ಟೆಹರಾನ್‌ ತೊರೆಯುವಂತೆ ಇರಾನಿಗಳಿಗೆ ಎಚ್ಚರಿಸಿದ ಡೊನಾಲ್ಡ್‌ ಟ್ರಂಪ್‌: ಹೆಚ್ಚಿದ ಅಣುಬಾಂಬ್‌ ಆತಂಕ

ಇಸ್ರೇಲ್-ಇರಾನ್ ಸಂಘರ್ಷವು ತೀವ್ರ ಸ್ವರೂಪ ಪಡೆದುಕೊಂಡಿದೆ. ಎರಡೂ ದೇಶಗಳು ಪರಸ್ಪರ ಕ್ಷಿಪಣಿ ದಾಳಿಗಳಲ್ಲಿ ತೊಡಗಿವೆ. ಇರಾನ್‌ ಮೇಲೆ ಇಸ್ರೇಲ್‌ ನಡೆಸಿರುವ ದಾಳಿಯಲ್ಲಿ 200 ಕ್ಕೂ ಅಧಿಕ ನಾಗರಿಕರು ಸಾವನ್ನಪ್ಪಿದ್ದಾರೆ. ಇದಕ್ಕೆ ಪ್ರತಿಕಾರವಾಗಿ ಇರಾನ್‌ ದೇಶವು ಇಸ್ರೇಲ್‌ ರಾಜಧಾನಿ ಟೆಲ್‌ ಅವಿವ್‌ ಮೇಲೆ ಕ್ಷಿಪಣಿ ದಾಳಿ ನಡೆಸಿದೆ. ಪರಿಣಾಮವಾಗಿ 20 ಕ್ಕೂ ಹೆಚ್ಚು ಯೂಹೂದಿಗಳು ಮೃತಪಟ್ಟಿದ್ದು, ನೂರಾರು ಜನರು ಗಾಯಗೊಂಡಿದ್ದಾರೆ ಎಂದು ಅಂತರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.

ಈ ಬೆಳವಣಿಗೆಗಳ ನಡುವೆಯೇ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇರಾನ್‌ಗೆ ಎಚ್ಚರಿಕೆ ಸಂದೇಶವನ್ನು ರವಾನಿಸಿದ್ದಾರೆ. ಎಲ್ಲಾ ಇರಾನಿಯನ್ನರು ಟೆಹರಾನ್ ( ಇರಾನ್‌ ರಾಜಧಾನಿ ) ನಗರವನ್ನು ತಕ್ಷಣ ಖಾಲಿ ಮಾಡಬೇಕೆಂದು ಎಚ್ಚರಿಕೆ ನೀಡಿದ್ದಾರೆ.

Donald Trump warns everyone should evacuate Tehran as tensions between Iran and Israel rise

ಟ್ರುಥ್‌ ಸೋಶಿಯಲ್‌ ಮಿಡಿಯಾದಲ್ಲಿ ( https://truthsocial.com/ ) ಪೋಸ್ಟ್‌ ಹಂಚಿಕೊಂಡಿರುವ ಡೊನಾಲ್ಡ್‌ ಟ್ರಂಪ್, 'ನಾನು ಮೊದಲೇ ಹೇಳಿದಂತೆ ಇರಾನ್ ದೇಶವು ಪರಮಾಣು ಒಪ್ಪಂದಕ್ಕೆ ಸಹಿ ಹಾಕಬೇಕಿತ್ತು. ಈಗಿನ ಪರಿಸ್ಥಿತಿ ದುಸ್ತರವಾಗಿದೆ. ಇರಾನ್‌ ದೇಶವು ಪರಮಾಣು ಯೋಜನೆಯನ್ನು ಹೊಂದಲು ಸಾಧ್ಯವಿಲ್ಲ. ನಾನು ಇದನ್ನು ಹಲವು ಬಾರಿ ಹೇಳಿದ್ದೇನೆ. ಎಲ್ಲ ಇರಾನಿಯನ್ನರು ತಕ್ಷಣ ಟೆಹರಾನ್ ಅನ್ನು ಖಾಲಿ ಮಾಡಬೇಕು' ಎಂದು ಎಚ್ಚರಿಕೆ ನೀಡಿದ್ದಾರೆ.

ಇರಾನ್‌-ಇಸ್ರೇಲ್‌ ನಡುವಿನ ಬಿಕ್ಕಟ್ಟು ತೀವ್ರಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಕೆನಡಾದಲ್ಲಿ ನಡೆಯುತ್ತಿರುವ ಜಿ7 ಶೃಂಗಸಭೆಯಿಂದ ಟ್ರಂಪ್‌ ಅವರು ಹೊರಹೋಗುತ್ತಿದ್ದಾರೆ ಎಂದು ವೈಟ್ ಹೌಸ್ ಮಾಹಿತಿ ಹಂಚಿಕೊಂಡಿದೆ. ಈ ನಿರ್ಧಾರವನ್ನು ಸ್ವಾಗತಿಸಿರುವ ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರಾನ್‌, ಇಸ್ರೇಲ್ ಹಾಗೂ ಇರಾನ್ ನಡುವಿನ ಯುದ್ಧವನ್ನು ತಕ್ಷಣ ನಿಲ್ಲಿಸುವುದು ಅತ್ಯಂತ ಮುಖ್ಯ ಎಂದು ಹೇಳಿದ್ದಾರೆ.

Take a Poll

ಇಸ್ರೇಲ್ ದಾಳಿಗೂ ಮುನ್ನ ಮಾತನಾಡಿದ್ದ ಟ್ರಂಪ್ ಅವರು, ಪರಮಾಣು ಯೋಜನೆಯನ್ನು ನಿಲ್ಲಿಸಲು ಇರಾನ್‌ಗೆ 60 ದಿನಗಳ ಕಾಲಾವಕಾಶ ನೀಡಲಾಗಿತ್ತು. ಆದರೆ, ನೀಡಲಾಗಿದ್ದ ಅವಧಿ ಮುಗಿದರೂ ಒಪ್ಪಂದವಾಗಿಲ್ಲ ಎಂದು ತಿಳಿಸಿದ್ದರು. 'ಪರಮಾಣು ಅಸ್ತ್ರವನ್ನು ಹೊಂದಲು ಇರಾನ್‌ಗೆ ಬಿಡುವುದಿಲ್ಲ. ಮೇಕ್‌ ಅಮೆರಿಕ ಗ್ರೇಟ್‌ ಅಗೈನ್‌' ಎಂದು ಟ್ರಂಪ್‌ ಪೋಸ್ಟ್‌ ಮಾಡಿದ್ದಾರೆ.

ಟ್ರಂಪ್‌ ಹೇಳಿಕೆ ಕುರಿತು ಪ್ರತಿಕ್ರಿಯಿಸಿರುವ ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಗ್ಚಿ, 'ಅಮೆರಿಕ ಅಧ್ಯಕ್ಷರು ನಿಜವಾಗಿಯೂ ರಾಜತಾಂತ್ರಿಕ ನಡೆಗೆ ಬದ್ಧರಾಗಿದ್ದರೆ, ಮುಂದಿನ ಹೆಜ್ಜೆಗಳು ಬಹುಮುಖ್ಯವಾಗಿವೆ. ಇಸ್ರೇಲ್ ಈ ಕೂಡಲೇ ತನ್ನ ದಾಳಿಗಳನ್ನು ನಿಲ್ಲಿಸಬೇಕು. ಇಲ್ಲದಿದ್ದರೆ, ನಮ್ಮ ಪ್ರತಿಕಾರದ ದಾಳಿಯನ್ನು ಮುಂದುವರಿಸುತ್ತೇವೆ' ಎಂದು ಹೇಳಿದ್ದಾರೆ.

ಟ್ರಂಪ್‌ ಹೇಳಿಕೆ ಬೆನ್ನಲ್ಲೇ, ಮಂಗಳವಾರ ಬೆಳಗಿನ ಜಾವ ಇರಾನ್‌ನಲ್ಲಿ ಭಾರಿ ಸ್ಫೋಟಗಳ ಶಬ್ದ ಕೇಳಿಬಂದಿದ್ದು, ದೇಶದ ವಾಯುಭದ್ರತಾ ವ್ಯವಸ್ಥೆ ಚುರುಕುಗೊಂಡಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಇಸ್ರೇಲ್‌ನ ಟೆಲ್‌ ಅವಿವ್‌ನಲ್ಲಿಯೂ ಮಧ್ಯರಾತ್ರಿ ಸೈರನ್‌ಗಳ ಶಬ್ದ ಕೇಳಿಬಂದಿದೆ. ಐದು ದಿನಗಳ ಹಿಂದೆ ಶುರವಾದ ಈ ಸಂಘರ್ಷವಿಉ ಇರಾನಿನಲ್ಲಿ 224 ಮಂದಿಯನ್ನು ಬಲಿಪಡೆದಿದೆ. ಇಸ್ರೇಲ್‌ನಲ್ಲಿ 24 ನಾಗರಿಕರು ಮೃತಪಟ್ಟಿದ್ದು, ಸಾವಿರಾರು ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+