ಸಹೋದ್ಯೋಗಿಯ ಮೇಲೆ ಗುಂಡು ಹಾರಿಸಿ ತಾನೂ ಮೃತನಾದ ವೈದ್ಯ
ನ್ಯೂಯಾರ್ಕ್, ಜುಲೈ 1: ವೈದ್ಯನೊಬ್ಬ ತಾನು ಕೆಲಸ ಮಾಡುತ್ತಿದ್ದ ಆಸ್ಪತ್ರೆಯ ಸಹೋದ್ಯೋಗಿ ವೈದ್ಯರೊಬ್ಬರಿಗೆ ಗುಂಡು ಹಾರಿಸಿ ಸಾಯಿಸಿ, ನಂತರ ತಾನೂ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನ್ಯೂಯಾರ್ಕ್ ನ ಬ್ರಾಂಕ್ಸ್ ಆಸ್ಪತ್ರೆಯಲ್ಲಿ ನಡೆದಿದೆ.

ಗುಂಡು ಹಾರಿಸಿದ ವ್ಯಕ್ತಿಯನ್ನು ಡಾ. ಹೆನ್ರಿ ಬೆಲ್ಲೋ ಎಂದು ಗುರುತಿಸಲಾಗಿದ್ದು, ಆರು ತಿಂಗಳ ಹಿಂದೆ ಲೈಂಗಿಕ ದೌರ್ಜನ್ಯದ ಆರೋಪದ ಮೇಲೆ ಆತನನ್ನು ಆಸ್ಪತ್ರೆಯಿಂದ ಹೊರಹಾಕಲಾಗಿತ್ತು.
ಇದೇ ದ್ವೇಷಕ್ಕೆ ಪ್ರತೀಕಾರ ತೀರಿಸಿಕೊಳ್ಳುವುದಕ್ಕಾಗಿ ಆತ ಸಹೋದ್ಯೋಗಿ ವೈದ್ಯರ ಮೇಲೆ ಗುಂಡು ಹಾರಿಸಿದ್ದಿರಬಹುದು ಎಂದು ಪ್ರಾಥಮಿಕ ತನಿಖೆಯಲ್ಲಿ ಹೇಳಲಾಗಿದೆ.
ಘಟನೆಯ ಸಂದರ್ಭದಲ್ಲಿ ಆರಕ್ಕೂ ಹೆಚ್ಚು ಜನರಿಗೆ ಗಂಭೀರ ಗಾಯವಾಗಿದ್ದು, ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.












Click it and Unblock the Notifications