Donald Trump: ಡೊನಾಲ್ಡ್ ಟ್ರಂಪ್ ಘರ್ಜನೆ ಶುರು: ಮೊದಲ ದಿನವೇ 8 ಪ್ರಮುಖ ನಿರ್ಧಾರ!
ಅಮೆರಿಕದ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಮೊದಲ ದಿನವೇ ಡೊನಾಲ್ಡ್ ಟ್ರಂಪ್ ಅವರು 8 ಪ್ರಮುಖ ನೀತಿಗಳಿಗೆ ಸಹಿ ಹಾಕಿದ್ದಾರೆ. ಈ ಎಂಟು ನೀತಿಗಳು ಅಮೆರಿಕದ ಮೇಲೆ ಹಾಗೂ ವಿಶ್ವದ ವಿವಿಧ ರಾಷ್ಟ್ರಗಳ ಮೇಲೆ ಯಾವ ರೀತಿ ಪರಿಣಾಮ ಬೀರಲಿದೆ ಎನ್ನುವ ವಿಚಾರವಾಗಿ ಭಾರೀ ಚರ್ಚೆ ನಡೆದಿದೆ. ತೆರಿಗೆ ನೀತಿಯ ಬಗ್ಗೆ ಡೊನಾಲ್ಡ್ ಟ್ರಂಪ್ ಅವರು ಮಾತನಾಡುತ್ತಿರುವುದು ಭಾರತ ಸೇರಿದಂತೆ ವಿಶ್ವದ ವಿವಿಧ ರಾಷ್ಟ್ರಗಳಲ್ಲಿ ಸಣ್ಣ ನಡುಕವನ್ನೂ ಸಹ ಸೃಷ್ಟಿ ಮಾಡಿದೆ. ಇಷ್ಟಕ್ಕೂ ಡೊನಾಲ್ ಟ್ರಂಪ್ ಯಾವುದಕ್ಕೆಲ್ಲ ಸಹಿ ಹಾಕಿದ್ದಾರೆ. ಇದರಿಂದ ಮುಂದಿನ ದಿನಗಳಲ್ಲಿ ಏನೆಲ್ಲಾ ಬದಲಾವಣೆಗಳು ಆಗಲಿವೆ ಎನ್ನುವ ಪ್ರಮುಖ ಮಾಹಿತಿ ಇಲ್ಲಿದೆ.
47ನೇ ಅಮೆರಿಕದ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ ಅವರು ಅಧಿಕಾರ ಸ್ವೀಕರಿಸಿದ ಮೇಲೆ ಘರ್ಜನೆ ಶುರು ಮಾಡಿಕೊಂಡಿದ್ದಾರೆ. ಇದು ಅಮೆರಿಕಗೆ ಸುವರ್ಣ ಯುಗವಾಗಿದ್ದು. ಅಮೆರಿಕವನ್ನು ಅವನತಿಯಿಂದ ರಕ್ಷಿಸಲಾಗಿದೆ ಎಂಬರ್ಥದಲ್ಲಿ ಅವರು ಮಾತನಾಡಿದ್ದಾರೆ. ಅವರ ಮೊದಲ ದಿನದ ಕೆಲಸವೇ ಕೋಟ್ಯಾಂತರ ಜನರಿಗೆ ಅಚ್ಚರಿಯನ್ನು ಉಂಟು ಮಾಡಿದರೆ. ಇಷ್ಟೇ ಜನರಿಗೆ ನಡುಕವನ್ನೂ ಉಂಟು ಮಾಡಿದೆ. ಹಾಗಾದರೆ ಡೊನಾಲ್ಡ್ ಟ್ರಂಪ್ ಅವರು ತೆಗೆದುಕೊಂಡಿರುವ ಪ್ರಮುಖ ನಿರ್ಧಾರಗಳು ಯಾವುವು, ಯಾಕೆ ಆ ನಿರ್ಧಾರಗಳ ಬಗ್ಗೆ ಭಾರೀ ಚರ್ಚೆಯಾಗುತ್ತಿದೆ ಎನ್ನುವ ವಿವರ ನೋಡೋಣ..

ಅಮೆರಿಕವನ್ನು ವಿಶ್ವದ ದೊಡ್ಡಣ್ಣ ಅಂತಲೇ ಕರೆಯಲಾಗುತ್ತದೆ. ಈ ಸೂಪರ್ ಪವರ್ ರಾಷ್ಟ್ರಕ್ಕೆ ಇದೀಗ ಸೂಪರ್ ಪವರ್ ಅಧ್ಯಕ್ಷರು ಬಂದಿದ್ದು. ವಿಶ್ವದ ಕೆಲವು ರಾಷ್ಟ್ರಗಳು ಅಕ್ಷರಶಃ ಆತಂಕಕ್ಕೆ ಒಳಗಾಗಿವೆ. ಇದಕ್ಕೆ ಅಮೆರಿಕೆ ನೂತನ ಅಧ್ಯಕ್ಷ ಟ್ರಂಪ್ ಅವರ ತೆರಿಗೆ ನೀತಿ. ಟ್ರಂಪ್ ಅವರು ಅಮೆರಿಕದಲ್ಲಿ ವಲಸೆ ನೀತಿ ತಡೆ, ಇಂಧನ ನೀತಿ ಹಾಗೂ ರಾಷ್ಟ್ರೀಯ ಭದ್ರತೆಯಂತಹ ವಿಷಯಗಳನ್ನು ಆದ್ಯತೆಯ ವಿಷಯಗಳನ್ನಾಗಿ ಆಯ್ಕೆ ಮಾಡಿಕೊಂಡಿದ್ದಾರೆ. ಮೊದಲು ಈ ವಿಷಯಗಳ ಮೇಲೆ ಕ್ರಮ ತೆಗೆದುಕೊಳ್ಳುವುದಾಗಿ ಹೇಳಿದ್ದಾರೆ. ಮುಂದುವರಿದು ಅವರು ತೆರಿಗೆಯ ಮೇಲೂ ಕಣ್ಣಾಕಿದ್ದಾರೆ.
ಟ್ರಂಪ್ 8 ಆದೇಶಗಳಿಗೆ ಸಹಿ ಹಾಕಿದ್ದಾರೆ. ಇದರಲ್ಲಿ ಹಿಂದಿನ ಅಧ್ಯಕ್ಷ ಜೋ ಬೈಡನ್ ಅವರ ಅವಧಿಯಲ್ಲಿ ತೆಗೆದುಕೊಳ್ಳಲಾಗಿದ್ದ ಪ್ರಮುಖ ನಿರ್ಧಾರಗಳನ್ನು ಹಿಂಪಡೆದಿದ್ದಾರೆ. ಡೊನಾಲ್ಡ್ ಟ್ರಂಪ್ ಅವರು ಓವಲ್ ಕಚೇರಿ (ಅಮೆರಿಕ ಸರ್ಕಾರಿ ಕಚೇರಿ)ಗೆ ಪ್ರವೇಶ ಮಾಡುತ್ತಿದ್ದಂತೆಯೇ 2021ರಲ್ಲಿ ಯುಎಸ್ ಕ್ಯಾಪಿಟಲ್ ಗಲಭೆಯಲ್ಲಿ ಆರೋಪಿಗಳಾಗಿರುವ 1,500 ಜನರಿಗೆ ಕೇಸ್‌ನಿಂದ ಮುಕ್ತಿ ನೀಡಲಾಗಿದೆ. ಈ ಗಲಭೆ ಟ್ರಂಪ್ ಈ ಹಿಂದೆ ಅಧಿಕಾರ ಕಳೆದುಕೊಂಡ ಸಂದರ್ಭದಲ್ಲಿ ನಡೆದಿತ್ತು.

ತೆರಿಗೆ ಭೀತಿ!
ಭಾರತವೂ ಸೇರಿದಂತೆ ವಿಶ್ವದ ವಿವಿಧ ರಾಷ್ಟ್ರಗಳಿಗೆ ಈಗ ಇರುವ ಪ್ರಮುಖ ಆತಂಕವೆಂದರೆ ಟ್ರಂಪ್ ಎಲ್ಲಿ ಹೊಸ ತೆರಿಗೆ ನೀತಿಯನ್ನು ಜಾರಿ ಮಾಡುತ್ತಾರೋ ಎನ್ನುವುದು. ಯಾಕೆಂದರೆ ಈಗಾಗಲೇ ಡೊನಾಲ್ಡ್ ಟ್ರಂಪ್ ಅವರು, ಫೆಬ್ರವರಿ 1ರ ಒಳಗೆ ಮೆಕ್ಸಿಕೊ ಹಾಗೂ ಕೆನಡಾದ ಮೇಲೆ ಬರೋಬ್ಬರಿ ಶೇ 25ರಷ್ಟರ ವರೆಗೆ ತೆರಿಗೆ ಹಾಕುವ ಸುಳಿವನ್ನ ಕೊಟ್ಟಿದ್ದಾರೆ. ಅಲ್ಲದೆ ಚೀನಾ, ಮೆಕ್ಸಿಕೊ ಹಾಗೂ ಕೆನಡಾ ದೇಶಗಳೊಂದಿಗೆ ತೆರಿಗೆ ಹಾಗೂ ವ್ಯಾಪಾರ ಪದ್ಧತಿಯನ್ನು ಪರಿಶೀಲನೆ ಮಾಡಿ ಅಂತ ರಾಜ್ಯಗಳಿಗೆ ನಿರ್ದೇಶನ ನೀಡಿದ್ದಾರೆ. ಇದು ಭಾರತದ ಆತಂಕಕ್ಕೂ ಕಾರಣವಾಗಿದೆ. ಭಾರತದ ತೆರಿಗೆ ನೀತಿಯ ಬಗ್ಗೆ ಟ್ರಂಪ್ ಮೊದಲಿನಿಂದಲೂ ಅಸಮಾಧಾನ ಇದೆ.
ಟ್ರಂಪ್ ಪ್ರಮುಖ ನಿರ್ಧಾರಗಳ ವಿವರ: ಟ್ರಂಪ್ ಅವರು ಅಮೆರಿಕ - ಮೆಕ್ಸಿಕೋ ಗಡಿಯಲ್ಲಿ ರಾಷ್ಟ್ರೀಯ ತುರ್ತು ಪರಿಸ್ಥಿತಿಯನ್ನು ಘೋಷಿಸಿದ್ದಾರೆ. ಅಲ್ಲದೆ ವಿದೇಶಿ ಕ್ರಿಮಿನಲ್‌ಗಳ ಮೇಲೆ ಕಠಿಣ ಕ್ರಮ ಜರುಗಿಸುವುದಾಗಿಯೂ ಅವರು ಹೇಳಿದ್ದಾರೆ. ಅಮೆರಿಕದಲ್ಲಿ ಶಾಶ್ವತವಾಗಿ ನೆಲಸದವರ ಮಕ್ಕಳಿಗೆ ಸಿಗುತ್ತಿದ್ದ ಜನ್ಮಸಿದ್ಧ ಪೌರತ್ವವ ತಡೆಗೆ ಸಹಿ ಹಾಕಿದ್ದಾರೆ. ಇನ್ನು ಎಲ್ಲರಿಗೂ ತಿಳಿದಿರುವಂತೆ ಅವರು ಅಕ್ರಮ ಹಾಗೂ ಯಾವುದೇ ದಾಖಲೆಗಳಿಲ್ಲದ ವಲಸಿಗರ ಮೇಲೆ ಕಣ್ಣಿಟ್ಟಿದ್ದಾರೆ. ಇನ್ನು ಅಮೆರಿಕದವರಿಗೆ ತೊಂದರೆ ಕೊಡುವ ಅಕ್ರಮ ವಲಸಿಗರಿಗೆ ಮರಣದಂಡನೆ ವಿಧಿಸುವ ನಿಟ್ಟಿನಲ್ಲೂ ಚರ್ಚೆ ನಡೆದಿದೆ. ಈ ಸಂಬಂಧ ಅವರು ನ್ಯಾಯ ಇಲಾಖೆಗೆ ನಿರ್ದೇಶನ ನೀಡಿದ್ದಾರೆ ಎಂದು ವರದಿಯಾಗಿದೆ.
ಇದಲ್ಲದೆ ಪ್ಯಾರಿಸ್ ಒಪ್ಪಂದದಿಂದ ಹಿಂದೆ ಸರಿಯುವುದು, ವಿಶ್ವ ಆರೋಗ್ಯ ಸಂಸ್ಥೆಯಿಂದ ಹಿಂದೆ ಸರಿಯುವ ನಿರ್ಧಾರಕ್ಕೆ ಬಂದಿದ್ದಾರೆ. ಪ್ಯಾರಿಸ್ ಒಪ್ಪಂದವು ಹವಾಮಾನಕ್ಕೆ ಸಂಬಂಧಿಸಿದ್ದಾಗಿದೆ. ಇನ್ನು ವಿಶ್ವ ಆರೋಗ್ಯ ಸಂಸ್ಥೆಗೆ ಅಮೆರಿಕ ಆರ್ಥಿಕ ನೆರವು ಕೊಡುತ್ತದೆ. ಅದಕ್ಕೂ ಕೊಕ್ಕೆ ಹಾಕಲಾಗುತ್ತಿದೆ.
-
Gold Rate Today: ಬೆಂಗಳೂರಿನಲ್ಲಿ ಚಿನ್ನದ ದರ ಮತ್ತೆ ಏರಿಕೆ: 15,000 ರೂಪಾಯಿ ಗಡಿ ದಾಟಿದ 24 ಕ್ಯಾರೆಟ್ ಚಿನ್ನ -
World Happiness Report 2026: ಫಿನ್ಲೆಂಡ್ ಜಗತ್ತಿನ ಅತ್ಯಂತ ಸಂತೋಷದಾಯಕ ದೇಶ: ನಮ್ಮ ಭಾರತಕ್ಕೆ ಸಿಕ್ಕ ಸ್ಥಾನವೆಷ್ಟು? -
ಇರಾನ್ ಅಧ್ಯಕ್ಷರ ಜೊತೆ ಪ್ರಧಾನಿ ಮೋದಿ ಮಾತುಕತೆ: ಜಾಗತಿಕ ಪೂರೈಕೆ ವ್ಯತ್ಯಯದ ಬಗ್ಗೆ ಆತಂಕ -
Viral Video: ಲಂಡನ್ ರಸ್ತೆಯಲ್ಲಿ ರಾರಾಜಿಸಿದ ಭಾರತದ ಆಟೋ ರಿಕ್ಷಾ: ವಿಡಿಯೋ ನೋಡಿ ದೆಹಲಿ ಎಂದ ನೆಟ್ಟಿಗರು -
Gold Price Today: ಇಂದು ಚಿನ್ನ-ಬೆಳ್ಳಿ ದರದಲ್ಲಿ ದಾಖಲೆಯ ಇಳಿಕೆ, 30000 ರೂ ಕುಸಿದ ಬಿಳಿ ಲೋಹ -
Rishab Shetty: ಹೊಂಬಾಳೆ ಫಿಲ್ಮ್ಸ್ ಅನ್ಫಾಲೋ ಮಾಡಿದ ರಿಷಬ್ ಶೆಟ್ಟಿ: ಕಾಂತಾರ ಕುಟುಂಬದಲ್ಲಿ ಬಿರುಕು ವದಂತಿ -
Bengaluru Second Airport: ಬೆಂಗಳೂರು ಎರಡನೇ ವಿಮಾನ ನಿಲ್ದಾಣದ ಸ್ಥಳ: ಸಚಿವ ಎಂ.ಬಿ.ಪಾಟೀಲ್ ಮಹತ್ವದ ಮಾಹಿತಿ -
ಮಳೆ.. ಮಳೆ.. ಮುಂದಿನ 48 ಗಂಟೆಯಲ್ಲಿ ಮಳೆ ಬಗ್ಗೆ ಹವಾಮಾನ ಇಲಾಖೆ ಮಹತ್ವದ ಮಾಹಿತಿ... Karnataka Rain -
March 20 Horoscope: ಆರೋಗ್ಯ ಮತ್ತು ಹಣಕಾಸು ವಿಷಯದಲ್ಲಿ ಈ ರಾಶಿಗೆ ಲಾಭ -
Karnataka Rain: ಬೆಂಗಳೂರು ಸೇರಿ 18 ಜಿಲ್ಲೆಗಳಲ್ಲಿ ನಾಳೆವರೆಗೆ ಗುಡುಗು ಸಹಿತ ಮಳೆ ಸಾಧ್ಯತೆ -
40,000 ಹೋಟೆಲ್ ಮಾಲೀಕರಿಗೆ ಭರ್ಜರಿ ಸುದ್ದಿ, ಎಲ್ಪಿಜಿ ಸಿಲಿಂಡರ್ ನಿಯಮ ಬದಲಾವಣೆ... LPG Cylinder Supply -
ಕೇವಲ 2 ನಿಮಿಷದಲ್ಲಿ ಉದ್ಯೋಗ ಅರ್ಜಿ ರಿಜೆಕ್ಟ್: 'ಎಐ' ನೇಮಕಾತಿ ಬಗ್ಗೆ ಭಾರತೀಯ ಮೂಲದ ವಿದ್ಯಾರ್ಥಿನಿ ಬೇಸರ












Click it and Unblock the Notifications