ಒಂದು.. ಎರಡು.. ಮೂರು.. ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ಇನ್ನು ಉಳಿದಿರುವುದು ಬರೀ 2 ವಾರ!
ಅಮೆರಿಕ.. ಈ ದೇಶವನ್ನು ಜನರು ಹಲವು ಹೆಸರುಗಳಿಂದ ಕರೆಯೋದು ಉಂಟು. ಅದರಲ್ಲೂ ಅಮೆರಿಕದ ಜೊತೆಗೆ ಉತ್ತಮ ಸ್ನೇಹ ಸಂಬಂಧ ಹೊಂದಿರುವ ದೇಶಗಳು ಈ ದೇಶವನ್ನ ದೊಡ್ಡಣ್ಣ ಅಂತಾ ಕರೆಯುತ್ತಾರೆ, ಅದೇ ವಿರೋಧಿಗಳು ಅಮೆರಿಕದ ನೆಲವನ್ನು ದೆವ್ವದ ದೇಶ ಅಂತಾನೂ ಆರೋಪ ಮಾಡುತ್ತಾರೆ. ಹೀಗೆ ಒಂದು ಕಡೆ ಅಮೆರಿಕ ದೊಡ್ಡಣ್ಣ ಎನಿಸಿಕೊಂಡರೆ ಇನ್ನೊಂದು ಕಡೆ ದೆವ್ವವಾಗಿದೆ. ಎಲ್ಲಾ ರೀತಿ ಜಗತ್ತಿನ ಮೇಲೆ ಪ್ರಭಾವ ಬೀರುವ ಅಮೆರಿಕದ ಚುನಾವಣೆ ಅಂತಿಮ ಹಂತಕ್ಕೆ ಬಂದು ನಿಂತಿದ್ದು, ಟ್ರಂಪ್ & ಕಮಲಾ ಏನ್ ಮಾಡ್ತಿದ್ದಾರೆ ಗೊತ್ತಾ?
ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ಹತ್ತಿರ ಹತ್ತಿರ 250 ವರ್ಷಗಳ ಸುದೀರ್ಘ ಇತಿಹಾಸವೇ ಇದೆ. ಅಮೆರಿಕ ಇಡೀ ಜಗತ್ತಿನಲ್ಲೇ ಆಧುನಿಕ ಪ್ರಜಾಪ್ರಭುತ್ವ ತತ್ವ ಅಳವಡಿಕೆ ಮಾಡಿಕೊಂಡ ಅತ್ಯಂತ ಹಳೆಯ ದೇಶವಾಗಿದೆ. ಇದೇ ಕಾರಣಕ್ಕೆ ಅಮೆರಿಕದ ಅಧ್ಯಕ್ಷೀಯ ಚುನಾವಣೆ ಅಂದ್ರೆ ಇಡೀ ಜಗತ್ತು ಒಂದು ಬಾರಿ ತಿರುಗಿ ನೋಡುತ್ತದೆ. ಇಂತಹ ಚುನಾವಣೆ ಇದೀಗ, ಅಂತಿಮ ಹಂತಕ್ಕೆ ತಲುಪುತ್ತಿದ್ದು, ಭಾರತ ಮೂಲದ ನಂಟು ಹೊಂದಿರುವ ಹೆಣ್ಣು ಮಗಳು ಕಮಲಾ ಹ್ಯಾರಿಸ್ & ಡೊನಾಲ್ಡ್ ಟ್ರಂಪ್ ನಡುವೆ ದೊಡ್ಡ ಫೈಟಿಂಗ್ ಶುರುವಾಗಿದೆ. ಹಾಗಾದ್ರೆ ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ಮತದಾನ ನಡೆಯುವ ದಿನಾಂಕ ಯಾವಾಗ? ಹೇಗಿದೆ ಕೊನೇ ಹಂತದ ಸಿದ್ಧತೆಗಳು?

ಟ್ರಂಪ್ ಗೆಲ್ತಾರಾ, ಕಮಲಾ ಗೆಲ್ತಾರಾ?
ಅಮೆರಿಕ ಈಗಾಗಲೇ ಸಾಲು ಸಾಲು ಸಮಸ್ಯೆ ಎದುರಿಸುತ್ತಿದ್ದು, ಅದನ್ನೆಲ್ಲಾ ಎದುರಿಸಿ ಈಗ ಮುಂದೆ ನುಗ್ಗಬೇಕಿದೆ. ಒಂದು ಕಡೆ ಅಮೆರಿಕದ ನಂಬರ್ 1 ಪಟ್ಟ ಕೂಡ ಅಲುಗಾಡುತ್ತಿದ್ದು, ಇನ್ನೊಂದು ಕಡೆ ನಿರುದ್ಯೋಗ ಸಮಸ್ಯೆ ದೊಡ್ಡ ಮಟ್ಟದಲ್ಲಿ ಅಮೆರಿಕದ ಜನರನ್ನ ಕಾಡ್ತಾ ಇದೆ. ಹಾಗೇ ಇನ್ನೊಂದು ಕಡೆ ಅಮೆರಿಕದಲ್ಲಿ ಮನೆ ಕಳೆದುಕೊಂಡು ಬೀದಿಗೆ ಬಿದ್ದ ಜನರ ಸಂಖ್ಯೆ ಕೂಡ ಹೆಚ್ಚಾಗಿದೆ. ಈ ಎಲ್ಲವನ್ನೂ ಸರಿ ಮಾಡಬಲ್ಲ ವ್ಯಕ್ತಿ ಈಗ ಅಮೆರಿಕ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ಆಗಬೇಕಿದೆ. ಹೀಗಾಗಿಯೇ ಟ್ರಂಪ್ ಗೆಲ್ತಾರಾ? ಕಮಲಾ ಗೆಲ್ತಾರಾ? ಎನ್ನುವ ಬಿಲಿಯನ್ ಡಾಲರ್ ಪ್ರಶ್ನೆಗೆ ಮತದಾರರ ಕೈಯಲ್ಲೇ ಉತ್ತರ ಸಿಗಲಿದೆ.
ಜಗತ್ತಿನ ಕಣ್ಣು ಅಮೆರಿಕದ ಮೇಲೆ!
ನವೆಂಬರ್ 5ರಂದು ಅಮೆರಿಕದಲ್ಲಿ ಅಧ್ಯಕ್ಷೀಯ ಚುನಾವಣೆಗೆ ಮತದಾನ ನಡೆಯಲಿದೆ. ಆ ನಂತರ ಕೆಲವೇ ಗಂಟೆಗಳಲ್ಲಿ ಅಮೆರಿಕ ಅಧ್ಯಕ್ಷೀಯ ಚುನಾವಣೆ ಫಲಿತಾಂಶ ಕೂಡ ಹೊರಗೆ ಬೀಳಲಿದೆ. ಹೀಗಾಗಿ ಇಡೀ ಜಗತ್ತು ಇದೀಗ ಅಮೆರಿಕದ ಮೇಲೆ ಕಣ್ಣಿಟ್ಟು ಕೂತಿದೆ. ಯಾಕಂದ್ರೆ ಚುನಾವಣೆ ಅಮೆರಿಕದಲ್ಲಿ ನಡೆಯುತ್ತಿದ್ದರೂ, ಇದರ ಪರಿಣಾಮ ಮಾತ್ರ ಇಡೀ ಜಗತ್ತಿನಾದ್ಯಂತ ಆಗಲಿದೆ. ಅಮೆರಿಕ ಜಾಗತಿಕ ಮಟ್ಟದಲ್ಲಿ ದೊಡ್ಡ ಹಿಡಿತ ಹೊಂದಿರುವ ದೇಶವಾಗಿದೆ. ಇದೇ ಹಿನ್ನೆಲೆ ಎಲ್ಲರೂ ಈಗ ಅಮೆರಿಕದ ಚುನಾವಣೆ ಮೇಲೆ ಕಣ್ಣಿಟ್ಟು ಕೂತಿದ್ದಾರೆ.












Click it and Unblock the Notifications