ಭಾರತ ಮೂಲದ ಹೆಣ್ಣು ಮಗಳು ಕೊಟ್ಟ ಏಟಿಗೆ ಬಾಯಿ ಮುಚ್ಚಿದ ಡೊನಾಲ್ಡ್ ಟ್ರಂಪ್!
ಟ್ರಂಪ್ ಮತ್ತೆ ಅಮೆರಿಕ ಅಧ್ಯಕ್ಷರಾಗಿ ಆಯ್ಕೆ ಆಗಬೇಕೆಂಬ ಆಸೆಗೆ, ಇದೀಗ ಭಾರತ ಮೂಲದ ಹೆಣ್ಣು ಮಗಳು ಕಿಚ್ಚು ಹಚ್ಚಿದ್ದಾರೆ. ಇನ್ನೇನು ಡೊನಾಲ್ಡ್ ಟ್ರಂಪ್ ಗೆದ್ದು ಬೀಗಿ, ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಇತಿಹಾಸ ಸೃಷ್ಟಿಸುತ್ತಾರೆ ಅಂತ ಎಲ್ಲರೂ ಅಂದುಕೊಂಡಿದ್ದರು. ಆದ್ರೆ ಕಮಲಾ ಹ್ಯಾರಿಸ್ ಯಾವಾಗ ಅಖಾಡ ಪ್ರವೇಶ ಮಾಡಿದರೋ, ಅಲ್ಲಿಂದ ಇಲ್ಲಿಯವರೆಗೂ ಕಮಲಾ ಹ್ಯಾರಿಸ್ ಹವಾ ಅಮೆರಿಕದಲ್ಲಿ ಹೆಚ್ಚಾಗುತ್ತಲೇ ಇದೆ. ಅದ್ರಲ್ಲೂ ಇಂದು ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ಕಮಲಾ ಹ್ಯಾರಿಸ್ ಕೊಟ್ಟ ಮಾತಿನ ಪೆಟ್ಟು ಹೇಗಿತ್ತು ಗೊತ್ತಾ?
ಕಮಲಾ ಹ್ಯಾರಿಸ್ ಭಾರತ ಮೂಲದವರಾ? ಕಮಲಾ ಹ್ಯಾರಿಸ್ ಅಪ್ಪನ ಮೂಲ ಯಾವುದು? ಕಮಲಾ ಹ್ಯಾರಿಸ್ ಜನಾಂಗೀಯ ಹಿನ್ನೆಲೆ ಏನು? ಹಿಂಗೆಲ್ಲಾ ಮಾತನಾಡಿದರೆ ಯಾರಿಗೆ ತಾನೆ ಕೋಪ ಬರಲ್ಲ ಹೇಳಿ? ಒಬ್ಬ ವ್ಯಕ್ತಿಯ ಜಾತಿ & ಧರ್ಮ ಅಥವಾ ಜನಾಂಗೀಯ ಹಿನ್ನೆಲೆ ಪಸ್ತಾಪ ಮಾಡಿದರೆ ಕೆಟ್ಟ ಕೋಪ ಬಂದೇ ಬರುತ್ತದೆ. ಅದೇ ರೀತಿ ಕಮಲಾ ಹ್ಯಾರಿಸ್ ಅವರ ಬಗ್ಗೆ ಕೂಡ ಡೊನಾಲ್ಡ್ ಟ್ರಂಪ್ ಬಾಯಿಗೆ ಬಂದ ರೀತಿ ಮಾತನಾಡಿದ್ದರು ಎಂಬ ಆರೋಪ ಕೇಳಿ ಬಂದಿತ್ತು. ಈ ಎಲ್ಲಾ ಆರೋಪಗಳಿಗೆ ಇಂದು ಭಾರತ ಮೂಲದ ಹೆಣ್ಣು ಮಗಳು ಕಮಲಾ ಹ್ಯಾರಿಸ್, ಉತ್ತರ ನೀಡಿ ಗೆದ್ದು ಬೀಗಿದ್ದಾರೆ. ಹಾಗಾದ್ರೆ ಹೇಗಿತ್ತು ಕಮಲಾ ಹ್ಯಾರಿಸ್ & ಟ್ರಂಪ್ ನಡುವೆ ನಡೆದ ಮಾತಿನ ತಿಕ್ಕಾಟ? ಮುಂದೆ ಓದಿ.

ಜನಾಂಗೀಯ ದಾಳಿಯನ್ನ ಬಿಟ್ಟು...
ಡೊನಾಲ್ಡ್ ಟ್ರಂಪ್ ಎದುರಿಗೆ ಬಂದ ತಕ್ಷಣ ಹುಲಿಯಂತೆ ಮಾತಿನ ದಾಳಿ ಆರಂಭ ಮಾಡಿದ ಕಮಲಾ ಹ್ಯಾರಿಸ್, ಮೆತ್ತಗೆ ಮಾತನಾಡುತ್ತಲೇ ಹರಕುಬಾಯಿ ಎಂಬ ಖ್ಯಾತಿ ಪಡೆದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ಮೌಲ್ಯದ ಪಾಠ ಮಾಡಿದರು. ಹಾಗೇ, ತಮ್ಮ ಬಗ್ಗೆ & ತಮ್ಮ ತಂದೆ ಹಾಗೂ ತಾಯಿ ಹಿನ್ನೆಲೆ ಬಗ್ಗೆ ಟ್ರಂಪ್ ಮಾತನಾಡಿದ್ದಾರೆ ಎಂಬ ಆರೋಪಗಳ ಬಗ್ಗೆ ಕಮಲಾ ಸೂಕ್ಷ್ಮವಾಗಿ ಪ್ರಸ್ತಾಪ ಮಾಡಿ ಉತ್ತರ ನೀಡಿದರು. ಅಲ್ಲದೆ ಜನಾಂಗೀಯ ಹಿನ್ನೆಲೆ ಚರ್ಚೆ ಬಿಟ್ಟು ಅಭಿವೃದ್ಧಿ ಬಗ್ಗೆ ಪ್ರಸ್ತಾಪ ಮಾಡಿ ಮಾತನಾಡಿ ಅಂತಾ ಕಮಲಾ ಹ್ಯಾರಿಸ್ ಹೇಳಿದರು.
ಡೊನಾಲ್ಡ್ ಟ್ರಂಪ್‌ಗೆ ನಿರಾಸೆ ಪಕ್ಕಾ?
ಅಮೆರಿಕದ ಮಾಜಿ ಅಧ್ಯಕ್ಷರೂ ಆದ ಡೊನಾಲ್ಡ್ ಟ್ರಂಪ್‌ಗೆ ಭಾರಿ ಆಘಾತ ಎದುರಾಗುತ್ತಿದೆ. ಯಾಕಂದ್ರೆ ಈಗಿನ ಪರಿಸ್ಥಿತಿ ನೋಡುತ್ತಿದ್ದರೆ ಕಮಲಾ ಹ್ಯಾರಿಸ್ ಪರವಾಗಿ ಬೆಂಬಲ ಹೆಚ್ಚಾಗಿ ಸಿಗುತ್ತಿದೆ. ಅದರಲ್ಲೂ ಅಮೆರಿಕದ ಯುವ ಮತದಾರರು ಅಧ್ಯಕ್ಷೀಯ ಚುನಾವಣೆ ಗೆಲುವಿನ ಮೇಲೆ ಅಂತಿಮ ಪ್ರಭಾವ ಬೀರುವ ಶಕ್ತಿಯನ್ನ ಹೊಂದಿದ್ದು, ಕಮಲಾ ಹ್ಯಾರಿಸ್ ಪರವಾಗಿ ಅಮೆರಿಕದ ಯುವ ಮತದಾರರು ಹೆಚ್ಚು ಬೆಂಬಲ ನೀಡುತ್ತಿದ್ದಾರೆ.
ಈಗಿನ ಸ್ಥಿತಿ ನೋಡಿದರೆ ಕಮಲಾ ಹ್ಯಾರಿಸ್ ಭರ್ಜರಿ ಗೆಲುವು ಸಾಧಿಸುವುದು ಗ್ಯಾರಂಟಿ ಎಂಬ ಮಾತು ಕೇಳಿಬಂದಿವೆ. ಇದು ಒಂದು ಕಡೆಯಾದರೆ ಮತ್ತೊಂದು ಕಡೆ ಕಮಲಾ ಹ್ಯಾರಿಸ್ ಇಂದು ಡೊನಾಲ್ಡ್ ಟ್ರಂಪ್ ವಿರುದ್ಧ ಹರಿಹಾಯ್ದರು, ತಮ್ಮ ಬಗ್ಗೆ ಬಾಯಿಗೆ ಬಂದಂತೆ ಮಾತನಾಡಿದ್ದ ಟ್ರಂಪ್‌ಗೆ ಮೌಲ್ಯದ ಪಾಠ ಮಾಡಿದರು ಕಮಲಾ ಹ್ಯಾರಿಸ್. ಇಂದಿನ ಚರ್ಚೆ ಕೂಡ ಕಮಲಾ ಪರವಾಗಿ ಬೆಂಬಲ ಹೆಚ್ಚಾಗುವಂತೆ ಮಾಡಿದೆ.












Click it and Unblock the Notifications