ಭದ್ರತೆ ಮೀರಿ ಅಗ್ನಿಶಾಮಕ ಸಿಬ್ಬಂದಿ ಭೇಟಿಯಾದ ಅಮೆರಿಕ ಅಧ್ಯಕ್ಷ ಟ್ರಂಪ್
ವಾಷಿಂಗ್ಟನ್, ಆಗಸ್ಟ್ 06: ವಿಶ್ವದಲ್ಲೇ ಅತಿ ಹೆಚ್ಚು ಭದ್ರತೆ ಉಳ್ಳ ನಾಯಕ ಡೊನಾಲ್ಡ್ ಟ್ರಂಪ್ ಮಾರ್ಗಮಧ್ಯದಲ್ಲಿ ಇಳಿಯುವುದು ಜನರೊಂದಿಗೆ ಬೆರೆಯುವುದು ಭದ್ರತಾ ದೃಷ್ಟಿಯಿಂದ ಕಷ್ಟಾತಿಕಷ್ಟ. ಆದರೆ ಟ್ರಂಪ್ ಅದನ್ನು ಮೀರಿದ್ದಾರೆ.
ವಿಶ್ವದ ಅತ್ಯಂತ ಸುಸಜ್ಜಿತ, 'ದಿ ಬೀಸ್ಟ್' ಹೆಸರಿನ ಲಿಮೋ ಕಾರಿನಿಂದ ಮಾರ್ಗಮದ್ಯದಲ್ಲಿ ಇಳಿದಿರುವ ಡೊನಾಲ್ಡ್ ಟ್ರಂಪ್ ಅವರು ಅಗ್ನಿಶಾಮಕ ದಳದ ಸಿಬ್ಬಂದಿಯೊಂದಿಗೆ ಮಾತನಾಡಿದ್ದಾರೆ. ಈ ವಿಡಿಯೋ ಇದೀಗ ವೈರಲ್ ಆಗಿದೆ.
ಸಾಮಾನ್ಯವಾಗಿ ವಿವಾದಾತ್ಮಕ ಹೇಳಿಕೆಗಳಿಂದ ಸುದ್ದಿಯಾಗುವ ಡೊನಾಲ್ಡ್ ಟ್ರಂಪ್ ಅವರ ಈ ಕಾರ್ಯ ಎಲ್ಲರ ಮೆಚ್ಚುಗೆಗೆ ಕಾರಣವಾಗಿದೆ.

ಅಮೆರಿಕ ಒಹಿಯೋನಲ್ಲಿದ್ದ ಆಯೋಜಿತವಾಗಿದ್ದ ಮೇಕ್ ಅಮೆರಿಕ ಗ್ರೇಟ್ ಅಗೇನ್ rallyಯಲ್ಲಿ ಭಾಷಣ ಮಾಡಿ ವಾಪಸಾಗುತ್ತಿದ್ದ ವೇಳೆ ರಸ್ತೆ ಪಕ್ಕದಲ್ಲಿ ಇದ್ದ ಅಗ್ನಿಶಾಮಕ ದಳದ ಸಿಬ್ಬಂದಿಯನ್ನು ಕಂಡ ಟ್ರಂಪ್ ಭದ್ರತಾ ನಿಯಮ ಮೀರಿ ಕಾರು ನಿಲ್ಲಿಸಿ ಬಂದು ಅವರೊಂದಿಗೆ ಕೈ ಕುಲುಕಿ ಮಾತನಾಡಿದ್ದಾರೆ.
President Donald Trump STOPS his motorcade to greet firefighters. Make this go viral.pic.twitter.com/Uo7MqZYGHD
— Michael S. Moates 🇺🇸 (@freedom_moates) August 5, 2018
ಇತ್ತೀಚೆಗಷ್ಟೆ ಕರ್ನಾಟಕದಲ್ಲೂ ಸಿಎಂ ಕುಮಾರಸ್ವಾಮಿ ಅವರು ಸಹ ದಾರಿ ಮಧ್ಯೆ ಕಾರು ನಿಲ್ಲಿಸಿ ತಮ್ಮ ಅಭಿಮಾನಿಗಳನ್ನು ಭೇಟಿ ಮಾಡಿ ಮಾತನಾಡಿದ್ದರು. ಕೆಲವು ತಿಂಗಳುಗಳ ಹಿಂದೆ ಸಚಿನ್ ಸಹ ಮಾರ್ಗ ಮದ್ಯೆ ಕಾರು ನಿಲ್ಲಿಸಿ ಗಲ್ಲಿ ಕ್ರಿಕೆಟ್ ಆಡುತ್ತಿದ್ದ ಹುಡುಗರೊಂದಿಗೆ ಬೆರೆತಿದ್ದರು.












Click it and Unblock the Notifications