Donald Trump: ಡೊನಾಲ್ಡ್ ಟ್ರಂಪ್‌ ಪ್ರಮಾಣವಚನದ ಬೆನ್ನಲ್ಲೇ ಯೂರೋಪ್‌ಗೆ ಎಚ್ಚರಿಕೆ ಕೊಟ್ಟ ಫ್ರಾನ್ಸ್ ಪ್ರಧಾನಿ

ಡೊನಾಲ್ಡ್ ಟ್ರಂಪ್‌ ಅಮೆರಿಕದ 47ನೇ ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸಲು ಕೆಲವೇ ಕ್ಷಣಗಳಿರುವ ಬೆನ್ನಲ್ಲೇ ಫ್ರಾನ್ಸ್ ಪ್ರಧಾನಿ ಯೂರೋಪ್‌ಗೆ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ. ಟ್ರಂಪ್ ನೀತಿಗಳನ್ನು ಎದುರಿಸುವ ಬಗ್ಗೆ ಆತಂಕ ವ್ಯಕ್ತಪಡಿಸಿರುವ ಅವರು, ಯೂರೋಪ್‌ಗೆ ಹೆಚ್ಚಿನ ಸಮಸ್ಯೆಯಾಗಬಹುದು ಎಂದು ಹೇಳಿದ್ದಾರೆ.

ಡೊನಾಲ್ಡ್‌ ಟ್ರಂಪ್ ಅವರ ನೀತಿಗಳನ್ನು ಎದುರಿಸಲು ಫ್ರಾನ್ಸ್ ಮತ್ತು ಯೂರೋಪ್‌ ಯುಎಸ್‌ನ ಪ್ರಾಬಲ್ಯ, ಯೂರೋಪ್‌ ಅನ್ನು ವಿಭಾಗಿಸುವ ಅಪಾಯಗಳ ಬಗ್ಗೆ ಸೋಮವಾರ ಫ್ರಾನ್ಸ್ ಪ್ರಧಾನಿ ಫ್ರಾಂಕೋಯಿಸ್ ಬೇರೂ ಎಚ್ಚರಿಕೆ ನೀಡಿದ್ದಾರೆ.

ಡೊನಾಲ್ಡ್ ಟ್ರಂಪ್ ಅವರ ಪದಗ್ರಹಣದ ಜೊತೆಗೆ ಅಮೆರಿಕ ರಾಜಕೀಯವಾಗಿ ಮತ್ತಷ್ಟು ಪ್ರಬಲವಾಗಲಿದೆ. ನಾವೂ ಏನೂ ಮಾಡದೆ ಸುಮ್ಮನಿದ್ದರೆ ನಮ್ಮ ಭವಿಷ್ಯ ಕೆಟ್ಟದಾಗಿರುತ್ತದೆ. ನಾವು ಪುಡಿ ಪುಡಿಯಾಗುತ್ತೇವೆ, ನಾವು ಕೊನೆಯಲ್ಲಿದ್ದೇವೆ" ಎಂದು ಹೇಳಿದ್ದಾರೆ.

ಎಚ್ಚರಿಕೆ ಕೊಟ್ಟಿದ್ದ ಟ್ರಂಪ್

ಯುಎಸ್ ಅಧ್ಯಕ್ಷೀಯ ಚುನಾವಣೆ ಪ್ರಚಾರದ ಸಂದರ್ಭದಲ್ಲಿ ಅಮೆರಿಕ ರಫ್ತು ಮಾಡುವ ವಸ್ತುಗಳನ್ನು ಖರೀದಿ ಮಾಡದ ಕಾರಣ ಯೂರೋಪಿಯನ್ ಒಕ್ಕೂಟವು ದೊಡ್ಡ ಬೆಲೆ ತೆರಬೇಕಾಗುತ್ತದೆ ಎಂದು ಡೊನಾಲ್ಡ್ ಟ್ರಂಪ್ ಗುಡುಗಿದ್ದರು. ಈಗ ಅವರು ಚುನಾವಣೆಯಲ್ಲಿ ಗೆದ್ದು ಅಧ್ಯಕ್ಷ ಗಾದಿಗೆ ಏರುತ್ತಿರುವುದು ಯೂರೋಪಿಯನ್ ರಾಷ್ಟ್ರಗಳ ಆತಂಕಕ್ಕೆ ಕಾರಣವಾಗಿದೆ.

2024ರ ನವೆಂಬರ್ 5ರಂದು ಪೆನ್ಸಿಲ್ವೇನಿಯಾದಲ್ಲಿ ನಡೆದ ರ್‍ಯಾಲಿಯ ಸಂದರ್ಭದಲ್ಲಿ ಮಾತನಾಡಿದ್ದ ಅವರು, "ಯೂರೋಪಿಯನ್ ಒಕ್ಕೂಟವು ತುಂಬಾ ಸುಂದರವಾಗಿದೆ ಅಲ್ಲವೇ? ಎಲ್ಲಾ ಸುಂದರ ಯೂರೋಪಿಯನ್ ದೇಶಗಳು ಒಟ್ಟಾಗಿವೆ ಅಲ್ಲವೇ? ಆದರೆ ಅವರು ನಾವು ಉತ್ಪಾದಿಸುವ ಕಾರುಗಳನ್ನು ಕೊಳ್ಳುವುದಿಲ್ಲ, ನಮ್ಮ ಕೃಷಿ ಉತ್ಪನ್ನಗಳನ್ನು ಕೊಳ್ಳುವುದಿಲ್ಲ ಆದರೆ ಲಕ್ಷಾಂತರ ಕಾರುಗಳನ್ನು ಮಾರಾಟ ಮಾಡುತ್ತಾರೆ, ಇಲ್ಲ ಅವರು ದೊಡ್ಡ ಬೆಲೆಯನ್ನು ತೆರಬೇಕಾಗುತ್ತದೆ" ಎಂದು ಹೇಳಿರುವುದಾಗಿ ರಾಯಿಟರ್ಸ್ ವರದಿ ಮಾಡಿತ್ತು.

ಟ್ರಂಪ್‌ ಈಗಾಗಲೇ ಎಲ್ಲಾ ದೇಶಗಳಿಂದ ಆಮದು ಮಾಡಿಕೊಳ್ಳುವ ವಸ್ತುಗಳ ಮೇಲೆ 10% ಸುಂಕವನ್ನು ಮತ್ತು ಚೀನಾದಿಂದ ಆಮದು ಮಾಡಿಕೊಳ್ಳುವ ವಸ್ತುಗಳ ಮೇಲೆ 60% ಸುಂಕವನ್ನು ವಿಧಿಸುವುದಾಗಿ ಹೇಳಿದ್ದಾರೆ.

ಹಲವು ರಾಷ್ಟ್ರಗಳಿಗೆ ಡೊನಾಲ್ಡ್ ಟ್ರಂಪ್‌ ಭಯ

ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿರುವ ಡೊನಾಲ್ಡ್ ಟ್ರಂಪ್ ಸೋಮವಾರ ಯುಎಸ್‌ನ 47ನೇ ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ತಮ್ಮ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ವಲಸಿಗರ ವಿರುದ್ಧ ಬಹಿರಂಗವಾಗಿಯೇ ಕಿಡಿ ಕಾರಿದ್ದ ಅವರು, ಅಕ್ರಮವಾಗಿ ನೆಲೆಸಿರುವ ವಲಸಿಗರನ್ನು ದೇಶದಿಂದ ಹೊರ ಹಾಕುವುದಾಗಿ ಹೇಳಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+