Donald Trump Tariffs: ಇರಲಾರದೆ ಇರುವೆ ಬಿಟ್ಟುಕೊಂಡ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್?

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ಅಹಂಕಾರದ ನಿರ್ಧಾರಕ್ಕೆ ಇದೀಗ ಸಾಲು ಸಾಲು ಸಂಕಷ್ಟ ಎದುರಿಸುವ ಸ್ಥಿತಿ ಬಂದಿದೆ. ಪದೇ ಪದೇ ತಮ್ಮ ಎಡವಟ್ಟು ನಿರ್ಧಾರಗಳ ಮೂಲಕ ಇದೇ ಡೊನಾಲ್ಡ್ ಟ್ರಂಪ್ ಸುದ್ದಿಯಲ್ಲಿ ಇರುತ್ತಿದ್ದರು. ಇದೀಗ ಮತ್ತೊಮ್ಮೆ ತಮ್ಮ ಎಡವಟ್ಟು ನಿರ್ಧಾರದ ಮೂಲಕ ಜಾಗತಿಕ ಆರ್ಥಿಕತೆಯನ್ನು ಸಂಕಷ್ಟಕ್ಕೆ ದೂಡಿದ್ದಾರೆ ಎಂಬ ಆರೋಪ ಮಾಡಲಾಗುತ್ತಿದೆ.

ಅಮೆರಿಕ ಶ್ರೀಮಂತ ದೇಶವಾಗಿದ್ದರೂ ಮೈತುಂಬಾ ಸಾಲ ಮಾತ್ರ ಇದ್ದು, ಹೀಗಾಗಿ ಅಲ್ಲಿನ ಸರ್ಕಾರ ದುಡ್ಡು ಹೊಂದಿಸಲು ಪರದಾಡುತ್ತಿದೆ. ಅಮೆರಿಕದ ಸರ್ಕಾರಗಳು ಈಗಾಗಲೇ ಭಾರಿ ದೊಡ್ಡ ಪ್ರಮಾಣದಲ್ಲಿ ಸಾಲ ಮಾಡಿಕೊಂಡು ನರಳಾಡುತ್ತಿದ್ದು, ಸಾಲಕ್ಕೆ ಬಡ್ಡಿ ಕಟ್ಟೋಕು ಒದ್ದಾಡಿ ಹೋಗಿವೆ. ಅದರಲ್ಲೂ ಡೊನಾಲ್ಡ್ ಟ್ರಂಪ್ ಅವರು ಈಗ ಈ ವಿಚಾರದಲ್ಲಿ ಸಿಕ್ಕಾಪಟ್ಟೆ ಚಿಂತೆ ಮಾಡುವಂತೆ ಆಗಿದೆ. ಇದೇ ಕಾರಣಕ್ಕೆ ಬೇರೆ ಬೇರೆ ದೇಶಗಳ ಮೇಲೆ ಹೆಚ್ಚಿನ ಟ್ಯಾಕ್ಸ್ ಹಾಕುವ ಮೂಲಕ ತಾವು ಆರ್ಥಿಕ ಸಂಕಷ್ಟದಿಂದ ಬಚಾವ್ ಆಗಲು ಟ್ರಂಪ್ ಮುಂದಾಗಿದ್ದರು. ಆದರೆ ಟ್ರಂಪ್ ತಾವು ಕೈಗೊಂಡ ನಿರ್ಧಾರದಿಂದಲೇ ನರಳುತ್ತಿದ್ದಾರೆ.

Donald Trump Facing Problems After He Imposing New Tariffs On Different Countries

ಬೆಂಕಿಯಿಂದ ಬಾಣಲೆಗೆ ಬಿದ್ದ ಅಮೆರಿಕ?

ತಾನು ಮಾಡಿರುವ ಸಾಲದ ಹೊರೆಯನ್ನು ತಪ್ಪಿಸಿಕೊಂಡು ಒಂದಷ್ಟು ನಿಟ್ಟುಸಿರು ಬಿಡುವ ನಿರೀಕ್ಷೆಯಲ್ಲಿ ಅಮೆರಿಕ ಇತ್ತು. ಮತ್ತೊಂದು ಕಡೆ ಹೆಚ್ಚಿನ ತೆರಿಗೆ ವಿಧಿಸಿದರೆ ಅದರಿಂದಲೂ ಆದಾಯ ಹೆಚ್ಚಾಗುವ ಪ್ಲಾನ್ ಅಮೆರಿಕದ ನಾಯಕರದ್ದಾಗಿತ್ತು. ಆದರೆ ಡೊನಾಲ್ಡ್ ಟ್ರಂಪ್ ಕೈಗೊಂಡ ನಿರ್ಧಾರ ಅವರದ್ಧೇ ದೇಶದ ಬುಡಕ್ಕೆ ಬಿಸಿನೀರು ಕಾಯಿಸಿದೆ. ಒಂದು ಕಡೆ ಇದೇ ನಿರ್ಧಾರ ಅಮೆರಿಕದ ಮಿತ್ರ ದೇಶಗಳನ್ನು ಶತ್ರುಗಳ ರೀತಿ ಮಾಡಿದ್ದು, ಅಮೆರಿಕದ ಷೇರುಪೇಟೆ ಕೂಡ ಅಲ್ಲಾಡಿ ಹೋಗಿದೆ. ಇನ್ನೊಂದು ಕಡೆ ಪರಿಸ್ಥಿತಿ ಇನ್ನಷ್ಟು ಕಠಿಣವಾಗುವ ಭಯವೂ ಆವರಿಸಿದೆ.

ಡೊನಾಲ್ಡ್ ಟ್ರಂಪ್ ವಿರುದ್ಧ ಆಕ್ರೋಶ?

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ವಿಚಾರದಲ್ಲಿ ದೊಡ್ಡ ಎಡವಟ್ಟು ಮಾಡಿಕೊಂಡು ಅವೈಜ್ಞಾನಿಕ ರೀತಿಯಲ್ಲಿ ತೆರಿಗೆ ಹೇರಿಕೆ ಮಾಡಿದ್ದಾರೆ ಎಂಬ ಆರೋಪ ಕೂಡ ಕೇಳಿ ಬಂದಿದೆ. ಇದೇ ಕಾರಣಕ್ಕೆ ಅಮೆರಿಕದಲ್ಲಿ ಟ್ರಂಪ್ ವಿರುದ್ಧವೇ ಆಕ್ರೋಶ ಮೊಳಗಿದೆ. ಇನ್ನೊಂದು ಕಡೆ ಚೀನಾ ಕೂಡ ಅಮೆರಿಕದ ವಸ್ತುಗಳಿಗೆ ಭಾರಿ ಪ್ರಮಾಣದ ತೆರಿಗೆ ವಿಧಿಸಲು ನಿರ್ಧರಿಸಿದ್ದು, ಆ ಮೂಲಕ ಅಮೆರಿಕ ಮತ್ತಷ್ಟು ಸಂಕಷ್ಟಕ್ಕೆ ಸಿಲುಕುವ ಭಯ ಕಾಡುತ್ತಿದೆ.

ಚೀನಾ ಕಡೆಯಿಂದ ಶೇ. 34 ಟ್ಯಾಕ್ಸ್!

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಣೆ ಮಾಡಿರುವ ಹೊಸ ತೆರಿಗೆ ನೀತಿಯ ವಿರುದ್ಧ ರೊಚ್ಚಿಗೆದ್ದಿರುವ ಚೀನಾ, ಸೇಡಿಗೆ ಸೇಡು ಎನ್ನುವಂತೆ ಅಮೆರಿಕ ರಫ್ತು ಮಾಡುವ ವಸ್ತುಗಳ ವಿರುದ್ಧ ಭರ್ಜರಿ 34 ಪರ್ಸೆಂಟ್ ತೆರಿಗೆ ಹಾಕಲು ಮುಂದಾಗಿದೆ. ಇದೇ ತಿಂಗಳು ಅಂದ್ರೆ ಏಪ್ರಿಲ್ 10 ರಿಂದ ಅಮೆರಿಕ ವಿರುದ್ಧ ಚೀನಾ ಶೇಕಡಾ 34 ರಷ್ಟು ತೆರಿಗೆ ಹಾಕಲು ನಿರ್ಧಾರ ಮಾಡಿದೆ. ಇದು ಡೊನಾಲ್ಡ್ ಟ್ರಂಪ್ ಅವರಿಗೆ ಹೊಸ ತಲೆನೋವು ತರಿಸಿದ್ದು, ಈಗಾಗಲೇ ಆರ್ಥಿಕವಾಗಿ ನರಳಿ ಹೋಗಿರುವ ಅಮೆರಿಕಗೆ ಇದು ಮತ್ತಷ್ಟು ಹಿನ್ನಡೆ ತರಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+