ಉಕ್ರೇನ್ ಅಧ್ಯಕ್ಷನಿಗೆ ಉಗಿದು, ರಷ್ಯಾ ಅಧ್ಯಕ್ಷರ ಬಗ್ಗೆ ಏನು ಹೇಳಿದ್ರು ಗೊತ್ತಾ ಡೊನಾಲ್ಡ್ ಟ್ರಂಪ್?
ಅಮೆರಿಕ ಬುಡಕ್ಕೆ ಬತ್ತಿ ಇಟ್ಟಿರುವ ರಷ್ಯಾ & ಉಕ್ರೇನ್ ಯುದ್ಧ ದಿನದಿಂದ ದಿನಕ್ಕೆ ಮತ್ತಷ್ಟು ಹಿಂಸಾತ್ಮಕ ರೂಪ ಪಡೆಯುತ್ತಿದೆ. ಇದು ಅಮೆರಿಕ ಸೇರಿದಂತೆ ನ್ಯಾಟೋ ಒಕ್ಕೂಟ ದೇಶಗಳ ಎದೆ ನಡುಗುವಂತೆ ಮಾಡಿದೆ. ಯಾಕಂದ್ರೆ ರಷ್ಯಾ & ಉಕ್ರೇನ್ ಯುದ್ಧ ಶುರುವಾದ ನಂತರ ಸಾಕಷ್ಟು ಸಮಸ್ಯೆಗಳು ಭೂಮಿ ಮೇಲೆ ಶುರುವಾಗಿವೆ. ಹಾಗೇ ತಣ್ಣಗೆ ಇದ್ದ ಮಧ್ಯಪ್ರಾಚ್ಯದ ನೆಲದಲ್ಲೂ ಯುದ್ಧ ಶುರುವಾಗಿದೆ. ಮತ್ತೊಂದು ಕಡೆ ಉಕ್ರೇನ್ ಅಧ್ಯಕ್ಷನಿಗೆ ಉಗಿದು, ರಷ್ಯಾ ಅಧ್ಯಕ್ಷರ ಬಗ್ಗೆ ಏನು ಹೇಳಿದ್ರು ಗೊತ್ತಾ ಡೊನಾಲ್ಡ್ ಟ್ರಂಪ್?
ಡೊನಾಲ್ಡ್ ಟ್ರಂಪ್ ಇದೀಗ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಗೆದ್ದು, ಈ ಮೂಲಕ 2ನೇ ಬಾರಿಗೆ ಅಮೆರಿಕ ಅಧ್ಯಕ್ಷರಾಗಿ ಆಯ್ಕೆ ಆಗಬೇಕು ಎಂಬ ಹುಮ್ಮಸ್ಸಿನಲ್ಲಿ ಇದ್ದಾರೆ. ಈ ಹಿನ್ನೆಲೆಯಲ್ಲಿ ಡೊನಾಲ್ಡ್ ಟ್ರಂಪ್ ಸಾಕಷ್ಟು ಹೋರಾಟ ಕೂಡ ನಡೆಸುತ್ತಿದ್ದಾರೆ. ಮತ್ತೊಂದು ಕಡೆಯಲ್ಲಿ ಕಮಲಾ ಹ್ಯಾರಿಸ್ ಕೂಡ ಭಾರಿ ಹೋರಾಟ ಪ್ರದರ್ಶನ ಮಾಡುತ್ತಿದ್ದು, ಟ್ರಂಪ್ ಅವರ ಗೆಲುವಿಗೆ ಅಡ್ಡಿಯಾಗುತ್ತಿದೆ. ಹೀಗಿದ್ದಾಗ ರಷ್ಯಾ & ಉಕ್ರೇನ್ ಯುದ್ಧ ನಿಲ್ಲುವ ಬಗ್ಗೆ ಭರವಸೆ ನೀಡಿರುವ ಟ್ರಂಪ್ ಉಕ್ರೇನ್ ಅಧ್ಯಕ್ಷನ ಬಗ್ಗೆ ಹೇಳಿದ್ದೇನು ಗೊತ್ತೆ?

ಉಕ್ರೇನ್ ಅಧ್ಯಕ್ಷನಿಗೆ ಡೊನಾಲ್ಡ್ ಟ್ರಂಪ್ ಶಾಕ್!
ಅಂದಹಾಗೆ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ & ಡೊನಾಲ್ಡ್ ಟ್ರಂಪ್ ನಡುವೆ ಉತ್ತಮವಾದ ಸಂಬಂಧ ಇದೆ. ಹೀಗಾಗಿಯೇ ಡೊನಾಲ್ಡ್ ಟ್ರಂಪ್ ಈ ಹಿಂದೆ ಕೂಡ ಪುಟಿನ್ ಅವರ ಬಲ & ಬೆಂಬಲದ ಮೂಲಕ ಗೆದ್ದಿದ್ದರು ಎಂಬ ಆರೋಪ ಅಮೆರಿಕದಲ್ಲಿ ಓಡಾಡಿತ್ತು. ಇಷ್ಟೆಲ್ಲದರ ಇದೀಗ ದಿಢೀರ್ ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಬಗ್ಗೆ ಡೊನಾಲ್ಡ್ ಟ್ರಂಪ್ ಆಕ್ರೋಶ ವ್ಯಕ್ತಪಡಿಸಿ, ಯುದ್ಧ ನಡೆಯಲು ಉಕ್ರೇನ್ ಅಧ್ಯಕ್ಷನೇ ಕಾರಣ ಎನ್ನುವ ರೀತಿ ಮಾತನಾಡಿದ್ದಾರೆ. ಟ್ರಂಪ್ ಈ ರೀತಿ ಝೆಲೆನ್ಸ್ಕಿ ಬಗ್ಗೆ ಮಾತನಾಡಿರುವುದು ಇದೀಗ ಸಂಚಲನ ಸೃಷ್ಟಿ ಮಾಡಿದೆ.
ಯುದ್ಧ ನಿಲ್ಲಿಸುತ್ತಾರಾ ಡೊನಾಲ್ಡ್ ಟ್ರಂಪ್?
ವ್ಲಾದಿಮಿರ್ ಪುಟಿನ್ & ಡೊನಾಲ್ಡ್ ಟ್ರಂಪ್ ಈ ಹಿಂದೆ ಹಲವು ಬಾರಿ ಭೇಟಿ ಮಾಡಿದ್ದರು. ಅಲ್ಲದೆ ವ್ಲಾದಿಮಿರ್ ಪುಟಿನ್ & ಡೊನಾಲ್ಡ್ ಟ್ರಂಪ್ ಹಲವು ಸಭೆಗಳನ್ನ ಕೂಡ ನಡೆಸಿದ್ರು. ಹೀಗೆ ಡೊನಾಲ್ಡ್ ಟ್ರಂಪ್ ಅವರಿಗೆ ವ್ಲಾದಿಮಿರ್ ಪುಟಿನ್ ಜೊತೆಗೆ ಉತ್ತಮ ಒಡನಾಟ ಕೂಡ ಇದೆ. ಹೀಗಿದ್ದಾಗ ರಷ್ಯಾ & ಉಕ್ರೇನ್ ಯುದ್ಧದಲ್ಲಿ ಉಕ್ರೇನ್ ಮಾಡಿದ್ದೇ ತಪ್ಪು ಎಂಬ ರೀತಿ ಡೊನಾಲ್ಡ್ ಟ್ರಂಪ್ ಮಾತನಾಡಿದ್ದಾರೆ ಎಂಬ ಆರೋಪ ಇದೀಗ ಕೇಳಿಬಂದಿದೆ. ಮತ್ತೊಂದು ಬದಿಯಲ್ಲಿ ಟ್ರಂಪ್ ಅವರ ಇಂತಹ ಹೇಳಿಕೆಗಳು ಚುನಾವಣೆ ಮೇಲೆ ಯಾವ ರೀತಿ ಪರಿಣಾಮ ಬೀರಬಹುದು? ಎಂಬ ಕುತೂಹಲ ಕೂಡ ಮೂಡಿದೆ.












Click it and Unblock the Notifications