US Elections 2024: ಟ್ರಂಪ್ ಬಂದರು ಟ್ರಂಪ್... ರಷ್ಯಾ & ಉಕ್ರೇನ್ ಯುದ್ಧ ನಿಲ್ಲೋದು ಗ್ಯಾರಂಟಿ!
ಯುದ್ಧ ಬೇಡ ಬೇಡ ಎಂದರೂ ಶುರುವಾಗಿ ಬಿಟ್ಟಿದೆ, ಇಡೀ ಯುರೋಪ್ ಯುದ್ಧಕ್ಕೆ ನಲುಗಿದೆ. ರಷ್ಯಾ & ಉಕ್ರೇನ್ ಕಳೆದ 3 ವರ್ಷಗಳಿಂದ ಕಚ್ಚಾಡುತ್ತಿವೆ. ಒಂದು ಕಡೆ ಉಕ್ರೇನ್ ನ್ಯಾಟೋ ಒಕ್ಕೂಟ ಸೇರಲು ಪ್ರಯತ್ನ ಮಾಡುತ್ತಿದೆ ಎಂಬುದು ರಷ್ಯಾ ಕೋಪಕ್ಕೆ ಕಾರಣವಾಗಿತ್ತು. ಈ ಹಿನ್ನೆಲೆ ಪದೇ ಪದೇ ವಾರ್ನಿಂಗ್ ಕೊಟ್ಟು ಕೊಟ್ಟು, ಘೋರ ಯುದ್ಧ ಶುರು ಮಾಡಿದ್ದರು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರು.
ಹೀಗೆ 2022ರ ಫೆಬ್ರವರಿ ತಿಂಗಳಲ್ಲಿ ಆರಂಭವಾದ ರಷ್ಯಾ & ಉಕ್ರೇನ್ ಯುದ್ಧವು ಇನ್ನೇನು 2025ರ ಫೆಬ್ರವರಿ ತಿಂಗಳಿಗೆ 3 ವರ್ಷ ಪೂರೈಸಲಿದೆ. ಇಂತಹ ಸಮಯದಲ್ಲೇ ಈಗ ಯುದ್ಧ ನಿಲ್ಲಿಸಲು ಅಮೆರಿಕದ ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೂಪರ್ ಮ್ಯಾನ್ ರೀತಿ ಎಂಟ್ರಿ ಕೊಡ್ತಾರಾ? ಟ್ರಂಪ್ ಎಂಟ್ರಿ ಕೊಟ್ಟರೆ ರಷ್ಯಾ ಕೂಡ ಸೈಲೆಂಟ್ ಆಗಿ ಯುದ್ಧ ನಿಲ್ಲಿಸುತ್ತಾ? ಮುಂದೆ ಓದಿ.

ಯುದ್ಧ ನಿಲ್ಲಿಸುತ್ತಾರಾ ಡೊನಾಲ್ಡ್ ಟ್ರಂಪ್?
ಡೊನಾಲ್ಡ್ ಟ್ರಂಪ್ ಅವರು ಚುನಾವಣೆಗೆ ಮೊದಲು ರಷ್ಯಾ & ಉಕ್ರೇನ್ ಯುದ್ಧ ನಿಲ್ಲಿಸುವ ಭರವಸೆ ನೀಡಿದ್ದರು. ತಮ್ಮ ಮಾತಿನ ಪ್ರಕಾರ ಡೊನಾಲ್ಡ್ ಟ್ರಂಪ್ ಈಗ ನಡೆದುಕೊಂಡರೆ, ರಷ್ಯಾ & ಉಕ್ರೇನ್ ಯುದ್ಧ ಕೆಲವೇ ದಿನಗಳಲ್ಲಿ ನಿಂತು ಹೋಗಲಿದೆ. ಯಾಕಂದ್ರೆ ಅಮೆರಿಕ ಈಗ ಉಕ್ರೇನ್‌ಗೆ ನೀಡುತ್ತಿರುವ ಯುದ್ಧ ಪರಿಹಾರ ಅಂದ್ರೆ ಹಣದ ಸಹಾಯ ನಿಲ್ಲಿಸಲಿದೆ.
ಅಮೆರಿಕ ಈಗಾಗಲೇ ಉಕ್ರೇನ್‌ಗೆ ಲಕ್ಷಾಂತರ ಕೋಟಿ ರೂಪಾಯಿ ದಾನ ಮಾಡಿ ಯುದ್ಧದಲ್ಲಿ ಸಹಾಯ ಮಾಡಿದೆ. ಆದರೆ ಇದೀಗ ಅಮೆರಿಕ ಕೂಡ ಬರ್ಬಾದ್ ಆಗಿ ಹೋಗಿದ್ದು, ಯುದ್ಧ ಸಹಾಯ ನಿಲ್ಲಿಸುವ ಸಾಧ್ಯತೆ ದಟ್ಟವಾಗಿದೆ. ಆ ನಂತರ, ಕೈಯಲ್ಲಿ ಕಾಸು ಇಲ್ಲದೆ ಉಕ್ರೇನ್ ತಾನೇ ತಾನಾಗಿ ಸೈಲೆಂಟ್ ಆಗುವ ನಿರೀಕ್ಷೆಯೂ ದಟ್ಟವಾಗಿದೆ. ಹಾಗಾದ್ರೆ ಡೊನಾಲ್ಡ್ ಟ್ರಂಪ್ ಇದೀಗ ರಷ್ಯಾ & ಉಕ್ರೇನ್ ಯುದ್ಧ ನಿಲ್ಲಿಸೋಕೆ ಕಾರಣ ಏನು? ಯುದ್ಧ ನಿಂತರೆ ಅಮೆರಿಕಗೆ ಆಗುವ ಲಾಭ ಏನು?
'ದೊಡ್ಡಣ್ಣ' ಅಮೆರಿಕಗೆ ಲಾಭ ಏನು?
ಅಮೆರಿಕದ ಅಧ್ಯಕ್ಷ ಜೋ ಬೈಡನ್ ಅವರು ಉಕ್ರೇನ್ ಬೆನ್ನಿಗೆ ನಿಂತು, ರಷ್ಯಾ & ಉಕ್ರೇನ್‌ನ ಯುದ್ಧಕ್ಕೆ ಪರೋಕ್ಷವಾಗಿ ಎಂಟ್ರಿ ಕೊಟ್ಟಿದ್ದು ದೊಡ್ಡ ಚರ್ಚೆಗೆ ಕಾರಣವಾಗಿತ್ತು. ಆದರೆ ಈ ವಿಚಾರದಲ್ಲಿ ಡೊನಾಲ್ಡ್ ಟ್ರಂಪ್ ಅವರು ಬೇರೆಯದ್ದೇ ಮೈಂಡ್ ಸೆಟ್ ಹೊಂದಿದ್ದಾರೆ. ಅದು ಹೇಗೆ ಅಂದ್ರೆ, ಅಮೆರಿಕದ ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಉಕ್ರೇನ್ & ರಷ್ಯಾ ಯುದ್ಧ ನಿಲ್ಲಬೇಕು ಅಂತಿದ್ದಾರೆ.
ಹಾಗೆ ಅಮೆರಿಕ ಈಗ ಉಕ್ರೇನ್‌ಗೆ ನೀಡುತ್ತಿರುವ ಯುದ್ಧದ ಪರಿಹಾರ ಹಣವನ್ನ ಕೂಡ ನಿಲ್ಲಿಸಲು ನಿರ್ಧರಿಸಿದ್ದಾರೆ. ಆದರೆ ಈ ಬಗ್ಗೆ ಅಧಿಕೃತ ಹೇಳಿಕೆಯು ಬಾಕಿ ಉಳಿದಿದೆ. ಹೀಗಾಗಿ ಅಮೆರಿಕ ಇದರಿಂದ ಭರ್ಜರಿ ಲಾಭ ಗಳಿಸಲಿದೆ. ಯಾಕಂದ್ರೆ ಮೊದಲೇ ಆರ್ಥಿಕ ಸಂಕಷ್ಟದ ಸುಳಿಯಲ್ಲಿ ನರಳುತ್ತಿರುವ ಅಮೆರಿಕ ಮುಂದಿನ ದಿನಗಳಲ್ಲಿ ಯುದ್ಧ ನಿಲ್ಲುವುದರಿಂದ ಪರೋಕ್ಷವಾಗಿ ಲಾಭ ಪಡೆಯಲಿದೆ. ಮತ್ತೊಂದು ಕಡೆ ಜಾಗತಿಕ ಮಟ್ಟದಲ್ಲಿ ಕೂಡ ರಷ್ಯಾ & ಉಕ್ರೇನ್ ಯುದ್ಧವನ್ನ ನಿಲ್ಲಿಸಿದ ಕೀರ್ತಿ ಡೊನಾಲ್ಡ್ ಟ್ರಂಪ್ & ಅಮೆರಿಕಗೆ ಸಲ್ಲುತ್ತದೆ.












Click it and Unblock the Notifications