ಡೊನಾಲ್ಡ್ ಟ್ರಂಪ್ ಫುಲ್ ಗರಂ: ತನ್ನ ಮೇಲೆ ದಾಳಿ ಮಾಡಿದವನ ಬಗ್ಗೆ ಹೇಳಿದ್ದೇನು?
ಭಾರತ & ಅಮೆರಿಕ ನಡುವೆ ಈಗ ಪರೋಕ್ಷ ಯುದ್ಧ ಶುರುವಾದಂತೆ ಕಾಣುತ್ತಿದೆ. ಯಾಕಂದ್ರೆ ಭಾರತ ಮೂಲದ ನಂಟು ಹೊಂದಿರುವ, ಭಾರತೀಯರ ಹೆಮ್ಮೆಯ ಮಗಳು ಕಮಲಾ ಹ್ಯಾರಿಸ್ ಅವರು ಈ ಬಾರಿ ಅಮೆರಿಕ ಅಧ್ಯಕ್ಷರಾಗಿ ಆಯ್ಕೆ ಆಗಲು ಮುಂದೆ ನುಗ್ಗುತ್ತಿದ್ದಾರೆ. ಮತ್ತೊಂದು ಕಡೆ ಕಮಲಾ ಹ್ಯಾರಿಸ್ ಎದುರಾಳಿ ಡೊನಾಲ್ಡ್ ಟ್ರಂಪ್ ಭಾರಿ ಹಿನ್ನಡೆ ಅನುಭವಿಸುತ್ತಿರುವ ಸಮಯದಲ್ಲೇ, ಸ್ಫೋಟಕ ಹೇಳಿಕೆ ನೀಡಿ ರೊಚ್ಚಿಗೆದ್ದಿದ್ದಾರೆ!
ಹೌದು, ಅಮೆರಿಕ ಮಾಜಿ ಅಧ್ಯಕ್ಷ ಹಾಗೂ 2024ರ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಆಗಿರುವ ಡೊನಾಲ್ಡ್ ಟ್ರಂಪ್ ಮತ್ತೆ ರೊಚ್ಚಿಗೆದ್ದಿದ್ದಾರೆ. ಇದಕ್ಕೆ ಕಾರಣ ಆಗಿರುವುದು ಅವರ ಮೇಲೆ ಕೆಲವು ದಿನಗಳ ಹಿಂದೆ ನಡೆದಿದ್ದ ದಾಳಿ. ಜುಲೈ 13 ರಂದು ಪೆನ್ಸಿಲ್ವೇನಿಯಾದಲ್ಲಿ ಪ್ರಚಾರ ನಡೆಸುವಾಗ ಡೊನಾಲ್ಡ್ ಟ್ರಂಪ್ ಮೇಲೆ ಗುಂಡಿನ ದಾಳಿಯು ನಡೆದಿತ್ತು. ಹೀಗಿದ್ದಾಗ, ತಕ್ಷಣ ಅಲರ್ಟ್ ಆಗಿದ್ದ ಭದ್ರತಾ ಸಿಬ್ಬಂದಿ, ಕೂಡಲೇ ವೇದಿಕೆಯ ಸಮೀಪ ಓಡಿ ಬಂದು ಟ್ರಂಪ್ ಅವರನ್ನ ರಕ್ಷಣೆ ಮಾಡಿ ಜೀವ ಉಳಿಸಿದ್ದರು. ಆ ಭಯಾನಕ ಕ್ಷಣಗಳ ಬಗ್ಗೆ ಇದೀಗ ಡೊನಾಲ್ಡ್ ಟ್ರಂಪ್ ಅವರು ಎಲಾನ್ ಮಸ್ಕ್ ಅವರ ಜೊತೆಗೆ ಮಾಹಿತಿ ಹಂಚಿಕೊಂಡಿದ್ದಾರೆ.

ಗುಂಡು ಬಂದು ಕಿವಿಗೆ ಬಡಿದಾಗ...
ಅಮೆರಿಕದಲ್ಲಿ 2024ರ ಅಧ್ಯಕ್ಷೀಯ ಚುನಾವಣೆಗೆ ಸಕಲ ಸಿದ್ಧತೆ ಸಾಗಿದ್ದು, ಪ್ರಚಾರ ಕಾರ್ಯ ಕೂಡ ಅಬ್ಬರದಿಂದ ನಡೆದಿದೆ. ಇಂತಹ ಸ್ಥಿತಿಯಲ್ಲಿ ಡೊನಾಲ್ಡ್ ಟ್ರಂಪ್ & ಅಮೆರಿಕದ ಅತ್ಯಂತ ಶ್ರೀಮಂತ ಉದ್ಯಮಿ ಎಲಾನ್ ಮಸ್ಕ್ ನಡುವೆ ಮಹತ್ವದ ಸಂದರ್ಶನ ನಡೆದಿದ್ದು, ಸಂದರ್ಶನದ ವೇಳೆ ಡೊನಾಲ್ಡ್ ಟ್ರಂಪ್ ತಮ್ಮ ಮೇಲೆ ಗುಂಡಿನ ದಾಳಿ ನಡೆದು ಕಿವಿಗೆ ಬುಲೆಟ್ ಬಡಿದಾಗ ಏನೆಲ್ಲಾ ಆಗಿತ್ತು? ಎಂಬುದನ್ನ ವಿವರಿಸಿದ್ದಾರೆ. ತಮ್ಮ ಮೇಲೆ ನಡೆದ ದಾಳಿಯನ್ನ ಇದೀಗ ಡೊನಾಲ್ಡ್ ಟ್ರಂಪ್ ಅವರು 'ಹಾರ್ಡ್ ಹಿಟ್' ಎಂದು ಕರೆದಿದ್ದಾರೆ. ಅಲ್ಲದೆ ಈ ದಾಳಿಯಿಂದ ತಾವು ಅನುಭವಿಸಿದ ಮಾನಸಿಕ ವೇದನೆ ಬಗ್ಗೆಯೂ ಟ್ರಂಪ್ ಮಾತನಾಡಿದ್ದಾರೆ.
ಗುಂಡು ತಾಗಿ ಕೆಳಗೆ ಕುಸಿದು ಬಿದ್ದೆ...
ಅಂದಹಾಗೆ ಎಲಾನ್ ಮಸ್ಕ್ ಅವರು, ಡೊನಾಲ್ಡ್ ಟ್ರಂಪ್ ಅವರ ಸಂದರ್ಶನ ಮಾಡುವಾಗ ಪ್ರಶ್ನೆ ಒಂದನ್ನ ಕೇಳಿದ್ದರು. ನಿಮ್ಮ ರೀತಿಯ ದೊಡ್ಡ ವ್ಯಕ್ತಿಗಳ ಮೇಲೆ ಗುಂಡಿನ ದಾಳಿಯು ನಡೆದಿದ್ದರ ಬಗ್ಗೆ ಏನು ಹೇಳುತ್ತೀರಿ? ಅಂತಾ ಎಲಾನ್ ಮಸ್ಕ್ ಅವರು ಸಂದರ್ಶನದಲ್ಲಿ ಪ್ರಶ್ನೆಯ ಕೇಳಿದ್ದರು. ಇದಕ್ಕೆ ಉತ್ತರ ನೀಡಿದ ಡೊನಾಲ್ಡ್ ಟ್ರಂಪ್ ಅಂದು ನಡೆದ ಘಟನೆಯ ಬಗ್ಗೆ ಎಲ್ಲಾ ಮಾಹಿತಿ ಬಿಚ್ಚಿಟ್ಟರು.
ಟ್ರಂಪ್ ಹೇಳಿದಂತೆ, 'ಆಗಂತುಕ ನನ್ನ ಮೇಲೆ ಗುಂಡು ಹಾರಿಸಿದಾಗ ನನ್ನ ಕಿವಿಗೆ ಬುಲೆಟ್ ತಾಗಿತು ಎಂಬುದು ಗೊತ್ತಾಯಿತು. ಹೀಗಿದ್ದರೂ ನಾನು ಆಗ ಭಯಪಡದೆ ಕೆಳಗೆ ಕುಸಿದುಬಿಟ್ಟೆ. ಹೀಗೆ ನಾನು ಕೆಳಗೆ ಕುಸಿದು ಬಿದ್ದಾಗ ನನ್ನ ಮನಸ್ಸು ಕೇಳಿದ ಒಂದೇ ಒಂದು ಪ್ರಶ್ನೆ, ಸುತ್ತಮುತ್ತ ಎಷ್ಟು ಜನರ ಹತ್ಯೆ ಆಗಿದೆ? ಎಂದು. ಯಾಕೆ ಅಂದ್ರೆ ನನ್ನ ಪ್ರಚಾರ ಕಾರ್ಯಕ್ರಮಕ್ಕೆ ಸಾಕಷ್ಟು ಬೆಂಬಲಿಗರು ಬಂದಿದ್ದರು. ಹೀಗಾಗಿ ಅವರ ಸುರಕ್ಷತೆ ನನಗೆ ಮುಖ್ಯ ಅನಿಸಿತ್ತು' ಎಂದಿದ್ದಾರೆ ಡೊನಾಲ್ಡ್ ಟ್ರಂಪ್.












Click it and Unblock the Notifications