ಭಾರತ ಮೂಲದ ಮಹಿಳೆಯನ್ನು ಅವಮಾನಿಸಿದ ಅಮೆರಿಕ ಮಾಜಿ ಅಧ್ಯಕ್ಷ ಟ್ರಂಪ್?

ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬಾಯಿಗೆ ಬಂದಂತೆ ಮಾತನಾಡುವ ಚಾಳಿಯನ್ನು ಮುಂದುವರಿಸಿದ್ದಾರೆ. ಅದರಲ್ಲೂ ಭಾರತ ಮೂಲದ ನಂಟು ಹೊಂದಿರುವ ಕಮಲಾ ಹ್ಯಾರಿಸ್ ಅವರು ಡೊನಾಲ್ಡ್ ಟ್ರಂಪ್‌ಗೆ ಎದುರಾಳಿ ಆಗಿ, ಅಮೆರಿಕ ಅಧ್ಯಕ್ಷೀಯ ಚುನಾವಣೆ ಅಖಾಡ ಪ್ರವೇಶ ಮಾಡಿದ ನಂತರ ಟ್ರಂಪ್ ಮಾತನಾಡುವ ರೀತಿಯೇ ಬದಲಾಗಿದೆ ಹೋಗಿದೆ. ಇದೇ ವ್ಯಕ್ತಿ ಇದೀಗ ಭಾರತ ಮೂಲದ ಕಮಲಾ ಹ್ಯಾರಿಸ್ ಬಗ್ಗೆ ಏನ್ ಹೇಳಿದ್ದಾರೆ ಗೊತ್ತಾ?

ಭಾರತೀಯರ ಮತಗಳಿಂದಲೇ ಗೆದ್ದು ಡೊನಾಲ್ಡ್ ಟ್ರಂಪ್ ಒಂದು ಬಾರಿ ಅಮೆರಿಕ ಅಧ್ಯಕ್ಷ ಸ್ಥಾನ ಪಡೆದಿದ್ದರು. 2016ರ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ ಗೆಲ್ಲಲು ಭಾರತೀಯರು ನೀಡಿದ ಬೆಂಬಲ ಕೂಡ ದೊಡ್ಡ ಪ್ರಮಾಣದಲ್ಲಿ ಇತ್ತು. ಹೀಗಿದ್ದಾಗ 2020 ರಲ್ಲಿ ತಾವೇ ಮಾಡಿದ ಅಹಂಕಾರ & ಎಡವಟ್ಟುಗಳ ಪರಿಣಾಮ ಹೀನಾಯ ಸೋಲು ಕಂಡಿದ್ದರು ಡೊನಾಲ್ಡ್ ಟ್ರಂಪ್. ಆದರೆ ಈಗ ಇದೇ ಟ್ರಂಪ್ ಭಾರತ ಮೂಲದ ಮಹಿಳೆಯ ಬಗ್ಗೆಯೇ ಬಾಯಿಗೆ ಬಂದಂತೆ ಮಾತನಾಡಿದ್ದಾರಾ? ಬನ್ನಿ ಮುಂದೆ ತಿಳಿಯೋಣ.

Donald Trump Is Said This To The Kamala Harris

ಡೊನಾಲ್ಡ್ ಟ್ರಂಪ್ VS ಭಾರತದ ಮಹಿಳೆ?

ಹೌದು, ಡೊನಾಲ್ಡ್ ಟ್ರಂಪ್‌ಗೆ ಅಮೆರಿಕದ ಕಾನೂನಿನ ಬಗ್ಗೆ ಜ್ಞಾನ ಇದೆಯೋ, ಇಲ್ಲವೋ ಗೊತ್ತಿಲ್ಲ. ಯಾಕಂದ್ರೆ ಭಾರತ ಮೂಲದ ನಂಟು ಹೊಂದಿರುವ ಕಮಲಾ ಹ್ಯಾರಿಸ್ ವಿರುದ್ಧ ಇದೀಗ ಜನಾಂಗೀಯ ದಾಳಿ ನಡೆಸಿದ್ದಾರೆ. ಭಾರತ ಮೂಲದ ಅಮೆರಿಕ ಉಪಾಧ್ಯಕ್ಷೆ ಕಮಲಾ, ಇದೀಗ ಅಧ್ಯಕ್ಷೀಯ ಚುನಾವಣೆಗೆ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಆಗಿ ಸ್ಪರ್ಧೆ ಮಾಡಿದ್ದಾರೆ.

ಆದರೆ ಇದೇ ಕಮಲಾ ಅವರ ವಿರುದ್ಧ ಈಗ ಡೊನಾಲ್ಡ್ ಟ್ರಂಪ್ ಜನಾಂಗೀಯ ದಾಳಿಯನ್ನ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಕಮಲಾ ಹ್ಯಾರಿಸ್ ಕಪ್ಪುವರ್ಣೀಯ ಮಹಿಳೆಯೇ? ಅಥವಾ ಭಾರತೀಯರೇ? ಎಂದು ಟ್ರಂಪ್ ಪ್ರಶ್ನಿಸಿದ್ದಾರೆ. ಮೊದಲಿನಿಂದ ಕೂಡ ಡೊನಾಲ್ಡ್ ಟ್ರಂಪ್ ಇದೇ ರೀತಿ ವಿವಾದ ಸೃಷ್ಟಿಸುವ ಮಾತುಗಳನ್ನ ಆಡುತ್ತಾ ಬಂದಿದ್ದರು. ಈಗಲಾದರೂ ಟ್ರಂಪ್ ಬದಲಾಗುತ್ತಾರಾ? ಎಂಬ ನಿರೀಕ್ಷೆ ಸುಳ್ಳಾಗುತ್ತಿದೆ.

ಉತ್ತರ ನೀಡಿದ ಡೆಮಾಕ್ರಟಿಕ್ ಪಕ್ಷ!

ಡೊನಾಲ್ಡ್ ಟ್ರಂಪ್ ಈ ರೀತಿ ಹೇಸಿಗೆ ಹುಟ್ಟಿಸುವ ಪ್ರಶ್ನೆ ಕೇಳುತ್ತಿದ್ದಾರೆ ಎಂದು ಇದೀಗ ಇಡೀ ಅಮೆರಿಕದ ತುಂಬಾ ಆಕ್ರೋಶ ವ್ಯಕ್ತವಾಗುತ್ತಿದೆ. ಅಲ್ಲದೆ ಟ್ರಂಪ್ ಅವರ ಉದ್ಧಟತನ ತುಂಬಿದ ಹೇಳಿಕೆಗೆ ಡೆಮಾಕ್ರಟಿಕ್ ಪಕ್ಷ ಸರಿಯಾಗಿ ಉತ್ತರ ನೀಡಿದ್ದು ಇದು ಮತದಾರರನ್ನು ಇಬ್ಭಾಗಿಸುವ, ಅಭ್ಯರ್ಥಿಗೆ ಅಗೌರವ ತೋರುವ ಹಳೆಯ ತಂತ್ರ ಎಂದು ಟ್ರಂಪ್ ವಿರುದ್ಧ ಹೊಸ ಅಸ್ತ್ರವನ್ನ ಪ್ರಯೋಗ ಮಾಡಿದೆ. 2024 ರ ನವೆಂಬರ್ 5 ರಂದು ನಡೆಯಲಿರುವ ಅಮೆರಿಕದ ಅಧ್ಯಕ್ಷೀಯ ಚುನಾವಣಾ ಪ್ರಚಾರ ಜೋರಾಗಿದ್ದು, ಟ್ರಂಪ್ ಮತ್ತೊಮ್ಮೆ ಸೋಲಿನ ಸುಳಿಗೆ ಸಿಲುಕುತ್ತಿದ್ದಾರೆ ಎನ್ನುತ್ತಿವೆ ಸಮೀಕ್ಷೆಗಳು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+