H1B Visa: ಭಾರತೀಯರಿಗೆ ಆಘಾತ ನೀಡಿದ ಡೊನಾಲ್ಡ್ ಟ್ರಂಪ್, ಅಮೆರಿಕದಲ್ಲಿ ಕೆಲಸ ಇನ್ನು ಕನಸು ಮಾತ್ರ!
ಭಾರತದ ಜೊತೆಗೆ ಚನ್ನಾಗಿ ಇರುವಂತೆ ನಾಟಕ ಮಾಡುತ್ತಿರುವ ಅಮೆರಿಕ ಈಗ ಮತ್ತೊಮ್ಮೆ ಭಾರತ & ಭಾರತೀಯರ ಬೆನ್ನಿಗೆ ಚೂರಿ ಹಾಕುವ ಕೆಲಸ ಮಾಡಿದೆ. ಭಾರತ ಇದೀಗ ಅಭಿವೃದ್ಧಿ ಹೊಂದುತ್ತಿರುವ ರೀತಿ ನೋಡಿ ಸ್ವತಃ ಅಮೆರಿಕದ ಹೊಟ್ಟೆ ಉರಿಯುತ್ತಿರುವ ರೀತಿ ಕಾಣುತ್ತಿದೆ. ಹೀಗಾಗಿಯೇ ಮನಸ್ಸಿಗೆ ಬಂದ ರೀತಿ ವರ್ತಿಸುತ್ತಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರಿ ದೊಡ್ಡ ಪ್ರಮಾಣದಲ್ಲಿ ಟ್ಯಾಕ್ಸ್ ಹಾಕಿ ಆಘಾತ ನೀಡಿದ್ದರು.
ಇದು ಸಾಲದು ಎನ್ನುವಂತೆ ಭಾರತೀಯರಿಗೆ ಕೆಲಸ ಕೊಡಬೇಡಿ ಅಂತಾ ಕೂಡ ಆಜ್ಞೆ ಮಾಡಿದ್ದರು. ಈಗ ನೋಡಿದರೆ ಭಾರತೀಯರಿಗೆ ಅಮೆರಿಕದ ವೀಸಾ ಸಿಗದಂತೆ ಮಾಡಿ, ತಲ್ಲಣವನ್ನೇ ಎಬ್ಬಿಸಿದ್ದಾರೆ. ಹಾಗೇ ಅಮೆರಿಕ ನೀಡುತ್ತಿದ್ದ ಈ ವೀಸಾ ನಂಬಿ ಬರುತ್ತಿದ್ದವರಿಗೆ ಇದೀಗ ದಾರಿ ಕಾಣದ ಪರಿಸ್ಥಿತಿಯೇ ನಿರ್ಮಾಣ ಆಗಿದೆ. ಈ ಮೂಲಕ, ಡೊನಾಲ್ಡ್ ಟ್ರಂಪ್ ಮತ್ತೊಮ್ಮೆ ಭಾರಿ ದೊಡ್ಡ ತಿಕ್ಕಾಟಕ್ಕೆ ದಾರಿ ಮಾಡಿದ್ದಾರೆ.

ಎಚ್1ಬಿ ವೀಸಾ ಸಂಚಲನ!
ಹೌದು, ಬಹುತೇಕ ಭಾರತೀಯರೇ ಬಳಸುವ ಎಚ್1ಬಿ ವೀಸಾ ನಿಯಮದಲ್ಲಿ ಭಾರಿ ದೊಡ್ಡ ಚೇಂಜ್ ಮಾಡಿದ್ದಾರೆ ಇದೇ ಡೊನಾಲ್ಡ್ ಟ್ರಂಪ್. ಭಾರತ ಮೂಲದ ಕೋಟ್ಯಂತರ ಜನರಿಗೆ, ಅಮೆರಿಕ ಎಂಬ ಕನಸಿನ ಲೋಕದಲ್ಲಿ ಕೆಲಸ ಮಾಡಲು ಸಹಾಯ ಮಾಡಿದ್ದು ಇದೇ ಎಚ್1ಬಿ ವೀಸಾ ನಿಯಮ. ಹೀಗೆ ಭಾರತೀಯರಿಗೆ ಸಹಾಯ ಮಾಡುತ್ತಿದ್ದ ಎಚ್1ಬಿ ವೀಸಾ ಇನ್ನುಮುಂದೆ ಯಾವುದೇ ಕಾರಣಕ್ಕೆ ನಮ್ಮ ಭಾರತ ಮೂಲದವರಿಗೆ ಸುಲಭವಾಗಿ ಸಿಗದಂತೆ ಮಾಡಿದ್ದಾರೆ ಟ್ರಂಪ್. ಹಾಗಾದ್ರೆ ಏನೆಲ್ಲಾ ಬದಲಾವಣೆ ಆಗಿದೆ ಎಚ್1ಬಿ ವೀಸಾ ನಿಯಮದಲ್ಲಿ? ಮುಂದೆ ಓದಿ.
ದಿಢೀರ್ 88,00,000 ರೂಪಾಯಿ ಶುಲ್ಕ!
ಅಮೆರಿಕ ಅಧ್ಯಕ್ಷ ಟ್ರಂಪ್ ಭಾರತೀಯರ ಮತವನ್ನೇ ಪಡೆದು ಆಯ್ಕೆ ಆಗಿದ್ದು ಇದೀಗ ಭಾರತ ಮೂಲದ ಜನರಿಗೆ ಅಮೆರಿಕದಲ್ಲಿ ದೊಡ್ಡ ಸಮಸ್ಯೆ ಮಾಡುತ್ತಿದ್ದಾರೆ. ಕೆಲಸದ ವೀಸಾ ಮೇಲೆ ಭರ್ಜರಿ 1,00,000 ಯುಎಸ್ ಡಾಲರ್ ಅಂದ್ರೆ ಸುಮಾರು 88,00,000 ರೂಪಾಯಿ ಮೀರಿ ಶುಲ್ಕ ವಿಧಿಸುವ ಕುತಂತ್ರದ ಈ ಯೋಜನೆಗೆ ಸಹಿ ಹಾಕಿದ ನಂತರ ತಲ್ಲಣ ಸೃಷ್ಟಿಯಾಗಿದೆ. ಸಾವಿರಾರು ಭಾರತದ ಕಂಪನಿಗಳು ಇದೇ ವೀಸಾ ನಂಬಿ ಭಾರತ ಮೂಲದ ನೌಕರರನ್ನು ಅಮೆರಿಕಗೆ ಕಳುಹಿಸುತ್ತಿವೆ, ಆದರೆ ಇದೀಗ ಟ್ರಂಪ್‌ಗೆ ಏನಾಯ್ತೋ ಗೊತ್ತಿಲ್ಲ ಭಾರತ & ಭಾರತ ಮೂಲದ ನೌಕರರ ವಿರುದ್ಧವೇ ನಿರ್ಣಯ ಕೈಗೊಂಡಿದ್ದಾರೆ. ಅಲ್ಲದೆ ಕಂಪನಿಗಳಿಗೂ ಇದೀಗ ಎಚ್ಚರಿಕೆ ನೀಡಿರುವುದು ಭಾರಿ ಆಕ್ರೋಶಕ್ಕೆ ಕಾರಣವಾಗಿದೆ.












Click it and Unblock the Notifications