Donald Trump: ಅಮೆರಿಕದಿಂದ ಎಲ್ಲಾ ದೇಶಗಳಿಗೆ ಕೊಡುತ್ತಿದ್ದ ಹಣ ಸೀಜ್: ಟ್ರಂಪ್ ಆದೇಶ!

ವಿಶ್ವದ ಸೂಪರ್‌ ಪವರ್‌ ರಾಷ್ಟ್ರ ಹಾಗೂ ದೊಡ್ಡಣ್ಣ ಅಂತಲೇ ಖ್ಯಾತಿ ಗಳಿಸಿರುವ ಅಮೆರಿಕ ಇದೀಗ ವಿಶ್ವವೇ ಶಾಕ್‌ಗೆ ಒಳಗಾಗುವ ನಿರ್ಧಾರವೊಂದನ್ನು ತೆಗೆದುಕೊಂಡಿದೆ. ಅಮೆರಿಕದ ನೂತನ ಅಧ್ಯಕ್ಷರಾಗಿ ಡೊನಾಲ್ಡ್‌ ಟ್ರಂಪ್‌ ಅವರು ಅಧಿಕಾರ ಸ್ವೀಕರಿಸಿದ ಬೆನ್ನಲ್ಲೇ ಅಮೆರಿಕದ ವಿದೇಶಾಂಗ ನೀತಿ, ಆರ್ಥಿಕ ಹಾಗೂ ತೆರಿಗೆ ಸೇರಿದಂತೆ ಹಲವು ವಿಷಯಗಳಲ್ಲಿ ಮಹತ್ವದ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ. ಡೊನಾಲ್ಡ್‌ ಟ್ರಂಪ್‌ ಅವರು ಜನವರಿ 20ಕ್ಕೆ ಪ್ರಮಾಣವಚನ ಸ್ವೀಕರಿಸಿದ್ದು, ನಾಲ್ಕು ದಿನದಲ್ಲಿ 100ಕ್ಕೂ ಹೆಚ್ಚು ಕಡತಗಳಿಗೆ ಸಹಿ ಹಾಕಿದ್ದಾರೆ. ಡೊನಾಲ್ಡ್‌ ಟ್ರಂಪ್ ಅವರ ಅಮೆರಿಕ ಫಸ್ಟ್‌ ಎನ್ನುವ ನೀತಿಯಿಂದ ವಿಶ್ವದ ವಿವಿಧ ದೇಶಗಳಿಗೆ ನೀಡಲಾಗುತ್ತಿದ್ದ ಆರ್ಥಿಕ ನೆರವಿಗೆ ಬ್ರೇಕ್‌ ಬಿದ್ದಿದೆ. ಅಮೆರಿಕದಿಂದ ವಿಶ್ವದ ವಿವಿಧ ರಾಷ್ಟ್ರಗಳಿಗೆ ನೀಡಲಾಗುತ್ತಿದ ಆರ್ಥಿಕ ನೆರವನ್ನು ತಡೆಹಿಡಿಯಲಾಗಿದೆ. ವಿದೇಶಿ ನೆರವು ನೀಡಲಾಗುತ್ತಿದ್ದ ಎಲ್ಲಾ ಖಾತೆಗಳನ್ನು ಸೀಜ್‌ ಮಾಡಲಾಗಿದೆ.

ವಿಶ್ವದ ವಿವಿಧ ರಾಷ್ಟ್ರಗಳಿಗೆ ಭಾರೀ ದೊಡ್ಡ ಮಟ್ಟದ ಆರ್ಥಿಕ ನೆರವನ್ನು ಅಮೆರಿಕ ಕೊಡುತ್ತಿದೆ. ಇದೀಗ ಅಮೆರಿಕದಿಂದ ಕೊಡಲಾಗುತ್ತಿರುವ ಎಲ್ಲಾ ಮಾದರಿಯ ವಿದೇಶಿ ನೆರವುಗಳನ್ನು ನಿಲ್ಲಿಸಲು ಸೂಚನೆ ನೀಡಲಾಗಿದೆ. ಹೊಸ ಆರ್ಥಿಕ ನೆರವನ್ನು ನೀಡದಂತೆ ಅಮೆರಿಕದ ರಾಜ್ಯಗಳಿಗೆ ಅಮೆರಿಕದ ವಿದೇಶಾಂಗ ಇಲಾಖೆಯಿಂದ ನಿರ್ದೇಶನ ನೀಡಲಾಗಿದೆ. ಆದರೆ ಇದರಲ್ಲಿ ಇಸ್ರೇಲ್‌ ಹಾಗೂ ಈಜಿಪ್ಟ್‌ ದೇಶಗಳಿಗೆ ಮಾತ್ರ ವಿನಾಯಿತಿ ನೀಡಲಾಗಿದೆ. ಈ ಎರಡು ದೇಶಗಳಿಗೆ ತುರ್ತು ಆಹಾರ ಸರಬರಾಜು ಹಾಗೂ ಮಿಲಿಟರಿ ನೆರವಿಗೆ ವಿನಾಯಿತಿ ಕೊಡಲಾಗಿದೆ. ಉಳಿದಂತೆ ಅಮೆರಿಕವನ್ನೇ ನಂಬಿಕೊಂಡಿರುವ ಉಕ್ರೇನ್‌ ದೇಶಕ್ಕೂ ಶಾಕ್‌ ಕೊಡಲಾಗಿದೆ.

Donald Trump Orders Freeze on US Money Being Given to all Countries

ಅಮೆರಿಕ ವಿಶ್ವಕ್ಕೆ ದೊಡ್ಡಣ್ಣನಂತೆ ಇದೆ. ದೊಡ್ಡಣ್ಣನ ಸ್ಥಾನದ ಗರಿಮೆಗೆ ತಕ್ಕಂತೆ ವಿಶ್ವದಲ್ಲಿ ಹಿಂದುಳಿದಿರುವ ಹಾಗೂ ಅಭಿವೃದ್ಧಿ ಹಂತದಲ್ಲಿ ಇರುವ ದೇಶಗಳಿಗೆ ಅಮೆರಿಕ ಆರ್ಥಿಕ ನೆರವು ಹಾಗೂ ಸಾಲವನ್ನು ಸಹ ಕೊಡುತ್ತಿದೆ. ಅಲ್ಲದೆ ಆರೋಗ್ಯ, ಶಿಕ್ಷಣ, ಉದ್ಯೋಗ ತರಬೇತಿ, ಭ್ರಷ್ಟಾಚಾರ ತಡೆ ಭದ್ರತಾ ನೆರವು ಹಾಗೂ ಅಭಿವೃದ್ಧಿ ವಿಚಾರಗಳಿಗೆ ಅಮೆರಿಕ ದೇಶವನ್ನೇ ಹಲವು ರಾಷ್ಟ್ರಗಳು ನಂಬಿಕೊಂಡಿವೆ. ಭಾರತ ಸೇರಿದಂತೆ ವಿಶ್ವದ ಬಹುತೇಕ ರಾಷ್ಟ್ರಗಳು ಒಂದಿಲ್ಲೊಂದು ಕಾರಣಕ್ಕೆ ಅಮೆರಿಕದ ಮೇಲೆ ಅವಲಂಬಿತವಾಗಿವೆ. ಇದೀಗ ಈ ಮಾದರಿಯ ಶತಕೋಟಿ ಡಾಲರ್‌ ಅನುದಾನವನ್ನು ತಡೆಹಿಡಿಯಲು ಮುಂದಾಗಿದೆ. ವಿಶ್ವದ ರಾಷ್ಟ್ರಗಳಿಗೆ ಕೊಡುವ ಹೊಸ ಅನುದಾನಗಳನ್ನು ಸೀಜ್ ಮಾಡಲಾಗಿದೆ.

ವಿಶ್ವದ ಯಾವುದೇ ದೇಶಕ್ಕಿಂತಲೂ ಅಮೆರಿಕ ಉಳಿದ ದೇಶಗಳಿಗೆ ಆರ್ಥಿಕ ನೆರವು ಕೊಡುತ್ತದೆ. 2023ನೇ ಸಾಲಿನಲ್ಲಿ 60 ಶತಕೋಟಿ ಡಾಲರ್‌ ನೆರವನ್ನು ಅಮೆರಿಕ ಕೊಟ್ಟಿತ್ತು. ಇದು ಅಮೆರಿಕದ ಬಜೆಟ್‌ನ ಶೇ 1ರಷ್ಟು ಮೊತ್ತವಾಗಿದೆ. ಇದೀಗ ಅತಿ ತುರ್ತು ಪರಿಹಾರ ಬಿಟ್ಟು ಎಲ್ಲಾ ದೇಶಗಳಿಗೆ ಅರ್ಥಿಕ ನೆರವು ಕೊಡುವುದನ್ನು ನಿಲ್ಲಿಸಲು ಅಮೆರಿಕ ಆದೇಶ ಮಾಡಿದೆ.

ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ಅವರು ಈ ಆದೇಶವನ್ನು ಮಾಡಿದ್ದಾರೆ. ಯುದ್ಧದಿಂದ ಆಹಾರ, ಆರ್ಥಿಕ ಹಾಗೂ ಕ್ಷಾಮದಂತಹ ಸಂಕಷ್ಟದಲ್ಲಿರುವ ಸುಡಾನ್‌ಗೆ ಮಾತ್ರ ವಿನಾಯಿತಿ ನೀಡಲಾಗಿದೆ. ಅಲ್ಲದೆ ಇಸ್ರೇಲ್‌ ಹಾಗೂ ಈಜಿಪ್ಟ್‌ ಸಹ ಇದರಲ್ಲಿ ಸೇರಿದೆ.

ತುರ್ತು ನೆರವು: ಮಾನವೀಯ ದೃಷ್ಟಿಯಿಂದ ಕೆಲವೊಂದು ತುರ್ತು ಹಾಗೂ ಆರೋಗ್ಯ ಸೇವೆಗಳಿಗೆ ನೀಡುವ ನೆರವನ್ನು ಮುಂದುವರಿಸಲು ಅಮೆರಿಕ ನಿರ್ಧರಿಸಿದೆ. ಆಸ್ಪತ್ರೆಗಳು, ಔಷಧಿ ಸೇರಿದಂತೆ ತುರ್ತು ಆರೋಗ್ಯ ಸೇವೆಗಳಿಗೆ ನಿರ್ದಿಷ್ಟ ವಿನಾಯಿತಿ ಕೊಡುವುದಾಗಿ ಅಮೆರಿಕ ಹೇಳಿದೆ.
ಆದರೆ, ಏಡ್ಸ್‌ ಜಾಗೃತಿ ಹಾಗೂ ಪರಿಹಾರ ಮೊತ್ತವನ್ನು ಸಹ ತಡೆಹಿಡಿಯಲಾಗಿದೆ. ಅಮೆರಿಕದ ಈ ಯೋಜನೆಯ ಮೂಲಕ ವಿಶ್ವದ 25 ಮಿಲಿಯನ್‌ ಜನರನ್ನು ಕಾಪಾಡಲಾಗಿತ್ತು. ಇಂತಹ ವಿಶೇಷವಾದ ಯೋಜನೆಗಳಿಗೂ ಟ್ರಂಪ್‌ ಕೊಕ್ಕೆ ಹಾಕಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+