ಸೈನಿಕರನ್ನು ವಾಪಸ್ ಕರೆಸಿಕೊಳ್ಳಿ, ಇಲ್ಲ ಪರಿಣಾಮ ಎದುರಿಸಿ: ಚೀನಾ
ಡೊಕಾಲಮ್ (ಸಿಕ್ಕಿಂ), ಜುಲೈ 6: ನೀವಾಗೇ ಗೌರವದಿಂದ ಹಿಂದೆ ಸರಿಯಿರಿ, ಇಲ್ಲವೆಂದರೆ ನಾವೇ ನಿಮ್ಮನ್ನು ಒದ್ದು ಓಡಿಸಬೇಕಾಗುತ್ತದೆ ಎಂದು ಸಿಕ್ಕಿಂನ ಡೊಕಾಲಮ್ ಪ್ರಾಂತ್ಯದಲ್ಲಿರುವ ಭಾರತೀಯ ಸೇನೆಗೆ ಚೀನಾ ಎಚ್ಚರಿಕೆ ನೀಡಿದೆ.
ಚೀನಾದ ಮಾಧ್ಯಮಗಳೂ ಭಾರತವನ್ನು ತರಾಟೆಗೆ ತೆಗೆದುಕೊಂದಿದ್ದು, ಈ ಜಗಳ ಎರಡು ದೇಶಗಳ ನಡುವೆ ಯುದ್ಧಕ್ಕೂ ಕಾರಣವಾಗಬಹುದು ಎಂಬ ಅಭಿಪ್ರಾಯಗಳೂ ಕೇಳಿಬರುತ್ತಿವೆ.
ಚೀನಾದ ಎರಡು ಪ್ರಮುಖ ಪತ್ರಿಕೆಗಳಾದ 'ಗ್ಲೋಬಲ್ ಟೈಮ್ಸ್ ' ಮತ್ತು 'ಚೀನಾ ಡೇಲಿ' ಗಳೆರಡೂ, ಭಾರತ ಡೊಕಾಲಮ್ ಪ್ರಾಂತ್ಯದಿಂದ ಹಿಂದೆ ಸರಿಯದಿದ್ದರೆ 'ಕಹಿ ಪಾಠ' ಕಲಿಸಬೇಕಾಗುತ್ತದೆಂದು ಬರೆದಿವೆ.

ಸುಖಾ ಸುಮ್ಮನೆ ಚೀನಾ ಭಾರತದ ತಂಟಟೆಗೆ ಬರುತ್ತಿದ್ದು, ಇತ್ತೀಚೆಗೆ ತಾನೇ ಮಾನಸ ಸರೋವರ ಯಾತ್ರೆಗೆ ಭಾರತೀಯರಿಗೆ ನಿರ್ಭಂದ ಹೇರುವ ಮೂಲಕ ವಿವಾದ ಸೃಷ್ಟಿಸಿತ್ತು. ಅದರಲ್ಲೂ ಪ್ರಧಾನಿ ನರೇಂದ್ರ ಮೋದಿ ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭೇಟಿಯ ನಂತರ ಚೀನಾದ ತಕರರಾರು ಹೆಚ್ಚುತ್ತಿರುವುದು ಗಮನಾರ್ಹ.












Click it and Unblock the Notifications