Donald Trump 2.0: ಅಮರಿಕ ಅಧ್ಯಕ್ಷರಾದ ಡೊನಾಲ್ಡ್ ಟ್ರಂಪ್: ಪ್ರಮುಖ 10 ನಿರ್ಧಾರ ಘೋಷಣೆ?, ಪಟ್ಟಿ
ಬೆಂಗಳೂರು, ಜನವರಿ 20: ವಿಶ್ವದ ಕಣ್ಣು ಅಮರಿಕಾದ ಮೇಲೆ ಬಿದ್ದಿದೆ. ಡೋನಾಲ್ಡ್ ಟ್ರಂಪ್ ಅವರು ಅಮೆರಿಕಾದ 47ನೇ ಅಧ್ಯಕ್ಷರಾಗಿ ಎರಡನೇ ಭಾರಿಗೆ ಅಧ್ಯಕ್ಷರಾಗಿ ಇಂದು ಸೋಮವಾರ ಜನವರಿ 20ರಂದು ರಾತ್ರಿ ಅಧಿಕಾರ ಸ್ವೀಕರಿಸಲಿದ್ದಾರೆ. ಅಧಿಕಾರ ಸ್ವೀಕರಿಸಿದ ಮೊದಲ ದಿನವೇ ಅವರು ಸುಮಾರು 10 ಪ್ರಮುಖ ನಿರ್ಧಾರಗಳನ್ನು ಘೋಷಣೆಗಳನ್ನು ಮಾಡುವ ಸಾಧ್ಯತೆ ಇದೆ. ಅವುಗಳ ಪಟ್ಟಿ ಇಲ್ಲಿದೆ.
ಕಳೆದ ವರ್ಷ 2024ರಲ್ಲಿ ನಡೆದ ಅಮೆರಿಕಾ ಅಧ್ಯಕ್ಷೀಯ ಚುನಾವಣೆಯಲ್ಲಿ ಡೆಮಾಕ್ರೆಟ್ ಪಕ್ಷದ ಕಮಲಾ ಹ್ಯಾರಿಸ್ ಅವರನ್ನು ಸೋಲಿಸಿದ ಡೋನಾಲ್ಡ್ ಟ್ರಂಪ್ ಎರಡನೇ ಭಾರಿಗೆ ಅಧಿಕಾರಕ್ಕೆ ಬಂದಿದ್ದಾರೆ. ಅಮೆರಿಕಾದಲ್ಲಿ 'ಟ್ರಂಪ್ 2.0' ಅಧಿಕಾರ ನಾಳೆ ಜನವರಿ 21ರಿಂದ ಆರಂಭವಾಗಲಿದೆ.

ಕಳೆದ ಬಾರಿ ಅಧ್ಯಕ್ಷರಾಗಿದ್ದ ಜೋ ಬೈಡನ್ ವಿರುದ್ಧ ಈ ಹಿಂದೆ ಸೋತಿದ್ದ ಡೊನಾಲ್ಡ್ ಟ್ರಂಪ್ ಅವರು ಕೆಲವು ಹಗರಣಗಳಲ್ಲಿ ಸಿಲುಕಿದ್ದರು. ಇದೆಲ್ಲ ಹೊರ ಬರುತ್ತಿದ್ದಂತೆ ಟ್ರಂಪ್ ರಾಜಕೀಯ ಬದುಕು ಅಂತ್ಯವಾಯಿತು ಎನ್ನುವಷ್ಟರಲ್ಲಿ ಫಿನಿಕ್ಸ್ ಹಕ್ಕಿಯಂತೆ ಎದ್ದು ಬಂದಿದ್ದಾರೆ.
ಇಂದು ಟ್ರಪ್ ಅಮೆರಿಕಾ ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ದೇಶ, ವಿದೇಶಗಳಿಂದ ಅನೇಕ ಗಣ್ಯರು ಕಾರ್ಯಕ್ರಮಕ್ಕೆ ಹಾಜರಾಗಲಿದ್ದಾರೆ. ಅಧಿಕಾರ ವಹಿಸಿಕೊಂಡ ಮೊದಲ ದಿನವೇ ಅವರು ಅಮೆರಿಕಾ ಮತ್ತು ಜಾಗತಿಕ ಆರ್ಥಿಕತೆಯ ಮೇಲೆ ಪರಿಣಾಮ ಭೀರುವ ಪ್ರಮುಖ ನಿರ್ಧಾರಗಳನ್ನು ಪ್ರಕಟಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಅವುಗಳು ಯಾವುವು? ಅವುಗಳ ಪಟ್ಟಿ ಇಲ್ಲಿದೆ.
ಟ್ರಂಪ್ 10 ಪ್ರಮುಖ ನಿರ್ಧಾರಗಳು
* ದೇಶದೊಳಕ್ಕೆ ನುಗ್ಗಿರುವ ಅಪಾರ ಪ್ರಮಾಣದ ವಲಸಿಗರ ಗಡಿಪಾರು ನಿರ್ಧಾರ ಪ್ರಕಟ ಸಾಧ್ಯತೆ
* ಯುಎಸ್‌ನಲ್ಲಿ ಜನಿಸಿರುವ ವಿದೇಶಿ ಪ್ರಜೆಗಳ ಮಕ್ಕಳ ಹಕ್ಕುಗಳು ರದ್ದು
* ಅಮೆರಿಕಾದಲ್ಲಿಯೇ ಕಚ್ಚಾತೈಲದ ಉತ್ಪಾದನೆ ಹೆಚ್ಚಿಸಲು ಆದ್ಯತೆ. ಅಗತ್ಯ ನೆರವು ಘೋಷಣೆ
* ಎರಡು ವರ್ಷದ ರಷ್ಯಾ ಮತ್ತು ಉಕ್ರೇನ್ ಯುದ್ಧ ಕೊನೆಗಾಣಿಸುವಿಕೆ
* ಮೆಕ್ಸಿಕೋ, ಕೆನಡಾ ಸೇರಿದಂತೆ ವಿವಿಧ ದೇಶಗಳಿಂದ ಅಮೆರಿಕಾಗೆ ಆಮದಾಗುವ ವಸ್ತುಗಳ ಮೇಲಿನ ಸುಂಕ ಹೆಚ್ಚಳ.
* ಅಮೆರಿಕನ್ ಕಂಪನಿಗಳಲ್ಲಿ ಸ್ಥಳಿಯರಿಗೆ ಉದ್ಯೋಗ ನೀಡುವುದು ಕಡ್ಡಾಯಗೊಳಿಸುವುದು.
* ಅಮೆರಿಕ ವೀಸಾ ವಿತರಣೆಗೆ ಮತ್ತಷ್ಟು ಕಠಿಣ ನಿಯಮ ಜಾರಿಗೊಳಿಸುವ ಸಾಧ್ಯತೆ ಇದೆ.
* ಸೇನೆ ಸೇರಿದಂತೆ ವಿವಿಧ ಕರ್ತವ್ಯದ ಸ್ಥಳಗಳಲ್ಲಿ ತೃತೀಯ ಲಿಂಗಿಗಳ ಹಕ್ಕುಗಳಿಗೆ ನಿರ್ಬಂಧ.
* ಎಲೆಕ್ಟ್ರಿಕ್ ವಾಹನ ಕಡ್ಡಾಯ ಎಂಬ ಮಾಜಿ ಅಧ್ಯಕ್ಷ ಜೋ ಬೈಡೆನ್ ನೀತಿಗೆ ತೀಲಾಂಜಲಿ.
* ರಾಷ್ಟ್ರದ ಭದ್ರತಾ ದೃಷ್ಟಿಯಿಂದ ಮುಕ್ತ ಗಡಿ ನೀತಿಗೂ ಕಡಿವಾಣ ಹಾಕಿ ಹೊಸ ನಿಯಮ ಜಾರಿ ಘೋಷಣೆ ನಿರೀಕ್ಷೆ.












Click it and Unblock the Notifications