Donald Trump: ಅಕ್ರಮ ವಲಸಿಗರಿಗೆ ಮತ್ತೆ ಆಘಾತ ನೀಡಿದ ಡೊನಾಲ್ಡ್ ಟ್ರಂಪ್ ಸರ್ಕಾರ!

ಡೊನಾಲ್ಡ್ ಟ್ರಂಪ್ ಸರ್ಕಾರ & ಅಕ್ರಮ ವಲಸಿಗರ ನಡುವೆ ನಡೆಯುತ್ತಿರುವ ತಿಕ್ಕಾಟ ಇನ್ನೂ ನಿಂತಿಲ್ಲ. ಡೊನಾಲ್ಡ್ ಟ್ರಂಪ್ ಚುನಾವಣೆ ಸಮಯದಲ್ಲಿ ಅಮೆರಿಕದ ಜನರಿಗೆ ಅಥವಾ ತಮ್ಮ ಮತದಾರರಿಗೆ ಮಾತು ಕೊಟ್ಟಂತೆ ಅಕ್ರಮ ವಲಸಿಗರ ವಿರುದ್ಧ ಯುದ್ಧವನ್ನೇ ಸಾರಿದ್ದಾರೆ. ಆದರೆ ಹೀಗೆ ಅಕ್ರಮ ವಲಸಿಗರ ವಿರುದ್ಧ ಕ್ರಮ ಕೈಗೊಳ್ಳುವ ಭರದಲ್ಲಿ ದೊಡ್ಡ ದೊಡ್ಡ ಎಡವಟ್ಟು ಮಾಡಿಕೊಳ್ಳುತ್ತಿದ್ದಾರೆ ಅಮೆರಿಕ ಅಧ್ಯಕ್ಷ ಟ್ರಂಪ್. ಅದೇ ರೀತಿ ಇದೀಗ ಮತ್ತೊಂದು ಆದೇಶ ನಡುಕ ಹುಟ್ಟಿಸಿದೆ.

ಹೌದು, ಅಕ್ರಮ ವಲಸಿಗರಿಗೆ ಮತ್ತೊಂದು ಎಚ್ಚರಿಕೆ ಸಂದೇಶ ರವಾನೆ ಮಾಡಿದ್ದಾರೆ ಟ್ರಂಪ್ ಸರ್ಕಾರದ ಅಧಿಕಾರಿಗಳು. ಹೊಸ ಆದೇಶದಂತೆ 30 ದಿನಗಳಿಗಿಂತಲು ಹೆಚ್ಚು ಕಾಲ ಅಕ್ರಮವಾಗಿ ಅಮೆರಿಕದಲ್ಲಿ ಇರುವ ವಿದೇಶಿ ಪ್ರಜೆಗಳು ತಕ್ಷಣವೇ ನಿಯಮ ಪಾಲನೆ ಮಾಡಬೇಕು ಎನ್ನುವ ಆದೇಶ ಹೊರ ಬಿದ್ದಿದೆ. ಅಮೆರಿಕ ಸರ್ಕಾರದ ವಲಸೆ ನಿಯಮಕ್ಕೆ ಅನುಗುಣವಾಗಿಯೇ ಅಕ್ರಮ ವಲಸಿಗರು ನೋಂದಾಯಿಸಿಕೊಳ್ಳಬೇಕು ಎಂದು ಆದೇಶ ನೀಡಲಾಗಿದೆ. ಹಾಗೇ ನಿಯಮವನ್ನ ಪಾಲಿಸಲು ವಿಫಲವಾದರೆ ದಂಡ ಹಾಗೂ ಜೈಲು ಶಿಕ್ಷೆ ಗ್ಯಾರಂಟಿ ಎಂದು ಎಚ್ಚರಿಸಲಾಗಿದೆ. ಈ ಆದೇಶ ಅಕ್ರಮ ವಲಸಿಗರಿಗೆ ಇದೀಗ ಮತ್ತಷ್ಟು ಆತಂಕ ಸೃಷ್ಟಿಸಿದೆ.

Donald Trump Government Taking Another Step Against The Illegal Immigrants

ಅಕ್ರಮ ವಲಸಿಗರಿಗೆ ಭಯ ಶುರು!

ಡೊನಾಲ್ಡ್ ಟ್ರಂಪ್ ಅವರ ಆಡಳಿತದ ಅಧೀನದಲ್ಲಿರುವ ಹೋಮ್‌ ಲ್ಯಾಂಡ್ ಸೆಕ್ಯುರಿಟಿ ಇಲಾಖೆ ನೀಡಿರುವ ಆದೇಶ ತಲ್ಲಣ ಸೃಷ್ಟಿಸಿದೆ. 30 ದಿನಗಳಿಗಿಂತ ಹೆಚ್ಚು ಕಾಲ ಅಮೆರಿಕದಲ್ಲಿ ಇರುವ ವಿದೇಶಿ ಪ್ರಜೆಗಳು ತಕ್ಷಣವೇ ಫೆಡರಲ್ ಸರ್ಕಾರದಲ್ಲಿ ನೋಂದಾಯಿಸಿಕೊಳ್ಳಿ ಎಂದು ಸೂಚಿಸಿ, ಆದೇಶ ಹೊರಡಿಸಿರುವುದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇದೀಗ ಇಲಾಖೆ ಸೋಷಿಯಲ್ ಮೀಡಿಯಾ ಖಾತೆ ಎಕ್ಸ್ ಪೋಸ್ಟ್‌ ಮೂಲಕ ಈ ಸೂಚನೆಯ ನೀಡಿದೆ. ಅಕಸ್ಮಾತ್ ಈ ನಿಯಮ ಪಾಲನೆ ಮಾಡಲು ಆಗದೇ ಇದ್ದರೆ ತಕ್ಷಣ ದೇಶಬಿಟ್ಟು ಬಿಟ್ಟು ಸ್ವಯಂ ಗಡೀಪಾರು ಆಗಬೇಕು ಎಂಬ ಎಚ್ಚರಿಕೆ ನೀಡಲಾಗಿದೆ.

ಇಲ್ಲಿ ಗಮನಿಸಿ... ಇಲ್ಲಿ ಗಮನಿಸಿ...

ಎಚ್-1 ಬಿ ವೀಸಾ ಹೊಂದಿರುವ ಪ್ರಜೆಗಳಿಗೂ ಇದೀಗ ಆತಂಕ ಶುರುವಾಗಿದ್ದು, ಎಚ್-1 ಬಿ ವೀಸಾ ಪಡೆದ ವ್ಯಕ್ತಿ ಕೆಲಸ ಕಳೆದುಕೊಂಡರೆ ನಿರ್ದಿಷ್ಟ ಅವಧಿ ಒಳಗೆ ದೇಶವನ್ನು ಬಿಡಬೇಕಿದೆ. ಅಕಸ್ಮಾತ್ ನಿರ್ದಿಷ್ಟ ಅವಧಿ ಒಳಗೆ ದೇಶವನ್ನು ಬಿಡದೇ ಇದ್ದರೆ, ಕ್ರಮ ಎದುರಿಸಬೇಕಾಗುತ್ತೆ ಎಂದು ವಾರ್ನಿಂಗ್ ನೀಡಲಾಗಿದೆ. ಈ ಮೂಲಕ ಡೊನಾಲ್ಡ್ ಟ್ರಂಪ್ ಸರ್ಕಾರ ಇದೀಗ ಭಾರಿ ಗಂಭೀರ ಕ್ರಮ ಕೈಗೊಂಡು, ಅಕ್ರಮ ವಲಸಿಗರನ್ನು ಅಮೆರಿಕದಿಂದ ಹೊರಗೆ ಹಾಕೋದಕ್ಕೆ ಸಿದ್ಧವಾದಂತೆ ಕಾಣುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+