Trump's Economic War: ಭಾರತದ ವಿರುದ್ಧ ಆರ್ಥಿಕ ಯುದ್ಧ ಘೋಷಣೆ ಮಾಡಿದ ಡೊನಾಲ್ಡ್ ಟ್ರಂಪ್!
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಿಕ್ಕಲು ತಿಕ್ಕಲು ನಿರ್ಧಾರಗಳನ್ನು ಕೈಗೊಂಡು ಜಗತ್ತಿನ ಹಲವಾರು ದೇಶಗಳ ಜೊತೆಗೆ ಕಿರಿಕ್ ಮಾಡುತ್ತಿದ್ದಾರೆ. ಡೊನಾಲ್ಡ್ ಟ್ರಂಪ್ ಇವತ್ತು ಸರಿ ಹೋಗಬಹುದು, ನಾಳೆ ಸರಿ ಹೋಗಬಹುದು ಅಂತಾ ಕಾದಿದ್ದೇ ಬಂತು. ಹೀಗಿದ್ದರೂ ಡೊನಾಲ್ಡ್ ಟ್ರಂಪ್ ಮಾತ್ರ ಬದಲಾಗಿಲ್ಲ, ಅಲ್ಲದೆ ತಾನು ಬದಲಾಗುವುದಿಲ್ಲ ಅನ್ನೋದನ್ನ ಮತ್ತೆ ಮತ್ತೆ ತೋರಿಸುತ್ತಿದ್ದಾರೆ. ಅದರಲ್ಲೂ ಭಾರತದ ವಿರುದ್ಧ ಇದೀಗ ಶೇಕಡಾ 50 ಅಂದ್ರೆ, ಭಾರತದ ನೆಲದಿಂದ ಅಮೆರಿಕಗೆ ಯಾವುದೇ ಒಂದು ವಸ್ತು ರಫ್ತು ಮಾಡಿದರೆ ಬರೋಬ್ಬರಿ ಅರ್ಧ ಭಾಗದಷ್ಟು ತೆರಿಗೆ ಕಟ್ಟಬೇಕಾದ ಅನಿವಾರ್ಯತೆ ಸೃಷ್ಟಿಸಿದ್ದಾರೆ ಡೊನಾಲ್ಡ್ ಟ್ರಂಪ್.
ರಷ್ಯಾ ಜೊತೆಗೆ ಭಾರತ ಉತ್ತಮ ಸ್ನೇಹ ಇಟ್ಟುಕೊಂಡು, ತೈಲ ಖರೀದಿ ಮಾಡುತ್ತಿದ್ದ ಕಾರಣವನ್ನೇ ಟ್ರಂಪ್ ಮುಂದೆ ಇಟ್ಟುಕೊಂಡು ಭಾರತದ ವಿರುದ್ಧ ತೆರಿಗೆ ಯುದ್ಧ ಸಾರಿದ ಆರೋಪವೂ ಇದೀಗ ಕೇಳಿ ಬರುತ್ತಿದೆ. ಹೀಗೆ ಭಾರತದ ಮೂಲಕ ಅಮೆರಿಕಗೆ ರಫ್ತು ಆಗುವ ವಸ್ತುಗಳ ಮೇಲೆ ಮೊದಲಿಗೆ ಶೇ. 25 ರಷ್ಟು ಟ್ಯಾಕ್ಸ್ ಹಾಕಿದ್ದ ಡೊನಾಲ್ಡ್ ಟ್ರಂಪ್ ಈಗ ಮತ್ತೆ ಸುಂಕ ಏರಿಕೆ ಮಾಡಿದ್ದಾರೆ. ಈಗ ಮತ್ತೆ ಶೇಕಡಾ 25 ರಷ್ಟು ಟ್ಯಾಕ್ಸ್ ಹಾಕುವ ಮೂಲಕ ಒಟ್ಟು ಶೇ. 50 ತೆರಿಗೆ ಕಟ್ಟುವಂತೆ ಮಾಡಿದ್ದಾರೆ. ಹೀಗೆ ಅಧಿಕೃತವಾಗಿ ಡೊನಾಲ್ಡ್ ಟ್ರಂಪ್ ಭಾರತದ ವಿರುದ್ಧ ತೆರಿಗೆ ಯುದ್ಧ ಸಾರಿದ ನಂತರ ಅಲ್ಲೋಲ ಕಲ್ಲೋಲ ಸೃಷ್ಟಿಯಾಗಿದೆ.

ಡೊನಾಲ್ಡ್ ಟ್ರಂಪ್ ಸಹಿ ಬಿತ್ತು!
ಭಾರತದ ಜೊತೆಗೆ ಅಮೆರಿಕ ನೂರಾರು ರೀತಿಯ ಒಪ್ಪಂದ ಮಾಡಿಕೊಂಡಿದ್ದು, ಆರ್ಥಿಕವಾಗಿ ಎರಡೂ ಕಡೆ ಲಾಭ ಆಗುತ್ತಿದೆ. ಅದರಲ್ಲೂ ಭಾರತಕ್ಕಿಂತ ಹೆಚ್ಚಾಗಿ ಅಮೆರಿಕ ಲಾಭ ಪಡೆಯುತ್ತಿದೆ ಎಂಬ ಮಾತು ಕೂಡ ಇದೆ. ಇಷ್ಟೆಲ್ಲಾ ಇದ್ದಾಗಲೂ ಡೊನಾಲ್ಡ್ ಟ್ರಂಪ್ ಮಾತ್ರ ಭಾರತವನ್ನೇ ಟಾರ್ಗೆಟ್ ಮಾಡಿ ಆರ್ಥಿಕ ಯುದ್ಧ ಸಾರಿದ ಆರೋಪ ಕೇಳಿ ಬಂದಿದೆ. ಭಾರತದ ವಸ್ತುಗಳ ಮೇಲೆ ಹೆಚ್ಚುವರಿ ಶೇ. 25 ರಷ್ಟು ತೆರಿಗೆ ಹಾಕುವ ಆದೇಶಕ್ಕೆ ಡೊನಾಲ್ಡ್ ಟ್ರಂಪ್ ಸಹಿ ಹಾಕಿದ್ದಾರೆ ಎಂದು ಶ್ವೇತಭವನ ತಿಳಿಸಿದ ನಂತರ ತಲ್ಲಣ ಸೃಷ್ಟಿಯಾಗಿದೆ. ಅಲ್ಲದೆ ಜಾಗತಿಕ ಮಟ್ಟದಲ್ಲಿ ಕೂಡ ಈ ವಿಚಾರ ದೊಡ್ಡ ಚರ್ಚೆಗೆ ಗ್ರಾಸವಾಗಿದೆ.
ಭಾರತ & ಅಮೆರಿಕ ನಡುವೆ ಬಿರುಕು?
ಡೊನಾಲ್ಡ್ ಟ್ರಂಪ್ ಇದೀಗ ಭಾರತದ ವಿರುದ್ಧ ಶೇ. 50 ತೆರಿಗೆ ಹೇರಿಕೆ ಮಾಡಲು ನಿರ್ಧಾರ ಕೈಗೊಂಡಿರುವ ಕಾರಣಕ್ಕೆ ಭಾರತ & ಅಮೆರಿಕ ನಡುವೆ ಸ್ನೇಹ ಸಂಬಂಧ ಹಾಳಾಗಿ ಹೋಗುವ ಮುನ್ಸೂಚನೆ ಸಿಗುತ್ತಿದೆ. ಈ ಮೂಲಕ ಜಾಗತಿಕ ಮಟ್ಟದಲ್ಲಿ ಶಕ್ತಿಶಾಲಿ ದೇಶ ಒಂದರ ಬೆಂಬಲವನ್ನು ಇದೀಗ ಅಮೆರಿಕ ಕಳೆದುಕೊಂಡ ರೀತಿ ಆಗಿದೆ. ಹಾಗೇ ಅಮೆರಿಕ ನಂಬಿಕೆಗೆ ಅರ್ಹ ದೇಶವಲ್ಲ ಅನ್ನೋ ಆರೋಪವನ್ನು ಕೂಡ ಈ ಘಟನೆ ನಿಜ ಮಾಡಿದ್ದು, ಟ್ರಂಪ್ ಬಗ್ಗೆ ಭಾರತೀಯರು ಅಸಮಾಧಾನ ಹೊರ ಹಾಕುತ್ತಿದ್ದಾರೆ.












Click it and Unblock the Notifications