ಟೆಕ್ ದೈತ್ಯ ‘ಗೂಗಲ್’ ವಿರುದ್ಧ ರಷ್ಯಾ ಕೋರ್ಟ್ ಏನ್ ಮಾಡಿತು ಗೊತ್ತಾ?

ರಷ್ಯಾ & ಉಕ್ರೇನ್ ನಡುವೆ ಭೀಕರ ಯುದ್ಧ ನಡೆಯುತ್ತಿದ್ದು ಲಕ್ಷಾಂತರ ಜನರು ಈಗಾಗಲೇ ಪ್ರಾಣ ಬಿಟ್ಟಿದ್ದಾರೆ. ಆದರೆ ಈ ಸಮಯದಲ್ಲಿ ಉಕ್ರೇನ್ ವಿರುದ್ಧದ ರಷ್ಯಾ ಕದನ ಕುರಿತಾಗಿ ಸುಳ್ಳು ಮಾಹಿತಿ ಹರಡಲಾಗುತ್ತಿದೆ ಎಂದು ರಷ್ಯಾ ಗರಂ ಆಗಿದೆ. ಅಲ್ಲದೆ ಈ ಹಿನ್ನೆಲೆಯಲ್ಲಿ ಗೂಗಲ್‌ಗೆ ಕೂಡ ಖಡಕ್ ಸೂಚನೆ ನೀಡಿತ್ತಂತೆ ರಷ್ಯಾದ ನ್ಯಾಯಾಲಯ. ಇಷ್ಟಾದರೂ ಆ ಬಗ್ಗೆ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿ ಈಗ ಏನು ಮಾಡಿದೆ ಗೊತ್ತಾ?

ರಷ್ಯಾ ಮತ್ತು ಉಕ್ರೇನ್ ಯುದ್ಧ ಕೈಮೀರಿ ಹೋಗುತ್ತಿದೆ. ಅದರಲ್ಲೂ ಉಕ್ರೇನ್ ವಿರುದ್ಧ ರಷ್ಯಾ ರಣಭೀಕರ ದಾಳಿ ನಡೆಸುತ್ತಿದೆ. ತನ್ನ ಶತ್ರು ರಷ್ಯಾ ವಿರುದ್ಧ ಉಕ್ರೇನ್ ಕೂಡ ಪ್ರಬಲ ಪ್ರತಿ ದಾಳಿ ನಡೆಸುತ್ತಿದೆ. ಇಷ್ಟಾದರೂ ಇಬ್ಬರ ಆತ್ಮ ತೃಪ್ತವಾಗಿಲ್ಲ, ಇಬ್ಬರ ಬಡಿದಾಟದಲ್ಲಿ ಸಾಮಾನ್ಯರು ಮೃತಪಟ್ಟಿರುವಾಗ ದ್ವೇಷ ಮತ್ತಷ್ಟು ಹೆಚ್ಚಾಗುತ್ತಿದೆ. ಇದೇ ಸಮಯದಲ್ಲಿ ರಷ್ಯಾ ಸೇನೆಯ ವಿರುದ್ಧ ಸುಳ್ಳು ಮಾಹಿತಿಗಳನ್ನು ಗೂಗಲ್‌ನಲ್ಲಿ ಹರಿಬಿಟ್ಟಿದ್ದ ಆರೋಪದ ಹಿನ್ನೆಲೆ ಇದೀಗ ಗೂಗಲ್ ವಿರುದ್ಧವೇ ದೊಡ್ಡ ಮೊತ್ತದ ದಂಡ ವಿಧಿಸಿದೆ ರಷ್ಯಾ ಕೋರ್ಟ್!

Discover Why Russian Court Fined Google In The Matter Of Ukraine

37 ಲಕ್ಷ ರೂಪಾಯಿ ದಂಡ!

ಹೌದು, ರಷ್ಯಾ ತನ್ನ ಶತ್ರು ಉಕ್ರೇನ್ ವಿರುದ್ಧ ಈಗ ಕೆಂಡ ಕಾರುತ್ತಿದೆ. ಇದೇ ಕಾರಣಕ್ಕಾಗಿ ಭೀಕರ ದಾಳಿಯನ್ನು ನಡೆಸುತ್ತಿದೆ. ಆದ್ರೆ ಈ ಬಗ್ಗೆ ಕೆಲವರು ಸುಳ್ಳು ಸುದ್ದಿ ಹರಡುತ್ತಿರುವ ಆರೋಪ ಹೊರಿಸಿತ್ತು ರಷ್ಯಾ ನ್ಯಾಯಾಲಯ. ಹಾಗೆಯೇ ತಾನು ಸೂಚಿಸಿರುವ ಕೆಲವು ಸುದ್ದಿ ಸುಳ್ಳಾಗಿದ್ದು, ಅಂತಹ ಸುದ್ದಿಗಳನ್ನ ಡಿಲೀಟ್ ಮಾಡಲು ಸೂಚನೆ ನೀಡಿತ್ತು ಎನ್ನಲಾಗಿದೆ. ಈ ಕಾರಣಕ್ಕೆ ಈಗ ರಷ್ಯಾ ಕೋರ್ಟ್ ಕೈಗೊಂಡಿರುವ ಕ್ರಮ ಏನು ಗೊತ್ತಾ?

ಬೃಹತ್ ಮೊತ್ತದ ದಂಡ!

ತನ್ನ ಆದೇಶ ಪಾಲನೆ ಮಾಡಿಲ್ಲ ಎಂಬ ಕಾರಣಕ್ಕೆ ಗೂಗಲ್ ಸಂಸ್ಥೆಗೆ 37 ಲಕ್ಷ ರೂಪಾಯಿ ದಂಡ ವಿಧಿಸಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಈ ಮೂಲಕ ರಷ್ಯಾ VS ಉಕ್ರೇನ್ ಯುದ್ಧ ಸಾಮಾನ್ಯ ಜನರ ಜೊತೆಗೆ ದೈತ್ಯ ಟೆಕ್ ಕಂಪನಿಗಳನ್ನು ಕೂಡ ಇದೀಗ ಟಾರ್ಗೆಟ್ ಮಾಡುತ್ತಿರುವಂತೆ ಕಾಣುತ್ತಿದೆ ಎಂಬ ಆರೋಪ ಕೂಡ ಕೇಳಿಬಂದಿದೆ. ಆದರೆ ರಷ್ಯಾ ಈ ಆರೋಪಗಳಿಗೆ ಕೇರ್ ಮಾಡದೆ ತನ್ನ ದಾರಿಯಲ್ಲಿ ಮುನ್ನುಗ್ಗುತ್ತಿದೆ.

ವಿನಾಶದ ಅಂಚಿಗೆ ಯುರೋಪ್?

ಯುದ್ಧ ಅಂದ್ರೆ ವಿನಾಶ ಹಾಗೂ ವಿನಾಶ ಎಂಬ ಪದಕ್ಕೆ ಮತ್ತೊಂದು ಹೆಸರೇ ಯುದ್ಧ ಎಂದು ಹಿರಿಯರು ಹೇಳಿದ್ದಾರೆ. ಆದರೂ ಮನುಷ್ಯ ಈಗ ಬುದ್ಧಿ ಕಲಿಯೋದು ಬೇಡ್ವ? ಈ ಮಾತನ್ನು ಪಾಲಿಸದೆ ರಷ್ಯಾ & ಉಕ್ರೇನ್ ಹೊಡೆದಾಡುತ್ತಿವೆ. ಅತ್ತ ಪುಟಿನ್ ಶತ್ರುಗಳನ್ನು ನಾಶ ಮಾಡಲು ತೊಡೆ ತಟ್ಟಿದ್ದರೆ, ಉಕ್ರೇನ್ ಹಠ ಬಿಡದೆ ರಷ್ಯಾ ಸೇನೆಯನ್ನ ಎದುರು ಹಾಕಿಕೊಂಡಿದೆ. ಹೀಗೆ ಇಬ್ಬರ ಬಡಿದಾಟವು ಅಮಾಯಕರ ಜೀವ ತೆಗೆಯುತ್ತಿದೆ. ಒಂದೆಡೆ ಯುರೋಪ್ ಖಂಡದಲ್ಲಿ ಬಹುತೇಕ ದೇಶಗಳು ಉಕ್ರೇನ್‌ಗೆ ಬೆಂಬಲ ನೀಡುತ್ತಿರುವುದು ಈಗ ಯುರೋಪ್ ಖಂಡದಲ್ಲಿ ಸಂಚಲನವನ್ನೇ ಸೃಷ್ಟಿ ಮಾಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+