Trump's Economic War: ಭಾರತ ಮಾತ್ರವಲ್ಲ ಬ್ರೆಜಿಲ್ ಜೊತೆ ಕೂಡ ಟ್ರಂಪ್ ಡಿಸೈನ್ ಡಿಸೈನ್ ನಾಟಕ!
ಡೊನಾಲ್ಡ್ ಟ್ರಂಪ್ ಮಾಡುತ್ತಿರುವ ಕಿರಿಕಿರಿ ಒಂದಾ? ಎರಡಾ? ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ರೀತಿ ಪ್ರತಿದಿನ ಒಂದಲ್ಲ ಒಂದು ಕಿರಿಕ್ ಮಾಡ್ತಾನೆ ಇದ್ದಾರೆ. ಒಂದು ಕಡೆ ಭಾರತದ ವಿರುದ್ಧ ಕೂಡ ಹೀಗೆ ಕುತಂತ್ರ ಮಾಡಲು ಬಂದು ಹೆಚ್ಚಿನ ತೆರಿಗೆ ಹಾಕುವ ಬಗ್ಗೆ ಬೆದರಿಕೆ ಹಾಕಿದ್ದಾರೆ ಟ್ರಂಪ್ ಎಂಬ ಆರೋಪ ಕೇಳಿಬಂದಿದೆ. ಇದೇ ಸಮಯದಲ್ಲಿ ಭಾರತ ಮಾತ್ರವಲ್ಲ ಬ್ರೆಜಿಲ್ ಜೊತೆ ಕೂಡ ಟ್ರಂಪ್ ಡಿಸೈನ್ ಡಿಸೈನ್ ನಾಟಕ ಶುರು ಮಾಡಿದ್ದು, ಇದಕ್ಕೆಲ್ಲಾ ಬ್ರೆಜಿಲ್ ಸರಿಯಾದ ಉತ್ತರ ಕೊಡಲು ಮುಂದಾಗಿದೆ.
ಡೊನಾಲ್ಡ್ ಟ್ರಂಪ್ ಅವರ ಹೆಸರಿನ ಜೊತೆಗೆ ವಿವಾದಗಳು ಕೂಡ ಬೆರೆತು ಹೋಗಿವೆ ಅಂತಾ ಹೇಳಬಹುದು. ಡೊನಾಲ್ಡ್ ಟ್ರಂಪ್ 2024 ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಗೆಲ್ಲುವುದಕ್ಕೆ ಭಾರತ & ಭಾರತೀಯರ ಕೊಡುಗೆ ಕೂಡ ಭಾರಿ ದೊಡ್ಡ ಮಟ್ಟದಲ್ಲೇ ಇದೆ. ಯಾಕಂದ್ರೆ ಅಮೆರಿಕದಲ್ಲಿ ನೆಲೆಸಿರುವ ಭಾರತೀಯರು ಇದೇ ಡೊನಾಲ್ಡ್ ಟ್ರಂಪ್ ಗೆಲ್ಲಬೇಕು ಅಂತಾ ಬೆಂಬಲ ನೀಡಿ, ಸ್ವತಃ ಚುನಾವಣೆ ಪ್ರಚಾರ ಕಾರ್ಯ ಕೂಡ ಕೈಗೊಂಡಿದ್ದರು. ಇಷ್ಟಾದರೂ ಭಾರತದ ವಿರುದ್ಧವೇ ಇದೀಗ ಡೊನಾಲ್ಡ್ ಟ್ರಂಪ್ ಆಟ ಆಡುತ್ತಿದ್ದಾರೆ. ಈ ನಡುವೆ ತಮ್ಮ ಹತ್ತಿರದ ದೇಶ ಬ್ರೆಜಿಲ್ ಜೊತೆಗೆ ಕೂಡ ಇದೇ ರೀತಿ ಕಿರಿಕ್ ಮಾಡಿದ್ದಾರೆ ಟ್ರಂಪ್.

ಡೊನಾಲ್ಡ್ ಟ್ರಂಪ್‌ಗೆ ಬ್ರೆಜಿಲ್ ಗುನ್ನ!
ಹೌದು, ಭಾರತದ ಜೊತೆಗೆ ಆಡುತ್ತಿರುವ ರೀತಿಯಲ್ಲೇ ಬ್ರೆಜಿಲ್ ಜೊತೆಗೆ ಕೂಡ ಆಟ ಆಡಲು ಡೊನಾಲ್ಡ್ ಟ್ರಂಪ್ ಮುಂದಾಗಿದ್ದರು. ಅದರಲ್ಲೂ ಡೊನಾಲ್ಡ್ ಟ್ರಂಪ್ ನೇರವಾಗಿ ಬ್ರೆಜಿಲ್ ಅಧ್ಯಕ್ಷರ ವಿರುದ್ಧ ಹೇಳಿಕೆ ನೀಡಿ ಸೌಂಡ್ ಮಾಡುತ್ತಿದ್ದರು. ಇಂತಹ ಸಮಯದಲ್ಲಿ ಬ್ರೆಜಿಲ್ ರಫ್ತು ಮಾಡುವ ಉತ್ಪನ್ನಗಳ ವಿರುದ್ಧ, ಭಾರಿ ದೊಡ್ಡ ಪ್ರಮಾಣದಲ್ಲಿ ತೆರಿಗೆ ಹೇರಿಕೆ ಮಾಡಿ ಆತಂಕದ ವಾತಾವರಣ ನಿರ್ಮಾಣ ಮಾಡಿದ್ದರು. ಈ ಸಮಯದಲ್ಲೇ ಬ್ರೆಜಿಲ್ ಕೂಡ ಸರಿಯಾದ ಉತ್ತರ ನೀಡಿದೆ.
ನಾವು ಟ್ರಂಪ್ ಜೊತೆ ಮಾತನಾಡಲ್ಲ!
ಅಂದಹಾಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ಧ ಇದೀಗ ಗುಡುಗಿರುವ ಬ್ರೆಜಿಲ್ ಅಧ್ಯಕ್ಷ ಲೂಯಿಜ್ ಇನಾಸಿಯೊ ಲುಲಾ ಡ ಸಿಲ್ವಾ, ನಾವು ಯಾವುದೇ ಕಾರಣಕ್ಕೂ ಡೊನಾಲ್ಡ್ ಟ್ರಂಪ್ ಜೊತೆಯಲ್ಲಿ ಮಾತುಕತೆ ನಡೆಸುವುದಿಲ್ಲ ಎಂದಿದ್ದಾರೆ. ಮತ್ತೊಂದು ಕಡೆ ಡೊನಾಲ್ಡ್ ಟ್ರಂಪ್ ಹೇರಿಕೆ ಮಾಡಿರುವ ಹೆಚ್ಚಿನ ತೆರಿಗೆ ಬಗ್ಗೆ ಕೂಡ ಡೋಂಟ್ ಕೇರ್ ಎನ್ನುವಂತೆ ರಿಯಾಕ್ಷನ್ ಕೊಟ್ಟಿದ್ದಾರೆ. ಈ ಮೂಲಕ ಅಮೆರಿಕ & ಬ್ರೆಜಿಲ್ ಸಂಬಂಧ ಕೂಡ ಹಾಳಾಗಿ ಹೋಗುತ್ತಿದ್ದು, ಇನ್ನೊಂದು ಕಡೆ ಭಾರತ ಕೂಡ ಅಮೆರಿಕಗೆ ಸರಿಯಾಗಿ ತಿರುಗೇಟು ನೀಡಲು ಸಜ್ಜಾಗಿ ಕೂತಿದೆ. ಇದೇ ಸಮಯದಲ್ಲಿ ಬ್ರೆಜಿಲ್ ಅಧ್ಯಕ್ಷ ಲೂಯಿಜ್ ಇನಾಸಿಯೊ ಲುಲಾ ಡ ಸಿಲ್ವಾ, ಭಾರತದ ಪ್ರಧಾನಿ ಮೋದಿ ಅವರ ಜೊತೆಗೆ ಫೋನ್ ಮೂಲಕ ಮಾತುಕತೆ ನಡೆಸಿದ್ದಾರೆ.












Click it and Unblock the Notifications