Ukraine War: ರಷ್ಯಾ ಅಧ್ಯಕ್ಷ ಪುಟಿನ್ ದೇಶ ಬಿಟ್ಟು ಹೊರಗೆ ಬರುತ್ತಿಲ್ಲ ಯಾಕೆ?

ರಷ್ಯಾ & ಉಕ್ರೇನ್ ನಡುವೆ ನಡೆಯುತ್ತಿರುವ ಘನಘೋರ ಕಾಳಗ ಇದೀಗ ಮತ್ತೊಂದು ಹಂತ ತಲುಪಿದ್ದು, ಇಬ್ಬರೂ ಒಬ್ಬರನ್ನು ಮತ್ತೊಬ್ಬರು ಸರ್ವನಾಶ ಮಾಡಿ ಹಾಕುವ ಪಣತೊಟ್ಟು ನಿಂತಿದ್ದಾರೆ. ರಷ್ಯಾ & ಉಕ್ರೇನ್ ಯುದ್ಧ ಶುರುವಾಗಿ 3 ವರ್ಷ ಕಳೆದರೂ ಹಿಂಸಾಚಾರ ಮತ್ತೆ ಮತ್ತೆ ಹೆಚ್ಚಾಗುತ್ತಲೇ ಇದೆ. ಹೀಗಿದ್ದಾಗ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಜೊತೆಗೆ ನೇರವಾಗಿ ಕೂತು ಮಾತನಾಡುವ ಆಸೆ ವ್ಯಕ್ತಪಡಿಸಿದ್ದರು. ಇಷ್ಟಾದರೂ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಮಾತ್ರ ರಷ್ಯಾ ಬಿಟ್ಟು ಹೊರಗೆ ಬರಲಿಲ್ಲ ಯಾಕೆ ಗೊತ್ತಾ?

ರಷ್ಯಾ & ಉಕ್ರೇನ್ ಯುದ್ಧ ಒಂದು ರೀತಿ ಹಗ್ಗದ ಮೇಲಿನ ನಡಿಗೆಯಾಗಿದೆ, ಯಾಕಂದ್ರೆ ಯುದ್ಧ ನಿಲ್ಲಿಸಲು ಏನೆಲ್ಲಾ ಪ್ರಯತ್ನ ಮಾಡಿದರೂ ಅದು ಫಲ ನೀಡುತ್ತಿಲ್ಲ. ಇನ್ನೊಂದು ಕಡೆಯಲ್ಲಿ ಈ ಯುದ್ಧ ತೀವ್ರತೆಗೆ ಈಗಾಗಲೇ ಹಲವಾರು ಸಮಸ್ಯೆಗಳು ಕೂಡ ಎದುರಾಗಿವೆ. ಇಷ್ಟೆಲ್ಲದರ ನಡುವೆ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ನಡೆ ನಿಗೂಢವಾಗಿದೆ. ಯಾಕಂದ್ರೆ ಉಕ್ರೇನ್‌ನ ಜೊತೆಗೆ ಮಾತುಕತೆ ಮಾಡಲು ಸಿದ್ಧ ಅಂತಾ ಹೇಳಿದ್ದ ವ್ಲಾದಿಮಿರ್ ಪುಟಿನ್ ದಿಢೀರ್ ಅಂತಾ ಸಭೆ ಕ್ಯಾನ್ಸಲ್ ಮಾಡಿದ್ದಾರೆ. ಅಲ್ಲದೆ ರಷ್ಯಾ ಬಿಟ್ಟು ಹೊರಗೆ ಹೋಗಲು ಪುಟಿನ್ ಸಿದ್ಧವಿಲ್ಲ ಎಂಬ ಕಾರಣ ಈಗ ನೀಡಲಾಗಿದೆ. ಹಾಗಾದ್ರೆ ಏನಾಯ್ತು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರಿಗೆ?

Discover Why Russian President Vladimir Putin Not Coming Out Of Russia

ರಷ್ಯಾ ಬಿಟ್ಟು ಹೊರಗೆ ಬರುತ್ತಿಲ್ವಾ ಪುಟಿನ್?

ಉಕ್ರೇನ್ ವಿರುದ್ಧ ಯುದ್ಧ ಶುರು ಮಾಡಿದ ನಂತರ ರಷ್ಯಾ ಹಲವು ರೀತಿಯ ಸಮಸ್ಯೆಗಳನ್ನ ಎದುರಿಸುತ್ತಿದೆ. ಅದರಲ್ಲೂ ಆರ್ಥಿಕವಾಗಿ & ಜಾಗತಿಕವಾಗಿ ಕೂಡ ಹಲವು ಸಮಸ್ಯೆ ರಷ್ಯಾದ ಸರ್ಕಾರವನ್ನು ಕಾಡುತ್ತಿದೆ. ಇನ್ನುಳಿದಂತೆ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರು ಈಗ ದೇಶ ಬಿಟ್ಟು ಹೊರಗೆ ಹೋದರೆ ದೊಡ್ಡ ಅಪಾಯ ಎದುರಾಗುವ ಆತಂಕ ಕೂಡ ಕಾಡ್ತಿದೆ. ಯಾಕಂದ್ರೆ ಈಗಾಗಲೇ ಅಂತಾರಾಷ್ಟ್ರೀಯ ನ್ಯಾಯಾಲಯ ಪುಟಿನ್ ಅವರ ವಿರುದ್ಧ ಅರೆಸ್ಟ್ ವಾರೆಂಟ್ ಜಾರಿ ಮಾಡಿದೆ. ಹಾಗಾದ್ರೆ ಪುಟಿನ್ ವಿರುದ್ಧ ಅರೆಸ್ಟ್ ವಾರೆಂಟ್ ಕೊಟ್ಟಿದ್ದು ಯಾವ ಕಾರಣಕ್ಕೆ?

ಟರ್ಕಿ ಸಭೆಗೂ ವ್ಲಾದಿಮಿರ್ ಪುಟಿನ್ ಗೈರು!

ಉಕ್ರೇನ್ ವಿರುದ್ಧ ಯುದ್ಧ ಸಾರಿದ್ದ ರಷ್ಯಾ ನೂರಾರು ಅಪರಾಧ ಎಸಗಿದೆ ಅಂತಾ ಆರೋಪ ಮಾಡಲಾಗಿತ್ತು. ಇದೇ ಕಾರಣಕ್ಕೆ ಅಂತಾರಾಷ್ಟ್ರೀಯ ನ್ಯಾಯಾಲಯ ಮೊರೆ ಹೋಗಿ ಕೇಸ್ ಕೂಡ ದಾಖಲು ಮಾಡಲಾಗಿತ್ತು. ಹೀಗಾಗಿ ವಿಚಾರಣೆ ನಡೆಸಿದ್ದ ಕೋರ್ಟ್ ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರ ವಿರುದ್ಧ ಜಾಮೀನು ರಹಿತ ವಾರಂಟ್ ಜಾರಿ ಮಾಡಿದೆ. ಇದೇ ಕಾರಣಕ್ಕೆ ರಷ್ಯಾ ಬಿಟ್ಟು ಹೊರಗೆ ಬಂದರೆ, ವ್ಲಾದಿಮಿರ್ ಪುಟಿನ್ ಅವರು ಅರೆಸ್ಟ್ ಆಗುವಂತೆ ವ್ಯೂಹ ರಚಿಸಲಾಗಿದೆ ಎಂಬ ಆರೋಪ ಕೂಡ ಇದೆ. ಈ ಕಾರಣಕ್ಕೆ ಟರ್ಕಿಯಲ್ಲಿ ಆಯೋಜನೆ ಮಾಡಿದ್ದ ಉಕ್ರೇನ್ ಮತ್ತು ರಷ್ಯಾ ಸಭೆಗೆ ಕೂಡ ಪುಟಿನ್ ಬಂದಿಲ್ಲ ಎನ್ನಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+