ಡೊನಾಲ್ಡ್ ಟ್ರಂಪ್ ಸೋಲುವುದು ಗ್ಯಾರಂಟಿ? ಸಮೀಕ್ಷೆಗಳು ಹೇಳುತ್ತಿರುವುದು ಏನು?
ಅಮೆರಿಕದ ಮಾಜಿ ಅಧ್ಯಕ್ಷ ಹಾಗೂ ಹಾಲಿ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಆಗಿರುವ ಡೊನಾಲ್ಡ್ ಟ್ರಂಪ್ ಅವರು ಪರದಾಡುತ್ತಿದ್ದಾರೆ. ಅಮೆರಿಕ ಅಧ್ಯಕ್ಷೀಯ ಚುನಾವಣೆ ಅಖಾಡದಲ್ಲಿ ಇದೇ ಡೊನಾಲ್ಡ್ ಟ್ರಂಪ್ & ಭಾರತ ಮೂಲದ ಮಹಿಳೆ ಕಮಲಾ ಹ್ಯಾರಿಸ್ ನಡುವೆ ನೇರ ಫೈಟ್ ಆರಂಭ ಆಗಿದೆ. ಇಂತಹ ಸಮಯದಲ್ಲೇ ಸಮೀಕ್ಷೆಗಳು ಕೂಡ ಟ್ರಂಪ್ ವಿರುದ್ಧ ಬರುತ್ತಿವೆ. ಇತ್ತೀಚಿನ ಸಮೀಕ್ಷೆಗಳು ಕೂಡ ಮತ್ತೊಮ್ಮೆ ಡೊನಾಲ್ಡ್ ಟ್ರಂಪ್ ಸೋಲು ಗ್ಯಾರಂಟಿ ಎಂಬ ಭವಿಷ್ಯ ನುಡಿಯುತ್ತಿವೆ!
ಅದು 2016ರ ನವೆಂಬರ್ ತಿಂಗಳು, ಅಮೆರಿಕ ಅಧ್ಯಕ್ಷೀಯ ಚುನಾವಣೆ ಇತಿಹಾಸದಲ್ಲೇ ಹೊಸ ದಾಖಲೆ ಸೃಷ್ಟಿ ಆಗಿತ್ತು. ಡೊನಾಲ್ಡ್ ಟ್ರಂಪ್ ಅವರು ಅದ್ಧೂರಿಯಾಗಿ ಆಯ್ಕೆ ಆಗುವ ಮೂಲಕ ಅಮೆರಿಕ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡರು. ಹೀಗೆ ಅಧಿಕಾರಕ್ಕೆ ಬಂದ ಡೊನಾಲ್ಡ್‌ಗೆ ಭಾರಿ ದೊಡ್ಡ ಸವಾಲುಗಳೇ ಇದ್ದವು, ಆಗಿನ ಕಾಲಘಟ್ಟದಲ್ಲಿ ಬರಾಕ್ ಒಬಾಮ ಒಟ್ಟಾರೆ 2 ಬಾರಿಗೆ ಸತತವಾಗಿ ಅಮೆರಿಕ ಅಧ್ಯಕ್ಷರಾಗಿ ಆಡಳಿತ ನಡೆಸಿದ್ದರು. ಆದರೆ ಬರಾಕ್ ಒಬಾಮ ಅಧಿಕಾರದಿಂದ ಕೆಳಗೆ ಇಳಿದಾಗ ಡೊನಾಲ್ಡ್ ಟ್ರಂಪ್ ಪ್ರಮುಖವಾಗಿ ಅಮೆರಿಕವನ್ನ ದೊಡ್ಡ ದೊಡ್ಡ ಸಂಕಷ್ಟಗಳಿಂದ ಪಾರು ಮಾಡಬೇಕಿತ್ತು. ಆದರೆ ಈ ಮಹಾಶಯ ಮಾಡಿದ್ದು ಮಾತ್ರ ಬರೀ ಕಿರಿಕ್ ಕೆಲಸಗಳನ್ನೇ!

2016 ಗೆಲುವು & 2020ರಲ್ಲಿ ಸೋಲು!
ಹೀಗೆ ಡೊನಾಲ್ಡ್ ಟ್ರಂಪ್ ಅವರು 2016ರ ಚುನಾವಣೆಯಲ್ಲಿ ಗೆದ್ದ ನಂತರ 2020 ರಲ್ಲಿ ಕೂಡ ಸುಲಭವಾಗಿ ಗೆದ್ದು ಅಧಿಕಾರ ವಹಿಸಿಕೊಳ್ಳುವೆ ಎಂದುಕೊಂಡಿದ್ದರು. ಆದರೆ ಆಗಿದ್ದು ಮಾತ್ರ ಉಲ್ಟಾ. ಯಾಕಂದ್ರೆ ಡೊನಾಲ್ಡ್ ಟ್ರಂಪ್ ಅವರು ಅಧಿಕಾರ ವಹಿಸಿಕೊಂಡ ನಂತರ ಅಮೆರಿಕ ಉದ್ಧಾರ ಆಗುವುದು ಬಿಡಿ, ಮೊದಲು ಇದ್ದ ಸ್ಥಿತಿಗಿಂತ ಹೀನಾಯ ಪರಿಸ್ಥಿತಿ ತಲುಪಿತ್ತು. ಆ ದೇಶದಲ್ಲಿ ಕೊರೊನಾ ವಕ್ಕರಿಸಿದ ನಂತರ ಹತ್ತಾರು ಲಕ್ಷ ಜನರು ಜೀವ ಬಿಟ್ಟಿದ್ದರು.
ಈ ಬೆಳವಣಿಗೆ ಅಮೆರಿಕದ ಕೋಟ್ಯಂತರ ಜನರನ್ನ ಸಂಕಷ್ಟದ ಸರಮಾಲೆಗೆ ನೂಕಿತು. ಹೀಗೆಲ್ಲಾ ಇದ್ದಾಗ ಡೊನಾಲ್ಡ್ ಟ್ರಂಪ್ ಅವರನ್ನು 2020ರ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ, ಅಮೆರಿಕದ ಪ್ರಜಾ ಪ್ರಭುಗಳು ಹೀನಾಯವಾಗಿ ಸೋಲಿಸಿದರು. ಇದೀಗ 2024 ರಲ್ಲೂ ಇದೇ ಪರಿಸ್ಥಿತಿ ಎದುರಾಗುವ ಸಾಧ್ಯತೆ ದಟ್ಟವಾಗಿದೆ ಎನ್ನುತ್ತಿವೆ ಸಮೀಕ್ಷೆಗಳು. ಹೀಗಾಗಿ ಟ್ರಂಪ್‌ಗೆ ಹೊಸ ತಲೆನೋವು ಶುರುವಾಗಿದೆ.
ಕಮಲಾ ಹ್ಯಾರಿಸ್ ಗೆಲುವು ಗ್ಯಾರಂಟಿ?
2020ರ ಅಮೆರಿಕ ಅಧ್ಯಕ್ಷೀಯ ಚುನಾವಣೆ ಸೋಲಿನ ನಂತರ ಡೊನಾಲ್ಡ್ ಟ್ರಂಪ್ ಅವರಿಗೆ ಮತ್ತೊಮ್ಮೆ ಅಧ್ಯಕ್ಷನಾಗುವ ಆಸೆ ಇತ್ತು. ಇದೇ ಕಾರಣಕ್ಕೆ ಡೊನಾಲ್ಡ್ ಟ್ರಂಪ್ ಮತ್ತೊಮ್ಮೆ, ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಆಗಿ 2024ರ ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧೆಯನ್ನ ಕೂಡ ಮಾಡಿದ್ದಾರೆ. ಪರಿಸ್ಥಿತಿ ಹೀಗಿದ್ದಾಗ ಬೈಡನ್ ವಿರುದ್ಧ ಟ್ರಂಪ್ ಗೆದ್ದೇ ಗೆಲ್ಲುತ್ತಾರೆಂಬ ಭರವಸೆ ಇತ್ತು.
ಕೆಲವು ತಿಂಗಳ ಹಿಂದೆ ಡೊನಾಲ್ಡ್ ಟ್ರಂಪ್ ಪರವಾಗಿ ಅಲೆ ಹೇಗಿತ್ತು ಅಂದ್ರೆ, ಇನ್ನೇನು ಈ ಚುನಾವಣೆ ನಡೆಸುವುದೇ ಬೇಡ ಟ್ರಂಪ್ ಗೆಲ್ಲುವುದು ಗ್ಯಾರಂಟಿ ಎನ್ನಲಾಗಿತ್ತು. ಆದ್ರೆ ಯಾವಾಗ ಜೋ ಬೈಡನ್ ಅಮೆರಿಕ ಅಧ್ಯಕ್ಷೀಯ ಚುನಾವಣೆ ಬಿಟ್ಟು ಹಿಂದೆ ಸರಿದರೋ, ಆ ನಂತರವೇ ಡೊನಾಲ್ಡ್ ಟ್ರಂಪ್‌ಗೆ ಸಮಸ್ಯೆ ಎದುರಾಗಿದೆ. ಯಾಕಂದ್ರೆ ಕಮಲಾ ಹ್ಯಾರಿಸ್ ಭಾರತ ಮೂಲದ ನಂಟು ಹೊಂದಿದ್ದು, ಈಗ ಹೆಚ್ಚಿನ ಬೆಂಬಲ ಕೂಡ ಪಡೆಯುತ್ತಿದ್ದಾರೆ. ಇತ್ತೀಚಿನ ಸಮೀಕ್ಷೆಗಳ ಪ್ರಕಾರ ಕೂಡ ಕಮಲಾ ಹ್ಯಾರಿಸ್ ಗೆಲುವು ಬಹುತೇಕ ಪಕ್ಕಾ ಆಗಿದೆ.












Click it and Unblock the Notifications