ಮೋದಿಯವರ ಭಾಷಾ ಶೈಲಿಯನ್ನು ಅಣಕಿಸಿದ ಡೊನಾಲ್ಡ್ ಟ್ರಂಪ್

Recommended Video

      ನರೇಂದ್ರ ಮೋದಿಯವರ ಮಾತಿನ ಶೈಲಿಯನ್ನ ಅನುಕರಣೆ ಮಾಡಿದ ಡೊನಾಲ್ಡ್ ಟ್ರಂಪ್ | Oneindia Kannada

      ನ್ಯೂಯಾರ್ಕ್, ಜನವರಿ 23: ಅಫ್ಘಾನಿಸ್ತಾನದಲ್ಲಿ ನಡೆದ ಸಭೆಯೊಂದರಲ್ಲಿ ಮಾತನಾಡುತ್ತಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರಧಾನಿ ನರೇಂದ್ರ ಮೋದಿಯವರ ಭಾಷೆಯನ್ನು ಅನುಕರಣೆ ಮಾಡುವ ಮೂಲಕ ಪೇಚಿಗೆ ಸಿಲುಕಿದ್ದಾರೆ.

      ಭಾರತೀಯ ಪ್ರಧಾನಿ ನರೇಂದ್ರ ಮೋದಿಯವರನ್ನು ಟ್ರಂಪ್ ಅಣಕಿಸಿದ ಸುದ್ದಿಯನ್ನು ವಾಷಿಂಗ್ಟನ್ ಪೋಸ್ಟ್ ಪತ್ರಿಕೆ ವರದಿ ಮಾಡಿದೆ. ಕಳೆದ ವರ್ಷ ಪ್ರಧಾನಿ ನರೇಂದ್ರ ಮೋದಿ ಅಮೆರಿಕಕ್ಕೆ ತೆರಳಿದ್ದಾಗ, ಉಭಯ ನಾಯಕರೂ ವಿವಿಧ ವಿಷಯಗಳು ಕುರಿತು ಗಂಭೀರವಾಗಿ ಮಾತುಕತೆ ನಡೆಸಿದ್ದರು.

      ಭಾರತವನ್ನು ಕೊಂಡಾಡುತ್ತ, ಅತ್ತ ಪಾಕಿಸ್ತಾನಕ್ಕೆ ಛೀಮಾರಿ ಹಾಕುವ ಟ್ರಂಪ್ ಇದ್ದಕ್ಕಿದ್ದಂತೇ ಭಾರತೀಯ ಪ್ರಧಾನಿಯನ್ನು ಹಾಸ್ಯಾಸ್ಪದವಾಗಿ ಚಿತ್ರಿಸುವ ಮೂಲಕ ಬಾಲಿಶ ವರ್ತನೆ ಮೆರೆಯುತ್ತಿದ್ದಾರೆ.

      Donald Trump imitates PM Modi's Indian accent in Afghanistan

      ಆದರೆ ವಾಷಿಂಗ್ಟನ್ ಪೋಸ್ಟ್ ಸುಳ್ಳು ಸುದ್ದಿಯನ್ನು ಹರಡುತ್ತಿದೆ ಎಂದು ಟ್ರಂಪ್ ಎಂದಿನಂತೆ ದೂರಿದ್ದಾರೆ. ಇತ್ತೀಚೆಗೆ ತಾನೇ ಅಮೆರಿಕದ ಸುದ್ದಿ ಪತ್ರಿಕೆ, ವಾಹಿನಿಗಳಿಗೆ ಫೇಕ್ ನ್ಯೂಕ್ ಪ್ರಶಸ್ತಿಯನ್ನು ಟ್ರಂಪ್ ಘೋಷಿಸಿದ್ದನ್ನು ಇಲ್ಲಿ ಸ್ಮರಿಸಬಹುದು!

      ಈ ಕುರಿತು ಪ್ರತಿಕ್ರಿಯೆ ನೀಡಿದ ಡೆಮಾಕ್ರೆಟಿಕ್ ಪಕ್ಷದ ಭಾರತೀಯ ಅಮೆರಿಕನ್ ಕಾಂಗ್ರೆಸ್ ಮನ್ ರಾಜಾ ಕೃಷ್ಣಮೂರ್ತಿ, 'ಅಧ್ಯಕ್ಷ ಟ್ರಂಪ್ ಮೋದಿಯವರನ್ನು ಅಣಕಿದ ಸುದ್ದಿ ಕೇಳಿ ದಿಗಿಲಾಯಿತು. ಅಮೇರಿಕನ್ನರನ್ನು ಯಾರೂ ಅವರ ಭಾಷೆಯ ಶೈಲಿಯಿಂದ ಅಳೆಯುವುದಿಲ್ಲ. ಬದಲಾಗಿ ಅವರ ದೇಶದ ಮೌಲ್ಯ ಮತ್ತು ಅವರ ಬದ್ಧತೆಯಿಂದ ಅಳೆಯುತ್ತಾರೆ' ಎಂದು ಟ್ರಂಪ್ ಗೆ ಮಾತಿನ ಛಾಟಿ ಬೀಸಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+