ಇರಾನ್ & ಇಸ್ರೇಲ್ ಎದುರು ಕೈಮುಗಿದು ಕೇಳಿಕೊಂಡ ಡೊನಾಲ್ಡ್ ಟ್ರಂಪ್, ಏನದು? Iran And Israel
ಯುದ್ಧ ತೀವ್ರವಾಗಿ ಇನ್ನೇನು ಪರಮಾಣು ಬಾಂಬ್ ಬಳಕೆ ಕೂಡ ಆಗಲಿದೆ ಅನ್ನೋ ಆತಂಕ ಆವರಿಸಿರುವ ಸಮಯದಲ್ಲೇ ದಿಢೀರ್ ಸಂತಸದ ಸಮಾಚಾರ ಹೊರಬಿದ್ದಿದೆ. ಇಸ್ರೇಲ್ & ಇರಾನ್ ನಡುವೆ ನಡೆಯುತ್ತಿದ್ದ ಘೋರ ಯುದ್ಧಕ್ಕೆ ಅಂತ್ಯ ಹಾಡಿದೆ ಅಮೆರಿಕ. ಮಧ್ಯಪ್ರಾಚ್ಯ ಮಾತ್ರವಲ್ಲದೆ ಇಡೀ ಜಗತ್ತಿನಲ್ಲಿ ಇಸ್ರೇಲ್ & ಇರಾನ್ ಯುದ್ಧ ನಿಂತಿದ್ದಕ್ಕೆ ಭಾರಿ ಖುಷಿ ಕೂಡ ವ್ಯಕ್ತವಾಗಿದೆ. ಇಂತಹ ಸಮಯದಲ್ಲೇ, ಡೊನಾಲ್ಡ್ ಟ್ರಂಪ್ ಎರಡೂ ದೇಶಗಳ ಎದುರು ಕೈಮುಗಿದು ಒಂದು ಬೇಡಿಕೆ ಇಟ್ಟಿದ್ದಾರೆ.
ಇರಾನ್ ಪರಮಾಣು ಬಾಂಬ್ ಅಭಿವೃದ್ಧಿ ಮಾಡುತ್ತಿದೆ ಅಂತ ಆರೋಪಿಸಿ ಇಸ್ರೇಲ್ ಯುದ್ಧ ಶುರು ಮಾಡಿತ್ತು. ಹೀಗೆ ಶುರುವಾದ ಯುದ್ಧ ಕೊನೆಗೆ ಭಾರಿ ದೊಡ್ಡ ಹಂತಕ್ಕೆ ಕೂಡ ಹೋಗಿ, ಹಿಂಸಾಚಾರ ಜೋರಾಗಿತ್ತು. ಇಸ್ರೇಲ್ & ಇರಾನ್ ನಡುವೆ ಅಕಸ್ಮಾತ್ ಪೂರ್ಣ ಪ್ರಮಾಣದ ಯುದ್ಧ ನಡೆದರೆ ಇಡೀ ಜಗತ್ತು ಸರ್ವನಾಶ ಆಗಿ ಹೋಗುವುದು ಗ್ಯಾರಂಟಿ ಎಂಬ ಆತಂಕ ಕೂಡ ಮನೆಮಾಡಿತ್ತು. ಹೀಗಿದ್ದಾಗಲೇ ದಿಢೀರ್ ಯುದ್ಧ ನಿಂತು ಹೋಗಿದ್ದು, ಡೊನಾಲ್ಡ್ ಟ್ರಂಪ್ ಈ ಯುದ್ಧಕ್ಕೆ ಬ್ರೇಕ್ ಹಾಕುವಲ್ಲಿ ಯಶಸ್ವಿಯಾಗಿದ್ದಾರೆ. ಹಾಗೇ ಇರಾನ್ & ಇಸ್ರೇಲ್‌ಗೆ ಮಹತ್ವದ ಸಂದೇಶ ಕೂಡ ನೀಡಿದ್ದಾರೆ.

ದಯವಿಟ್ಟು ಮತ್ತೆ ಹೊಡೆದಾಡಬೇಡಿ...
ಹೌದು, ಇಸ್ರೇಲ್ & ಇರಾನ್ ಯುದ್ಧದಲ್ಲಿ ಅಮೆರಿಕ ಹೈರಾಣ ಆಗಿ ಹೋಗಿತ್ತು. ಯಾಕಂದ್ರೆ ಇರಾನ್ ಕೈಯಲ್ಲಿ ಅಣ್ವಸ್ತ್ರ ಇದ್ದು, ಅಕಸ್ಮಾತ್ ಈ ಯುದ್ಧ ಜೋರಾದರೆ ಭವಿಷ್ಯದಲ್ಲಿ ಭಾರಿ ದೊಡ್ಡ ಸಮಸ್ಯೆ ಆಗಬಹುದು ಎಂಬ ಚರ್ಚೆ ನಡೆಯುತ್ತಿತ್ತು. ಅದರಲ್ಲೂ ಇಸ್ರೇಲ್ ನೆಲದಲ್ಲಿ ಇರಾನ್ ದೊಡ್ಡ ನಷ್ಟವನ್ನೂ ಉಂಟುಮಾಡಿ ಯುದ್ಧದ ಭೀಕರತೆ ಇನ್ನಷ್ಟು ಹೆಚ್ಚಾಗುವಂತೆ ಮಾಡಿತ್ತು. ಇಷ್ಟೆಲ್ಲಾ ಆತಂಕದ ನಡುವೆ ಒದ್ದಾಡಿ ಟ್ರಂಪ್ ಯುದ್ಧ ನಿಲ್ಲಿಸುವಲ್ಲಿ ಯಶಸ್ವಿಯಾಗಿದ್ದಾರೆ. ಹಾಗೇ, ಮತ್ತೆ ನೀವು ಹೊಡೆದಾಡಬೇಡಿ ಅಂತಾ ಡೊನಾಲ್ಡ್ ಟ್ರಂಪ್ ಅವರು ಇದೀಗ ಮಹತ್ವದ ಮನವಿ ಕೂಡ ಮಾಡಿಕೊಂಡಿದ್ದಾರೆ.
ಟ್ರಂಪ್ ಮಾತಿಗೆ ಬೆಲೆ ಇದೆಯಾ?
ಸಾಕಷ್ಟು ಕಷ್ಟಪಟ್ಟು ಕದನ ವಿರಾಮ ಘೋಷಿಸುವಲ್ಲಿ ಯಶಸ್ವಿಯಾಗಿರುವ ಡೊನಾಲ್ಡ್ ಟ್ರಂಪ್, ಇದೀಗ ಮತ್ತೊಮ್ಮೆ ಕಿರಿಕ್ ಮಾಡಿಕೊಳ್ಳಬೇಡಿ ಅಂತಾ ಮನವಿ ಮಾಡಿದ್ದಾರೆ. ಹಾಗೇ ಇಸ್ರೇಲ್ ಸೇನೆಗೆ ಕೂಡ ಈ ವಿಚಾರವಾಗಿ ಬುದ್ಧಿ ಮಾತು ಹೇಳಿರುವ ಟ್ರಂಪ್, ಇರಾನ್ ಸೇನೆಗೂ ಮನವಿ ಮಾಡಿಕೊಂಡಿದ್ದಾರೆ. ಹೀಗೆ ಮತ್ತೊಮ್ಮೆ ಇರಾನ್ & ಇಸ್ರೇಲ್ ನಡುವೆ ವಾರ್ ಶುರುವಾಗದೇ ಇರಲಿ ಅನ್ನೋದು ಟ್ರಂಪ್ ಉದ್ದೇಶವಾಗಿದೆ. ಆದರೆ ಟ್ರಂಪ್ ಮಾತನ್ನ ಇರಾನ್ & ಇಸ್ರೇಲ್ ಕೇಳುತ್ತವಾ? ಅನ್ನೋದನ್ನ ಕಾದು ನೋಡಬೇಕಿದೆ.












Click it and Unblock the Notifications