Get Updates
Get notified of breaking news, exclusive insights, and must-see stories!

Donald Trump: ಅಮೆರಿಕಾದ 47ನೇ ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸಲಿರುವ ಡೊನಾಲ್ಡ್ ಟ್ರಂಪ್: ಭಾರತದಿಂದ ಪ್ರತಿನಿಧಿ ಯಾರು?

Donald Trump: ಅಮೆರಿಕದ ನೂತನ ಅಧ್ಯಕ್ಷರಾಗಿ ಚುನಾಯಿತರಾಗಿರುವ ಡೊನಾಲ್ಡ್ ಟ್ರಂಪ್ ಅವರು ಇಂದು (ಜನವರಿ 20) ಅಮೆರಿಕದ 47ನೇ ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಹಾಗಾದರೆ ಪ್ರಮಾನವಚನ ಸ್ವೀಕಾರ ಕಾರ್ಯಕ್ರಮ ಆರಂಭ ಎಷ್ಟು ಗಂಟೆಗೆ ಹಾಗೂ ಭಾರತದಿಂದ ಪ್ರತಿನಿಧಿಯಾಗಿ ಯಾರು ಬರಲಿದ್ದಾರೆ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.

ಅಮೆರಿಕಾದ ಅಧಕ್ಷರ ಭವನವಾದ ಕ್ಯಾಪಿಟಲ್​​ ಹೌಸ್‌ನಲ್ಲಿ ನಡೆಯಲಿರುವ ಪ್ರಮಾಣ ವಚನ ಸಮಾರಂಭಕ್ಕೆ ಕ್ಷಣಗಣನೆ ಪ್ರಾರಂಭ ಆಗಿದೆ. ಈ ಕಾರ್ಯಕ್ರಮದಲ್ಲಿ ಅರ್ಜೆಂಟೈನಾ, ಇಟಲಿ, ಎಲ್ ಸಾಲ್ವಡಾರ್, ಹಂಗೇರಿ ಮತ್ತು ಚೀನಾ ಸೇರಿದಂತೆ ಹಲವು ರಾಷ್ಟ್ರಗಳ ಅಧ್ಯಕ್ಷರು ಮತ್ತು ಪ್ರಧಾನ ಮಂತ್ರಿಗಳು ಭಾಗವಹಿಸುವ ಸಾಧ್ಯತೆಯಿದೆ ಎನ್ನುವ ಮಾಹಿತಿ ಇದೆ.

Donald Trump to be Take Oath as 47th President of US Who is India s Representative

ಟ್ರಂಪ್​​ ಅವರ ಪ್ರಮಾಣವಚನ ಸಮಾರಂಭವು, 2020ರ ಅಧ್ಯಕ್ಷೀಯ ಚುನಾವಣೆಯಲ್ಲಿ ಸೋಲನುಭವಿದಾಗ ಬೆಂಬಲಿಗರು ದಾಳಿ ಮಾಡಿದ್ದ ಸ್ಥಳದಲ್ಲಿಯೇ ನಡೆಯುತ್ತಿರುವುದು ಗಮರ್ಹವಾಗಿದೆ. ಜೊತೆಗೆ ಅಮರಿಕ ಚುನಾವಣಾ ಇತಿಹಾಸದಲ್ಲಿ ಈಗಾಗಲೇ ಡೊನಾಲ್ಡ್ ಟ್ರಂಪ್‌ ಅಬರು ಒಂದು ಬಾರಿ ಗೆದ್ದು, ಬಳಿಕ ಸೋತು ಮತ್ತೆ ಪುನಃ ಗೆದ್ದ ಇತಿಹಾಸ ಸೃಷ್ಟಿಸಿದ್ದಾರೆ. ಪ್ರಮಾಣ ವಚನ ಕಾರ್ಯಕ್ರಮವು ಯಾವಾಗಲೂ ಅಧ್ಯಕ್ಷಿಯ ಭವನದ ಹೊರಗಡೆಯೇ ನಡೆಯುತ್ತಿತ್ತು. ಆದರೆ ಈ ಭಾರೀ ಭೀಕರ ಚಳಿ ಹಿನ್ನಲೆ ಅಧ್ಯಕ್ಷೀಯ ಭವನದ ಹೊಳಗಡೆ ನಡೆಯಲಿದೆ.

ಉಪಾಧ್ಯಕ್ಷರಾಗಿ ಚುನಾಯಿತರಾದ ಜೆಡಿ ವ್ಯಾನ್ಸ್ ಅವರು ಮೊದಲು ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ. ಬಳಿಕ ಡೊನಾಲ್ಡ್ ಟ್ರಂಪ್ ಅವರು ತಮ್ಮ ಉದ್ಘಾಟನಾ ಭಾಷಣವನ್ನು ಮಾಡುತ್ತಾರೆ, ಮುಂದಿನ 4 ವರ್ಷಗಳವರೆಗೆ ತಮ್ಮ ಯೋಜನೆಗಳನ್ನು ಹಾಕುತ್ತಾರೆ. ಜೆಡಿ ವ್ಯಾನ್ಸ್ ಅವರ ಪ್ರಮಾಣವಚನದ ನಂತರ, ಟ್ರಂಪ್ ಅವರು ನಾಮನಿರ್ದೇಶನಗಳಿಗೆ ಸಹಿ ಹಾಕಲು ಸಹಾಯಕರು ಮತ್ತು ಕಾಂಗ್ರೆಸ್ ಸದನದ ಸದಸ್ಯರನ್ನು ಭೇಟಿಯಾಗಿ, ಸಾಂದರ್ಭಿಕ ಮೆಮೊರಾಂಡಮ್‌ಗಳು, ಘೋಷಣೆಗಳು ಅಥವಾ ಕಾರ್ಯಕಾರಿ ಆದೇಶಗಳನ್ನು ನೀಡುತ್ತಾರೆ ಎಂದು ಹೇಳಲಾಗುತ್ತಿದೆ.

ಟ್ರಂಪ್‌ ಅವರು 2017ರಲ್ಲಿ ರಿಪಬ್ಲಿಕನ್ ತನ್ನ ಮೊದಲ ಅವಧಿಯಲ್ಲಿ ಅಮೇರಿಕನ್ ಕಾರ್ನೇಜ್ ಬಗ್ಗೆ ಗಾಢವಾದ ಭಾಷಣವನ್ನು ಮಾಡಿದರು. ಇನ್ನು ಇದೀಗ ಅಮೆರಿಕದ ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಅಮೆರಿಕದ 47ನೇ ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಈ ಪ್ರಮಾಣ ವಚನ ಸಮಾರಂಭಕ್ಕೆ ಭಾರತಕ್ಕೂ ಆಹ್ವಾನ ನೀಡಲಾಗಿದೆ. ಭಾರತ ಸರ್ಕಾರದ ಪರವಾಗಿ ವಿದೇಶಾಂಗ ಸಚಿವ ಡಾ.ಜೈಶಂಕರ್ ಹಾಜರಿ ಇರಲಿದ್ದಾರೆ ಎಂದು ತಿಳಿದುಬಂದಿದೆ.

ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಅವರು, ಟ್ರಂಪ್-ವಾನ್ಸ್ ಉದ್ಘಾಟನಾ ಸಮಿತಿಯ ಆಹ್ವಾನದ ಮೇರೆಗೆ, ಭಾರತದ ವಿದೇಶಾಂಗ ಸಚಿವ ಡಾ.ಎಸ್.ಜೈಶಂಕರ್ ಅವರು ಯುನೈಟೆಡ್ ಸ್ಟೇಟ್‌​​ನ 47ನೇ ಅಧ್ಯಕ್ಷರಾಗಿ ಆಯ್ಕೆಯಾದ ಡೊನಾಲ್ಡ್ ಜೆ.ಟ್ರಂಪ್ ಪ್ರಮಾಣ ವಚನ ಸಮಾರಂಭದಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ ಎಂದು ತಿಳಿಸಿದರು.

ಈ ಭೇಟಿಯ ವೇಳೆ ವಿದೇಶಾಂಗ ಸಚಿವ ಜೈಶಂಕರ್ ಅಮೆರಿಕದ ನೂತನ ಆಡಳಿತದ ಪ್ರತಿನಿಧಿಗಳನ್ನು ಭೇಟಿ ಮಾಡಲಿದ್ದಾರೆ ಎಂದು ತಿಳಿದುಬಂದಿದೆ. ಅಲ್ಲದೆ, ಈ ವಿಶೇಷ ಸಂದರ್ಭದಲ್ಲಿ ಅಮೆರಿಕಕ್ಕೆ ಭೇಟಿ ನೀಡುವ ಇತರ ದೇಶಗಳ ಗಣ್ಯರೊಂದಿಗೆ ಸಭೆ ನಡೆಯಲಿದೆ. ಈ ಭೇಟಿಯು ಭಾರತ-ಅಮೆರಿಕ ಸಂಬಂಧಗಳನ್ನು ಮತ್ತಷ್ಟು ಬಲಪಡಿಸಲು ಅವಕಾಶವನ್ನು ಒದಗಿಸುವುದಲ್ಲದೆ, ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ಮತ್ತು ಜಾಗತಿಕ ಚರ್ಚೆಗಳಿಗೆ ವೇದಿಕೆ ಆಗಲಿದೆ ಎನ್ನಲಾಗುತ್ತಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+