ಕಮಲಾ ಹ್ಯಾರಿಸ್ ಬಗ್ಗೆ ಮತ್ತೆ ವಿವಾದಾತ್ಮಕ ಹೇಳಿಕೆ ನೀಡಿದ ಡೊನಾಲ್ಡ್ ಟ್ರಂಪ್!

ಅಮೆರಿಕ ಅಧ್ಯಕ್ಷೀಯ ಚುನಾವಣೆ ಮುಗಿಯುವ ತನಕ ಕೂಡ ಡೊನಾಲ್ಡ್ ಟ್ರಂಪ್ ಅವರು ತಮ್ಮ ವಿವಾದಾತ್ಮಕ ಹೇಳಿಕೆಗಳನ್ನ ನಿಲ್ಲಿಸುವುದಿಲ್ಲ ಅಂತಾ ಕಾಣುತ್ತದೆ. ಯಾಕಂದ್ರೆ ಇದೇ ರೀತಿ ಒಂದಲ್ಲ ಒಂದು ಡಬಲ್ ಮೀನಿಂಗ್ & ವಿವಾದ ಸೃಷ್ಟಿಸುವ ಹೇಳಿಕೆಗಳನ್ನು ಮಾನ್ಯ ಮಾಜಿ ಅಧ್ಯಕ್ಷರಾದ ಡೊನಾಲ್ಡ್ ಟ್ರಂಪ್ ಅವರು ನೀಡುತ್ತಿದ್ದಾರೆ. ಇದು ಜಾಗತಿಕ ಮಟ್ಟದ ಮಾಧ್ಯಮಗಳಲ್ಲಿ ದೊಡ್ಡ ಸುದ್ದಿಯಾಗುತ್ತಿದ್ದು, ಭಾರಿ ದೊಡ್ಡ ಚರ್ಚೆಗೂ ವೇದಿಕೆ ಒದಗಿಸಿದೆ.

ಡೊನಾಲ್ಡ್ ಟ್ರಂಪ್ ವಿವಾದಗಳ ಸರದಾರ ಎಂಬ ಕುಖ್ಯಾತಿ ಕೂಡ ಪಡೆದವರು. ಯಾಕಂದ್ರೆ ಡೊನಾಲ್ಡ್ ಟ್ರಂಪ್ ಅಧ್ಯಕ್ಷರಾಗಿ ಆಯ್ಕೆ ಆಗಿದ್ದ ಮೊದಲನೇ ಅವಧಿಯಲ್ಲಿ ಕೂಡ ಸಿಕ್ಕಾಪಟ್ಟೆ ಕಾಂಟ್ರವರ್ಸಿ ಮಾಡಿಕೊಂಡರು. ಇದೇ ಕಾರಣಕ್ಕೆ ಅವರು 2016 ರಲ್ಲಿ ಅಧ್ಯಕ್ಷರಾಗಿ ಆಯ್ಕೆ ಆಗಿದ್ದರೂ 2020 ರಲ್ಲಿ ಹೀನಾಯವಾಗಿ ಸೋತರು. 2020ರ ಅಮೆರಿಕ ಅಧ್ಯಕ್ಷೀಯ ಚುನಾವಣೆ ಅಖಾಡದಲ್ಲಿ ಜೋ ಬೈಡನ್ ಗೆದ್ದಿದ್ದರು. ಇದಕ್ಕೆಲ್ಲಾ ಕಾರಣವಾಗಿದ್ದು ಡೊನಾಲ್ಡ್ ಟ್ರಂಪ್ ಅವರ ಮಾತುಗಳು ಎಂಬ ಆರೋಪ ಇತ್ತು. ಹೀಗಿದ್ದಾಗಲೇ ಇದೀಗ ಟ್ರಂಪ್ ಅವರ ಎದುರು ಕಮಲಾ ಹ್ಯಾರಿಸ್ ಸ್ಪರ್ಧೆ ಮಾಡಿದ್ದು, ಇದೀಗ ಮತ್ತೆ ಅದೇ ರೀತಿಯಾಗಿ ಮಾತನಾಡ್ತಿದ್ದಾರೆ ಮಾಜಿ ಅಧ್ಯಕ್ಷ ಟ್ರಂಪ್!

Donald Trump Once Again Said This Against Kamala Harris

ಕಮಲಾ ಅವರಿಗಿಂತ ನಾನೇ ಸುಂದರ!

ಅಮೆರಿಕದಲ್ಲಿ ಚುನಾವಣೆ ನಡೆಯುತ್ತಿರುವ ಕಾರಣಕ್ಕೆ ಅಲ್ಲಿನ ಖಾಸಗಿ ಮ್ಯಾಗ್‌ಜಿನ್ ಒಂದು ಕಮಲಾ ಹ್ಯಾರಿಸ್ ಅವರ ಫೋಟೋ ಪ್ರಕಟಿಸಿತ್ತು. ಈ ಫೋಟೋ ಬಗ್ಗೆ ಕಮೆಂಟ್ ಮಾಡಿ ಹೊಸ ವಿವಾದ ಸೃಷ್ಟಿ ಮಾಡಿದ್ದಾರೆ ಟ್ರಂಪ್ ಎಂಬ ಆರೋಪ ಕೇಳಿಬಂದಿದೆ. ಅದು ಏನಂದ್ರೆ ಮ್ಯಾಗ್‌ಜಿನ್ ಅಲ್ಲಿ ಪ್ರಕಟವಾದ ಕಮಲಾ ಹ್ಯಾರಿಸ್ ಅವರ ಫೋಟೋಗಿಂತ ನಾನೇ ಚೆನ್ನಾಗಿ ಇದ್ದೀನಿ ಅಂತಾ ಟ್ರಂಪ್ ಹೇಳಿದ್ದಾರೆ, ಚುನಾವಣಾ ಪ್ರಚಾರ ಸಮಯದಲ್ಲಿ ಈ ರೀತಿಯಾಗಿ ಹೇಳಿಕೆ ನೀಡಿದ್ದಾರೆ ಡೊನಾಲ್ಡ್ ಟ್ರಂಪ್ ಅವರು. ಇದು ಭಾರಿ ದೊಡ್ಡ ಚರ್ಚೆಗೆ ವೇದಿಕೆಯ ಒದಗಿಸಿದೆ ಈಗ.

ಟ್ರಂಪ್ ಸೋಲ್ತಾರಾ? ಗೆಲ್ತಾರಾ?

2020ರ ಅಮೆರಿಕ ಅಧ್ಯಕ್ಷೀಯ ಚುನಾವಣೆ ಸೋಲಿನ ನಂತರ ಡೊನಾಲ್ಡ್ ಟ್ರಂಪ್ ಅವರಿಗೆ ಮತ್ತೊಮ್ಮೆ ಅಧ್ಯಕ್ಷನಾಗುವ ಆಸೆ ಇತ್ತು. ಇದೇ ಕಾರಣಕ್ಕೆ ಡೊನಾಲ್ಡ್ ಟ್ರಂಪ್ ಮತ್ತೊಮ್ಮೆ, ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಆಗಿ 2024ರ ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧೆಯನ್ನ ಕೂಡ ಮಾಡಿದ್ದಾರೆ. ಪರಿಸ್ಥಿತಿ ಹೀಗಿದ್ದಾಗ ಬೈಡನ್ ವಿರುದ್ಧ ಟ್ರಂಪ್ ಗೆದ್ದೇ ಗೆಲ್ಲುತ್ತಾರೆಂಬ ಭರವಸೆ ಇತ್ತು. ಕೆಲ ತಿಂಗಳ ಹಿಂದೆ ಡೊನಾಲ್ಡ್ ಟ್ರಂಪ್ ಪರವಾಗಿ ಅಲೆ ಹೇಗಿತ್ತು ಅಂದ್ರೆ, ಇನ್ನೇನು ಚುನಾವಣೆ ನಡೆಸುವುದೇ ಬೇಡ ಟ್ರಂಪ್ ಗೆಲ್ಲುವುದು ಗ್ಯಾರಂಟಿ ಎನ್ನಲಾಗಿತ್ತು. ಆದ್ರೆ ಯಾವಾಗ ಜೋ ಬೈಡನ್ ಅಮೆರಿಕ ಅಧ್ಯಕ್ಷೀಯ ಚುನಾವಣೆ ಬಿಟ್ಟು ಹಿಂದೆ ಸರಿದರೋ, ಆ ನಂತರವೇ ಡೊನಾಲ್ಡ್ ಟ್ರಂಪ್‌ಗೆ ಸಮಸ್ಯೆ ಎದುರಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+