ಕೆನಡಾ ಮತ್ತು ಅಮೆರಿಕ ನಡುವೆ ಮತ್ತಷ್ಟು ಬಿರುಕು, ಕೆನಡಾ ಪ್ರಧಾನಿಗೆ ನೀಡಿದ್ದ ಆಹ್ವಾನ ಹಿಂಪಡೆದ ಟ್ರಂಪ್!

ಅಮೆರಿಕ ಮತ್ತು ಕೆನಡಾ ನಡುವೆ ಎಲ್ಲಾ ಸರಿಯಾಗಿಲ್ಲ ಅನ್ನೋದು ಇನ್ನೊಮ್ಮೆ ಇಡೀ ಜಗತ್ತಿಗೆ ಈಗ ಗೊತ್ತಾಗಿದೆ. ಒಂದು ಕಡೆ ಕೆನಡಾ ಭೂಮಿಯನ್ನು ಅಮೆರಿಕದ ನಕ್ಷೆಗೆ ಸೇರಿಸಿ ಫೋಟೋ ಅಪ್ಲೋಡ್ ಮಾಡಿದ್ದ ಟ್ರಂಪ್ ಅವರ ವಿರುದ್ಧ ಕೆನಡಾ ಅಸಮಾಧಾನ ಹೊಂದಿದೆ. ಈಗಿನ ಪರಿಸ್ಥಿತಿಯಲ್ಲಿ ಭಾರಿ ದೊಡ್ಡ ತಿಕ್ಕಾಟಗಳು ನಡೆಯುತ್ತಿದ್ದು, ಜಾಗತಿಕವಾಗಿ ಟ್ರಂಪ್ ಅವರ ನಿರ್ಧಾರಗಳ ವಿರುದ್ಧ ಆಕ್ರೋಶ ಕೂಡ ಮೊಳಗಿದೆ. ಗ್ರೀನ್‌ಲ್ಯಾಂಡ್ ಮೇಲೆ ಸೇನಾ ಕಾರ್ಯಾಚರಣೆ ನಡೆಸಲು ಟ್ರಂಪ್ ಮುಂದಾಗಿದ್ದಾರೆ ಎಂಬ ಚರ್ಚೆಗಳ ನಡುವೆ, ನ್ಯಾಟೋ ಮಧ್ಯಪ್ರವೇಶ ಮಾಡಿ ಪರಿಸ್ಥಿತಿ ತಿಳಿಗೊಳಿಸಿದೆ. ಆದರೆ ಕೆನಡಾ ವಿಚಾರದಲ್ಲಿ ಪರಿಸ್ಥಿತಿ ಇನ್ನಷ್ಟು ಕೈಮೀರಿದೆ.

ಕೆನಡಾ ಪ್ರಧಾನಿ ಮಾರ್ಕ್ ಕಾರ್ನಿ ಅವರ ವಿರುದ್ಧ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗರಂ ಆದಂತೆ ಕಾಣುತ್ತಿದೆ. ಇದರ ಕುರುಹು ಎನ್ನುವಂತೆ, ಗಾಜಾ ಪಟ್ಟಿಯಲ್ಲಿ ಶಾಂತಿ ಸ್ಥಾಪನೆ ಮಾಡಲು ಡೊನಾಲ್ಡ್ ಟ್ರಂಪ್ ಅವರು ಹುಟ್ಟು ಹಾಕಿರುವ 'ಶಾಂತಿ ಮಂಡಳಿ' ವಿಚಾರದಲ್ಲಿ ಗೊಂದಲ ಎದ್ದಿದೆ. ಕೆನಡಾ ಈ ಗಾಜಾ ಶಾಂತಿ ಮಂಡಳಿಗೆ ಸೇರಲಿ ಎಂದು ಅಮೆರಿಕದ ಕಡೆಯಿಂದ ಆಹ್ವಾನ ನೀಡಲಾಗಿತ್ತು. ಆದರೆ ದಿಢೀರ್ ಆ ಆಹ್ವಾನವನ್ನೇ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇದೀಗ ವಾಪಸ್ ಪಡೆದಿದ್ದಾರೆ. ಇದು ಭಾರಿ ದೊಡ್ಡ ಗೊಂದಲಕ್ಕೆ ಕಾರಣವಾಗುವ ಜೊತೆಗೆ, ಕೆನಡಾ & ಅಮೆರಿಕ ನಡುವೆ ಬಿರುಕು ಮೂಡಿದೆ ಎಂಬುದಕ್ಕೆ ಹೊಸ ಪುರಾವೆ ನೀಡಿದಂತೆ ಆಗಿದೆ.

Donald Trump withdraws invitation to Canadian PM Carney to join the Board of Peace

ಶಾಂತಿ ಮಂಡಳಿ ಸ್ಥಾಪನೆ ಉದ್ದೇಶ ಇಲ್ಲಿದೆ

ಯುದ್ಧ.. ಯುದ್ಧ.. ಯುದ್ಧ... ಹೀಗೆ ಮಧ್ಯಪ್ರಾಚ್ಯ ಭಾಗದಲ್ಲಿ ಬರೀ ಯುದ್ಧಗಳೇ ನಡೆಯುತ್ತಿವೆ. ಮಧ್ಯಪ್ರಾಚ್ಯ ಭಾಗದಲ್ಲಿ ಮೊದಲು ಕಿಚ್ಚು ಹೊತ್ತಿಸಿದ್ದೇ ಇಸ್ರೇಲ್ ಹಾಗೂ ಹಮಾಸ್ ಯುದ್ಧ. 2023ರ ಅಕ್ಟೋಬರ್ ತಿಂಗಳಲ್ಲಿ ಶುರುವಾಗಿದ್ದ ಈ ಇಬ್ಬರ ಬಡಿದಾಟ ಮುಂದೆ ದೊಡ್ಡ ಹಂತಕ್ಕೆ ಹೋಗಿತ್ತು, ಅಲ್ಲದೆ ಅಕ್ಕಪಕ್ಕದ ದೇಶಗಳು ಕೂಡ ಬಡಿದಾಡುವ ಸ್ಥಿತಿ ನಿರ್ಮಾಣ ಆಗಿತ್ತು.

ಹೀಗಾಗಿ ಇಸ್ರೇಲ್ ಹಾಗೂ ಹಮಾಸ್ ಯುದ್ಧಕ್ಕೆ ಬ್ರೇಕ್ ಹಾಕಲು, ಆ ಮೂಲಕ ಗಾಜಾ ಪಟ್ಟಿಯನ್ನು ಶಾಂತಗೊಳಿಸಲು ಟ್ರಂಪ್ ಪ್ಲಾನ್ ಮಾಡಿದ್ದಾರೆ. ಇದಕ್ಕೆ 20 ಅಂಶಗಳ ಯೋಜನೆ ರೂಪಿಸಿದ್ದು, ಇದರ ಭಾಗವಾಗಿ ಗಾಜಾ ಶಾಂತಿ ಮಂಡಳಿ ರಚನೆ ಮಾಡಿದ್ದಾರೆ. ಇನ್ನು ಮಂಡಳಿಗೆ ಸೇರಲು ಹಲವು ದೇಶಗಳಿಗೆ ಆಹ್ವಾನ ನೀಡಲಾಗಿತ್ತು. ಇದೇ ರೀತಿಯಾಗಿ ಕೆನಡಾ ಕೂಡ ಆಹ್ವಾನ ಪಡೆದಿತ್ತು, ಆದರೆ ಈಗ ಅದನ್ನು ಖುದ್ದು ಅಮೆರಿಕ ವಾಪಸ್ ಪಡೆದಿದೆ.

ಆಹ್ವಾನ ವಾಪಸ್ ಪಡೆಯಲು ಕಾರಣ?

ಗಾಜಾ ಪಟ್ಟಿಯಲ್ಲಿ 20 ಅಂಶಗಳ ಯೋಜನೆ ಮೂಲಕ ಶಾಂತಿ ನೆಲೆಸುವಂತೆ ಮಾಡಲು ಟ್ರಂಪ್ ಅವರು ರೂಪಿಸಿರುವ ಯೋಜನೆಗೆ, ಕೆನಡಾ ಹಣ ನೀಡುವುದಿಲ್ಲ ಎಂದು ಕಾರ್ನಿ ನೇತೃತ್ವದ ಕೆನಡಾ ಸರ್ಕಾರ ತಿಳಿಸಿದ ನಂತರ ಈ ರೀತಿಯಾಗಿ ಆಹ್ವಾನ ವಾಪಸ್ ಪಡೆಯಲಾಗಿದೆ ಎಂಬ ಮಾತು ಕೇಳಿ ಬರುತ್ತಿದೆ. ಕೆನಡಾ ವಿಚಾರವಾಗಿ ಪದೇ ಪದೇ ಟ್ರಂಪ್ ಅವರು ವಿವಾದ ಸೃಷ್ಟಿಸುವ ಹೇಳಿಕೆ ನೀಡುತ್ತಾ ಬಂದಿದ್ದರು. ಅಲ್ಲದೆ ಕೆನಡಾ ನೆಲವನ್ನು ಅಮೆರಿಕದ ಜೊತೆಗೆ ವಿಲೀನ ಮಾಡಿ ಎಂದೆಲ್ಲಾ ಆಗ್ರಹ ಮಾಡಿದ್ದರು.

ಅಲ್ಲದೆ ದಾವೋಸ್ ಆರ್ಥಿಕ ಸಮ್ಮೇಳನದ ವೇಳೆ ಕೂಡ ಟ್ರಂಪ್ ಹಾಗೂ ಕೆನಡಾ ಪ್ರಧಾನಿ ನಡುವೆ, ಭಾರಿ ದೊಡ್ಡ ತಿಕ್ಕಾಟವೇ ನಡೆದಿತ್ತು. ಹೀಗಿದ್ದಾಗ ದಿಢೀರ್ ಅಮೆರಿಕ ಕೈಗೊಂಡಿರುವ ಕ್ರಮದ ಕುರಿತು ದೊಡ್ಡ ಚರ್ಚೆ ಶುರುವಾಗಿದೆ. ಹಾಗೇ ಎರಡೂ ದೇಶಗಳ ನಡುವೆ ಸೇನಾ ಸಮರ ನಡೆಯುತ್ತಾ? ಎಂಬ ಆತಂಕಕ್ಕೂ ವೇದಿಕೆ ಒದಗಿಸಿದೆ. ಅಮೆರಿಕದ ನೆರೆಯ ದೇಶದಲ್ಲೇ ಈಗ ಅಮೆರಿಕ ವಿರುದ್ಧ ಆಕ್ರೋಶ ಮತ್ತು ಬೇಸರ ಮೂಡಿದ್ದು, ಭವಿಷ್ಯದಲ್ಲಿ ಎರಡೂ ದೇಶಗಳ ಸಂಬಂಧ ಉಳಿಯುವುದೇ ಸವಾಲಾಗಿದೆ ಈಗ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+