Cryptocurrency: ಅಮೆರಿಕ ಅಧ್ಯಕ್ಷ ಟ್ರಂಪ್‌ಗೆ ಪೈಪೋಟಿ ಕೊಟ್ಟ ಪತ್ನಿ ಮೆಲಾನಿಯಾ ಟ್ರಂಪ್!
Cryptocurrency: ಅಮೆರಿಕದಲ್ಲಿ ನೂತನ ಅಧ್ಯಕ್ಷ ಡೊನಾಲ್ಡ್ ಅವರು ಪ್ರಮಾಣ ವಚನ ಸ್ವೀಕರಿಸುವುದಕ್ಕೆ ಇನ್ನೇನು ಕೆಲವೇ ಗಂಟೆಗಳು ಬಾಕಿ ಉಳಿದಿವೆ. ಡೊನಾಲ್ಡ್ ಟ್ರಂಪ್ ಅವರು ಅಧಿಕಾರ ಸ್ವೀಕರಿಸುವ ಮುನ್ನವೇ ಅಮೆರಿಕದಲ್ಲಿ ಹಲವು ಮಹತ್ವದ ಬೆಳವಣಿಗೆಗಳು ನಡೆದಿವೆ. ಅಮೆರಿಕದ ಅಧ್ಯಕ್ಷರಾದ ಡೊನಾಲ್ಡ್ ಟ್ರಂಪ್ ಅವರ ಪತ್ನಿ ಮೆಲಾನಿಯಾ ಅವರು ಸಹ ಟ್ರಂಪ್ ಜೊತೆ ಜೊತೆಗೆ ಗ್ರ್ಯಾಂಡ್ ಎಂಟ್ರಿ ಕೊಟ್ಟಿದ್ದಾರೆ. ಮೆಲಾನಿಯಾ ಟ್ರಂಪ್ ಅವರು ತಮ್ಮದೆ ಕ್ರಿಪ್ಟೋಕರೆನ್ಸಿಯನ್ನು ಬಿಡುಗಡೆ ಮಾಡಿದ್ದು. ಇದು ಭಾರೀ ಸಂಚಲನ ಸೃಷ್ಟಿಗೆ ಕಾರಣವಾಗಿದೆ. ಟ್ರಂಪ್ ಅವರು ಅಧಿಕಾರಕ್ಕೆ ಬರುತ್ತಿದ್ದಂತೆಯೇ ಕ್ರಿಪ್ಟೋಕರೆನ್ಸಿ ಭಾರೀ ಸಂಚನವನ್ನೇ ಸೃಷ್ಟಿ ಮಾಡಿದೆ. ಇದೀಗ ಮೆಲಾನಿಯಾ ಅವರು ಸಹ ಇದಕ್ಕೆ ಎಂಟ್ರಿ ಕೊಟ್ಟಿದ್ದಾರೆ.
ಕ್ರಿಪ್ಟೋಕರೆನ್ಸಿ ಎನ್ನುವುದು ಡಿಜಿಟಲ್ ಕರೆನ್ಸಿಯಾಗಿದೆ. ಟ್ರಂಪ್ ಅವರು ಅಧಿಕಾರಕ್ಕೆ ಬರುತ್ತಿದ್ದಂತೆಯೇ ಇದಕ್ಕೆ ಸಿಕ್ಕಾಪಟ್ಟೆ ಡಿಮ್ಯಾಂಡ್ ವ್ಯಕ್ತವಾಗಿದೆ. ಟ್ರಂಪ್ ಅವರ ಪತ್ನಿ ಮೆಲಾನಿಯಾ ಅವರು, ಕ್ರಿಪ್ಟೋಕರೆನ್ಸಿಯಲ್ಲಿ ಮೀಮ್ ಕಾಯಿನ್ $MELANIA ವನ್ನು ಬಿಡುಗಡೆ ಮಾಡಿದ್ದಾರೆ. ಮೆಲಾನಿಯಾ ಕ್ರಿಪ್ಟೋಕರೆನ್ಸಿ ಅಮೆರಿಕದಲ್ಲಿ ಭಾರೀ ಸಂಚನವನ್ನೇ ಸೃಷ್ಟಿ ಮಾಡಿದೆ. ಇನ್ನು ಮೀಮ್ ಕಾಯಿನ್ ಟ್ರಂಪ್ ಅವರ ಕ್ರಿಪ್ಟೋಕರೆನ್ಸಿಗೆ $TRUMP ಭಾರೀ ಪೈಪೋಟಿ ನೀಡಿದೆ ಎಂದು ಹೇಳಲಾಗುತ್ತಿದೆ. ಕ್ರಿಪ್ಟೋಕರೆನ್ಸಿಗೆ ಭಾರೀ ಡಿಮ್ಯಾಂಡ್ ಕೂಡ ವ್ಯಕ್ತವಾಗುತ್ತಿದೆ. ಉತ್ಸಾಹಿಗಳಿಂದ ದಟ್ಟಣೆಯನ್ನು ಗಳಿಸಿತು.

ಇನ್ನು ಟ್ರಂಪ್ ಅವರು ಪ್ರಮಾಣವಚನ ಸ್ವೀಕರಿಸುವುದಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಂತೆಯೇ ಈ ಕಡೆ ಅವರ ಪತ್ನಿ ಮೆಲಾನಿಯಾ ಟ್ರಂಪ್ ಅವರು ನೀವು ಇನ್ಮುಂದೆ ಮೀಮ್ ಕ್ರಿಪ್ಟೋಕರೆನ್ಸಿ / ಕಾಯಿನ್ ಖರೀದಿ ಮಾಡಬಹುದು ಅಂತ ಹೇಳಿದ್ದಾರೆ. ಈ ಸಂಬಂಧ ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ಟ್ವೀಟ್ ಮಾಡಿ ಸಂಭ್ರಮ ಹಂಚಿಕೊಂಡಿದ್ದಾರೆ. ಅಧಿಕೃತವಾಗಿ ಮೆಲಾನಿಯಾ ಮೀಮ್ ಕ್ರಿಪ್ಟೋಕರೆನ್ಸಿ ಮಾರುಕಟ್ಟೆಗೆ ಬಂದಿದೆ ನೀವು ಇದನ್ನು ಖರೀದಿ ಮಾಡಬಹುದು ಅಂತ ಹೇಳಿದ್ದಾರೆ. ಡೊನಾಲ್ಡ್ ಟ್ರಂಪ್ ಅವರ ಕ್ರಿಪ್ಟೋ ಕಾಯಿನ್‌ಗೆ ಮೆಲಾನಿಯಾ ಕಾಯಿನ್ ಪೈಪೋಟಿ ಕೊಟ್ಟಿದೆ. ಇನ್ನು ಟ್ರಂಪ್ ಅವರ ಕ್ರಿಪ್ಟೋ ಕಾಯಿನ್‌ನ ಹೂಡಿಕೆಯ ಮೇಲೆ ಮೆಲಾನಿಯಾ ಟ್ರಂಪ್ ಕಾಯಿನ್ ಪರಿಣಾಮ ಬೀರುತ್ತಿದೆ ಅಂತ ಹೇಳಲಾಗಿದೆ.
ಇನ್ನು ಕ್ರಿಪ್ಟೋ ಕರೆನ್ಸಿಗೆ ಸಂಬಂಧಿಸಿದಂತೆ ಡೊನಾಲ್ಡ್ ಟ್ರಂಪ್ ಹಾಗೂ ಮೆಲಾನಿಯಾ ಟ್ರಂಪ್ ಅವರ ನಿರ್ಧಾರಗಳಿಗೆ ಮೆಚ್ಚುಗೆ ವ್ಯಕ್ತವಾಗಿದೆ. ಡೊನಾಲ್ಡ್ ಟ್ರಂಪ್ ಹಾಗೂ ಅವರ ಕುಟುಂಬದವರು ಇದರಲ್ಲಿ ಬುದ್ಧಿವಂತಿಕೆಯಿಂದ ವ್ಯವಹರಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ವಿಮರ್ಶಕರು ನೈತಿಕತೆ ಮತ್ತು ಅಮೆರಿಕದ ನಿಯಮಗಳನ್ನು ಪ್ರಶ್ನೆ ಮಾಡಿದ್ದಾರೆ. ಯಾಕೆಂದರೆ ನಾನು ಅಧಿಕಾರಕ್ಕೆ ಬಂದರೆ ಕ್ರಿಪ್ಟೋ ಕರೆನ್ಸಿ ಮೇಲೆ ಹೊಸ ನಿಯಮ ಹಾಗೂ ಸರಳ ವಿಧಾನ ಅಳವಡಿಸಿಕೊಳ್ಳುತ್ತೇವೆ ಅಂತ ಟ್ರಂಪ್ ಹೇಳಿದ್ದರು. ಇದರ ಬೆನ್ನಲ್ಲೇ ಅವರ ಪತ್ನಿ ಮೆಲಾನಿಯಾ ಟ್ರಂಪ್ ಅವರು ಸಹ ಹೊಸ ಕ್ರಿಪ್ಟೋ ಕರೆನ್ಸಿ ಬಿಡುಗಡೆ ಮಾಡಿರುವುದು ಭಾರೀ ಚರ್ಚೆಗೆ ಕಾರಣವಾಗಿದೆ. ಕ್ರಿಪ್ಟೋ - ಸ್ನೇಹಿ ನಿಯಮಗಳನ್ನು ಜಾರಿಗೆ ತರ್ತೀನಿ ಅಂತ ಟ್ರಂಪ್ ಭರವಸೆ ಕೊಟ್ಟಿದ್ದರು.
ಏನಿದು ಕ್ರಿಪ್ಟೋ ಕರೆನ್ಸಿ: ಇನ್ನು ಕ್ರಿಪ್ಟೋ ಕರೆನ್ಸಿ ಎನ್ನುವುದು ಡಿಜಿಟಲ್ ಅಥವಾ ವರ್ಚುವಲ್ ಕರೆನ್ಸಿಯಾಗಿದೆ. ಇದು ಗುಪ್ತಲಿಪಿಯಿಂದ (ಕ್ರಿಪ್ಟೋಗ್ರಫಿ) ಸುರಕ್ಷಿತವಾಗಿದೆ ಎಂದು ಹೇಳಲಾಗುತ್ತದೆ. ಷೇರು ಮಾರುಕಟ್ಟೆಯ ವಿಧಾನದಂತೆ ಇದ್ದರೂ ಭಿನ್ನವಾಗಿದೆ. ಕ್ರಿಪ್ಟೋ ಕರೆನ್ಸಿಯ ಬೆಲೆಗಳು ವರ್ಷದಿಂದ ವರ್ಷಕ್ಕೆ ಹೆಚ್ಚಳವಾಗುತ್ತಿರುವುದು ಇದರ ಬೇಡಿಕೆ ಹೆಚ್ಚಳವಾಗುವುದಕ್ಕೆ ಕಾರಣವಾಗಿದೆ.












Click it and Unblock the Notifications