ಕಮಲಾ ಹ್ಯಾರಿಸ್ ವಿರುದ್ಧ ಹೊಸ ಅಸ್ತ್ರ ಪ್ರಯೋಗಿಸಲಿದ್ದಾರಾ ಡೊನಾಲ್ಡ್ ಟ್ರಂಪ್?
2024ರ ಅಮೆರಿಕ ಅಧ್ಯಕ್ಷೀಯ ಚುನಾವಣೆ ಕಾವು ಕ್ಷಣಕ್ಷಣಕ್ಕೂ ಹೆಚ್ಚಾಗುತ್ತಿದ್ದು, ಕುತೂಹಲ ಕೆರಳಿಸುತ್ತಿದೆ. ಒಂದು ಕಡೆ ಡೊನಾಲ್ಡ್ ಟ್ರಂಪ್ ಅವರು ಇದೀಗ 2ನೇ ಬಾರಿಗೆ ಅಧ್ಯಕ್ಷರಾಗಿ ಆಯ್ಕೆ ಆಗಬೇಕು ಎಂದು ಪಣತೊಟ್ಟಿದ್ದರೆ, ಮತ್ತೊಂದು ಕಡೆ ಕಮಲಾ ಹ್ಯಾರಿಸ್ ಅಮೆರಿಕದ ಮೊದಲ ಮಹಿಳಾ ಅಧ್ಯಕ್ಷೆಯಾಗಿ ಆಯ್ಕೆ ಆಗಲು ಕಾಯುತ್ತಿದ್ದಾರೆ. ಹೀಗಿದ್ದಾಗ ಮಹತ್ವದ ಬೆಳವಣಿಗೆಗೆ ಕೂಡ ಅಮೆರಿಕ ಸಾಕ್ಷಿ ಆಗುತ್ತಿದ್ದು, ಕಮಲಾ ಹ್ಯಾರಿಸ್ ವಿರುದ್ಧ ಅಮೆರಿಕದ ಮಾಜಿ ಅಧ್ಯಕ್ಷ ಹಾಗೂ ಹಾಲಿ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಹೊಸದಾದ ಅಸ್ತ್ರ ಪ್ರಯೋಗಿಸುವ ಸಾಧ್ಯತೆ ದಟ್ಟವಾಗಿದೆ.
ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಮೊದಲಿಗೆ ಜೋ ಬೈಡನ್ ವಿರುದ್ಧ ಡೊನಾಲ್ಡ್ ಟ್ರಂಪ್ ಗೆಲುವಿಗಾಗಿ ಸೆಣೆಸಾಟ ನಡೆಸಬೇಕಿತ್ತು. ಆದರೆ, ದಿಢೀರ್ ಡೆಮಾಕ್ರಟಿಕ್ ಪಕ್ಷದಲ್ಲಿನ ನಾಯಕರು ತಮ್ಮ ನಿರ್ಧಾರ ಬದಲಿಸಿ ಜೋ ಬೈಡನ್ ಅವರಿಗೆ ಟಿಕೆಟ್ ನೀಡಬಾರದು ಎಂಬ ನಿರ್ಧಾರ ಕೈಗೊಂಡರು. ಯಾಕಂದ್ರೆ ಜೋ ಬೈಡನ್ ಅಕಸ್ಮಾತ್ ಟ್ರಂಪ್ ವಿರುದ್ಧ ನಿಂತಿದ್ದರೆ ಹೀನಾಯವಾಗಿ ಸೋಲುವ ಭಯ ಕಾಡಿತ್ತು. ಅಲ್ಲದೆ ಸಮೀಕ್ಷಗಳು ಕೂಡ ಡೊನಾಲ್ಡ್ ಟ್ರಂಪ್ ಪರವಾಗಿಯೇ ಇದ್ದವು. ಹೀಗಿದ್ದಾಗ ದಿಢೀರ್ ಕಮಲಾ ಹ್ಯಾರಿಸ್ ಅವರನ್ನು ಅಧ್ಯಕ್ಷ ಸ್ಥಾನಕ್ಕೆ ಅಭ್ಯರ್ಥಿಯಾಗಿ ಆಯ್ಕೆ ಮಾಡಲಾಗಿತ್ತು. ಇದು ಟ್ರಂಪ್ ಅವರ ಗೆಲುವಿಗೆ ದೊಡ್ಡ ಅಡ್ಡಿಯ ಸೃಷ್ಟಿ ಮಾಡಿದೆ.

ಡೊನಾಲ್ಡ್ ಟ್ರಂಪ್ ಹೊಸ ಅಸ್ತ್ರ?
ಕಮಲಾ ಹ್ಯಾರಿಸ್, ಡೊನಾಲ್ಡ್ ಟ್ರಂಪ್ ವಿರುದ್ಧ ಸ್ಪರ್ಧೆ ಮಾಡಲು ಮುಂದಾದ ನಂತರದಲ್ಲಿ ಭಾರಿ ದೊಡ್ಡ ದೊಡ್ಡ ಬದಲಾವಣೆಗಳು ಆಗುತ್ತಿವೆ. ಯಾಕಂದ್ರೆ ದಿಢೀರ್ ಡೊನಾಲ್ಡ್ ಟ್ರಂಪ್ ಪರ ಇದ್ದ ಅಲೆ ಮಾಯವಾಗಿ, ಕಮಲಾ ಹ್ಯಾರಿಸ್ ಅವರ ಪರವಾಗಿ ರೂಪುಗೊಂಡಿದೆ. ಇದೇ ಕಾರಣಕ್ಕೆ ಅಮೆರಿಕದ ಚುನಾವಣಾ ಪೂರ್ವ ಸಮೀಕ್ಷೆಗಳು ಕಮಲಾ ಹ್ಯಾರಿಸ್ ಗೆಲ್ಲಿದ್ದಾರೆಂಬ ಉತ್ತರ ನೀಡುತ್ತಿವೆ. ಹೀಗಾಗಿ ಡೊನಾಲ್ಡ್ ಟ್ರಂಪ್ ಅಲರ್ಟ್ ಆಗಿದ್ದು, ಹೊಸ ಅಸ್ತ್ರಗಳನ್ನು ಪ್ರಯೋಗ ಮಾಡಲು ಮುಂದಾಗಿದ್ದಾರೆ ಎಂಬ ಮಾಹಿತಿ ಇದೀಗ ಸಂಚಲನ ಸೃಷ್ಟಿಸಿದೆ.
ನವೆಂಬರ್ 5 ರಂದು ಮತದಾನ
2024ರ ಅಮೆರಿಕ ಅಧ್ಯಕ್ಷೀಯ ಚುನಾವಣೆ ಕಾವು ಕ್ಷಣಕ್ಷಣಕ್ಕೂ ಹೆಚ್ಚಾಗುತ್ತಿದೆ. ಅಲ್ಲದೆ, ಈ ಚುನಾವಣೆ ಜಾಗತಿಕ ಮಟ್ಟದಲ್ಲೂ ದೊಡ್ಡ ಪರಿಣಾಮ ಬೀರುವ ಎಲ್ಲಾ ಮುನ್ಸೂನೆ ಕೂಡ ನೀಡುತ್ತಿದೆ. ಹೀಗಾಗಿ ಗೆಲುವಿಗಾಗಿ ಡೊನಾಲ್ಡ್ ಟ್ರಂಪ್ & ಕಮಲಾ ಹ್ಯಾರಿಸ್ ಭರ್ಜರಿ ಫೈಟ್ ನಡೆಸುತ್ತಿದ್ದಾರೆ. ಇನ್ನೇನು ನವೆಂಬರ್ 5 ರಂದು ಅಮೆರಿಕ ಅಧ್ಯಕ್ಷೀಯ ಚುನಾವಣೆ ಮತದಾನ ಮುಕ್ತಾಯ ಆಗಲಿದ್ದು, ಹೊಸ ಅಧ್ಯಕ್ಷರನ್ನು ನೋಡಲು ಇದೀಗ ಅಮೆರಿಕನ್ನರು ಮಾತ್ರವಲ್ಲ ಇಡೀ ಜಗತ್ತೇ ಕಾತುರದಿಂದ ಕಾಯುತ್ತಿದೆ.












Click it and Unblock the Notifications