Donald Trump: ರಷ್ಯಾಗೆ ಲಾಟರಿ, ಉಕ್ರೇನ್‌ಗೆ ಮೊದಲ ಆಘಾತ ನೀಡಿದ ಅಮೆರಿಕದ ಹೊಸ ಅಧ್ಯಕ್ಷರು!
ರಷ್ಯಾ & ಉಕ್ರೇನ್ ಯುದ್ಧವನ್ನು ನಿಲ್ಲಿಸುವುದು ಯಾರು? ಹಿಂಗೆ ಬಡಿದಾಡುತ್ತಿರುವ ರಷ್ಯಾ & ಉಕ್ರೇನ್ ದೇಶಗಳನ್ನ ಸಮಾಧಾನ ಮಾಡುವುದು ಯಾರು? ಹೀಗೆ ಜಗತ್ತಿನ ಮೂಲೆ ಮೂಲೆಗೆ ಹಬ್ಬಿರುವ ಈ ಟ್ರಿಲಿಯನ್ ಡಾಲರ್ ಪ್ರಶ್ನೆಗೆ ಕೊನೆಗೂ ಉತ್ತರ ಸಿಕ್ಕಿದೆ. 3ನೇ ಮಹಾಯುದ್ಧ ಎಲ್ಲಿ ಶುರುವಾಗುತ್ತೋ? ಈ ರಷ್ಯಾ & ಉಕ್ರೇನ್ ಯುದ್ಧವೇ 3ನೇ ಮಹಾಯುದ್ಧದ ಬೆಂಕಿಗೆ ಎಲ್ಲಿ ಪೆಟ್ರೋಲ್ ಸುರಿಯುತ್ತೋ? ಎಂಬ ಪ್ರಶ್ನೆಗಳು ಕೋಟಿ ಕೋಟಿ ಜನರನ್ನು ಕಾಡುತ್ತಿದ್ದವು. ಎಲ್ಲದಕ್ಕೂ ತಕ್ಕ ಉತ್ತರ ಈಗ ಸಿಕ್ಕಿದ್ದು, ಡೊನಾಲ್ಡ್ ಟ್ರಂಪ್ ಅವರು ಇದೆಕ್ಕೆಲ್ಲ ಒಂದು ಸ್ಪಷ್ಟ ಚಿತ್ರಣ ನೀಡಿದ್ದಾರೆ.
ಡೊನಾಲ್ಡ್ ಟ್ರಂಪ್ ಆಯ್ಕೆಯಾದ ನಂತರ ಉಕ್ರೇನ್‌ನ ಅಧ್ಯಕ್ಷ ನಿದ್ದೆಯನ್ನೇ ಮಾಡಿಲ್ಲ ಅಂತಾ ಕಾಣುತ್ತೆ. ಯಾಕಂದ್ರೆ ಡೊನಾಲ್ಡ್ ಟ್ರಂಪ್ ಅವರು ರಷ್ಯಾ & ಉಕ್ರೇನ್ ಯುದ್ಧದ ವಿಚಾರದಲ್ಲಿ ರಷ್ಯಾ ಪರವಾಗಿ ಇದ್ದಾರೆ ಎಂಬ ಆರೋಪ ಇದೆ. ಈ ಆರೋಪ ಒಂದು ಕಡೆ ಜೋರಾಗಿದ್ದು, ರಷ್ಯಾ & ಉಕ್ರೇನ್ ನಡುವೆ ಯುದ್ಧದ ತಿಕ್ಕಾಟ ಕೂಡ ಹೆಚ್ಚಾಗುತ್ತಿದೆ. ಇಂಥ ಸಮಯದಲ್ಲೇ, ಡೊನಾಲ್ಡ್ ಟ್ರಂಪ್ ನೇರವಾಗಿ ಉಕ್ರೇನ್ ಅಧ್ಯಕ್ಷನ ಜೊತೆಗೆ ಚರ್ಚೆ ಮಾಡಿ ಮಹತ್ವದ ಆದೇಶ ನೀಡಿದ್ದಾರೆ. ಹಾಗಾದ್ರೆ ಅಮೆರಿಕದ ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದು ಏನು?

ಉಕ್ರೇನ್ ಅಧ್ಯಕ್ಷನಿಗೆ ಟ್ರಂಪ್ ಹೇಳಿದ್ದು ಏನು?
ಡೊನಾಲ್ಡ್ ಟ್ರಂಪ್ ಇದೀಗ ಫ್ರಾನ್ಸ್ ದೇಶದಲ್ಲಿ ಉಕ್ರೇನ್ ಅಧ್ಯಕ್ಷನ ಭೇಟಿ ಮಾಡಿ ಮಹತ್ವದ ಮಾತುಕತೆ ನಡೆಸಿದ್ದಾರೆ. ಅಲ್ಲದೆ, ಕೂಡಲೇ ರಷ್ಯಾ ಜೊತೆಗಿನ ಯುದ್ಧವನ್ನು ಉಕ್ರೇನ್ ಈಗ ನಿಲ್ಲಿಸಬೇಕು ಎಂದಿದ್ದಾರೆ ಟ್ರಂಪ್. ಹೀಗೆ ಟ್ರಂಪ್ ಅವರು ನೀಡಿರುವ ಹೇಳಿಕೆಗೆ ಉಕ್ರೇನ್‌ನ ಅಧ್ಯಕ್ಷ ಪ್ರತಿಕ್ರಿಯೆ ನೀಡಿದ್ದು, ನಾವು ರಷ್ಯಾ ಜೊತೆಗಿನ ಯುದ್ಧ ನಿಲ್ಲಿಸಲು ಸಿದ್ಧವಾಗಿದ್ದೇವೆ. ಆದರೆ ರಷ್ಯಾ ನಮಗೆ ಕೆಲವು ಭರವಸೆಗಳನ್ನ ನೀಡಬೇಕು ಎಂದಿದ್ದಾರೆ. ಹೀಗಾಗಿ ರಷ್ಯಾ & ಉಕ್ರೇನ್ ಯುದ್ಧ ಇದೀಗ ಕುತೂಹಲದ ಘಟ್ಟ ತಲುಪುತ್ತಿದೆ ಎಂದು ವಿಶ್ಲೇಷಣೆ ಮಾಡ್ತಿದ್ದಾರೆ ತಜ್ಞರು.
ಟ್ರಂಪ್ ಗೆದ್ದ ನಂತರ ಹೊಸ ಉತ್ಸಾಹ!
2020ರ ಅಧ್ಯಕ್ಷೀಯ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ ಸೋತು ಸುಣ್ಣವಾಗಿದ್ದರು. ಆದ್ರೆ ಈಗ ಮತ್ತೆ 2024 ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಗೆದ್ದ ಡೊನಾಲ್ಡ್ ಟ್ರಂಪ್ ಉಕ್ರೇನ್ & ರಷ್ಯಾ ಯುದ್ಧ ನಿಲ್ಲಿಸೋದಕ್ಕೆ ಮಾಡಿರುವ ಪ್ಲಾನ್ ಭರ್ಜರಿಯಾಗಿದೆ. ಈಗಾಗಲೇ ಟ್ರಂಪ್ ಅವರೇ ಹೇಳಿರುವಂತೆ, ರಷ್ಯಾ & ಉಕ್ರೇನ್ ಯುದ್ಧದ ವಿಚಾರದಲ್ಲಿ ಅಮೆರಿಕ ಮಧ್ಯ ಪ್ರವೇಶ ಮಾಡುವ ಅಗತ್ಯತೆ ಇಲ್ಲ ಅಂತಿದ್ದಾರೆ.
ಯುದ್ಧ ನಿಲ್ಲುವುದು ಗ್ಯಾರಂಟಿ?
ಹೀಗಾಗಿ ಟ್ರಂಪ್ ಅಮೆರಿಕದ ಅಧಿಕಾರ ವಹಿಸಿಕೊಂಡ ತಕ್ಷಣ ಉಕ್ರೇನ್‌ಗೆ ಅಮೆರಿಕ ನೀಡುತ್ತಿರುವ ಸಹಾಯ ಕೂಡ ನಿಂತು ಹೋಗಲಿದೆ. ಹೀಗೆ ಆ ಸಹಾಯ ನಿಂತರೆ, ಉಕ್ರೇನ್ ತಾನಾಗಿ ತಾನೇ ಶಾಂತಿ ಮಾತುಕತೆ ನಡೆಸಿ ಯುದ್ಧ ನಿಲ್ಲಿಸುವ ಸಾಧ್ಯತೆ ದಟ್ಟವಾಗಿದೆ. ಹಾಗೇ ಮತ್ತೊಂದು ಕಡೆಯಲ್ಲಿ, ಇದೀಗ ಡೊನಾಲ್ಡ್ ಟ್ರಂಪ್ ಅವರು ಉಕ್ರೇನ್ ಅಧ್ಯಕ್ಷರಿಗೆ ಯುದ್ಧ ನಿಲ್ಲಿಸುವಂತೆ ಆದೇಶ ನೀಡಿರುವುದು ಕೂಡ ಭಾರಿ ಗಮನ ಸೆಳೆದಿದೆ. ಒಟ್ನಲ್ಲಿ, ಡೊನಾಲ್ಡ್ ಟ್ರಂಪ್ ಎಂಟ್ರಿ ಕೊಡ್ತಿದ್ದಂತೆ ಅಮೆರಿಕದಲ್ಲಿ ದೊಡ್ಡ ಮಟ್ಟದ ಬದಲಾವಣೆ ಗ್ಯಾರಂಟಿ ಆಗುತ್ತಿದೆ. ಅದರಲ್ಲೂ ರಷ್ಯಾ & ಉಕ್ರೇನ್ ಯುದ್ಧ 3 ವರ್ಷ ಮುಗಿಸುವ ಮೊದಲೇ ನಿಂತು ಹೋಗುವುದು ಪಕ್ಕಾ ಆಗಿದೆ.












Click it and Unblock the Notifications