ವಿಶ್ವಸಂಸ್ಥೆಯಲ್ಲಿ ಡೊನಾಲ್ಡ್ ಟ್ರಂಪ್ ಭಾಷಣಕ್ಕೆ ಬಿದ್ದು ಬಿದ್ದು ನಕ್ಕರು

ನ್ಯೂಯಾರ್ಕ್, ಸೆಪ್ಟೆಂಬರ್ 26: ವಿಶ್ವಸಂಸ್ಥೆಯ ಸಾಮಾನ್ಯ ಸಭೆ ಯಾವಾಗಲೂ ಗಂಭೀರ ಮಾತು ಮತ್ತು ಪ್ರತಿಕ್ರಿಯೆಯ ಚರ್ಚೆಗಳಿಗೆ ವೇದಿಕೆಯಾಗುತ್ತದೆ. ಆದರೆ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅದನ್ನು ಹಾಸ್ಯ ಕಾರ್ಯಕ್ರಮದ ವೇದಿಕೆಯನ್ನಾಗಿಸಿದರು.

ಸಭೆಗೆ ತಡವಾಗಿ ಬಂದ ಟ್ರಂಪ್, ತಮ್ಮ ಭಾಷಣದಲ್ಲಿ ಯದ್ವಾತದ್ವಾ ಮಾತನಾಡಿದರು. ಟ್ರಂಪ್‌ಗೆ ಮೆಲು ಚಪ್ಪಾಳೆಯ ಸ್ವಾಗತ ಕೋರಿದ್ದ ವಿವಿಧ ದೇಶಗಳ ಪ್ರತಿನಿಧಿಗಳು, ಅವರ ಭಾಷಣ ಕೇಳಿ ಮುಸಿ ಮುಸಿ ನಕ್ಕರೆ, ಇನ್ನು ಕೆಲವರು ನಗುವನ್ನು ತಡೆಹಿಡಿದುಕೊಳ್ಳುವ ಪ್ರಯತ್ನವನ್ನು ಮಾಡಲಿಲ್ಲ.

ಜಗತ್ತಿಗೆ ತಮ್ಮ ದೇಶದ ವಾರ್ಷಿಕ ಸಾಧನೆಯನ್ನು ಒಪ್ಪಿಸಿದ ಟ್ರಂಪ್, 'ಅಮೆರಿಕದ ಸೇನೆ ಹಿಂದೆಂದಿಗಿಂತಲೂ ಹೆಚ್ಚು ಶಕ್ತಿಶಾಲಿಯಾಗಿದೆ. ಎರಡು ವರ್ಷಗಳಿಗೂ ಕಡಿಮೆ ಅವಧಿಯಲ್ಲಿ ನನ್ನ ಆಡಳಿತ ನಮ್ಮ ದೇಶದ ಇತಿಹಾಸದಲ್ಲಿಯೇ ಹೆಚ್ಚೂ ಕಡಿಮೆ ಯಾವ ಆಡಳಿತವೂ ಮಾಡಿರದ ಸಾಧನೆಯನ್ನು ಮಾಡಿದೆ' ಎಂದು ಹೇಳಿಕೊಂಡರು.

Donald trump UNGA united nations america mocking laughter

ಇದನ್ನು ಕೇಳಿದ ಪ್ರೇಕ್ಷಕ ಸಮೂಹ ಗೊಳ್ಳನೆ ನಕ್ಕಿತು. ಅದನ್ನು ಕಂಡು ಅರೆಕ್ಷಣ ಪೆಚ್ಚಾದ ಟ್ರಂಪ್, 'ಈ ಪ್ರತಿಕ್ರಿಯೆಯನ್ನು ನಿರೀಕ್ಷಿಸಿರಲಿಲ್ಲ. ಆದರೂ ಪರ್ವಾಗಿಲ್ಲ' ಎಂದು ಮತ್ತೆ ಮಾತು ಮುಂದವರಿಸಿದರು.

'ಅಮೆರಿಕ ಮೊದಲು' ಎಂಬ ತಮ್ಮ ಕಾರ್ಯಸೂಚಿಯ ಬಗ್ಗೆ ಭಾವೋದ್ವೇಗದಿಂದ ಸುಮಾರು 34 ನಿಮಿಷ ಮಾತನಾಡಿದರು. ಮಾತುಮಾತಿನಲ್ಲಿಯೂ ಜಂಭ ಕೊಚ್ಚಿಕೊಂಡ ಟ್ರಂಪ್, ಕಾರ್ಯಸೂಚಿಯನ್ನು ಮಂಡಿಸುವ ಬದಲು ಅಪ್ರಬುದ್ಧನಂತೆ ಭಾಷಣ ಮಂಡಿಸಿದರು.

ಟ್ರಂಪ್ ಹೇಳಿಕೆಗಳಿಗೆ ಅಮೆರಿಕದ ಈ ಹಿಂದಿನ ಅಧ್ಯಕ್ಷರು, ಆಡಳಿತಗಾರರ ಅನುಯಾಯಿಗಳು ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿಯೂ ಟ್ರಂಪ್ ಅವರನ್ನು ಲೇವಡಿ ಮಾಡುವ ಪೋಸ್ಟ್‌ಗಳು ಹರಿದಾಡುತ್ತಿವೆ.

ತಮಾಷೆಯೆಂದರೆ ಅಧ್ಯಕ್ಷರಾಗುವ ಮೊದಲು 2014ರಲ್ಲಿ ಟ್ವೀಟ್ ಮಾಡಿದ್ದ ಟ್ರಂಪ್, 'ಇಡೀ ಜಗತ್ತಿಗೆ ನಗೆಪಾಟಲಿಗೆ ಒಳಗಾಗುವ ವಸ್ತುವಿನಂತೆ ಆಗದ ಅಧ್ಯಕ್ಷ ನಮಗೆ ಬೇಕು. ನಮಗೆ ನಿಜಕ್ಕೂ ಕಾರ್ಯತಂತ್ರ ಹಾಗೂ ಗೆಲುವಿನಲ್ಲಿ ಚಾಣಾಕ್ಷನಾದ ಅದ್ಭುತ ನಾಯಕ ಬೇಕು' ಎಂದು ಹೇಳಿದ್ದರು.

ಈ ಟ್ವೀಟ್ ಅನ್ನು ಹಂಚಿಕೊಂಡಿರುವ ಕೆಲವರು, ನಾಲ್ಕು ವರ್ಷದ ಬಳಿಕ ವಿಶ್ವಸಂಸ್ಥೆಯು ಅಮೆರಿಕದತ್ತ ನೋಡಿ ನಕ್ಕಿದೆ ಎಂದು ಲೇವಡಿ ಮಾಡಿದ್ದಾರೆ.

'ಅಮೆರಿಕದ ಅಧ್ಯಕ್ಷ ವಿಶ್ವ ವೇದಿಕೆಯಲ್ಲಿ ತನ್ನೆಡೆಗೆ ನೋಡಿ ನಗುವಂತೆ ಮಾಡುತ್ತಿರುವುದು ಎಷ್ಟು ಕೆಟ್ಟದಾಗಿ ಕಾಣಿಸುತ್ತದೆಯಲ್ಲವೇ?' ಎಂದು ಮಾಜಿ ಉಪಾಧ್ಯಕ್ಷ ಜೋಸೆಫ್ ಬಿಡೆನ್ ಅವರ ಉಪ ರಾಷ್ಟ್ರೀಯ ಭದ್ರತಾ ಸಲಹೆಗಾರ್ತಿಯಾಗಿದ್ದ ಜೂಲಿ ಸ್ಮಿತ್ ಹೇಳಿದ್ದಾರೆ.

'ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಅಮೆರಿಕದ ಅಧ್ಯಕ್ಷರು ಹಿಂದೆ ಜಾಗತಿಕ ಕಾರ್ಯಸೂಚಿಯನ್ನು ಸೃಷ್ಟಿಸುತ್ತಿದ್ದರು. ಈಗ ಅಲ್ಲಿ ಟ್ರಂಪ್ ನಗೆಪಾಟಲಿಗೆ ಈಡಾಗಿದ್ದಾರೆ' ಎಂದು ಮಾಜಿ ಅಧ್ಯಕ್ಷ ಬರಾಕ್ ಒಬಾಮ ಅವರ ಅವಧಿಯಲ್ಲಿ ರಾಷ್ಟ್ರೀಯ ಭದ್ರತಾ ಇಲಾಖೆಯಲ್ಲಿದ್ದ ಹಿರಿಯ ಅಧಿಕಾರಿ ಬೆನ ರೋಡ್ಸ್ ಟ್ವೀಟ್ ಮಾಡಿದ್ದಾರೆ.

ಒಂದು ಕಾಲದಲ್ಲಿ ಟೆಲಿವಿಷನ್ ಕಾರ್ಯಕ್ರಮಗಳ ಮೂಲಕ ಮನರಂಜನೆ ನೀಡುತ್ತಿದ್ದ ಟ್ರಂಪ್, ಅಧ್ಯಕ್ಷರಾದ ಬಳಿಕವೂ ಅದನ್ನು ಮುಂದುವರಿಸಿದ್ದಾರೆ ಎಂದು ಅವರನ್ನು ಅಣಕಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+