್ರೇಮಸಂಬಂಧವನ್ನು ಹೊಂದಿದ್ದರು ಎಂಬ ಕಾರಣಕ್ಕಾಗಿ ಟ್ರಂಪ್‌ ವಿಚ್ಛೇದನ ಪಡೆದರು ಎಂಬ ಮಾತುಗಳಿವೆ. ಕಾನೂನುಬದ್ಧವಾಗಿ 1999ರಲ್ಲಿ ಟ್ರಂಪ್‌ ಹಾಗೂ ಮರ್ಲಾ ವಿಚ್ಛೇದನ ಪಡೆದರು.

ಮೆಲಾನಿಯಾ ಜೊತೆ 6 ವರ್ಷಗಳ ಕಾಲ ಡೇಟಿಂಗ್‌

1999ರಲ್ಲಿ ಮರ್ಲಾರೊಂದಿಗೆ ವಿಚ್ಛೇದನ ಪಡೆದ ನಂತರ ಮೆಲಾನಿಯಾರನ್ನು ಟ್ರಂಪ್‌ ಭೇಟಿಯಾದರು. ಆರು ವರ್ಷಗಳ ಕಾಲ ಟ್ರಂಪ್‌ ಹಾಗೂ ಮೆಲಾನಿಯಾ ಡೇಟಿಂಗ್‌ನಲ್ಲಿ ಇದ್ದರು ಎಂದು ಹೇಳಲಾಗುತ್ತಿದೆ. ಜನವರಿ 22, 2005 ರಂದು ಟ್ರಂಪ್‌ ಹಾಗೂ ಮೆಲಾನಿಯಾ ವಿವಾಹವಾದರು. ಈ ಇಬ್ಬರು ದಂಪತಿಗಳಿಗೆ ಒಬ್ಬ ಮಗನಿದ್ದಾನೆ. ಆತನ ಹೆಸರು ಬ್ಯಾರನ್ ಟ್ರಂಪ್. ಡೊನಾಲ್ಡ್ ಟ್ರಂಪ್ ಅವರು ಅಮೆರಿಕದ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಬಳಿಕ ಮೆಲಾನಿಯಾ ಟ್ರಂಪ್‌ ಅವರೊಂದಿಗೆ ವಾಸಿಂಗ್ಟನ್‌ನ ಶ್ವೇತಭವನದಲ್ಲಿ ವಾಸಿಸುತ್ತಿದ್ದರು.

Donald Trump s Love life Know about his famous wives and girlfriends

ಮದುವೆಯಾಚೆಗಿನ ರೋಮ್ಯಾಂಟಿಕ್‌ ಲೈಫ್‌

ಮೂರು ವಿವಾಹಗಳ ಹೊರತಾಗಿಯೂ ಡೊನಾಲ್ಡ್ ಟ್ರಂಪ್ ಅವರು ಹಲವು ಪ್ರೇಮಸಂಬಂಧಗಳನ್ನು ಹೊಂದಿರುವುದು ಕುರಿತು ವರದಿಗಳಾಗಿವೆ. 1995 ರಲ್ಲಿ ಫ್ಯಾಶನ್ ಮಾಡೆಲ್ ಕೈಲೀ ಬ್ಯಾಕ್ಸ್‌ರೊಂದಿಗೆ ಟ್ರಂಪ್‌ ಡೇಟಿಂಗ್ ಮಾಡಿದ್ದರು ಎಂಬುದು ಬಹಿರಂಗವಾಗಿದೆ. ಅವರ ನಡುವಿನ ಸಂಬಂಧವು ಕೆಲವು ವರ್ಷಗಳ ಕಾಲ ಮುಂದಿವರಿದಿತ್ತು ಎಂದು ಹೇಳಲಾಗುತ್ತದೆ.

ಮಾಡೆಲ್ ಆಲಿಸನ್ ಗಿಯಾನಿನಿ ಹಾಗೂ ಡೊನಾಲ್ಡ್ ಟ್ರಂಪ್‌ ಅವರ ನಡುವಿನ ಪ್ರೇಮಸಂಬಂಧವು 1997 ರಲ್ಲಿ ಆರಂಭವಾಯಿತು. ಆ ಸಮಯದಲ್ಲಿ ಟ್ರಂಪ್‌ ಅವರಿಗೆ ಐವತ್ತು ವರ್ಷ ವಯಸ್ಸಾಗಿತ್ತು. ಮಾಡೆಲ್‌ ಗಿಯಾನಿನಿಗೆ 27 ವರ್ಷಗಳಾಗಿತ್ತು. ಮಾಡೆಲ್‌ಗಳಾದ ಕಾರಾ ಯಂಗ್‌, ರೊವಾನ್ನೆ ಬ್ರೂವರ್ ಲೇನ್ ಅವರನ್ನು ಟ್ರಂಪ್ ಡೇಟಿಂಗ್ ಮಾಡಿದ್ದರು ಎಂದು ಹೇಳಲಾಗುತ್ತಿದೆ. ರೂಪದರ್ಶಿ ಹಾಗೂ ನಟಿ ಅನ್ನಾ ನಿಕೋಲ್ ಸ್ಮಿತ್ ಸಹ ಟ್ರಂಪ್‌ ಜೊತೆ ಸಂಬಂಧ ಹೊಂದಿದ್ದರು ಎಂಬ ವದಂತಿಗಳಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+