ಅಮೆರಿಕ ಅಧ್ಯಕ್ಷ ಟ್ರಂಪ್ ಜೊತೆ ಚೀನಾ ಅಧ್ಯಕ್ಷ ಜಿನ್‌ಪಿಂಗ್ ಮಾತುಕತೆ, ಕುತೂಹಲ ಕೆರಳಿಸಿದ ಚರ್ಚೆ | Donald Trump
ಅಮೆರಿಕ ಮತ್ತು ಚೀನಾ ನಡುವೆ ದೊಡ್ಡ ತಿಕ್ಕಾಟ ಶುರುವಾಗಿ, ಒಬ್ಬರು ಮತ್ತೊಬ್ಬರ ಮೇಲೆ ಭಾರಿ ಗಂಭೀರ ಆರೋಪ & ಪ್ರತ್ಯಾರೋಪ ಮಾಡಿಕೊಳ್ಳುತ್ತಿದ್ದಾರೆ. ಅದರಲ್ಲೂ ಯುರೋಪ್ ದೇಶಗಳು ಚೀನಾ ಜೊತೆಗೆ ವ್ಯಾಪಾರ ಒಪ್ಪಂದ ಮಾಡಿಕೊಂಡ ನಂತರ ಈ ಬೆಂಕಿ ಇನ್ನಷ್ಟು ಧಗಧಗ ಅಂತಿದೆ. ಫ್ರಾನ್ಸ್, ಬ್ರಿಟನ್ ಸೇರಿದಂತೆ ಹಲವು ಪಾಶ್ಚಿಮಾತ್ಯ ದೇಶಗಳು ಚೀನಾ ಜೊತೆಗೆ ಈಗ ಮುಕ್ತವಾದ ನೇರ ವ್ಯಾಪಾರ & ವಹಿವಾಟು ನಡೆಸಲು ಮುಂದಾಗಿವೆ. ಇದರಿಂದ ಅಮೆರಿಕ ಕೆರಳಿ ಕೆಂಡವಾಗಿ ಎಚ್ಚರಿಕೆ ಕೂಡ ನೀಡಿತ್ತು, ಇಷ್ಟೆಲ್ಲಾ ಬೆಳವಣಿಗೆ ನಡುವೆ ಇದೀಗ ಅಮೆರಿಕ ಅಧ್ಯಕ್ಷ ಟ್ರಂಪ್ ಅವರ ಜೊತೆಗೆ ಚೀನಾ ಅಧ್ಯಕ್ಷ ಜಿನ್‌ಪಿಂಗ್ ಫೋನ್ ಕಾಲ್ ಮಾಡಿ ಮಾತನಾಡಿದ್ದಾರೆ.
ಚೀನಾ ಮತ್ತು ಅಮೆರಿಕ ನಡುವೆ ಇತ್ತೀಚೆಗೆ ಇರಾನ್ ವಿಚಾರದಲ್ಲೂ ದೊಡ್ಡ ಕಿರಿಕ್ ಆಗಿಹೋಗಿದೆ. ಇರಾನ್ ವಿರುದ್ಧ ಅಮೆರಿಕ ನೇರವಾಗಿ ದಾಳಿ ಮಾಡಿ, ಸೇನಾ ಕಾರ್ಯಾಚರಣೆ ನಡೆಸಲು ಎಲ್ಲಾ ರೀತಿ ಸಿದ್ಧತೆ ಮಾಡಿಕೊಂಡಿದೆ. ಪರಿಸ್ಥಿತಿ ಭೀಕರವಾಗಿ ಘೋರ ಯುದ್ಧ ಆರಂಭವಾಗಿ, ಇಡೀ ಮಧ್ಯಪ್ರಾಚ್ಯ ನಲುಗಿ ಹೋಗುವ ವಾತಾವರಣ ಅಲ್ಲಿ ಈಗ ಸೃಷ್ಟಿಯಾಗಿದೆ. ಹೀಗಿದ್ದಾಗ ಮಧ್ಯಪ್ರವೇಶ ಮಾಡಿದ್ದ ಚೀನಾ ಸರ್ಕಾರ, ಇರಾನ್ ಪರವಾಗಿ ವಿಶ್ವಸಂಸ್ಥೆ ಅಂಗಳಲ್ಲಿ ಬ್ಯಾಟ್ ಬೀಸಿತ್ತು. ಅಲ್ಲದೆ ಇರಾನ್ ಬೆನ್ನಿಗೆ ನಿಲ್ಲುವ ಮುನ್ಸೂಚನೆ ಕೂಡ ಕೊಟ್ಟಿತ್ತು. ಆದರೆ ದಿಢೀರ್ ನೇರವಾಗಿ ಟ್ರಂಪ್ ಜೊತೆಗೆ, ಚೀನಾ ಅಧ್ಯಕ್ಷ ಮಾತನಾಡಿರುವುದು ಸಹಜವಾಗಿ ಕುತೂಹಲ ಹೆಚ್ಚಿಸಿದೆ.

ಅಮೆರಿಕ & ಚೀನಾ ಚರ್ಚೆ ಏನು?
ಜಾಗತಿಕ ಮಟ್ಟದಲ್ಲಿ ಎರಡು ದೇಶಗಳು ಅತ್ಯಂತ ಪ್ರಭಾವಶಾಲಿ ಆಗಿದ್ದು, ಅಮೆರಿಕ ಹಾಗೂ ಚೀನಾ ನಡುವೆ ಇತ್ತೀಚೆಗೆ ಸಂಬಂಧ ಹಾಳಾಗುತ್ತಿದೆ ಎಂಬ ಚರ್ಚೆಗಳು ನಡೆಯುತ್ತಿದ್ದವು. ಅಲ್ಲದೆ ಕಳೆದ ನವೆಂಬರ್ ತಿಂಗಳಲ್ಲಿ ಅಮೆರಿಕ & ಚೀನಾ ಅಧ್ಯಕ್ಷರ ನಡುವೆ ಮಾತುಕತೆ ಆಗಿದ್ದು ಬಿಟ್ಟರೆ, ಎರಡೂ ದೇಶಗಳ ನಡುವೆ ಉನ್ನತ ಮಟ್ಟದ ಚರ್ಚೆ ಆಗದೇ ಇರುವುದು ಭಾರಿ ಚರ್ಚೆಗೆ ಗ್ರಾಸವಾಗಿತ್ತು. ಎಲ್ಲಾ ಗೊಂದಲಗಳ ನಡುವೆ ಇದೀಗ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ನೇರವಾಗಿ ಟ್ರಂಪ್ ಅವರ ಜೊತೆಗೇ ಚರ್ಚೆ ಮಾಡಿದ್ದಾರೆ. ಚರ್ಚೆ ಸಮಯದಲ್ಲಿ ಅಮೆರಿಕ ಮತ್ತು ಚೀನಾ ಸಂಬಂಧ ಸುಧಾರಣೆ ಬಗ್ಗೆ ಪ್ರಸ್ತಾಪ ಆಗಿದೆ ಎನ್ನಲಾಗಿದ್ದು, ರಷ್ಯಾ ಅಧ್ಯಕ್ಷರ ಜೊತೆಗೆ ಮಾತನಾಡಿದ ನಂತರ ಚೀನಾ ಅಧ್ಯಕ್ಷರು ಅಮೆರಿಕ ಅಧ್ಯಕ್ಷ ಟ್ರಂಪ್ ಅವರ ಜೊತೆಗೆ ಮಾತುಕತೆ ನಡೆಸಿರುವುದು ಕುತೂಹಲ ಹೆಚ್ಚಿಸಿದೆ.












Click it and Unblock the Notifications