ಚೀನಾದಲ್ಲಿ ಸದ್ದು ಮಾಡುತ್ತಿದೆ ಟ್ರಂಪ್ ಬುದ್ಧ ಪ್ರತಿಮೆ, ಏನಿದರ ವಿಶೇಷತೆ?
ಡೊನಾಲ್ಡ್ ಟ್ರಂಪ್ ಅಮೆರಿಕ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದ ಮೇಲೆ ಅಷ್ಟೊಂದು ಸುದ್ದಿಯಲ್ಲಿರಲಿಲ್ಲ.
ಎಲ್ಲೋ ಒಂದು ಬಾರಿ ಸಾರ್ವಜನಿಕ ಭಾಷಣ ಮಾಡಿ, ನೂತನ ಅಧ್ಯಕ್ಷ ಜೋ ಬೈಡನ್ ವಿರುದ್ಧ ಹರಿಹಾಯ್ದಿದ್ದರು, ಜತೆಗೆ ಮುಂದಿನ ಚುನಾವಣೆಯಲ್ಲಿ ತಾನೇ ಅಧ್ಯಕ್ಷನಾಗುತ್ತೇನೆ ಎನ್ನುವ ಮಾತುಗಳನ್ನಾಡಿದ್ದರು.
ಅದೇನೆ ಇರಲಿ, ಇದೀಗ ಡೊನಾಲ್ಡ್ ಟ್ರಂಪ್ ಏಕಾಏಕಿ ಚೀನಾದಲ್ಲಿ ಫೇಮಸ್ ಆಗಿದ್ದಾರೆ ಅದ್ಹೇಗೆ ಎಂದು ತಿಳಿದುಕೊಳ್ಳಲು ಮುಂದೆ ಓದಿ..

ಡೊನಾಲ್ಡ್ ಟ್ರಂಪ್ ಪ್ರತಿಮೆ ಮಾರಾಟ
ಡೊನಾಲ್ಡ್ ಟ್ರಂಪ್‌ರ ಪ್ರತಿಮೆಗಳನ್ನು ಚೀನಾದ ಉದ್ಯಮಿಯೊಬ್ಬ ತನ್ನ ವ್ಯಾಪಾರದ ದೃಷ್ಟಿಯಿಂದ ತಯಾರಿಸಿದ್ದಾರೆ. ಈ ಪ್ರತಿಮೆ ದೂರದಿಂದ ನೋಡದರೆ ಥೇಟ್ ಡೊನಾಲ್ಡ್ ಟ್ರಂಪ್‌ರಂತೆಯೇ ಕಾಣುತ್ತದೆಯಾದರೂ ಕುಳಿತಿರುವ ಭಂಗಿಯೆಲ್ಲ ಬುದ್ಧನ ರೀತಿಯಲ್ಲಿದೆ.

ಬುದ್ಧ ಕುಳಿತಿರುವ ಭಂಗಿಯಲ್ಲಿ ಡೊನಾಲ್ಡ್ ಟ್ರಂಪ್
ಶ್ವೇತ ವರ್ಣದ ಟ್ರಂಪ್ , ಪ್ರತಿಮೆಯಲ್ಲಿ ಬುದ್ಧ ಕುಳಿತಿರುವ ಭಂಗಿಯಲ್ಲೇ ಟ್ರಂಪ್ ಆಸೀನರಾದಂತೆ ಭಾಸವಾಗುತ್ತದೆ. ಈ ಪ್ರತಿಮೆಯು ಚೀನಾದ ಇ ಕಾಮರ್ಸ್ ಸೈಟ್ Taobaoದಲ್ಲಿ ಪಟ್ಟಿ ಮಾಡಲಾಗಿದೆ.

ಡೊನಾಲ್ಡ್ ಟ್ರಂಪ್ ಪ್ರತಿಮೆಗೆ ಬೆಲೆ ಎಷ್ಟು?
4.6 ಮೀಟರ್‌ನಷ್ಟು ದೊಡ್ಡ ಪ್ರತಿಮೆ ಬೆಲೆ 44,707 ರೂಪಾಯಿ ಹಾಗೂ 1.6 ಮೀಟರ್ ಚಿಕ್ಕ ಪ್ರತಿಮೆಯ ಬೆಲೆ 11,168 ರೂಪಾಯಿಗಳಾಗಿವೆ.
ಶಿಯೋಮಿ ಮೂಲದ ಮಾರಾಟಗಾರ ಈ ಪರಿಕಲ್ಪನೆಯನ್ನು ಟ್ರಂಪ್‌ರ ಅಪ್ರತಿಮ ಮೇಕ್ ಅಮೆರಿಕ ಗ್ರೇಟ್ ಅಗೈನ್ ಎಂಬ ಘೋಷಣೆಯಿಂದ ಸ್ಫೂರ್ತಿ ಪಡೆದು ಮೇಕ್ ಯುವರ್ ಕಂಪನಿ ಗ್ರೇಟ್ ಅಗೈನ್ ಎಂಬ ಘೋಷಣೆಯೊಂದಿಗೆ ಮಾರಾಟ ಮಾಡುತ್ತಿದ್ದಾರೆ.

ಉದ್ಯಮಿಯ ವ್ಯಾಪಾರದ ಮೇಲೆ ಯಾವ ಪರಿಣಾಮವನ್ನೂ ಬೀರಿಲ್ಲ
ಟ್ರಂಪ್ ಕಳೆದ ವರ್ಷದವರೆಗೂ ವಿಶ್ವದ ಪ್ರತಿಷ್ಠಿತ ನಾಯಕರಲ್ಲಿ ಒಬ್ಬರಾಗಿದ್ದರು, ಆದರೆ ಈಗ ಟ್ರಂಪ್ ಜಾಗಕ್ಕೆ ಜೋ ಬೈಡನ್ ಆಗಮಿಸಿದ್ದು, ಟ್ರಂಪ್ ನಿಧಾನವಾಗಿ ಮರೆಯಾಗುತ್ತಿದ್ದಾರೆ.
ಡೊನಾಲ್ಡ್ ಟ್ರಂಪ್ ಈಗ ಅಧಿಕಾರದಲ್ಲಿ ಇಲ್ಲದಿರಬಹುದು ಆದರೆ ಚೀನಾದ ಈ ಉದ್ಯಮಿಯ ವ್ಯಾಪಾರದ ಮೇಲೆ ಯಾವ ರೀತಿಯ ಪರಿಣಾಮವನ್ನೂ ಬೀರಿಲ್ಲ.












Click it and Unblock the Notifications