Russia-Ukrain War: ರಷ್ಯಾ-ಉಕ್ರೇನ್‌ ಯುದ್ಧಕ್ಕೆ ತೆರೆ? ಕದನ ವಿರಾಮಕ್ಕೆ ಕರೆ ನೀಡಿದ ಟ್ರಂಪ್, ಪುಟಿನ್

ರಷ್ಯಾ-ಉಕ್ರೇನ್ ಯುದ್ಧ ಕೊನೆಯಾಗಲು ಸಮಯ ಹತ್ತಿರವಾದಂತೆ ಕಾಣುತ್ತಿದೆ. ಎರಡೂ ದೇಶಗಳ ಯುದ್ಧದಿಂದ ಜರ್ಝರಿತವಾಗಿದೆ. ಅಮೆರಿಕದ ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಯುದ್ಧಕ್ಕೆ ಬ್ರೇಕ್ ಹಾಕುವ ಪ್ರಯತ್ನಕ್ಕೆ ಆರಂಭಿಕ ಯಶಸ್ಸು ಸಿಕ್ಕಿದೆ. ಮಂಗಳವಾರ ಉಭಯ ನಾಯಕರ ನಡುವೆ ಸುಮಾರು ಎರಡು ಗಂಟೆಗಳ ಕಾಲ ದೂರವಾಣಿ ಸಂವಾದ ನಡೆದ ಬಳಿಕ ಕದನ ವಿರಾಮದ ಸೂಚನೆ ಸಿಕ್ಕಿದೆ.

ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಉಕ್ರೇನ್‌ನ ಇಂಧನ ಮೂಲಸೌಕರ್ಯವನ್ನು ಗುರಿಯಾಗಿಸಿಕೊಂಡು ನಡೆಸಿದ ದಾಳಿಗಳನ್ನು 30 ದಿನಗಳ ಕಾಲ ನಿಲ್ಲಿಸಲು ಒಪ್ಪಿಕೊಂಡಿದ್ದಾರೆ ಎಂದು ಕ್ರೆಮ್ಲಿನ್ ವರದಿ ಮಾಡಿದೆ. ನಾಲ್ಕು ವರ್ಷಗಳ ಯುದ್ಧಕ್ಕೆ ತಾತ್ಕಾಲಿಕ ಬ್ರೇಕ್ ಬಿದ್ದಿದೆ.

donald trump putin call for end to ukraine war

ಉಭಯ ದೇಶಗಳ ನಡುವಿನ ಸಂಘರ್ಷವನ್ನು ಕೊನೆಗಾಣಿಸಲು ಮೊದಲ ಹೆಜ್ಜೆಯಾಗಿ ಡೊನಾಲ್ಡ್ ಟ್ರಂಪ್ ಮತ್ತು ವ್ಲಾಡಿಮಿರ್ ಪುಟಿನ್ ಇಬ್ಬರೂ "ಇಂಧನ ಮತ್ತು ಮೂಲಸೌಕರ್ಯ ಕದನ ವಿರಾಮ"ವನ್ನು ಬೆಂಬಲಿಸಿದ್ದಾರೆ. ಮಧ್ಯಪ್ರಾಚ್ಯದಲ್ಲಿ ತಕ್ಷಣವೇ ಶಾಂತಿ ಮಾತುಕತೆ ನಡೆಸುವುದಾಗಿ ಶ್ವೇತ ಭವನ ಘೋಷಿಸಿದೆ.

ಶ್ವೇತಭವನ ಅಧಿಕೃತ ಎಕ್ಸ್ ಖಾತೆಯಲ್ಲಿ ಸಂಭಾಷಣೆ ಮಾಹಿತಿಯನ್ನು ಹಂಚಿಕೊಂಡಿದೆ. ಕಪ್ಪು ಸಮುದ್ರದಲ್ಲಿ ಕಡಲ ಕದನ ವಿರಾಮದ ಅನುಷ್ಠಾನದ ಕುರಿತು ತಾಂತ್ರಿಕ ಮಾತುಕತೆಗಳಾದ ಪೂರ್ಣ ಕದನ ವಿರಾಮ ಮತ್ತು ಶಾಶ್ವತ ಶಾಂತಿಯೊಂದಿಗೆ ಪ್ರಾರಂಭವಾಗಲಿದೆ ಎಂದು ಇಬ್ಬರೂ ನಾಯಕರು ಒಪ್ಪಿಕೊಂಡಿದ್ದಾರೆ. ಉಕ್ರೇನ್‌ನಲ್ಲಿನ ಯುದ್ಧವು ಉಕ್ರೇನ್ ಮತ್ತು ರಷ್ಯಾ ಎರಡಕ್ಕೂ ವಿನಾಶಕಾರಿ ನಷ್ಟಗಳಿಗೆ ಕಾರಣವಾಗಿದೆ ಎಂದು ಇಬ್ಬರೂ ನಾಯಕರು ಒಪ್ಪಿಕೊಂಡಿದ್ದಾರೆ ಎಂದು ತಿಳಿಸಿದೆ.

ಈ ಯುದ್ಧದಲ್ಲಿ ಉಕ್ರೇನ್ ಮತ್ತು ರಷ್ಯಾ ಎರಡೂ ಖರ್ಚು ಮಾಡುತ್ತಿರುವ ರಕ್ತ ಮತ್ತು ನಿಧಿಯನ್ನು ತಮ್ಮ ಜನರ ಅಗತ್ಯಗಳಿಗಾಗಿ ಖರ್ಚು ಮಾಡುವುದು ಉತ್ತಮ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. ಯುದ್ದ ಎಂದಿಗೂ ಪ್ರಾರಂಭವಾಗಬಾರದಿತ್ತು ಮತ್ತು ಪ್ರಾಮಾಣಿಕ ರಾಜತಾಂತ್ರಿಕ ಪ್ರಯತ್ನಗಳ ಮೂಲಕ ಬಹಳ ಹಿಂದೆಯೇ ಇದಕ್ಕೆ ಪರಿಹಾರ ಕಂಡುಕೊಳ್ಳಬೇಕಿತ್ತು ಎಂದು ಹೇಳಿದೆ.

ಷರತ್ತು ವಿಧಿಸಿದ ಪುಟಿನ್

ಹೇಳಿಕೆಯಲ್ಲಿ ಕ್ರೆಮ್ಲಿನ್ ಯುದ್ದವನ್ನು ನಿಲ್ಲಿಸಲು ಸಹಾಯ ಮಾಡುತ್ತಿರುವ ಡೊನಾಲ್ಡ್ ಟ್ರಂಪ್‌ಗೆ ಪುಟಿನ್ ಕೃತಜ್ಞತೆ ವ್ಯಕ್ತಪಡಿಸಿದ್ದಾರೆ ಎಂದು ತಿಳಿಸಿದೆ. ಆದರೂ ಕದನ ನಿಲ್ಲಿಸಲು ಪುಟಿನ್ ಷರತ್ತು ವಿಧಿಸಿದ್ದಾರೆ, ಮೊದಲು ಉಕ್ರೇನ್‌ಗೆ ಸಿಗುತ್ತಿರುವ ವಿದೇಶಿ ಮಿಲಿಟರಿ ಸಹಾಯವನ್ನು ತಕ್ಷಣವೇ ನಿಲ್ಲಿಸಬೇಕು, ಉಕ್ರೇನ್ ಜೊತೆ ಗುಪ್ತಚರ ಮಾಹಿತಿ ಹಂಚಿಕೊಳ್ಳಬೇಕು ಎಂದು ಹೇಳಿದ್ದಾರೆ.

ಸಂಘರ್ಷದ ಉಲ್ಬಣವನ್ನು ತಡೆಗಟ್ಟಲು ಮತ್ತು ರಾಜಕೀಯ ಮತ್ತು ರಾಜತಾಂತ್ರಿಕ ವಿಧಾನಗಳ ಮೂಲಕ ಅದರ ಪರಿಹಾರದತ್ತ ಕೆಲಸ ಮಾಡಲು ಪ್ರಮುಖ ಷರತ್ತು ವಿದೇಶಿ ಮಿಲಿಟರಿ ನೆರವನ್ನು ಸಂಪೂರ್ಣವಾಗಿ ನಿಲ್ಲಿಸುವುದು ಮತ್ತು ಕೈವ್‌ಗೆ ಗುಪ್ತಚರ ಮಾಹಿತಿಯನ್ನು ಒದಗಿಸುವುದು ಎಂದು ಷರತ್ತು ವಿಧಿಸಿರುವುದಾಗಿ ಕ್ರೆಮ್ಲಿನ್ ಹೇಳಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+